ಎಲ್ಲರಿಗೂ ಸಹ ಒಂದೊಳ್ಳೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಬರಬೇಕು ಎನ್ನುವಂತಹದ್ದು ಎಲ್ಲರ ಬಯಕೆ ಆಗಿರುತ್ತದೆ. ಜೈದ್ ಖಾನ್ ಕೂಡ ಇದೇ ರೀತಿಯ ಕನಸನ್ನು ಕಂಡವರು ಆ ಕನಸಿಗೆ ಜಯತೀರ್ಥ ಅವರು ಉತ್ತಮ ಕಥೆಯೋಂದಿಗೆ ಸಾತ್ ನೀಡಿದ್ದಾರೆ. ವಿಭಿನ್ನ ಕಥೆಯನ್ನು ಒಳಗೊಂಡಿರುವಂತಹ ಬನಾರಸ್ ಸಿನಿಮಾ ಜೈದ್ ಖಾನ್ ಅವರ ಮೊದಲನೇ ಸಿನಿಮಾವಾಗಿದೆ ಟೈಮ್ ಟ್ರಾವೆಲಿಂಗ್ ಇರುವಂತಹ ಈ ಚಿತ್ರಕ್ಕೆ ಜಯತೀರ್ಥ ಅವರು ನಿರ್ದೇಶನ ಮಾಡಿದ್ದು ಜೈದ್ ಖಾನ್ ಅವರು ತಮ್ಮ ಉತ್ತಮವಾದಂತಹ ನಟನೆಯನ್ನು ತೋರಿಸಿದ್ದಾರೆ ಇವರಿಗೆ ಚಿತ್ರದಲ್ಲಿ ಪಾತ್ರ ಸರಿಯಾಗಿ ಹೊಂದಿಕೆಯಾಗಿದೆ. ಕ್ಲಾಸ್ ಅಂಡ್ ಮಾಸ್ ಆಗಿ ಜೈಸ್ ಖಾನ್ ಇಷ್ಟ ಆಗುತ್ತಾರೆ ಅವರ ಸ್ಟೈಲಿಶ್ ಲುಕ್ ಕಣ್ಮನ ಸೆಳೆಯುತ್ತದೆ.
ಎಲ್ಲಿಯೂ ಬಿಲ್ಡಪ್ ಕೊಡದೆ ಚಿತ್ರದ ಕಥೆಗೆ ತಕ್ಕಂತೆ ಹೀರೋ ನ ಪಾತ್ರ ಸಾಗುತ್ತದೆ ಅನ್ನೋದು ಖುಷಿಯ ವಿಚಾರ. ಈ ಸಿನಿಮಾ ನೋಡಿದಂತಹ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇಂತಹ ಒಂದು ವಿಭಿನ್ನ ಕಥೆ ಉಳ್ಳಂತಹ ಚಿತ್ರಗಳು ಕನ್ನಡಕ್ಕೆ ಅಗತ್ಯವಿದೆ ಎಂಬಂತಹ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈ ಸಿನಿಮಾದ ಮೂಲಕ ಜೈದ್ ಖಾನ್ ಅವರು ಚಂದನವನದ ಒಬ್ಬ ಭರವಸೆಯ ನಟ ಎಂದು ಗುರು ಸಿದ್ದ ಗುರುತಿಸಿಕೊಳ್ಳುತ್ತಿದ್ದಾರೆ. ಸಂದರ್ಶನದಲ್ಲಿ ಭಾಗವಹಿಸಿ ಚಿತ್ರದ ಬಗ್ಗೆ ಹಾಗೂ ತಮಗೆ ಕನ್ನಡ ನಟರು ಯಾವ ರೀತಿ ಬೆಂಬಲ ನೀಡಿದ್ದರು ಎಂಬುದರ ಬಗ್ಗೆ ಸ್ವತಃ ಅವರೇ ತಿಳಿಸಿದ್ದಾರೆ.
ಜೈದ್ ಖಾನ್ ಅವರು ತಮ್ಮ ಸಿನಿಮಾದ ಟೈಟಲ್ ಲಾಂಚನ್ನು ಪುನೀತ್ ರಾಜ್ಕುಮಾರ್ ಅವರ ಹತ್ತಿರ ಮಾಡಿಸಬೇಕು ಎನ್ನುವಂತಹ ಒಂದು ಆಕಾಂಕ್ಷೆಯನ್ನು ಹೊಂದಿದ್ದರು ಪುನೀತ್ ರಾಜ್ಕುಮಾರ್ ಅವರಿಗೆ ಕರೆ ಮಾಡಿ ತಮ್ಮ ಸಿನಿಮಾದ ಟೈಟಲ್ ಲಾಂಚ್ ಗೆ ಕರೆದಿದ್ದರು ಅದಕ್ಕೆ ಪುನೀತ್ ರಾಜ್ಕುಮಾರ್ ಅವರು ಸಹ ಸಮ್ಮತಿಯನ್ನು ವ್ಯಕ್ತಪಡಿಸಿದ್ದರು ಆದದ ನಂತರದ ದಿನವೇ ಪುನೀತ್ ರಾಜ್ಕುಮಾರ್ ಅವರು ನಮ್ಮೆಲ್ಲರನ್ನು ಹಗಲಿದರು ಎಂದು ಜೈದ್ ಖಾನ್ ಅವರು ತಿಳಿಸಿದ್ದಾರೆ. ಅಪ್ಪು ಅವರ ಹತ್ತಿರ ಟೈಟಲ್ ಲಾಂಚ್ ಮಾಡಿಸುವಂತಹ ಅದೃಷ್ಟ ನನಗೆ ಇರಲಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಪ್ಪು ಸರ್ ಕೈನಲ್ಲಿಯೇ ಬನಾರಸ್ ಚಿತ್ರದ ಟೈಟಲ್ ಲಾಂಚ್ ಮಾಡಿಸಬೇಕು ಎಂದಿದ್ದೆ ಅವರು ಹೋದ ಮೇಲೆ ಆ ಹಠವನ್ನು ನಾನು ಬಿಡಲಿಲ್ಲ ಎಂದು ಜೈದ್ ಖಾನ್ ಅವರು ಅಪ್ಪು ಸಮಾಧಿ ಬಳಿ ಟೈಟಲ್ ಲಾಂಚ್ ಮಾಡಿರಬೇಕು ಎನ್ನುವುದಾಗಿ ತಿಳಿಸಿದರು.
ಆದರೆ ಈ ಒಂದು ವಿಚಾರಕ್ಕೆ ಹಲವರು ಇವರಿಗೆ ವಿರೋಧವನ್ನು ವ್ಯಕ್ತಪಡಿಸಿದರು ಸಮಾಧಿಯ ಮುಂದೆ ಟೈಟಲ್ ಲಾಂಚ್ ಮಾಡುವುದು ಬೇಡ ಸಿನಿಮಾ ಗೆ ಒಳ್ಳೆಯದಾಗುವುದಿಲ್ಲ ಸಮಾಧಿ ಮುಂದೆ ಮಾಡಿದರೆ ಸಿನಿಮಾಗೆ ಯಶಸ್ಸು ಸಿಗುವುದಿಲ್ಲ ಆದ್ದರಿಂದ ಅಪ್ಪು ಅವರ ಸಮಾಧಿಯ ಹತ್ತಿರ ಟೈಟಲ್ ಲಾಂಚ್ ಮಾಡುವುದು ಬೇಡ ಎಂದು ಹೇಳಿದ್ದರು. ಯಾರು ಏನೇ ಹೇಳಿದರೂ ಸಹ ಜೈದ್ ಖಾನ್ ಅವರು ಒಪ್ಪಿಕೊಳ್ಳದೆ ಅಪ್ಪು ಅವರ ಸಮಾಧಿಯ ಮುಂದೆ ಪೋಸ್ಟರ್ ಬಿಡುಗಡೆ ಮಾಡಿದರು ಅಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ನಂತರ ಎಲ್ಲ ಕೆಲಸವು ಶುಭವಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ದೊಡ್ಡ ಮನೆಯ ಕುಡಿಯಾದಂತಹ ಶಿವ ರಾಜ್ಕುಮಾರ್ ಸಹ ಟ್ರೈಲರ್ ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಶಿವಣ್ಣ ಅವರು ಸಿನಿಮಾ ಟ್ರೈಲರ್ ತುಂಬಾ ಚೆನ್ನಾಗಿದೆ ಕುತೂಹಲಕಾರಿಯಾಗಿದೆ ಕಾಲ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಜೈದ್ ಖಾನ್ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.