ಪಪ್ಪಾಯ ಹಣ್ಣಿನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತೇ ಇರುತ್ತದೆ ಪಪ್ಪಾಯ ಹಣ್ಣನ್ನು ನಾವು ತಿನ್ನುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ರೀತಿಯಾದಂತಹ ಲಾಭಗಳು ಉಂಟಾಗುತ್ತದೆ. ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ನಮ್ಮ ದೇಹಕ್ಕೆ ಬೇಕಾದಂತಹ ವಿಟಮಿನ್ಸ್ ಗಳು ಪೋಷಕಾಂಶಗಳು ಈ ಒಂದು ಹಣ್ಣಿನಿಂದ ಸಿಗುತ್ತದೆ. ನಮ್ಮ ದೇಹದಲ್ಲಿ ಇರುವಂತಹ ಹಲವಾರು ಕಾಯಿಲೆಗಳನ್ನು ಗುಣಮುಖ ಮಾಡುವಂತಹ ಅಂಶವನ್ನು ಈ ಒಂದು ಪಪ್ಪಾಯ ಹಣ್ಣು ಹೊಂದಿದೆ. ಸಾಮಾನ್ಯವಾಗಿ ಎಲ್ಲರಿಗೂ ಸಹ ಪಪ್ಪಾಯ ಹಣ್ಣಿನ ಗುಣಗಳ ಬಗ್ಗೆ ಗೊತ್ತಿರುತ್ತದೆ, ಕೇವಲ ಹಣ್ಣಿನಲ್ಲಿ ಮಾತ್ರವಲ್ಲದೆ ಪಪ್ಪಾಯದ ಎಲೆಯಲ್ಲೂ ಸಹ ಸಾಕಷ್ಟು ರೀತಿಯಾದಂತಹ ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ ಈ ಪಪ್ಪಾಯ ಎಲೆಗಳಿಂದ ಹಲವಾರು ರೀತಿಯಾದಂತಹ ಔಷಧಗಳನ್ನು ತಯಾರು ಮಾಡುತ್ತಾರೆ.
ಅಷ್ಟು ಅದ್ಭುತವಾದಂತಹ ಔಷದೀಯ ಗುಣಗಳನ್ನು ಹೊಂದಿರುತ್ತದೆ ಸಾಮಾನ್ಯವಾಗಿ ಹಳ್ಳಿಗಳ ಕಡೆಯಲ್ಲಿ ಹೆಚ್ಚಾಗಿ ಮನೆಮನೆಯಲ್ಲಿಯೂ ಸಹ ಈ ಒಂದು ಪಪ್ಪಾಯದ ಗಿಡವನ್ನು ಬೆಳೆಸಿರುತ್ತಾರೆ. ಪಪ್ಪಾಯದ ಎಲೆಗಳಿಂದ ನಮ್ಮ ದೇಹಕ್ಕೆ ಆಗುವಂತಹ ಲಾಭವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಈ ಎಲೆಯಲ್ಲಿ ಆಂಟಿ ಕ್ಯಾನ್ಸರ್ ಗುಣಗಳನ್ನು ಹೊಂದಿದೆ, ವಿವಿಧ ಸಂಶೋಧನೆಗಳಿಂದ ತಿಳಿಸಿರುವ ಹಾಗೆ ಪಪ್ಪಾಯ ಎಲೆಗಳು ಹಲವಾರು ರೀತಿಯಾದಂತಹ ಕಾನ್ಸರ್ ಕಾಯಿಲೆ ಗಳನ್ನು ಗುಣಮುಖ ಮಾಡುವಂತ ಅಂಶವನ್ನು ಹೊಂದಿದೆ ಹಾಗೆ ಕ್ಯಾನ್ಸರ್ ಬರದಂತೆ ಇದು ತಡೆಗಟ್ಟುತ್ತದೆ ಇದರಲ್ಲಿ ಹೆಚ್ಚಾಗಿ ರೋಗನಿರೋಧಕ ಶಕ್ತಿ ಇದ್ದು ಕ್ಯಾನ್ಸರ್ ಹಾಗೆಯೆ ವೈರಸ್ ಗಳು ಈ ರೀತಿಯಾದಂತಹ ಬ್ಯಾಕ್ಟೀರಿಯಗಳನ್ನು ನಾಶ ಮಾಡುವಂತಹ ಗುಣವನ್ನು ಈ ಒಂದು ಎಲೆ ಹೊಂದಿದೆ. ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಕಂಡುಬರುವುದರಿಂದ ನಮ್ಮ ಇಮ್ಯೂನಿಟಿಯನ್ನು ಬೂಸ್ಟ್ ಮಾಡುವಂತಹ ಶಕ್ತಿ ಇದೆ.
ಪಪ್ಪಾಯದ ಎಲೆಯಿಂದ ರಸವನ್ನು ತೆಗೆದು ಉಪಯೋಗ ಮಾಡುವುದರಿಂದ ಡೆಂಗ್ಯೂ ಮತ್ತು ಫೀವರ್ ಗೆ ಇದು ತುಂಬಾ ಒಳ್ಳೆಯದು ಡೆಂಗ್ಯು ಬಂದಾಗ ಸಾಮಾನ್ಯವಾಗಿ ನಮ್ಮ ದೇಹದಲ್ಲಿ ರೆಡ್ ಬ್ಲಡ್ ಪ್ಲೇಟ್ಸ್ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ ಅಂತಹ ಸಮಯದಲ್ಲಿ ನಾವು ಈ ಪಪ್ಪಾಯ ಎಲೆ ರಸವನ್ನು ಸೇವನೆ ಮಾಡುವುದರಿಂದ ನಮ್ಮ ರೆಡ್ ಬ್ಲಡ್ ಪ್ಲೇಟ್ಸ್ ಇನ್ಕ್ರೀಸ್ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಸ್ಪೂನ್ ಅಥವಾ 100 ml ರಸವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು ಈ ಎಲೆಯ ರಸ ಕಹಿ ಇರುತ್ತದೆ ಆದ್ದರಿಂದ ನೀವು ಸ್ವಲ್ಪ ಜೇನುತುಪ್ಪವನ್ನು ಮಿಕ್ಸ್ ಮಾಡಿ ಸೇವನೆ ಮಾಡಬಹುದು ಹೀಗೆ ಮಾಡುವುದರಿಂದ ಬ್ಲಡ್ ಪ್ಲೇಟ್ಸ್ ಇಂಕ್ರೀಜ್ ಮಾಡುತ್ತದೆ.
ಪಪ್ಪಾಯ ಎಲೆಯಲ್ಲಿ ವಿಟಮಿನ್ಸ್ ಗಳು ಹಾಗೆ ಇನ್ನಿತರ ಅಂಶಗಳು ಇರುವುದರಿಂದ ನಮ್ಮ ಹೃದಯಕ್ಕೆ ಇದು ತುಂಬಾ ಒಳ್ಳೆಯದು ಹೃದಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾಯಿಲೆಗಳನ್ನು ಇದು ನಿವಾರಣೆ ಮಾಡುತ್ತದೆ ಹಾಗೆಯೇ ಹೃದಯದ ಕಾಯಿಲೆಗಳು ಬಾರದೆ ಇರುವ ಹಾಗೆ ನೋಡಿಕೊಳ್ಳುತ್ತದೆ. ನಮ್ಮ ಬ್ಲಡ್ ಸರ್ಕ್ಯುಲೇಶನನ್ನ ಇಂಪ್ರೂ ಮಾಡುತ್ತದೆ ನಮ್ಮ ರಕ್ತನಾಳಗಳಲ್ಲಿ ರಕ್ತ ಸಂಚನನವು ಕ್ಲಿಯರ್ ಆಗುವ ಹಾಗೆ ಇದು ನೋಡಿಕೊಳ್ಳುತ್ತದೆ. ಮುಖ್ಯವಾಗಿ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಬರುವಂತಹ ಹೊಟ್ಟೆ ನೋವಿಗೆ ಇದು ತುಂಬಾ ರಾಮಬಾಣ ಎಂದೇ ಹೇಳಬಹುದು ಪಪ್ಪಾಯದ ಎಲೆಯ ಕಷಾಯವನ್ನು ಕುಡಿಯುವುದರಿಂದ ಮಹಿಳೆಯರಿಗೆ ತುಂಬಾ ಒಳ್ಳೆಯದು. ಈ ಮಾಹಿತಿ ಇಷ್ಟ ಆದರೆ ಕಾಮೆಂಟ್ಸ್ ಮೂಲಕ ನಮಗೆ ತಿಳಿಸಿ.