ಆಂಜನೇಯ ದೇವರು ಎಲ್ಲರ ಪ್ರಿಯ. ಲಕ್ಷ್ಮಣನ ಪ್ರಾಣ ಉಳಿಸೋದಕ್ಕಾಗಿ ಸಂಜೀವಿನಿಯನ್ನೇ ಹೊತ್ತು ತಂದ ವಾಯುಪುತ್ರ ಹನುಮಂತನ ಮಹಿಮೆ ಅಪಾರ. ನಂಬಿ ಬಂದ ಭಕ್ತರನ್ನು ಎಂದಿಗೂ ಕೈ ಬಿಟ್ಟಿಲ್ಲ ಆಂಜನೇಯ. ಕಷ್ಟ ಬಂದಾಗ ಒಂದು ಸಾರಿ ಆಂಜನೇಯನನ್ನು ನೆನೆದರೆ ಸಾಕು. ನಮ್ಮ ಸಕಲ ಸಂಕಷ್ಟಗಳನ್ನು ದೂರ ಮಾಡುತ್ತಾನೆ ಈ ಪವನ ಪುತ್ರ.
ಹನುಮಂತನನ್ನು ಸಂಕಷ್ಟ ಹರ ಎಂದು ಕರೆಯುತ್ತಾರೆ. ನೀವು ನಿತ್ಯ ಅದ್ರಲ್ಲೂ ಮಂಗಳವಾರ ಹಾಗೂ ಶನಿವಾರದ ದಿನ ಆಂಜನೇಯನನ್ನು ಪೂಜಿಸಿದ್ರೆ ಈ 10 ಸಮಸ್ಯೆಗಳು ನಿಮ್ಮ ಹತ್ತಿರವೂ ಸುಳಿಯೋದಿಲ್ಲ. ಹಾಗಾದ್ರೆ, ಆಂಜನೇಯನು ನಮ್ಮನ್ನು ರಕ್ಷಣೆ ಮಾಡುವ ಆ ಹತ್ತು ಸಂಕಷ್ಟಗಳು ಯಾವುದು ಅನ್ನೋದನ್ನು ತಿಳಿಯೋಣ ಬನ್ನಿ…
1. ಆನಾರೋಗ್ಯದಿಂದ ಮುಕ್ತಿ
ಯಾರು ಆಂಜನೇಯನನ್ನು ಪ್ರತಿ ನಿತ್ಯ ಪೂಜಿಸುತ್ತಾರೋ ಅವರಿಗೆ ಯಾವುದೇ ರೀತಿ ಆರೋಗ್ಯ ಸಮಸ್ಯೆಗಳ ಎದುರಾಗೋದಿಲ್ವಂತೆ. ಹನುಮಾನ್ ಸ್ತೋತ್ರ ಪಠಣೆ ಮಾಡೋದ್ರಿಂದ ಕೀಲು ನೋವು, ಗಂಟಲು ಸಮಸ್ಯೆ ಮತ್ತು ನಂತರ ಸಂಧಿವಾತದಂತಹ ಸಮಸ್ಯೆಗಳು ನಿವಾರಣೆ ಆಗುತ್ತಂತೆ. ಪ್ರತಿನಿತ್ಯ ನೀವು ಹೀಗೆ ಮಾಡೋದ್ರಿಂದ ನೀವು ಸಮಸ್ಯೆಗಳಿಂದ ಮುಕ್ತಿ ಪಡೆಯಲಿದ್ದೀರಿ ಎಂಬ ನಂಬಿಕೆಯಿದೆ.
2. ಭಯ ಇರೋದಿಲ್ಲ
ಅನೇಕರಿಗೆ ರಾತ್ರಿ ಒಬ್ಬರೇ ಮಲಗೋದು ಅಂದ್ರೆ ತುಂಬಾನೇ ಭಯ ಪಡುತ್ತಾರೆ. ಇನ್ನೂ ಕತ್ತಲಲ್ಲಿ ಒಬ್ಬರೇ ಹೋಗೋದೇ ಇಲ್ಲ. ದೆವ್ವ, ಭೂತ ಇರುತ್ತೆ ಅನ್ನೋ ಭಯ ಅವರನ್ನು ಕಾಡುತ್ತಾ ಇರುತ್ತದೆ. ಈ ರೀತಿ ಭಯ ಇರುವವರು ರಾತ್ರಿ ಮಲಗುವ ಮೊದಲು ಹನ್ ಹನುಂತೇ ನಮಃ ಎಂದು ಮಂತ್ರವನ್ನು ಪಠಣೆ ಮಾಡಬೇಕು. ಈ ಮಂತ್ರವನ್ನು 108 ಬಾರಿ ಪಠಣೆ ಮಾಡಬೇಕು. ಆದರೆ, ಮಂತ್ರ ಪಠಣೆಗೆ ಕುಳಿತುಕೊಳ್ಳುವ ಮೊದಲು ಕೈ ಮತ್ತು ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಯಾರು ಪ್ರತಿ ನಿತ್ಯ ಇದನ್ನು ಪಾಲನೆ ಮಾಡುತ್ತಾರೋ ಅವರು ಭಯದಿಂದ ಮುಕ್ತರಾಗುತ್ತಾರಂತೆ.
3. ದೂರವಾಗುತ್ತಾರೆ ಶತ್ರುಗಳು
ಪ್ರತಿಯೊಬ್ಬರಿಗೆ ಶತ್ರುಗಳ ಭಯ ಇದ್ದೇ ಇರುತ್ತದೆ. ಅದ್ರಲ್ಲೂ ನೀವು ಬೆಳೆಯುತ್ತಿದ್ದೀರಿ ಅಂದ್ರೆ ಜನ ನಿಮ್ಮ ಕಾಲು ಎಳೆಯೋದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಭಜರಂಗಿ ನಂಬಿ ಬಂದ ಭಕ್ತರನ್ನು ಪೊರೆಯುತ್ತಾನೆ. ಯಾರು ಆಂಜನೇಯನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರ ಶತ್ರುಗಳು ದುರ್ಬಲರಾಗುತ್ತಾರಂತೆ. ಅಷ್ಟೇ ಅಲ್ಲದೇ, ಕಣ್ಣಿಗೆ ಕಾಣದ ಶತ್ರುಗಳಿಂದ ಕೂಡ ಆಂಜನೇಯ ನಮ್ಮನ್ನು ರಕ್ಷಣೆ ಮಾಡುತ್ತಾರಂತೆ. 21 ದಿನಗಳ ಕಾಲ ಒಂದೇ ಜಾಗದಲ್ಲಿ ಕುಳಿತು ಹನುಮಂತನ ಸ್ತೋತ್ರವನ್ನು ಓದಿದರೆ ಶತ್ರುಗಳನ್ನು ಸುಲಭವಾಗಿ ಸೋಲಿಸಬಹುದು ಎಂಬ ನಂಬಿಕೆಯಿದೆ.
4. ಜೈಲು ಹಾಗೂ ಕೋರ್ಟಿಗೆ ಅಲೆಯಬೇಕಾಗಿಲ್ಲ
ಹನುಮಂತನನ್ನು ಬಂಧನ ಮುಕ್ತಗೊಳಿಸುವ ದೇವರು ಎಂದು ಕರೆಯುತ್ತಾರೆ. ರಾಮಯಣದಲ್ಲಿ ಸೀತೆಯನ್ನು ಬಂಧನದಿಂದ ಮುಕ್ತಗೊಳಿಸೋದಕ್ಕೆ ಆಂಜನೇಯ ಹೋರಾಡಿದ ಕಥೆ ನಮಗೆಲ್ಲಾ ಗೊತ್ತೇ ಇದೆ. ಯಾರು ಪ್ರತಿನಿತ್ಯ ಸಂಜೆಯ ವೇಳೆ ಹನುಮಾನ್ ಚಾಲೀಸ್ ಅನ್ನು ಜಪಿಸುತ್ತಾರೆ. ಅವರು ಯಾವುದೇ ರೀತಿ ಬಂಧನಕ್ಕೆ ಸಿಲುಕಿಕೊಳ್ಳೋದಿಲ್ವಂತೆ. ಯಾರಾದರೂ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಅವರು ಹನುಮಾನ್ ಚಾಲೀಸ್ ಅನ್ನು 108 ಬಾರಿ ಪಠಿಸಬೇಕು. ಈ ಪರಿಹಾರವನ್ನು ಮಾಡುವುದರಿಂದ ಜೈಲಿನಿಂದ ಮುಕ್ತಿ ಸಿಗುತ್ತದೆ. ನೀವು ಯಾವುದೇ ಒಂದು ಪ್ರಕರಣದ ವಿಚಾರವಾಗಿ ಹೋರಾಡುತ್ತಿದ್ದರೂ ಸಹ ನೀವು ನಿತ್ಯ ಹನುಮಂತನ ಆರಾಧನೆ ಮಾಡೋದ್ರಿಂದ ನೀವು ದೋಷಮುಕ್ತರಾಗಬಹುದು.
5. ಅ.ಪ.ಘಾ.ತಗಳನ್ನು ತಡೆಗಟ್ಟುತ್ತಾನೆ
ಇತ್ತೀಚಿನ ದಿನಗಳಲ್ಲಿ ನಾವು ರಸ್ತೆ ಅಪಘಾತ ಅಥವಾ ಇನ್ಯಾವುದೋ ಅಪಘಾತಗಳಿಂದ ಸಾವನ್ನಪ್ಪುವ ಜನರನ್ನು ನೋಡಿರ್ತೀವಿ. ಶನಿ ಮತ್ತು ರಾಹು-ಕೇತುಗಳ ದುಷ್ಪರಿಣಾಮಗಳಿಂದ ಮನುಷ್ಯ ಇಂತಹ ಭಯಾನಕ ಅಪ.ಘಾ.ತಗಳಿಗೆ ಬಲಿಯಾಗುತ್ತಾನಂತೆ. ನಿತ್ಯವು ಯಾರು ಹನುಮಾನ್ ಚಾಲಿಸ್ ಅನ್ನು ಪಠಿಸುತ್ತಾರೋ ಅವರನ್ನು ಭಜರಂಗಿ ಇಂತಹ ಅ.ಪ.ಘಾ.ತಗಳಿಂದ ರಕ್ಷಣೆ ಮಾಡುತ್ತಾನಂತೆ. ಆಂಜನೇಯನ ಇಂತವರನ್ನು ರಕ್ಷಣೆ ಮಾಡುತ್ತಿರುತ್ತಾರಂತೆ.
6. ಮಂಗಳ ದೋಷಕ್ಕೆ ಪರಿಹಾರ
ಕೆಲವರ ಕುಂಡಲಿಯಲ್ಲಿ ಮಂಗಳ ದೋಷವಿರುತ್ತದೆ. ಹೀಗಾಗಿ ಇದಕ್ಕೆ ಪರಿಹಾರ ಮಾಡೋದಕ್ಕಾಗಿ ಪ್ರತಿ ಮಂಗಳವಾರ ಸಿಂಧೂರ ಅರ್ಪಣೆ ಮಾಡಬೇಕು. ಜೊತೆಗೆ ಆ ದಿನ ಉಪವಾಸ ಇದ್ದು ಹನುಮಾನ್ ಚಾಲೀಸ್ ಪಠಣೆ ಮಾಡೋದ್ರಿಂದ ಈ ದೋಷವನ್ನು ಪರಿಹರಿಸಬಹುದಂತೆ. ಇದ್ರ ಜೊತೆಗೆ ದೋಷಪರಿಹಾರಕ್ಕೆ ಉದ್ದಿನ ಬೇಳೆ, ಸಿಹಿತಿಂಡಿ, ರಕ್ತ ಚಂದನವನ್ನು ಬಟ್ಟೆಯಲ್ಲಿ ಸುತ್ತಿ ನೀರಿನಲ್ಲಿ ಬಿಡಬೇಕು.
7. ಶನಿ ದೋಷಕ್ಕೆ ಪರಿಹಾರ
ಶನಿಯ ಪ್ರಭಾವಕ್ಕೆ ಗುರಿಯಾದರೆ ಜೀವನದಲ್ಲಿ ಸಕಲ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಯಾರ ಜಾತಕದಲ್ಲಿ ಶನಿ ದೋಷ ಇದೆಯೋ ಅಂತವರು ಮಂಗಳವಾರ ದೇವಸ್ಥಾನಕ್ಕೆ ಹೋಗಿ ಹನುಮಾನ್ ಚಾಲೀಸವನ್ನು ಪಠಿಸಬೇಕು. ಇದರೊಂದಿಗೆ ಶನಿವಾರದಂದು ಸುಂದರಕಾಂಡವನ್ನು ಪಠಿಸುವುದು ಕೂಡ ಬಹಳ ಪರಿಣಾಮಕಾರಿಯಾಗಿದೆ. ಇದ್ರ ಜೊತೆಗೆ ಶನಿವಾರದ ದಿನ ದೀಪ ಬೆಳಗಿಸೋದ್ರಿಂದ ಶನಿ ದೋಷದಿಂದ ಮುಕ್ತಿ ಪಡೆಯಬಹುದು.
8. ಸಂಕಷ್ಟಗಳು ಪರಿಹಾರವಾಗುತ್ತದೆ
ಹನುಮಂತನು ನಂಬಿ ಬಂದ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ ಅವರನ್ನು ಕಾಪಾಡುತ್ತಿದ್ದಾನೆ. ಒಂದು ವೇಳೆ ಯಾರಾದರೂ ನಿಜವಾಗಿಯೂ ಕಷ್ಟದಲ್ಲಿ ಇದ್ದಾಗ ಭಜರಂಗಬಲಿಯನ್ನು ನೆನೆದರೆ ಸಾಕು ಕಷ್ಟಗಳೆಲ್ಲಾ ದೂರ ಆಗುತ್ತದೆ.
9 ಕೆಲಸಕ್ಕೆ ಯಾವುದೇ ರೀತಿ ತೊಂದರೆ ಆಗೋದಿಲ್ಲ
ಪ್ರತಿ ಬಾರಿ ಏನಾದರೂ ಹೊಸ ಕೆಲಸ ಮಾಡುವಾಗ ಯಾವುದೇ ಅಡ್ಡಿ-ಆತಂಕಗಳು ಬಾರದೇ ಇರಲಿ ಅಂತ ನಾವು ಆ ದೇವರಲ್ಲಿ ಬೇಡಿಕೊಳ್ಳುತ್ತೇವೆ. ಅದೇ ರೀತಿ ನೀವು ಆಂಜನೇಯನ ಸ್ಮರಣೆಯನ್ನು ಸದಾ ಮಾಡುತ್ತಿದ್ದರೆ ನಿಮ್ಮ ಕೆಲಸದಲ್ಲಿ ಎದುರಾಗುವ ಸಕಲ ಸಂಕಷ್ಟಗಳನ್ನು ದೂರ ಮಾಡುತ್ತಾನೆ. ಒಂದು ಸಾರಿ ರಾಮನ ನಾಮಸ್ಮರಣೆ ಮಾಡುತ್ತಿದ್ದಾಗ ಅಡ್ಡಿ ಪಡಿಸಿದ ಶನಿಯನ್ನು ಬಾಲದಲ್ಲಿ ಸುತ್ತಿ ಬಂಧಿಯಾಗಿಸಿದ್ದನು.
10. ದುಷ್ಟ ಶಕ್ತಿಗಳು ಹತ್ತಿರ ಸುಳಿಯೋದಿಲ್ಲ
ಯಾರು ಹನುಮಂತನನ್ನು ಪೂಜಿಸುತ್ತಾರೋ ಅವರ ಹತ್ತಿರ ದೆವ್ವ, ಭೂತಗಳು ಕೂಡ ಬರುವುದಿಲ್ಲ. ಯಾರಾದರೂ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಭಜರಂಗಿಯನ್ನು ಭಕ್ತಿಯಿಂದ ಪೂಜಿಸಿದರೆ ನಿಮ್ಮಿಂದ ನಕಾರಾತ್ಮಕ ಶಕ್ತಿಗಳು ದೂರವಾಗಲಿದೆ. ಮಂಗಳವಾರ ಮತ್ತು ಶನಿವಾರದ ದಿನ ಹನುಮಾನ್ ದೇವಸ್ಥಾನಕ್ಕೆ ಹೋಗಿ ದೀಪ ಬೆಳಗಿರಿ. ದುಷ್ಟ ಶಕ್ತಿ ನಿಮ್ಮ ಹತ್ತಿರಕ್ಕೂ ಸುಳಿಯೋದಿಲ್ಲ.