ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಒಂದು ಕೆಮ್ಮು, ನೆಗಡಿ ಮತ್ತು ಗಂಟಲು ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಇಂತಹವರು ಕೆಮ್ಮು ಬಂದ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆಯುತ್ತಾರೆ ಆದರೆ ನಾವು ಎಷ್ಟೇ ಆಸ್ಪತ್ರೆಗೆ ತೋರಿಸಿದರು ಸಹ ಈ ಒಂದು ಕೆಮ್ಮು, ನೆಗಡಿ ಎನ್ನುವಂತಹದ್ದು ಆದಷ್ಟು ಬೇಗ ಕಡಿಮೆ ಆಗುವುದಿಲ್ಲ. ಹಿಂದಿನ ಕಾಲದ ಜನರು ಯಾರು ಸಹ ಆಸ್ಪತ್ರೆಗೆ ಹೋಗಿ ಕೆಮ್ಮು ಮತ್ತು ನೆಗಡಿ ಯನ್ನು ತೋರಿಸುತ್ತಿರಲಿಲ್ಲ ಕಾರಣ ಅವರು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ಮನೆ ಮದ್ದು ಮಾಡಿಕೊಂಡು ತಮ್ಮ ರೋಗವನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದರು. ಅವರು ಅಷ್ಟೇ ಶಕ್ತಿಯುತವಾಗಿ ಇದ್ದರು, ಅಷ್ಟೇ ಅಲ್ಲದೆ ಅವರಲ್ಲಿ ರೋಗನಿರೋಧಕ ಶಕ್ತಿ ಎನ್ನುವಂತಹದ್ದು ಅತಿ ಹೇರಳವಾಗಿತ್ತು ಆದರೆ ಈಗಿನ ಕಾಲದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಆಗಿಬಿಟ್ಟಿದೆ.
ಇದಕ್ಕೆ ಕಾರಣ ಆಹಾರ ಪದ್ಧತಿ, ಹಿಂದಿನ ಕಾಲದ ಜನರು ನೈಸರ್ಗಿಕವಾದ ಆಹಾರ ಸೇವನೆಯನ್ನು ಮಾಡುತ್ತಿದ್ದರು ಹಾಗೂ ಅವರ ಜೀವನವನ್ನು ಸಹ ಉತ್ತಮವಾಗಿ ಇಟ್ಟುಕೊಂಡಿದ್ದರು. ಆದರೆ ನಾವು ಇತ್ತೀಚಿನ ದಿನಗಳಲ್ಲಿ ಹೊರಗೆ ಸಿಗುವಂತಹ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳುತ್ತಾ ಬರುತ್ತಿದ್ದೇವೆ ಹೌದು ನಮ್ಮ ಆಲಸ್ಯತನದಿಂದ ನಾವು ಯಾವುದೇ ರೀತಿಯಾದಂತಹ ಕೆಲಸಗಳನ್ನು ಮಾಡದೆ ಮನೆಯಲ್ಲಿ ಅಡುಗೆಯನ್ನು ಸಹ ಮಾಡದೆ ಹೊರಗಿನ ತಿಂಡಿಯನ್ನು ಬೇಡಿ ನಾವು ತಿನ್ನುತ್ತೇವೆ. ಇದೇ ನಮ್ಮ ಆರೋಗ್ಯದ ಮೇಲೆ ದುಷ್ಪಪರಿಣಾಮವನ್ನು ಬೀರುವಂತಹವು. ಆದ್ದರಿಂದ ನಾವು ಎಣ್ಣೆಯಲ್ಲಿ ಹೆಚ್ಚಾಗಿ ಕರಿದಂತಹ ಆಹಾರ ಪದಾರ್ಥಗಳು ಜಂಗ್ ಫುಡ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿಕೊಂಡು ನಮ್ಮ ಮನೆಯಲ್ಲಿ ಮಾಡಿದಂತಹ ಉತ್ತಮ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ದೈನಂದಿನವಾಗಿ ಉತ್ತಮ ಆಹಾರವನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಈಗೆಲ್ಲಾ ನೆಗಡಿ, ಕೆಮ್ಮು ಎನ್ನುವಂತಹದ್ದು ವಾತಾವರಣದಿಂದ ಹಾಗೆಯೇ ನಾವು ಕುಡಿಯುವ ನೀರಿನ ವ್ಯತ್ಯಾಸವಾದರೂ ಸಹ ನಮಗೆ ಗಂಟಲು ನೋವು ಈ ರೀತಿಯಾದಂತಹ ಸಮಸ್ಯೆಗಳು ಕಂಡುಬರುತ್ತದೆ ಆದ್ದರಿಂದ ನಾವು ಆಸ್ಪತ್ರೆಗೆ ಹೋಗುವ ಬದಲು ನಮ್ಮ ಮನೆಯಲ್ಲಿ ಮನೆಯಲ್ಲಿ ಇರುವಂತಹ ಸಾಮಗ್ರಿಗಳನ್ನು ಉಪಯೋಗ ಮಾಡಿಕೊಂಡು ನಮ್ಮ ಕೆಮ್ಮು, ನೆಗಡಿ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಇಂತಹ ನೆಗಡಿ, ಕೆಮ್ಮು, ಗಂಟಲು ನೋವಿಗೆ ನಾವಿಲ್ಲಿ ಒಂದು ಮನೆಮದ್ದನ್ನು ತಿಳಿಸುತ್ತಿದ್ದೇವೆ. ಈ ಒಂದು ಕಷಾಯವನ್ನು ನೀವು ಕುಡಿದರೆ ನಿಮಗೆ ಇರುವಂತಹ ನೆಗಡಿ, ಕೆಮ್ಮು ಆದಷ್ಟು ಬೇಗ ಕಡಿಮೆಯಾಗುತ್ತದೆ. ಈ ಒಂದು ಕಷಾಯವನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಸಾಮಗ್ರಿಗಳು ಅರ್ಧ ಲೋಟ ಹಾಲು, ಒಂದು ಇಂಚು ಹಸಿ ಶುಂಠಿ, ಅರ್ಧ ಟೇಬಲ್ ಸ್ಪೂನ್ ದನಿಯ, ಎಂಟರಿಂದ ಹತ್ತು ಒಣಮೆಣಸು, ಕಾಲು ಟೇಬಲ್ ಸ್ಪೂನ್ ಹರಿಶಿಣ ಪುಡಿ ಹಾಗು ಸಕ್ಕರೆ.
ಮಾಡುವ ವಿಧಾನ ಮೊದಲಿಗೆ ಸ್ಟವ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಅರ್ಧ ಲೋಟ ಹಾಲು, ಅರ್ಧ ಲೋಟ ನೀರನ್ನು ಸೇರಿಸಿ ನಂತರ ಇದಕ್ಕೆ ಒಂದು ಇಂಚು ಹಸಿಶುಂಠಿ, ಒಂದರಿಂದ ಹತ್ತು ಒಣಮೆಣಸಿನ ಕಾಳು, ಕಾಲು ಟೇಬಲ್ ಸ್ಪೂನ್ ನಷ್ಟು ಹರಿಶಿಣ ಪುಡಿ, 2 ಟೇಬಲ್ ಸ್ಪೂನ್ ಸಕ್ಕರೆ ಹಾಕಿ ಇದನ್ನು ಲೋ ಫ್ಲೇಮ್ ನಲ್ಲಿ 2 ನಿಮಿಷಗಳ ಚೆನ್ನಾಗಿ ಕುದಿಸಿಕೊಳ್ಳಿ. ಚೆನ್ನಾಗಿ ಕುದಿಸಿದ ನಂತರ ಇದನ್ನು ಒಂದು ಲೋಟಕ್ಕೆ ಶೋಧಿಸಿಕೊಂಡು ನೀವು ಇದನ್ನು ಕುಡಿಯಬೇಕು. ವಾರದಲ್ಲಿ ಎರಡು ಬಾರಿ ನೀವು ಕುಡಿಯುತ್ತಾ ಬಂದರೆ ನಿಮಗೆ ಇರುವಂತಹ ಗಂಟಲು ನೋವು, ನೆಗಡಿ, ಕೆಮ್ಮು, ಕಫ, ತಲೆನೋವು ಇನ್ನಿತರ ಸಮಸ್ಯೆಗಳು ಅತಿವೇಗವಾಗಿ ಗುಣವಾಗುತ್ತದೆ. ನಾವಿಲ್ಲಿ ಬಳಸಿರುವ ಪದಾರ್ಥಗಳು ಆರೋಗ್ಯವನ್ನು ಹೆಚ್ಚಿಸುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಪದಾರ್ಥಗಳಾಗಿವೆ ನಮ್ಮ ದೇಹದ ಮೇಲೆ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮವನ್ನು ಬೀರುವುದಿಲ್ಲ. ಯಾರಿಗೆಲ್ಲ ಬಾಡಿ ಹೀಟ್ ಇರುತ್ತದೆಯೋ ಅಂತಹವರು ಈ ಒಂದು ಕಷಾಯದ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಕುಡಿಯಬೇಕು.
ನಾವು ಇಲ್ಲಿ ಬಳಸಿರುವಂತಹದು ಮೆಣಸು ನಮ್ಮ ಗಂಟಲಿನಲ್ಲಿ ಇರುವಂತಹ ಕಫ ಗಂಟಲು ನೋವು ನಿವಾರಣೆಗೆ ಹೆಚ್ಚಿನ ಸಹಾಯವನ್ನು ಮಾಡುತ್ತದೆ. ಅರಿಶಿಣ ಪುಡಿ ಆಂಟಿಬಯೋಟಿಕ್ ಆಗಿ ಕೆಲಸ ಮಾಡಿ ನಮ್ಮ ದೇಹದಲ್ಲಿ ಇರುವಂತಹ ಬ್ಯಾಕ್ಟೀರಿಯಗಳನ್ನು ಹೊರ ಹಾಕುವಂತಹ ಕೆಲಸವನ್ನು ಮಾಡುತ್ತದೆ. ಅಲ್ಲದೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕೆಲಸ ಮಾಡುತ್ತದೆ ನಾವು ಆಸ್ಪತ್ರೆಗಳಿಗೆ ಹೋಗಿ ತೋರಿಸಿ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಈ ರೀತಿಯಾದಂತಹ ನೈಸರ್ಗಿಕವಾದ ಮನೆಯಲ್ಲಿಯೇ ಕಷಾಯವನ್ನು ಮಾಡಿಕೊಂಡು ಕುಡಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಅಷ್ಟೇ ಅಲ್ಲದೆ ನಮಗೆ ಇರುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ