ಈ ಎಲೆಯನ್ನು ದಿನ ಬಳಸಿದರೆ ಕೆಮ್ಮು, ಕಫ, ನೆಗಡಿ ನಿಮ್ಮ ಬಳಿ ಸುಳಿಯುವುದೇ ಇಲ್ಲ
ಸ್ನೇಹಿತರೆ ಇನ್ನು ಈ ಎಲೆಯನ್ನು ತಿಂದರೆ ಶೀತ ಕೆಮ್ಮು ಕಫಗಳಂತಹ ಕಾಯಿಲೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ.ಶೀತ ಮತ್ತು ಕೆಮ್ಮು ಸಾಮಾನ್ಯ ಆರೋಗ್ಯ ಸಮಸ್ಯೆ ಆಗಿದ್ದರೂ ಅದರಿಂದ ವ್ಯಕ್ತಿ ಸಾಕಷ್ಟು ಆಯಾಸ ಹಾಗೂ ಕಿರಿಕಿರಿಯನ್ನು ಅನುಭವಿಸಬೇಕಾಗುವುದು. ಇಂತಹ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಸಾಕಷ್ಟು ಔಷಧಿಗಳಿವೆ. ಅಂತಹ ಅದ್ಭುತ ಆರೋಗ್ಯ ಗುಣಗಳನ್ನು ಒಳಗೊಂಡಿರುವ ಸಸ್ಯ ಎಂದರೆ ದೊಡ್ಡ ಪತ್ರೆಯ ಗಿಡ.
ಆಯುರ್ವೇದದಲ್ಲಿ ಗಿಡಮೂಲಿಕೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ಗಿಡ ಮೂಲಿಕೆಗಳು ಸಹ ಒಂದಿಲ್ಲೊಂದು ಪ್ರಯೋಜನವನ್ನು ಹೊಂದಿರುತ್ತವೆ. ಅಂತಹ ಎಲೆಗಳಲ್ಲಿಯೇ ಒಂದು ಈ ದೊಡ್ಡಪತ್ರೆ ಎಲೆ. ಇದನ್ನು ಸಾಮಾನ್ಯವಾಗಿ ಅಜ್ವೈನ್ ಎಲೆಗಳು, ದೊಡ್ಡಿಪತ್ರೆ ಎಲೆಗಳು, ಸೆಲರಿ ಸಸ್ಯ ಎಂತಲೂ ಕರೆಯಲಾಗುತ್ತದೆ. ಈ ಎಲೆಗಳು ವಾತ-ಪಿತ್ತದಲ್ಲಿ ಪರಿಹಾರ ನೀಡುವುದಲ್ಲದೆ ಕೆಮ್ಮು ಮತ್ತು ಶೀತ, ಶ್ವಾಸಕೋಶ, ಮೂತ್ರದ ಸಮಸ್ಯೆ, ಅಲರ್ಜಿ, ತೂಕ ಹೆಚ್ಚಳದಿಂದಲ್ಲೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ.
ಶೀತ ಮತ್ತು ಕೆಮ್ಮು ಎನ್ನುವುದು ಸಾಮಾನ್ಯವಾಗಿ ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ವಾತಾವರಣದಲ್ಲಿ ಉಂಟಾಗುವ ಕೊಂಚ ಬದಲಾವಣೆ ಅಥವಾ ಸೋಂಕುಗಳಿಂದ ಬಹುಬೇಗ ಪ್ರೇರೇಪಿತಗೊಳ್ಳುತ್ತವೆ. ಈ ಸಮಸ್ಯೆಗಳು ಕಾಣಿಸಕೊಳ್ಳಲು ಇಂತಹದ್ದೇ ಋತುಮಾನಗಳು ಆಗಬೇಕು ಎನ್ನುವ ನಿರ್ಬಂಧಗಳೇನು ಇಲ್ಲ. ವರ್ಷದ ಎಲ್ಲಾ ಋತುಮಾನಗಳಲ್ಲೂ ಕಾಣಿಸಕೊಳ್ಳುತ್ತವೆ. ಹಳ್ಳಿಗಳಲ್ಲಿ ಚಿಕ್ಕ ಮಕ್ಕಳಿಗೆ ಶೀತ, ಕೆಮ್ಮು ಪ್ರಾರಂಭವಾದ ತಕ್ಷಣ ಮೊದಲು ನೀಡುವ ಔಷಧಿಯೇ ದೊಡ್ಡಪತ್ರೆ ಎಲೆಯ ರಸ.
ಈ ಎಲೆಯನ್ನು ಬಳಸೋದ್ರಿಂದ ನೆಗಡಿ, ಕಫ, ತಲೆಭಾರ, ಅಜೀರ್ಣ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಕೂಡ ಇದನ್ನು ನೀಡುತ್ತಾರೆ. ದೊಡ್ಡಪತ್ರೆ ಎಲೆಯಲ್ಲಿ ವಿಟಮಿನ್ ಎ ಹಾಗೂ ಸಿ ಹೇರಳವಾಗಿರೋದ್ರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಇಷ್ಟೆಲ್ಲ ಔಷಧೀಯ ಗುಣಗಳನ್ನು ಹೊಂದಿರೋ ದೊಡ್ಡಪತ್ರೆ ಎಲೆಗಳಿಂದ ನಾನಾ ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದು.
ಈ ಖಾದ್ಯಗಳು ಬಾಯಿಗೆ ರುಚಿಸೋ ಜೊತೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸೋ ಮೂಲಕ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡೋ ನೆಗಡಿ, ಜ್ವರದಂತಹ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ನಮ್ಮ ಆಹಾರದಲ್ಲಿನ ಬದಲಾವಣೆ ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ಹಲವರು ವಾತದ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಅಂತಹವರಿಗೆ ದೊಡ್ಡಪತ್ರೆ ಎಲೆಗಳ ನೀರು ತುಂಬ ಪ್ರಯೋಜನಕಾರಿ ಆಗಿದೆ.
ದೊಡ್ಡಪತ್ರೆ ಎಲೆಗಳಲ್ಲಿ ಸೋಡಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅನ್ನು ಸಮತೋಲಿತ ಪ್ರಮಾಣದಲ್ಲಿ ಕಂಡು ಬರುತ್ತದೆ. ಈ ಕಾರಣದಿಂದಾಗಿ, ಮೂತ್ರದ ತೊಂದರೆಗಳು ಪ್ರಯೋಜನಕಾರಿಯಾಗಬಹುದು. ಇನ್ನು ಮೊದಲು ಮೂರು ಎಲೆಗಳನ್ನು ತೆಗೆದುಕೊಂಡು ಒಂದು ಪಾನ ಮೇಲೆ ಎರಡು ಭಾಗಗಳಲ್ಲೂ ಚೆನ್ನಾಗಿ ಸುಡಬೇಕು ನಂತರ ತಣ್ಣಗಾದ ಮೇಲೆ ಅದು ರಸವನ್ನು ಬಿಡುವ ವೇಳೆ ಕೈಯಲ್ಲೇ ಚೆನ್ನಾಗಿ ಹಿಂಡಿ ರಸವನ್ನು ತೆಗೆಯಬೇಕು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಬೇಕು ಇದಕ್ಕೇ ಒಂದೇ ಒಂದು ಸಣ್ಣ ಕಲ್ಲು ಉಪ್ಪನ್ನು ಹಾಕಿ ಕರಗುವ ರೀತಿಯಲ್ಲಿ ಮಿಶ್ರಣ ಮಾಡಬೇಕು.
ಈ ಮಿಶ್ರಣವನ್ನು ದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಎರಡು ವರ್ಷದ ಮೇಲೆ ಇರುವ ಮಕ್ಕಳಿಗೆ ಒಂದು ಚಮಚ ಕುಡಿಸಬೇಕು. ಇನ್ನೊಂದು ದೊಡ್ಡವರಿಗೆ ಒಂದು ಹಸಿ ದೊಡ್ಡಪತ್ರೆಯ ಒಳಗೆ ಎರಡು ಸಣ್ಣ ಗಾತ್ರದ ಕಲ್ಲು ಉಪ್ಪಿನ ಜೊತೆ ಸೇವಿಸಿ ರಸವನ್ನು ಚೆನ್ನಾಗಿ ಕುಡಿದು ಎಲೆಯನ್ನು ನುಂಗಬಹುದು ಇದರಿಂದ ಶೀತ ಕೆಮ್ಮು ನೆಗಡಿ ಕಫ ಇಂತಹ ಸಮಸ್ಯೆಗಳು ಶಾಶ್ವತವಾಗಿ ದೂರ ಉಳಿಯುತ್ತವೆ ನಮ್ಮ ಸುತ್ತ ಬೆಳೆದಿರುವ ಸಸ್ಯಗಳಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳಬಹುದು.