ಈ ಸಸ್ಯ ನಿಮ್ಮ ಅಕ್ಕ ಪಕ್ಕದಲ್ಲಿ ಇದ್ದರೆ ತಪ್ಪದೇ ಇದನ್ನು ಹೀಗೆ ಬಳಸಿ. ಕೂದಲು ಉದುರುವ ಸಮಸ್ಯೆಗೆ ರಾಮಬಾಣ, ಕೀಲುಗಳಿಗೆ ಸಂಬಂಧಪಟ್ಟಂತಹ ನೋವನ್ನು ನಿವಾರಣೆ ಮಾಡುವ ಅದ್ಭುತ ಔಷಧಿ

ಅಗ್ನಿ ಬಳ್ಳಿ : ಸಾಮಾನ್ಯವಾಗಿ ಹೊಲ ಗದ್ದೆಗಳ ಅಂಚಿನಲ್ಲಿ ನೀರಿನ ಸೆಲೆ ಇರುವ ಕಡೆ ಈ ಬಳ್ಳಿ ಸಸ್ಯ ಬೆಳೆಯುತ್ತದೆ. ಅಲ್ಲದೆ ಅಗ್ನಿ ಬಳಿಯು ಹುಲ್ಲುಗಾವಲು ಕುರುಚಲು ಕಾಡು, ಪಾಳು ಭೂಮಿ ಗಳಲ್ಲಿಯೂ ಕಾಣಿಸುತ್ತದೆ. ಇದು ಉಷ್ಣವಲಯದ ನಿವಾಸಿಯಾಗಿರುವ ಸಸ್ಯ ನಮ್ಮ ಕಣ್ಣ ಮುಂದೆಯೇ ನಮ್ಮ ಹೊಲ ಗದ್ದೆಗಳ ಆಸುಪಾಸಿನಲ್ಲಿ ಸಿಗುವ ಮತ್ತು ನಾವು ಮಕ್ಕಳ ವಯಸ್ಸಿನಲ್ಲಿ ಇದ್ದಾಗ ಇದರ ಜೊತೆ ಆಟವಾಡುತ್ತ ಬೆಳೆದಿರುವ ನಾವು ಈ ಬಳ್ಳಿಯಲ್ಲಿ ಇರುವ ಔಷಧೀಯ ಗುಣವನ್ನು ನೋಡಿ ಆಶ್ಚರ್ಯ ಪಡುತ್ತೇವೆ. ಔಷದೀಯ ಗುಣವನ್ನು ಹೊಂದಿರುವ ಈ ಬಳ್ಳಿಯನ್ನು ಆಯುರ್ವೇದ, ಸಿದ್ದ ವೈದ್ಯ ಪದ್ಧತಿ ಹಾಗೂ ಸಾಂಪ್ರದಾಯಕ ಔಷಧಿ ಪದ್ಧತಿಯಲ್ಲಿ ಅಗ್ನಿ ಬಳ್ಳಿ ಸಸ್ಯದ ಬೇರು ಎಲೆ ಕಾಂಡ ಹಾಗೂ ಬೀಜಗಳನ್ನು ಔಷಧೀಯ ಉದ್ದೇಶಕ್ಕಾಗಿ ಹೆಚ್ಚಾಗಿ ಬಳಸುತ್ತಾರೆ ಇದರ ವೈಜ್ಞಾನಿಕ ಹೆಸರು ಕಾರ್ಡಿಯೋ ಸ್ಪರ್ಮಮ್ ಹ್ಯಾಲ ಕಾಸಬಮ್. ಕನ್ನಡದಲ್ಲಿ ಅಗ್ನಿ ಬಳ್ಳಿ , ಮಿಂಚಿನ ಬಳ್ಳಿ ಎರುಂಬಳ್ಳಿ, ಬೆಕ್ಕಿನ ಬುಡ್ಡೆ ಗಿಡ ಎಂತಲೂ ಸಂಸ್ಕೃತದಲ್ಲಿ ಇಂದ್ರ ಬಳ್ಳಿ ಎಂತಲೂ ಇಂಗ್ಲಿಷ್ ನಲ್ಲಿ ಬಲೂನ್ ವೈನ್ ಹಾಗೂ ಹಾರ್ಟ್ ಸೀಡ್ ಎಂತಲೂ ಕರೆಯುತ್ತಾರೆ.
ಅಮೆರಿಕಾ ಆಫ್ರಿಕಾ ಪೂರ್ವ ಏಷ್ಯಾ ಭಾರತದ ಮುಂತಾದ ಸ್ಥಳದಲ್ಲಿ ಇದು ಕಂಡು ಬರುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವೂ ಕಾಂಡ ಹೂವು ಹಣ್ಣು ಎಲೆಗಳು ಒಂದಲ್ಲ ಒಂದು ಔಷಧ ರೂಪದಲ್ಲಿ ಕಂಡು ಬರುತ್ತದೆ. ಅಗ್ನಿ ಬಳ್ಳಿ ಸಸ್ಯದಲ್ಲಿ ಕೀಟ ನಿರೋಧಕ ಗುಣ ಇರುತ್ತದೆ. ಇವುಗಳು ಸಂಧಿವಾತ ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮೂಲವ್ಯಾಧಿ ಕಾಲುಗಳ ಸೆಳೆತ ಚರ್ಮರೋಗ ಕಣ್ಣು ಹಾಗೂ ಕಿವಿಯ ರೋಗಗಳಿಗೂ ಔಷದಿಯಾಗಿ ಸಹ ಬಳಸಲಾಗುತ್ತದೆ. ಮಂಡಿನೋವು ಕಾಲು ಸೆಳೆತ ಭುಜ ನೋವು ಮುಂತಾದ ನೋವಿಗೆ ಒಂದು ಹಿಡಿ ಅಗ್ನಿ ಬಳ್ಳಿಯ ತಾಜಾ ಸೊಪ್ಪು ಮತ್ತು 100ml ಎಳ್ಳೆಣ್ಣೆ ಅಥವಾ ಶುಂಠಿ ಎಣ್ಣೆಯನ್ನು ಬಾಣಲೆಯಲ್ಲಿ ಕಾಯಿಸಿ ಎಲೆಯ ರಸವೆಲ್ಲ ಎಣ್ಣೆಗೆ ಇಳಿದ ನಂತರ ಕೆಳಗಿಳಿಸಿ ತಣ್ಣಗಾಗಲು ಬಿಡಬೇಕು.‌ ನಂತರ ಈ ಎಣ್ಣೆಯನ್ನು ಬಟ್ಟೆಯಲ್ಲಿ ಸೋಸಿ ಇಟ್ಟುಕೊಂಡು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸಂಧಿನೋವು ಮಂಡಿ ನೋವು ಅಥವಾ ಸೆಳೆತ ಇರುವ ಜಾಗದಲ್ಲಿ ಈ ಎಣ್ಣೆಯಿಂದ ಮಸಾಜ್ ಮಾಡುತ್ತಾ ಬಂದರೆ ಶೀಘ್ರವಾಗಿ ನೋವು ಗುಣವಾಗುತ್ತದೆ. ಅಲ್ಲದೆ ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಬೆಳೆಯಲು ಒಂದು ಹಿಡಿ ಅಗ್ನಿ ಬಳ್ಳಿಯ ಸೊಪ್ಪು , ಸ್ವಲ್ಪ ಮೆಂತ್ಯೆ ಮತ್ತು ಐದರಿಂದ ಆರು ಚಮಚ ಅಲೋವೆರಾ ತಿರುಳು ಅಂದರೆ ಲೋಳೆಸರವನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿರುವ ಜೆಲ್‌ .‌
ಇಷ್ಟನ್ನು ಚೆನ್ನಾಗಿ ಬೆರೆಸಿ ತಲೆಗೆ ಹಚ್ಚಿಕೊಂಡು 30 ನಿಮಿಷದ ನಂತರ ತಲೆ ತೊಳೆದುಕೊಳ್ಳಬೇಕು ಹೀಗೆ ಮಾಡುತ್ತಾ ಬಂದರೆ ಕೂದಲು ದಟ್ಟವಾಗಿ ಮತ್ತು ಕಪ್ಪಾಗಿ ಬೆಳೆಯುತ್ತದೆ. ತಾಜಾ ಅಗ್ನಿ ಬಳ್ಳಿಯ ಎಲೆಗಳು ಅಥವಾ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ದೋಸೆ ರಸಂ ಚಟ್ನಿ ಹೀಗೆ ಅಡುಗೆಯಲ್ಲಿ ಉಪಯೋಗಿಸುವುದರಿಂದ ಕೂದಲು ಬೆಳವಣಿಗೆ, ಸಂಧಿವಾತ ಅಂದರೆ ಆರ್ಥ್ರೈಟಿಸ್, ಅಲ್ಸರ್ ಮುಂತಾದ ಸಮಸ್ಯೆಗಳಿಗೆ ಇದು ಪರಿಣಾಮಕಾರಿ ಔಷಧ. ತಮಿಳುನಾಡಿನಲ್ಲಿ ಅಲ್ಲಿನ ಜನರು ಈವಅಗ್ನಿ ಬಳ್ಳಿಯನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುತ್ತಾರೆ. ತಲೆಯಲ್ಲಿ ಏನಾದರೂ ಒಟ್ಟು ಇದ್ದರೆ ಈ ಬಳ್ಳಿಯ ಗಿಡದ ಎಲೆಗಳನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ಕಿವುಚಿ ನಂತರ ಆ ನೀರನ್ನು ಸೋಸಿ ಆ ನೀರಿನಿಂದ ಕೂದಲು ತೊಳೆಯುವುದರಿಂದ ಡ್ಯಾಂಡ್ರಫ್ ನಿವಾರಣೆಯಾಗುತ್ತದೆ. ಈ ಗಿಡದ ಎಲೆಗಳಿಂದ ಸಾಂಪ್ರದಾಯಕವಾಗಿ ಚಹಾ ಕಾಫಿ ಟೀ ಮಾಡಿಕೊಂಡು ಕುಡಿಯುತ್ತಾರೆ
ಕಿವಿನೋವು ಇದ್ದರೆ ಅದಕ್ಕೆ ಅಗ್ನಿ ಬಳ್ಳಿಯಬ ಎಲೆಗಳ ರಸವನ್ನು 2 ರಿಂದ ಮೂರು ತೊಟ್ಟು ಕಿವಿಗೆ ಹಾಕಿಕೊಂಡರೆ ಕಿವಿನೋವು ಬೇಗ ಗುಣ ವಾಗುತ್ತದೆ. ಬಾಯಿ ಹುಣ್ಣು ಅಥವಾ ಹಲ್ಸರ್ ಇದಕ್ಕೆ ಅಗ್ನಿ ಬಳ್ಳಿ ಗಿಡದ ಎಲೆಗಳನ್ನು ನೀರಿನಿಂದ ಕುದಿಸಿ ಬಂದ ಕಷಾಯದಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಅಲ್ಸರ್ ಶಮನ ವಾಗುತ್ತದೆ. ಅಗ್ನಿ ಬಳ್ಳಿಯನ್ನು ಸೇವಿಸುವುದರಿಂದ ಇದು ಸಂತಾನ ಫಲವತ್ತತೆಯನ್ನು ಅಂದರೆ ಫರ್ಟಿಲೈಸರ್ ಅನ್ನು ಹೆಚ್ಚಾಗಿಸುತ್ತದೆ. ಸ್ಪರ್ಮ್ ಕೌಂಟ್ ಕಡಿಮೆ ಇದ್ದಂತವರು ಈ ಸೊಪ್ಪನ್ನು ಒಂದು ತಿಂಗಳುಗಳ ಕಾಲ ಉಪಯೋಗಿಸುತ್ತಾ ಬಂದರೆ ಯಾವುದೇ ಚಿಕಿತ್ಸೆ ಅಥವಾ ಇಂಗ್ಲಿಷ್ ಮೆಡಿಸನ್ ಇಲ್ಲದೆ ಸ್ಪರಂ ಕೌಂಟ್ ಅನ್ನು ಹೆಚ್ಚಿಸಿಕೊಂಡು ಸಂತಾನ ಫಲವತ್ತತೆಯನ್ನು ಹೊಂದಬಹುದು. ಮಂಡಿ ನೋವು ಕೀಲು ನೋವುಗಳಿಗೆ ಈ ಗಿಡದ ಎಲೆಗಳನ್ನು ಜಜ್ಜಿ ಅದರಲ್ಲಿ ಉಪ್ಪು ಹಾಕಿ ಪ್ಲ್ಯಾಸ್ಟರ್ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now