ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಭಾರತ ದೇಶವು ರುಚಿಗೆ ಎಂದು ಹೆಸರುವಾಸಿಯಾಗಿದೆ ಹೌದು ನಿಮ್ಮ ಭಾರತದಲ್ಲಿ ಬೆಳೆಯುವಂತಹ ಸಾಂಬರ್ ಪದಾರ್ಥಗಳು ನಮ್ಮ ಅಡುಗೆಯನ್ನು ಉತ್ತಮಗೊಳಿಸುತ್ತದೆ ಹಾಗೂ ರುಚಿಯನ್ನು ಮಾಡುವಂತಹ ಅದ್ಭುತವಾದ ಕೈಚಳಕವು ನಮ್ಮ ಭಾರತೀಯರದಾಗಿದೆ ಅಂತಹದೇ ಒಂದು ವಿಷಯಕ್ಕೆ ಸಮೀಪವಾಗಿರುವ ಒಂದು ಪುಟದೊಂದಿಗೆ ಇಂದು ನಿಮಗೆ ತೋರಿಸಲಿದ್ದೇವೆ.
ಹೌದು ಸ್ನೇಹಿತರೆ ಇಂದು ನಾವು ಹೇಳುವ ಒಂದು ರುಚಿಯನ್ನು ಹೆಚ್ಚಿಸುವ ಪುಡಿ ನಿಮ್ಮ ಎಲ್ಲಾ ಅಡುಗೆಯನ್ನು ಹೆಚ್ಚು ರುಚಿಯನ್ನು ಆಗುವ ಸಾಧ್ಯತೆಗಳನ್ನು ಹೆಚ್ಚು ಮಾಡುತ್ತದೆ. ಈ ಪುಡಿಯನ್ನು, ಸಾಂಬಾರಿಗೆ, ಗೊಜ್ಜಿಗೆ, ಚಟ್ನಿಪುಡಿ ಅಂತೆ ಎಲ್ಲದಕ್ಕೂ ಬಳಸಬಹುದು. ಇನ್ನು ಈ ಪುಡಿಯನ್ನು ಅಡುಗೆಗೆ ಬಳಸಿದರೆ ರುಚಿ ಕೂಡ ದುಪ್ಪಟ್ಟಾಗುತ್ತದೆ ಒಂದು ವೇಳೆ ನೀವು ಎರಡು ಚಮಚ ಅಥವಾ ಒಂದು ಚಮಚ ಸಾಂಬಾರ್ ಪುಡಿಯನ್ನು ಬಳಸುತ್ತಿದ್ದರೆ ಅರ್ಧ ಸಾಂಬರ್ ಪುಡಿಯನ್ನು ಬಳಸಿ ಇನ್ನೊಂದು ಅರ್ಥ ಈ ಪುಡಿಯನ್ನು ಬಳಸಿದರೆ ನಿಮ್ಮ ಅಡುಗೆಯಲ್ಲಿ ಇರುವಂತಹ ರುಚಿ ದುಪ್ಪಟ್ಟು ಆಗುವುದು, ನೂರಕ್ಕೆ ನೂರು ಸತ್ಯ.
ಇದರೊಂದಿಗೆ ಇದನ್ನು ಒಮ್ಮೆ ಮಾಡಿದರೆ ಸಾಕು ಮೂರರಿಂದ ಆರು ತಿಂಗಳವರೆಗೂ ಶೇಖರಣೆ ಮಾಡಬಹುದು ಹಾಗಾಗಿ ಇದು ನಿಮಗೊಂದು ಸಲಹೆ ಎಂದು ಕೂಡ ಹೇಳಬಹುದು ಇದನ್ನು ಒಮ್ಮೆ ಮನೆಯಲ್ಲಿ ಮಾಡಿ ನೋಡಿ ಪ್ರಯತ್ನಿಸಿ ಹಾಗೂ ರುಚಿಯ ಬಗ್ಗೆ ತಿಳಿಸಿ ಎಂದು ಹೇಳಲಾಗಿದೆ. ಹಾಕಿದ್ರೆ ಸ್ನೇಹಿತರೆ ಈ ಪುಡಿಗೆ ಮಾಡಬೇಕಾಗಿರುವ ಪದಾರ್ಥಗಳನ್ನು ಪಟ್ಟಿ ಮಾಡೋಣ ಇದರಲ್ಲಿ ಮೂರು ವಿಭಾಗವನ್ನು ಮಾಡಲಾಗಿದೆ ಒಂದು ರುಚಿಯನ್ನು ಹೆಚ್ಚಿಸುವುದಕ್ಕೆ ಇನ್ನೊಂದು ಪುಡಿಯನ್ನು ಮಾಡುವುದಕ್ಕಾಗಿ ಇನ್ನೊಂದು ಕಾರಣದ ಹಾಗೂ ಈ ಮಸಾಲೆಯನ್ನು ಹೆಚ್ಚಿಸುವ ಪುಡಿ ಮೂರರ ಮಿಶ್ರಣದ ಇದು ಪುಡಿಯನ್ನು ಹೇಳಬಹುದು.
ಇದನ್ನು ಸಾಂಬರ್ ಪುಡಿಯ ಬದಲು ಸಂಪೂರ್ಣ ಇದನ್ನೇ ಕೂಡ ಬಳಸಬಹುದಾಗಿದೆ. ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಕೊತ್ತಂಬರಿ ಬೀಜ, ಅರ್ಧ ಬಟ್ಟಲಿನಷ್ಟು ಜೀರಿಗೆ, ನಾಲ್ಕು ಚಮಚ ಕಡಲೆ ಬೇಳೆ, ಎರಡು ಚಮಚ ತೊಗರಿ ಬೇಳೆ, ಎರಡು ಚಮಚ ಕರಿಮೆಣಸು, ಅರ್ಧ ಚಮಚ ಮೆಂತ್ಯ, ಒಂದು ಚಮಚ ಸಾಸಿವೆ, ಅರ್ಧ ಬಟ್ಟಲಿನಷ್ಟು ಒಣಕೊಬ್ಬರಿ, 15 ಬ್ಯಾಡಗಿ ಮೆಣಸು, ಐದರಿಂದ ಆರು ಕಾರದ ಒಣ ಮೆಣಸಿನಕಾಯಿ, ಒಂದು ಸ್ವಲ್ಪ ಕರಿಬೇವಿನ ಸೊಪ್ಪು, ಇನ್ನು ಸಾಂಬಾರ ರುಚಿ ಹೆಚ್ಚು ಮಾಡಲು ಈ ಐದು ಪದಾರ್ಥಗಳು ಬೇಕಾಗಿದೆ.
ಒಂದು ಸಣ್ಣ ಬಟ್ಟಲಿನಷ್ಟು ನೆಲಗಡಲೆ ಅಥವಾ ಕಡಲೆ ಬೀಜ, ಇನ್ನು ಅದೇ ಸಣ್ಣ ಬಟ್ಟಲಿನಲ್ಲಿ ಗೋಡಂಬಿ, ಎರಡು ಚಮಚ ಗಸಗಸೆ, ಒಂದು ಚಮಚ ಬಿಳಿ ಎಳ್ಳು ಹಾಗೂ ಅರ್ಧ ಬಟ್ಟಲಿನಷ್ಟು ಹುರಿಗಳಲೆಯನ್ನು ತೆಗೆದುಕೊಳ್ಳಬೇಕು. ಇದಕ್ಕೆ ಸ್ವಲ್ಪ ಗರಂ ಮಸಾಲ ಪದಾರ್ಥವನ್ನು ಬೆರೆಸಿದರೆ ರುಚಿ ಉತ್ತಮವಾಗಿರುತ್ತದೆ ಹಾಗಾಗಿ ಸ್ವಲ್ಪ ಸೋಂಪು ಕಾಳು, ಒಂದು ಸ್ಟಾರ್ ಹೂವು, ಎರಡರಿಂದ ಮೂರು ಏಲಕ್ಕಿ, ಜಾಕಾಯಿಪತ್ರೆ, ಹಾಗೂ ಚಕ್ಕೆ ಮತ್ತು ಲವಂಗ ಅದಕ್ಕೆ ಸ್ವಲ್ಪ ಉಪ್ಪು ಅರಿಶಿಣ, ಹುಣಸೆ, ಇಂಗನ್ನು ಬೆರೆಸಬೇಕು.
ಇನ್ನು ಈ ಎಲ್ಲಾ ಪದಾರ್ಥಗಳನ್ನು ಒಂದು ಪಾನ್ ನಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು ಹುರಿದುಕೊಂಡು ನಂತರ ಎಲ್ಲವನ್ನು ಚೆನ್ನಾಗಿ ಆರಿಸಿಕೊಂಡು ಅದಕ್ಕೆ ಉಪ್ಪು ಹುಣಸೆಹಣ್ಣು ಹಾಗೂ ಗಸಗಸೆ ಈ ಮೂರನ್ನು ಬೆರೆಸಿ ಚೆನ್ನಾಗಿ ಒಂದು ಜಾರಿನಲ್ಲಿ ತರಿತರಿ ಆಗುವಂತೆ ಮಿಶ್ರಣ ಮಾಡಬೇಕು ಕೊನೆಯಲ್ಲಿ ಇದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಬೇಕು ಸದ್ಯ ಈ ಪುಡಿಯನ್ನು ಎಲ್ಲಾ ತರಹದ ಅಡುಗೆಗೆ ಬಳಸಬಹುದಾಗಿದೆ. ಇದನ್ನು 3 ರಿಂದ 6 ತಿಂಗಳವರೆಗೂ ಕೆಡದ ಹಾಗೆ ಇಡಬಹುದು.