ಪ್ರತಿಯೊಬ್ಬ ವ್ಯಕ್ತಿಯನ್ನು ಸಹ ಪ್ರಧಾನವಾಗಿ ಬಿಂಬಿಸುವಂತಹದ್ದು ಆತನ ಮುಖ. ಪ್ರತಿಯೊಬ್ಬರು ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತಾರೆ. ನಾವು ಹೆಚ್ಚಾಗಿ ಮಾರ್ಕೆಟ್ ನಲ್ಲಿ ಸಿಗುವಂತಹ ಕಾಸ್ಮೆಟಿಕ್ಸ್ ಅಥವಾ ಬ್ಯೂಟಿ ಪ್ರಾಡಕ್ಟ್ ಗಳನ್ನು ಉಪಯೋಗಿಸುತ್ತಾ ಇರುತ್ತೇವೆ ಇದು ನಮ್ಮ ಚರ್ಮಕ್ಕೆ ಹೆಚ್ಚಾಗಿ ಹಾನಿ ಉಂಟುಮಾಡುತ್ತದೆ ಹೊರತು ನಮ್ಮ ಚರ್ಮವನ್ನು ಸಂರಕ್ಷಣೆ ಮಾಡುವುದಿಲ್ಲ. ಇದಕ್ಕೆ ಬದಲಾಗಿ ನಾವು ನೈಸರ್ಗಿಕವಾದ ವಿಧಾನವನ್ನು ಅನುಸರಿಸಿದರೆ ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬ ಮನುಷ್ಯನ ಚರ್ಮವು ಸಹ ಸೂಕ್ಷ್ಮತೆಯಿಂದ ಕೂಡಿರುತ್ತದೆ ಅದಕ್ಕೆ ನಾವು ನಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿಕೊಂಡು ನಾವು ಮನೆಯಲ್ಲಿಯೇ ಒಂದು ರೆಮಿಡಿಯನ್ನು ತಯಾರಿಸಿ ಅದನ್ನು ನಾವು ನಮ್ಮ ಮುಖಕ್ಕೆ ಹಚ್ಚುತ್ತಾ ಬಂದರೆ ನಮ್ಮ ಮುಖದ ಸೌಂದರ್ಯವು ಕಾಪಾಡಿಕೊಳ್ಳಬಹುದು.
ಹಾಗೆಯೇ ನಮ್ಮ ಚರ್ಮವನ್ನು ಸಂರಕ್ಷಣೆಯಿಂದ ಇರುವಹಾಗೆ ನೋಡಿಕೊಳ್ಳಬಹುದು. ನಮ್ಮ ಮುಖದಲ್ಲಿ ಗುಳ್ಳೆ ಅಥವಾ ಓಪನ್ ಪೂರ್ಸ್, ಲಾರ್ಜ್ ಪೋರ್ಸ್ ಇನ್ನಿತರ ಚರ್ಮ ಸಮಸ್ಯೆಗಳು ಯಾವ ವಿಷಯಕ್ಕೆ ಕಂಡು ಬರುತ್ತದೆ ಎನ್ನುವುದನ್ನು ನೋಡುವುದಾದರೆ ನಾವು ಹೊರಗೆ ತಯಾರಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದೇವೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತ ಬರುತ್ತಿದ್ದೇವೆ ಅಲ್ಲದೆ ನಾವು ನಮ್ಮ ಮುಖವನ್ನು ಮಾಲಿನ್ಯ ಅಥವಾ ಮಣ್ಣು, ಕಸ, ಧೂಳು ಇದ್ದಕಡೆ ಒಡ್ಡುತ್ತಾ ಇದ್ದೇವೆ ಇದು ಸಹ ನಮ್ಮ ಚರ್ಮದ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ನಾವು ಹೆಚ್ಚಾಗಿ ಹಣ್ಣು, ಸೊಪ್ಪು ತರಕಾರಿಗಳನ್ನು ತಿನ್ನುದೆ ಇರುವುದು ಸಹ ನಮ್ಮ ಚರ್ಮದ ಮೇಲೆ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಕೆಲವರಿಗೆ ಎಣ್ಣೆಯುಕ್ತ ವಾದಂತಹ ಚರ್ಮ ಇರುತ್ತದೆ ಇದರಿಂದಲೂ ಸಹ ಅವರಿಗೆ ಓಪನ್ ಪೋರ್ಸ್ ಉಂಟಾಗುವಂತಹ ಸಾಧ್ಯತೆ ಇರುತ್ತದೆ.
ನಾವು ಹೆಚ್ಚಾಗಿ ನೀರನ್ನು ಕುಡಿಯದೇ ಇರುವುದು ಸಹ ನಮ್ಮ ಚರ್ಮವನ್ನು ಹಾಳು ಮಾಡುವಲ್ಲಿ ಕಾರಣವಾಗುತ್ತದೆ. ತುಂಬಾ ಜನರು ಈ ಒಂದು ಓಪನ್ ಫೋರ್ಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅದು ಗಂಡು ಮಕ್ಕಳಾದರು ಸರಿ ಹೆಣ್ಣುಮಕ್ಕಳ ಆದರೂ ಸರಿ ತುಂಬಾ ಜನರಿಗೆ ಪಿಂಪಲ್ಸ್ ಗಳು ಬಂದು ಹೋದ ನಂತರ ಅದು ಓಪನ್ ಆಗಿ ಅವರ ಮುಖವು ಚೆನ್ನಾಗಿ ಕಾಣುತ್ತಾ ಇರುವುದಿಲ್ಲ ಇಂತಹವರಿಗೆ ನಾವಿಲ್ಲಿ ಒಂದು ರೆಮಿಡಿ ತಿಳಿಸುತ್ತಿದ್ದೇನೆ ಇದನ್ನು ಬಳಸಿದ್ದೇ ಆದಲ್ಲಿ ನಿಮ್ಮ ಮುಖದ ಮೇಲೆ ಇರುವಂತಹ ಓಪನ್ ಅತಿವೇಗವಾಗಿ ಕಡಿಮೆ ಮಾಡಿಕೊಳ್ಳಬಹುದು. ಈ ಒಂದು ರೆಮಿಡಿ ಯನ್ನು ಮಾಡಲು ಮುಖ್ಯವಾಗಿ ಬೇಕಾಗಿರುವ ಅಂತಹದ್ದು ಮೊಟ್ಟೆಯ ಬಿಳಿಭಾಗ ಮತ್ತೆ ಚಂದನ ಪೌಡರ್ ಅಥವಾ ಸ್ಯಾಂಡಲ್ ಪೌಡರ್ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೊಟ್ಟೆಯ ಬಿಳಿಭಾಗವನ್ನು ಸಪರೇಟ್ ಆಗಿ ತೆಗೆದುಕೊಳ್ಳಿ ಆನಂತರ ಅದಕ್ಕೆ ಒಂದು ಟೇಬಲ್ ಸ್ಪೂನ್ ನಷ್ಟು ಚಂದನ ಪೌಡರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ, ಎರಡು ಚನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿ ನಂತರ ನಮ್ಮ ಮುಖವನ್ನು ನೀಟಾಗಿ ಸೋಪ್ ಅಥವಾ ಪೇಸ್ ವಾಷ್ ಇಂದ ತೊಳೆದುಕೊಳ್ಳಬೇಕು.
ನಂತರ ನೀವು ಮುಖವನ್ನು ಟವೆಲ್ ನಲ್ಲಿ ಮುಖವನ್ನು ಒರೆಸಿ ನಂತರ ನೀವು ತಯಾರಿಸಿಕೊಂಡು ಇರುವಂತಹ ಪೇಸ್ಟ್ ನಿಮ್ಮ ಮುಖದ ಮೇಲೆ ಒಂದೇ ಬಾರಿ ಹಾಕಬಾರದು ಬದಲಿಗೆ ಅದನ್ನು ಎರಡು ಅಥವಾ ಮೂರು ಬಾರಿ ಹಾಕಬೇಕು ಹೌದು ಒಂದು ಬಾರಿ ನಿಮ್ಮ ಪೂರ್ತಿ ಮುಖಕ್ಕೆ ಹಚ್ಚಿದ ನಂತರ ಮತ್ತೊಮ್ಮೆ 15 ನಿಮಿಷಗಳ ಬಳಿಕ ಮತ್ತೆ ಒಂದು ಲೇಯರ್ ಹಚ್ಚಿ. ಇದನ್ನು ಹಚ್ಚಿದ ನಂತರ ಮಾತನಾಡುವುದು ಅಥವಾ ಇನ್ನಿತರ ಯಾವುದೇ ಕೆಲಸವನ್ನು ಮಾಡಬಾರದು ಏಕೆಂದರೆ ನೀವು ಹಾಗೆ ಮಾಡಿದಲ್ಲಿ ನೀವು ಹಾಕಿರುವಂತಹ ಪೇಸ್ಟ್ ಬಿರುಕು ಬಿಟ್ಟಂತಾಗುತ್ತದೆ ಇದರಿಂದ ನಿಮಗೆ ಯಾವುದೇ ರೀತಿಯಾದಂತಹ ರಿಸಲ್ಟ್ ಸಿಗುವುದಿಲ್ಲ.
ಈ ಒಂದು ವಿಧಾನವನ್ನು ನೀವು ಕೇವಲ ಐದು ದಿನಗಳವರೆಗೆ ಅನುಸರಿಸಿದರೆ ಸಾಕು ನಿಮ್ಮ ಮುಖದ ಮೇಲೆ ಇರುವಂತಹ ಓಪನ್ ಫೋರ್ಸ್ ಕ್ಲೋಸ್ ಆಗಲು ಶುರುಮಾಡುತ್ತದೆ ನಿಮಗೆ ಒಂದು ಉತ್ತಮವಾದಂತಹ ರಿಸಲ್ಟ್ ಸಿಗುತ್ತದೆ. ಈ ಒಂದು ವಿಧಾನವನ್ನು ಅನುಸರಿಸುವುದರ ಜೊತೆಗೆ ನೀವು ಹೆಚ್ಚು ಹೆಚ್ಚು ನೀರನ್ನು ಕುಡಿಯುವುದು ಒಳ್ಳೆಯದು ಅಷ್ಟೇ ಅಲ್ಲದೆ ಉತ್ತಮವಾದ ಆಹಾರ ಸೇವನೆಯು ಸಹ ಮುಖ್ಯವಾಗುತ್ತದೆ ಹಣ್ಣು, ತರಕಾರಿ, ಸೊಪ್ಪು ಈ ರೀತಿಯಾದಂತಹ ಆಹಾರ ಪದಾರ್ಥಗಳನ್ನು ನೀವು ಸೇವಿಸುತ್ತ ಬಂದರೆ ನಿಮ್ಮ ಚರ್ಮದ ಸಂರಕ್ಷಣೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಮಾಡುತ್ತದೆ.