ಭಾರತದ ಎಲ್ಲೆಡೆ ಕಂಡು ಬರುವ ನೆಲನೆಲ್ಲಿಯನ್ನು ಕಿರುನೆಲ್ಲಿ ಎಂದೂ ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಭೂಮ್ಯಾಮಲಕಿ, ಶಿವಾ, ಬಹುಪತ್ರಾ, ಬಹುಫಲಾ, ಭೂಯಿಆಂವಲಾ, ತಾಮಲಕಿ ಎಂತಲೂ ವೈಜ್ಞಾನಿಕವಾಗಿ ಪೈಲಾಂತಸ್ ಅಮರಸ್ ಎಂದು ಕರೆಯುತ್ತಾರೆ. ಇದು ಕಳೆ ಗಿಡವಾಗಿ ಇದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಳದಲ್ಲಿ ಅಧಿಕವಾಗಿ ಕಂಡು ಬರುವಂತಹುದಾಗಿದೆ. ಇದು ಬೆಳೆದು 5 ರಿಂದ 8 ತಿಂಗಳು ಅಯಸ್ಸು ಪಡೆದು ಜನಸಾಮನ್ಯರ ಕಾಯಿಲೆಗಳಿಗೆ ಔಷಧಿಯಾಗಿ ಉಪಯುಕ್ತವಾಗಿದೆ. ನೆಲನೆಲ್ಲಿಯ ಎಲೆಗಳು ಚಿಕ್ಕದಾಗಿದ್ದು ನೆಲ್ಲಿಗಿಡದ ಎಲೆಗಳನ್ನೇ ಹೋಲುತ್ತವೆ ಮತ್ತು ಇದರ ಹಣ್ಣುಗಳು ಪುಟ್ಟದಾಗಿದ್ದು ಚಿಕ್ಕ ಚಿಕ್ಕ ಎಲೆಗಳ ಹಿಂಬದಿಯಲ್ಲಿ ಜೋಡಣೆಗೊಂಡಿದ್ದು ನೆಲ್ಲಿಕಾಯಿಯಂತೆ ಕಾಣುತ್ತದೆ ಆದ್ದರಿಂದ ನೆಲನೆಲ್ಲಿ ಎಂಬ ಹೆಸರು ಬಂದಿದೆ. ನೆಲನೆಲ್ಲಿಯು ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದೆ.
ಸಣ್ಣ ಮೂಲಿಕೆ ಜಾತಿಗೆ ಸೇರಿದ ಈ ಸಸ್ಯವು, ಒಂದು ಅಡಿ ಎತ್ತರ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ. ಇದರ ಕಾಂಡವು ಮೃದುವಾಗಿದ್ದು, ಕೆಂಪು ಮಿಶ್ರಿತ ಹಸಿರು ಬಣ್ಣದಲ್ಲಿದೆ. ಕಾಂಡದ ಮೇಲೆ ಅರ್ಧ ಅಂಗುಲ ಅಂತರದಲ್ಲಿ ಹಸಿರು ಬಣ್ಣದ ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿರುತ್ತವೆ. ಎಲೆ ಕಂಕುಳಲ್ಲಿ ಹಸಿರು ಮಿಶ್ರಿತ ಹಳದಿ ಬಣ್ಣದ ಹೂಗಳು ಕಾಣಿಸಿಕೊಳ್ಳುತ್ತವೆ ಇದರ ಕಾಯಿ ಹಸಿರು ಬಣ್ಣದ್ದಾಗಿದ್ದು ಸಾಸಿವೆ ಗಾತ್ರದಷ್ಟು ಇರುತ್ತದೆ. ಈ ಸಸ್ಯವು ಉಷ್ಣವಲಯ ಮತ್ತು ಅತಿ ಹೆಚ್ಚಿನ ಮಳೆ ಆಗುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಈ ನೆಲನೆಲ್ಲಿ ಔಷದಿ ಲಿವರ್ ತೊಂದರೆಗಳಲ್ಲಿ ಅದರಲ್ಲೂ ಹೆಪಟೈಟಿಸ್ ಬಿ ನಿಂದ ತೊಂದರೆಗಳನ್ನು , ಕಾಮಾಲೆ ರೋಗ, ಕರಳು ಬೇನೆ, ಸಕ್ಕರೆ ಕಾಯಿಲೆ ನಿವಾರಣೆ ಮಾಡಲು ಉಪಯೋಗಿಸುತ್ತಾರೆ. ಬಹುಮುಖ್ಯವಾಗಿ ಈ ಸಸ್ಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನೆಲನೆಲ್ಲಿ ಕಷಾಯವನ್ನು ತಯಾರಿಸಲು ಒಂದು ಅಥವಾ ಎರಡು ನೆಲನೆಲ್ಲಿ ಗಿಡವನ್ನು ಬೇರು ಸಮೇತ ಕಿತ್ತು ಅದನ್ನು ಚೆನ್ನಾಗಿ ತೊಳೆದು 1 ಲೀ ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿ ಇಡಬೇಕು . ನಂತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 200 ml ನಷ್ಟು ಕಷಾಯವನ್ನು ಸೇವಿಸಬೇಕು. ಹೀಗೆ ನಿತ್ಯ ಸೇವಿಸುವುದರಿಂದ ಮೂತ್ರ ಕೋಶ ಮತ್ತು ಮೂತ್ರ ನಾಳಗಳು ಶುದ್ಧೀಕರಣ ಆಗುತ್ತವೆ. ಜೊತೆಗೆ ಕಿಡ್ನಿ ತೊಂದರೆ ಕಿಡ್ನಿ ಸ್ಟೋನ್ ನಿಧಾನವಾಗಿ ಕರಗುತ್ತದೆ. ಮುಖ್ಯವಾಗಿ ಕಾಮಾಲೆ ರೋಗ ಅಂದರೆ ಜಾಂಡೀಸ್ ನಿಯಂತ್ರಣಕ್ಕೆ ಬರುತ್ತದೆ. ಕೊರೋನ ವೈರಸ್ ನಂತಹ ರೋಗಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಂಕ್ರಾಮಿಕ ರೋಗಗಳು ಆದ ಕಾಲಾರ, ಚಿಕನ್ ಗೂನ್ಯಗಳಂತಹ ರೋಗಗಳು ಹರಡುವ ವೈರಸ್ ಅನ್ನು ನಾಶ ಪಡಿಸಿ ರಕ್ಷಣೆ ನೀಡುತ್ತದೆ. ಸರ್ಪ ಸುತ್ತು, ಹಿಮೋನಿಯಾದಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಹೀಗೆ ಇನ್ನೂ ಮುಂತಾದ ಕಾಯಿಲೆಗಳನ್ನು ನಿವಾರಣೆ ಮಾಡುತ್ತದೆ.
ನೆಲನೆಲ್ಲಿ ಒಂದು ಅತ್ಯುತ್ತಮ ಔಷಧಿ. ಸಿದ್ಧ ವೈದ್ಯ ಪದ್ಧತಿಯಲ್ಲಿ ನೆಲನೆಲ್ಲಿಯನ್ನು ದಶಕಗಳ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತದೆ. ಯುನಾನಿ ವೈದ್ಯ ಪದ್ಧತಿಯಲ್ಲಿ ಗಾಯ, ಕಜ್ಜಿ ಮತ್ತು ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಬಳಸಲಾಗುತ್ತದೆ. ಭೇದಿ ಆಗುತ್ತಿದ್ದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೆ ಒಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಲು ಬಹುದು. ಗಾಯಗಳು ಹಾಗಿದ್ದಲ್ಲಿ ಈ ಗಿಡವನ್ನು ಬೇರು ಸಹಿತ ಜಜ್ಜಿ ಗಾಯಕ್ಕೆ ಲೇಪಿಸಬೇಕು ಹೀಗೆ ಮಾಡಿದರೆ ಗಾಯ ಬೇಗ ವಾಸಿ ಆಗುತ್ತದೆ. ಚರ್ಮ ರೋಗಗಳಲ್ಲಿ ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸುವುದರಿಂದ ನವೆ ಕಡಿಮೆ ಆಗುತ್ತದೆ. ನೆಲನೆಲ್ಲಿಯು ಕುಷ್ಠ ರೋಗ, ಆಸ್ತಮಾ, ಬಿಕ್ಕಳಿಕೆ ನಿವಾರಣೆಯಲ್ಲಿಯೂ ಉಪಯುಕ್ತ ಔಷಧಿ ಆಗಿದೆ. ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದಲ್ಲಿ ನೆಲನೆಲ್ಲಿ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹುರಿದ ಇಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯಬೇಕು. ಅಜೀರ್ಣ ಮತ್ತು ಹೊಟ್ಟೆ ನೋವು ಕಡಿಮೆ ಆಗುತ್ತದೆ.
ಮಹಿಳೆಯರ ಮಾಸಿಕ ಸ್ರಾವದ ಸಮಯದಲ್ಲಿ ಅತಿ ರಕ್ತ ಸ್ರಾವ ಆಗುತ್ತಿದ್ದಲ್ಲಿ ನೆಲನೆಲ್ಲಿಯ ಚಟ್ನಿಯನ್ನು ಆಹಾರದಲ್ಲಿ ಸೇವಿಸುವುದಲ್ಲದೇ ನೆಲನೆಲ್ಲಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು. ಹೀಗೆ ಕುಡಿಯುವುದರಿಂದ ಅತಿ ರಕ್ತ ಸ್ರಾವ ಕಡಿಮೆ ಆಗುತ್ತದೆ. ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಲಾರ, ಚಿಕನ್ ಗುನ್ಯ, ಡೆಂಗ್ಯೂ ಮುಂತಾದ ಕಾಯಿಲೆಗಳು ಹರಡುವ ಸಮಯದಲ್ಲಿ ಆರೋಗ್ಯವಂತರು ನೆಲನೆಲ್ಲಿಯ ಕಷಾಯ ಇಲ್ಲವೇ ರಸ ಕುಡಿಯುವುದರಿಂದ ಕಾಯಿಲೆ ಬಾರದಂತೆ ತಡೆಯಬಹುದು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.