ಬಹು ಅಚ್ಚರಿಯ ಗಿಡ ಈ ಹಚ್ಚಚ್ಚಿ ಗಿಡ. ಇದನ್ನು ಕನ್ನಡದಲ್ಲಿ ಕೆಂಪುನೆನೆ ಅಕ್ಕಿ ಗಿಡ, ಹಾಲು ಕುಡಿ, ನಾಗಾರ್ಜುನಿ, ಬಿಳಿ ಚಿತ್ರ ಫಲ, ನರಹುಲಿ, ಹಾಲು ಗೌರಿ, ಹಚ್ಛೆ ಗಿಡ, ದೊಡ್ಡ ಹಾಲುಕುಡಿ, ಮರಿಜೀವನಿಗೆ ಎಂತಲೂ ಸಂಸ್ಕ್ರತದಲ್ಲಿ ದುಗಿಗಾ, ದೂದಿಗಾ ಎಂತಲೂ ಇಂಗ್ಲಿಷ್ ಭಾಷೆಯಲ್ಲಿ ಅಸ್ತಮಾ ಪ್ಲಾಂಟ್ ಹಾಗೂ ತವ ತವ ಎಂತಲೂ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಇರ್ಫೋಬಿಯಾ ಹಿಟ್ರ ಎಂದು. ಈ ಗಿಡವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗ್ರಾಮೀಣ ಭಾಗದ ಜನರಿಗೆ ಇದರ ಪರಿಚಯ ಚೆನ್ನಾಗಿರುತ್ತದೆ. ಈ ಸಸ್ಯ ಹೊಲ, ಗದ್ದೆಗಳ ಬಳಿಯಲ್ಲಿ ಹಾಗು ಮನೆಯ ಸುತ್ತಲಿನ ತೇವಾಂಶದ ವಾತಾವರಣದಲ್ಲಿ ಬೆಳೆಯುತ್ತದೆ. ಇದನ್ನು ಕಸದಂತೆ ಕಡೆಗಣಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಗಿಡವು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಆರ್ಯವೇದದಲ್ಲಿ ಈ ಗಿಡವನ್ನು ಔಷದಕ್ಕಾಗಿ ಹೆಚ್ಚಾಗಿ ಬಳಸುತ್ತಾರೆ.
ಸೊಳ್ಳೆಗಳಿಂದ ಹರಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಈ ಕೆಂಪು ನೆನೆ ಅಕ್ಕಿ ಗಿಡವನ್ನು ದಿವ್ಯ ಔಷದಿಯಾಗಿ ಬಳಸುತ್ತಾರೆ. ಈ ಹಚ್ಚಚ್ಚಿ ಗಿಡ ಎಲೆ ಮತ್ತು ಕಾಂಡವನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಮಾಡಿ ಸೇವಿಸುವುದರಿಂದ ಡೆಂಗ್ಯೂ ಇಂದ ರಕ್ತದಲ್ಲಿ ಇರುವ ಪೆಟ್ಲೆಟ್ಸ್ ಪ್ರಮಾಣ ಕಡಿಮೆ ಆಗಿರುವುದನ್ನು ಈ ಗಿಡದಲ್ಲಿನ ನ್ಯಾಚುರಲ್ ಫೋನೋಟಿಕ್ ಕಾಂಪೌಂಡ್ಸ್ ರಕ್ತದ ಪೆಟ್ಲೆಟ್ಸ್ ಅನ್ನು ಸುಮಾರು 150 ರಿಂದ 180 % ನಷ್ಟು ಹೆಚ್ಚಿಸುತ್ತದೆ. ಕೆಂಪು ನೆನೆ ಅಕ್ಕಿ ಸೊಪ್ಪನ್ನು ನೆರಳಿನಲ್ಲಿ ಒಣಗಿಸಿ ಪುಡಿಮಾಡಿ ಒಂದು ಟೀ ಸ್ಪೂನ್ ಪುಡಿಯನ್ನು ಬಿಸಿ ನೀರಿನಲ್ಲಿ ಸೆರಿಸಿ 5 ರಿಂದ 10 ನಿಮಿಷ ಪುಡಿಯು ಬಿಸಿ ನೀರಿನಲ್ಲಿ ಚೆನ್ನಾಗಿ ನೆನೆದ ನಂತರ ಕಷಾಯವನ್ನು ಸೇವಿಸಬಹುದು. ಈ ಕಷಾಯದ ಸೇವನೆಯು ಅಸ್ತಮ, ಉಸಿರಾಟದ ತೊಂದರೆ, ಕಫ ನಿವಾರಣೆ ಮಾಡುವಲ್ಲಿ ಬಹಳ ಉಪಯುಕ್ತ ಆಗುತ್ತದೆ. ಇದನ್ನು ವಿದೇಶದಲ್ಲಿ ಅಸ್ತಮಾ ನಿವಾರಣೆಗೆ ಹೆಚ್ಚಾಗಿ ಬಳಸುತ್ತಾರೆ ಆದ್ದರಿಂದ ಇದನ್ನು ಇಂಗ್ಲಿಷ್ ನಲ್ಲಿ ಅಸ್ತಮ ಪ್ಲಾಂಟ್ ಎಂದು ಕರೆಯುತ್ತಾರೆ. ಇತ್ತೀಚಿನ ಸಂಶೋಧನೆಗಳು ಸಹ ಈ ಹಚ್ಚಚ್ಚಿ ಗಿಡವು ಅಸ್ತಮ ನಿವಾರಣೆಗೆ ಒಳ್ಳೆಯ ಗುಣಕಾರಿ ಎಂದು ಹಾಗೂ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ ಎಂದು ಸಾಬೀತು ಪಡಿಸಿದೆ. ಹಾಗೂ ಇದರ ಬಗೆ ಸೇವನೆಯಿಂದ ಅಸ್ತಮದ ಕಫ ಕರಗಿಸುವ ಗುಣ ಹೊಂದಿದೆ.
ಈ ಗಿಡದಿಂದ ಬರುವ ಹಾಲು ಚರ್ಮ ಸಂಬಂಧಿ ಕಾಯಿಲೆ ಮತ್ತು ಪಿಂಪಲ್ಸ್ ಗೆ ಹಚ್ಚಿದರೆ ಗುಣವಾಗುತ್ತದೆ. ಇದರ ಕಷಾಯವನ್ನು ಬಾಯಿಯಲ್ಲಿ ಮುಕ್ಕಳಿಸಿದರೆ ಬಾಯಿ ಹುಣ್ಣು ನಿವಾರಣೆ ಆಗುತ್ತದೆ. ಹುಳಕಡ್ಡಿ ಇರುವವರು ಈ ಗಿಡ ಸೊಪ್ಪನ್ನು ಚೆನ್ನಾಗಿ ಅರೆದು ರಸ ತೆಗೆದು 5 ಗ್ರಾಂ ರಸಕ್ಕೆ 1 ಗ್ರಾಂ ಸುಣ್ಣ ಬೆರೆಸಿ ಹುಳಕಡ್ಡಿ ಇರುವ ಜಾಗಕ್ಕೆ 2 ರಿಂದ 3 ದಿನ ಹಚ್ಚಿದರೆ ಹುಳಕಡ್ಡಿ ಗುಣವಾಗುತ್ತದೆ.. ತುಂಬ ಸೆನ್ಸಿಟಿವ್ ಸ್ಕಿನ್ ಇರುವವರು ಇದನ್ನು ಬಳಸಬಾರದು. ಕುರು ಅಥವಾ ಕೀವು ತುಂಬಿದ ಗಾಯಗಳಿಗೆ ಹಚ್ಚಿದರೆ 2 ರಿಂದ 3 ದಿನಗಳಲ್ಲಿ ಗುಣವಾಗುತ್ತದೆ. ಗರ್ಭಿಣಿ ಮಹಿಳೆಯರು ಮತ್ತು ಮಕ್ಕಳು ಇದನ್ನು ಬಳಸಬಾರದು. ಅತಿಯಾದ ನಿರಂತರ ಸೇವನೆಯಿಂದ ಎಲ್ಲರಿಗೂ ಅಡ್ಡ ಪರಿಣಾಮ ಉಂಟಾಗುತ್ತದೆ. ಈ ಗಿಡದ ಎಲೆ ಮತ್ತು ಕಾಂಡದ ಕಷಾಯದಲ್ಲಿ ಇರುವ ಆ್ಯಂಟಿ ಏಜೆನ್ಸಿನ್ ಎಂಜೈಮ್ಸ್ ಮೂತ್ರದಲ್ಲಿ ಅವಶ್ಯಕತೆಗಿಂತ ಹೆಚ್ಚು ನೀರು ಹೊರ ಹೋಗುವುದನ್ನು ತಡೆಗಟ್ಟುತ್ತದೆ. ಈ ಪ್ರಕ್ರಿಯೆ ದೇಹದಲ್ಲಿನ ರಕ್ತದ ಒತ್ತಡವನ್ನು ಸ್ವಾಭಾವಿಕವಾಗಿ ಕಂಟ್ರೋಲ್ ಮಾಡಿ ಕಿಡ್ನಿ ಮತ್ತು ರಕ್ತನಾಳಗಳನ್ನು ಕಾರ್ಯಗೊಳಿಸುವಂತೆ ಮಾಡುತ್ತವೆ.
ಈ ಕಷಾಯ ಆ್ಯಂಟಿ ಬ್ಯಾಕ್ಟೀರಿಯಾಗಳಾಗಿ ಆರ್ಮ್ ಫುಲ್ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುತ್ತದೆ. ಈ ನಾಗಾರ್ಜುನಿ ಕಷಾಯ ಟೆನ್ನಿನ್ಸ್ ಹೊಂದಿರುವುದರಿಂದ ಡಿಹೈಡ್ರೇ಼ಷನ್ ನಿಂದ ಬಳಲುತ್ತಿರುವ ದೇಹಗಳಿಗೆ ನ್ಯೂಟ್ರೋಲೈಟ್ ಮತ್ತು ಮಿನರಲ್ಸ್ ಅನ್ನು ರಿಸೈಕಲ್ ಮಾಡುತ್ತದೆ. ಕೆಂಪು ನೆನೆ ಅಖ್ಕಿ ಗಿಡದ 50 ಗ್ರಾಂ ತಾಜಾ ಎಲೆಯನ್ನು 4 ಕಪ್ ನೀರಿನಲ್ಲಿ 5 ನಿಮಿಷ ಬಿಸಿ ಮಾಡಿ ಈ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಅತಿಯಾದ ಸೈನಸ್ ನಿಂದ ಬ್ಲಾಕ್ ಆಗಿದ್ದರೆ, ಕೆಮ್ಮು ಮತ್ತು ಸಿಂಬಳದಿಂದ ಉಸಿರಾಟದ ನಾಳವು ಸರಾಗವಾಗುವುದು. ಕಾಲಿನ ಬೆರಳುಗಳ ಸಂದಿಯಲ್ಲಿ ಫಂಗಲ್ ಇನ್ಫೆಕ್ಷನ್ ಆಗಿದ್ದರೆ ಈ ಗಿಡದ ಎಲೆಯನ್ನು ಚೆನ್ನಾಗಿ ಜಜ್ಜಿ ಲೇಪನ ಮಾಡುವುದರಿಂದ ಫಂಗಲ್ ಇನ್ಫೆಕ್ಷನ್ ನಿವಾರಣೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.