ಸ್ನೇಹಿತರೆ ಇಂದಿನ ವಿಶೇಷವಾದ ಸಂಚಿಕೆಯಲ್ಲಿ ನಮ್ಮ ಕೈ ಕಾಲು ಜೋಮು ಹಿಡಿಯುವುದಕ್ಕೆ ವಿಶೇಷವಾದ ಮನೆಮದ್ದನ್ನು ಇಂದು ನಿಮಗೆ ತಿಳಿಸಿಕೊಳ್ಳಲು ಕೊಡಲಿದ್ದೇವೆ ಹೌದು ಸ್ನೇಹಿತರೆ ಒಮ್ಮೊಮ್ಮೆ ನಾವು ಕುಳಿತಾಗ ಅಥlವಾ ಇದ್ದಕ್ಕಿದ್ದಂತೆ ಎದ್ದು ಓಡಾಡುವಾಗ ಕೈ ಕಾಲುಗಳು ಜೂಮ್ ಇಡಿಯುತ್ತದೆ ಇದರಿಂದ ನಾವುಗಳು ಎದ್ದು ಓಡಾಡುವುದಕ್ಕೂ ಕಷ್ಟವಾಗುತ್ತದೆ ಹಾಗೂ ಕಾಲನ್ನು ಮುಂದೆ ಇಡಲು ಆಗದೆ ಇರುವ ಪ್ರೀತಿ ಆಗುತ್ತದೆ ಜೊತೆಗೆ ಕಾಲುಗಳು ಮರಗ ಟ್ಟಿರುವ ರೀತಿ ಅನುಭವವಾಗುತ್ತದೆ.
ಅದಲ್ಲದೆ ನಾವುಗಳು ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಕೈಯನ್ನು ಇಟ್ಟುಕೊಂಡು ಮಲಗಿದರೆ ಬೆಳಗ್ಗೆ ಹೊತ್ತು ಕೈಗಳು ಮರಗಟ್ಟಿರುತ್ತದೆ, ಜೋಮು ಹಿಡಿದಿರುತ್ತದೆ. ನಾವು ಆ ಕ್ಷಣಕ್ಕೆ ಕೈಯನ್ನು ಉಜ್ಜುವುದು ಅಥವಾ ತಿರುವುದು ಮಾಡಿದಾಗ ಆಗ ಅದು ಮೊದಲಿನಂತೆ ಆಗುತ್ತದೆ ಇದಕ್ಕೆ ಕಾರಣ ಏನೆಂದು ಹೇಳಿದರೆ ನಮ್ಮ ದೇಹದಲ್ಲಿ ಅಥವಾ ಕೈಕಾಲುಗಳಲ್ಲಿ ಸರಿಯಾದ ರಕ್ತ ಚಲನೆ ಆಗದೆ ಇದ್ದಾಗ ಈ ರೀತಿ ಆಗುತ್ತದೆ
ಇನ್ನು ಇತರ ಕೈಕಾಲುಗಳ ಜೋಮು ಉರಿದಾಗ ಸ್ವಲ್ಪ ಹೊತ್ತು ಆ ಜಾಗದಲ್ಲಿ ಯಾವುದಾದರೂ ಚಲನೆಯನ್ನು ಮಾಡಿದಾಗ ಮೊದಲಂತೆ ಆದರೆ ಅದು ಸಾಮಾನ್ಯ ಒಂದು ವೇಳೆ ಯಾವುದೇ ಚಲನೆಯಿಂದಲೂ ಕೂಡ ಜೂಮ್ ಹಿಡಿಯುವುದು ಕಡಿಮೆ ಆಗದೆ ಹೋದರೆ ಅದು ಯಾವುದೋ ಕಾಯಿಲೆಗೆ ಕಾರಣವಿರಬಹುದು ಎಂದು ಅರ್ಥ ಆದರೆ ಇದಕ್ಕೆ ಎದುರುವ ಅಗತ್ಯವಿಲ್ಲ. ಈ ರೀತಿ ಏಕೆ ಹೆಚ್ಚಾಗಿ ಆಗುತ್ತೆ ಎಂದು ಹೇಳಿದರೆ ಒಂದು ಮದ್ಯಪಾನ ಮಾಡುತ್ತಿದ್ದರೆ ಇನ್ನು ಎರಡನೇಯದು ಡಯಾಬಿಟಿಸ್ ಇರುತ್ತದೆ ಇನ್ನೊಂದು ಮುಖ್ಯ ಕಾರಣವೆಂದರೆ ಇಂತಹ ವ್ಯಕ್ತಿಗಳಿಗೆ ವಿಟಮಿನ್ ಬೀ 12 ಕೊರತೆ ಕಾಡುತ್ತಾ ಇರುತ್ತದೆ.
ವಿಟಮಿನ್ ಬಿ 12 ಕೆಂಪು ರಕ್ತ ಕಣಗಳು ಮತ್ತು ಡಿಎನ್ಎ ರಚನೆಗೆ ಅಗತ್ಯವಿದೆ . ಇದು ಮೆದುಳು ಮತ್ತು ನರ ಕೋಶಗಳ ಕಾರ್ಯ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಬಿ 12 ನಾವು ಸೇವಿಸುವ ಆಹಾರದಲ್ಲಿನ ಪ್ರೋಟೀನ್‌ಗೆ ಬಂಧಿಸುತ್ತದೆ. ಹೊಟ್ಟೆಯಲ್ಲಿ, ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಕಿಣ್ವಗಳು ವಿಟಮಿನ್ ಬಿ 12 ಅನ್ನು ಅದರ ಮುಕ್ತ ರೂಪದಲ್ಲಿ ಬಿಚ್ಚಿಡುತ್ತವೆ. ಇನ್ನು ದಿನನಿತ್ಯ ಆಹಾರದಲ್ಲಿ ವಿಟಮಿನ್ ಬಿ 12 ನಮ್ಮ ದೇಹ ಅದನ್ನು ಕೆಲವು ಬಾರಿ ಹೀರಿಕೊಳ್ಳುವುದಿಲ್ಲ ಏಕೆಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಇರುವುದಿಲ್ಲ.
ಅದಕ್ಕಾಗಿ ನಾವು ದಿನನಿತ್ಯ ಆಹಾರವನ್ನು ಸೇವಿಸಬೇಕು ಮೊದಲನೆಯದಾಗಿ ಆ್ಯಪಲ್ ಸೈಡರ್ ವಿನೆಗರ್ ಅನ್ನು 15 ದಿನ ಬಿಡದೆ ಕುಡಿಯಬೇಕು. ಇನ್ನು ಹಾಲು ಉತ್ಪನ್ನ ಆಹಾರವನ್ನು ದಿನ ನಿತ್ಯ ಊಟದಲ್ಲಿ ಸೇವಿಸಬೇಕು. ದಿನವೂ ಮೊಟ್ಟೆಯನ್ನೂ ತಿನ್ನುವುದರಿಂದ ಕ್ಯಾಲ್ಸಿಯಂ ಹಾಗೂ ವಿಟಮಿನ್ ಬಿ12 ದೊರೆಯುತ್ತದೆ. ಇನ್ನು ಅದೇ ರೀತಿ ಅಂಜುರವನ್ನು ರಾತ್ರಿ ನೆನಸಿ ಬೆಳಗ್ಗೆ ತಿನ್ನವುದರಿಂದ ವಿಟಮಿನ್ ಬಿ12 ಹಾಗೂ ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ.
ಬಿಳಿ ಎಳ್ಳನ್ನು ರಾತ್ರಿ ಒಂದು ಚಮಚ ನೀರಿನಲ್ಲಿ ನೆನಸಿ ತಿನ್ನುವುದರಿಂದ ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ12 ವೃದ್ಧಿಸುತ್ತದೆ. ಇನ್ನು ಮತ್ತೊಂದು ಅಡುಗೆ ಪದಾರ್ಥವಾದ ಗಸಗಸೆಯಲ್ಲು ಕೂಡ ವಿಟಮಿನ್ ಯಥೇಚ್ಛವಾಗಿದೆ. ಇನ್ನು ಚಿಯಾ ಸೀಡ್ಸ್ ಇದನ್ನು 10 ನಿಮಿಷಗಳ ಮೊದಲು ನೆನಸಿ ನಂತರ ಸೇವಿಸುವುದರಿಂದ ವಿಟಮಿನ್ ಬಿ12 ಜೊತೆಗೆ ಬಹಳ ಬೇಗ ತೂಕ ಕಡಿಮೆ ಆಗುತ್ತದೆ. ದಿನ ನಿತ್ಯ ಹಸಿರು ತರಕಾರಿಗಳು ತಿನ್ನಬೇಕು. ಒಟ್ಟಿನಲ್ಲಿ ನಮ್ಮ ಕೈಕಾಲುಗಳು ಜೋಮು ಹಿಡಿಯಲು ವಿಟಮಿನ್ ಬಿ12 ಕೊರತೆಯೇ ಮೂಲ ಕಾರಣ.