ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಖಾಯಿಲೆಗಳು ಎಂದರೆ ಶೀತ ನೆಗಡಿ ಕೆಮ್ಮು ಜ್ವರ ತಲೆನೋವು ಇವುಗಳ ಜೊತೆಗೆ ಗಂಟಲು ನೋವು ಕೂಡ ಒಂದು. ನಮ್ಮ ದೇಹಕ್ಕೆ ಯಾವುದೇ ಆಹಾರ ಪದಾರ್ಥ ಅಥವಾ ನೀರು ಕೂಡ ಹೋಗಬೇಕು ಎಂದರೆ ಅದು ಗಂಟಲಿನ ಮೂಲಕವೇ ಹೋಗಬೇಕು. ಹೀಗಾಗಿ ಗಂಟಲು ನಮ್ಮ ದೇಹದ ಅತಿ ಪ್ರಮುಖ ಭಾಗ. ಜೀರ್ಣಾಂಗ ವ್ಯವಸ್ಥೆ ಯಲ್ಲಿ ಗಂಟಲು ಮಾಡುವ ಕೆಲಸ ಶ್ಲಾಘನೀಯವಾದದ್ದು. ನಮಗೇನಾದರೂ ಈ ಭಾಗದಲ್ಲಿ ಸಮಸ್ಯೆ ಆಗಿಬಿಟ್ಟರೆ ಏನನ್ನು ಕುಡಿಯಲು ಹಾಗೂ ನುಂಗಲು ಸಹ ಆಗುವುದಿಲ್ಲ. ಪ್ರತಿ ನಿಮಿಷಕ್ಕೆ ಒಬ್ಬ ಸರಾಸರಿ ಮನುಷ್ಯ 40 ರಿಂದ 50 ಬಾರಿ ನುಂಗುತ್ತಾನೆ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ ಈ ರೀತಿ ತ್ರೋಟ್ ಇನ್ಫೆಕ್ಷನ್ ಏನಾದರೂ ಹಾಗೆ ಬಿಟ್ಟರೆ ಪ್ರತಿಬಾರಿ ನಾವು ನಂಗುವಾಗಲೂ ಕೂಡ ವಿಪರೀತವಾದ ನೋವು ಅನುಭವಿಸ ಬೇಕಾಗುತ್ತದೆ. ಜೊತೆಗೆ ಇದು ತುಂಬಾ ಕಿರಿಕಿರಿ ಉಂಟು ಮಾಡುತ್ತದೆ.
ಈ ಸಮಸ್ಯೆಗೆ ಹೆದರಿ ಕೆಲವರು ಗಂಟಲು ನೋವು ಉಂಟಾದಾಗ ಊಟ ಮಾಡಲು ಹಿಂದೇಟು ಹಾಕುತ್ತಾರೆ. ಈ ರೀತಿ ಗಂಟಲು ನೋವು ಉಂಟಾಗಲು ಹಲವಾರು ಕಾರಣಗಳಿವೆ. ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ಶೀತ ಸಮಸ್ಯೆಯಿಂದ ಗಂಟಲು ನೋವು ಆಗುತ್ತದೆ ಮತ್ತು ಕೆಲವೊಮ್ಮೆ ವಾತಾವರಣದಲ್ಲಿರುವ ಧೂಳು ಕಲ್ಮಶ ಗಂಟಲಿಗೆ ಸೇರಿದಾಗ ಕೂಡ ಇನ್ಫೆಕ್ಷನ್ ಆಗಿ ಗಂಟಲು ನೋವು ಬರುತ್ತದೆ ಹಾಗೆಯೇ ಯಾವುದಾದರೂ ಬ್ಯಾಕ್ಟೀರಿಯಾ ಅಥವಾ ವೈರಸ್ ನ ಇನ್ಫೆಕ್ಷನ್ ನಿಂದ ಕೂಡ ಗಂಟಲು ನೋವು ಕಾಣಿಸಿಕೊಳ್ಳುತ್ತದೆ. ವಿಪರೀತ ನೋವಿನಿಂದ ಕೂಡಿದ ಗಂಟಲು ನೋವು ಒಳ್ಳೆಯ ಲಕ್ಷಣವಲ್ಲ ಹಾಗಾಗಿ ಈ ರೀತಿ ಗಂಟಲು ನೋವು ತೀವ್ರವಾಗಿ ಉಂಟಾದಾಗ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಆದರೆ ಸಾಮಾನ್ಯವಾಗಿ ಶೀತದಿಂದ ಉಂಟಾಗುವ ಸಮಸ್ಯೆಗೆ ಮನೆಯಲ್ಲಿಯೇ ಮನೆಮದ್ದು ಮಾಡಿಕೊಳ್ಳಬಹುದು.
ನಮ್ಮ ಹಿರಿಯರು ಈ ರೀತಿಯಾಗಿ ಗಂಟಲು ನೋವಿಗೆ ಹಾಗೂ ಶೀತದ ಸಮಸ್ಯೆ ನಿವಾರಣೆ ಆಗಲು ಹಲವಾರು ಮನೆಮದ್ದುಗಳನ್ನು ತಿಳಿಸಿ ಕೊಟ್ಟಿದ್ದಾರೆ. ಅವುಗಳನ್ನು ಮಾಡಿಕೊಂಡು ಸೇವಿಸುವುದರಿಂದ ಗಂಟಲು ನೋವಿನ ಸಮಸ್ಯೆ ಆಶ್ಚರ್ಯಕರ ರೀತಿಯಲ್ಲಿ ವಾಸಿಯಾಗಿ ಬಿಡುತ್ತದೆ. ಆದರೆ ಚಳಿಗಾಲದಲ್ಲಿ ಉಂಟಾಗುವ ಶೀತದ ಗಂಟಲು ನೋವಿಗೆ ಆಸ್ಪತ್ರೆಗಳಿಗೆ ಹೋದರೆ ಸಿರಪ್ ಕೊಡಬಹುದು ಅಷ್ಟೇ ಇದರಿಂದ ಅಷ್ಟು ಪರಿಣಾಮಕಾರಿಯಾಗಿ ಬೇಗನೆ ವಾಸಿಯಾಗುವುದಿಲ್ಲ ಅದರ ಬದಲು ನಮ್ಮ ಹಿರಿಯರು ಹೇಳಿ ಕೊಟ್ಟಿರುವ ಮನೆಮದ್ದುಗಳನ್ನು ಮಾಡಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು ಹಾಗೂ ಬೇಗನೆ ವಾಸಿಯಾಗುತ್ತದೆ. ಇದಕ್ಕೆ ಬೇಕಾದ ಪದಾರ್ಥಗಳು ಉಚಿತವಾಗಿ ನಮ್ಮ ಪ್ರಕೃತಿಯಲ್ಲಿಯೇ ಸಿಗುತ್ತದೆ. ಈ ಮನೆಮದ್ದು ಗಳನ್ನು ತಯಾರಿಸುವ ವಿಧಾನವೂ ಕೂಡ ತೀರ ಸರಳ ಆಗಿರುವುದರಿಂದ ಯಾರು ಬೇಕಾದರೂ ಇದಕ್ಕೆ ಮನೆಮದ್ದುಗಳನ್ನು ತಯಾರಿಸಿಕೊಂಡು ಸೇವಿಸಬಹುದು. ನೋವಿನಿಂದ ಮುಕ್ತಿ ಪಡೆಯಬಹುದು.
ಈ ರೀತಿ ಗಂಟಲು ನೋವಿನ ಸಮಸ್ಯೆಗೆ ಇರುವ ಮನೆಮದ್ದುಗಳು ಯಾವುದೆಂದರೆ ಅದರಲ್ಲಿ ಮೊದಲನೆಯದಾಗಿ ಹತ್ತರಿಂದ ಹನ್ನೆರಡು ತುಳಸಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಎರಡೇ ಎರಡು ಕಲ್ಲುಪ್ಪು ಸೇರಿಸಿ ಚೆನ್ನಾಗಿ ಅಗಿದು ನುಂಗುವುದರಿಂದ ಈ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಮಕ್ಕಳು ಇದನ್ನು ಸೇವಿಸಲು ಕಷ್ಟ ಪಡಬಹುದು ಅದಕ್ಕಾಗಿ ಮಕ್ಕಳಿಗೆ ಉಪ್ಪಿನ ಬದಲು ಎರಡು ಚೂರು ಕಲ್ಲು ಸಕ್ಕರೆಯನ್ನು ಹಾಕಿ ತಿನ್ನಲು ಕೊಡುವುದರಿಂದ ಮಕ್ಕಳಿಗೆ ತುಳಸಿಯ ಖಾರ ಗೊತ್ತಾಗುವುದಿಲ್ಲ. ಇದನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಆದರೂ ಈ ರೀತಿ ಮಾಡಿಕೊಂಡು ಸೇವಿಸಬೇಕು. ಹೀಗೆ ಮನೆಮದ್ದನ್ನು ತಯಾರಿಸಿಕೊಂಡು ತಿನ್ನುವುದರಿಂದ ಕೇವಲ ಎರಡೇ ಎರಡು ದಿನಗಳಲ್ಲಿ ನಿಮ್ಮ ಗಂಟಲಿನ ನೋವು ಸಂಪೂರ್ಣವಾಗಿ ಗುಣವಾಗುತ್ತದೆ. ಇದೇ ರೀತಿಯಾದ ಇನ್ನೊಂದು ಅದ್ಭುತ ಮನೆಮದ್ದು ಇದೆ. ಅದು ಕೂಡ ಇದರಷ್ಟೇ ಸರಳವಾಗಿದೆ.
ಇದನ್ನು ತಯಾರಿ ಮಾಡಿಕೊಳ್ಳುವುದು ಹೇಗೆಂದರೆ ಅರ್ಧ ಟೇಬಲ್ ಚಮಚ ಮೆಣಸಿನ ಪುಡಿ, ಅರ್ಧ ಟೇಬಲ್ ಚಮಚ ಅರಿಶಿನ ಪುಡಿ ಎರಡನ್ನು ಒಂದು ಬೌಲಿಗೆ ಹಾಕಿಕೊಂಡು ನಂತರ ಇದಕ್ಕೆ ಒಂದು ಟೇಬಲ್ ಚಮಚದಷ್ಟು ಶುದ್ಧವಾದ ಜೇನುತುಪ್ಪವನ್ನು ಹಾಕಿಕೊಂಡು ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಬೇಕು. ಇದನ್ನು ಗಂಟಲು ನೋವು ಇರುವ ದಿನಗಳಲ್ಲಿ ರಾತ್ರಿ ಹೊತ್ತು ಮಲಗುವ ಮುನ್ನ ಸೇವಿಸಬೇಕು. ಮಕ್ಕಳಿಗಾದರೆ ಇದರಲ್ಲಿ ಅರ್ಧ ಪ್ರಮಾಣದಷ್ಟು ಮಾತ್ರ ಮಾಡಿಕೊಂಡು ಕೊಡಬೇಕು. ಈ ರೀತಿ ಮಾಡಿಕೊಂಡು ಸೇವಿಸುವುದರಿಂದ ತಕ್ಷಣವೇ ನೋವು ನಿವಾರಣೆಯಾಗಿ ಅದರ ಅನುಭವ ನಿಮಗೆ ತಿಳಿಯುತ್ತದೆ. ಇದರ ಜೊತೆಗೆ ಗಂಟಲು ನೋವು ಇರುವವರು ಶುಂಠಿ ಟೀ ಕೂಡ ಸೇರವಿಸಬಹುದು ಇದರಿಂದ ಕೂಡ ನೋವು ಕಡಿಮೆಯಾಗುತ್ತದೆ ಮತ್ತು ಯಾವಾಗಲೂ ಬಿಸಿ ನೀರನ್ನು ಕುಡಿಯುವುದರಿಂದ ಗಂಟಲಿನ ಇನ್ಫೆಕ್ಷನ್ ಸ್ವಲ್ಪ ಕಡಿಮೆಯಾಗುತ್ತದೆ.