ಗ್ಯಾಸ್ ಸ್ಟವ್ ಬರ್ನಲ್ ಸ್ವಚ್ಛ ಮಾಡುವ ಸುಲಭವಾದ ವಿಧಾನ.

 

WhatsApp Group Join Now
Telegram Group Join Now

ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ಗ್ಯಾಸ್ ಸ್ಟವ್ ಬರ್ನಲ್ ಗಳನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಎನ್ನುವ ಬಗ್ಗೆ ತಿಳಿದುಕೊಳ್ಳೋಣ ಸಾಮಾನ್ಯವಾಗಿ ಹಿಂದಿನ ಜನರು ಗ್ಯಾಸ್ ಅನ್ನು ಬಳಸುತ್ತಿರಲಿಲ್ಲ ಹಾಗೆ ಕಾಲಕ್ರಮೇಣ ಗ್ಯಾಸ್ ಸ್ಟವ್ ಅನ್ನು ಬಳಸುವುದು ಸಾಮಾನ್ಯವಾಯಿತು. ಅದೇ ರೀತಿ ಇತ್ತೀಚಿಗೆ ಗ್ಯಾಸ್ ಸ್ಟವ್ ಗಳಲ್ಲಿ ಹೊಸ ಹೊಸ ತರದ ವಿಧವಿಧವಾದ ಶೈಲಿಯ ಹಾಗೂ ಎರಡು ಮೂರು ಸಂಖ್ಯೆಯಲ್ಲಿ ಕೂಡ ಗ್ಯಾಸ್ ಸ್ಟವ್ ನ ಒಲೆಗಳು ದೊರೆಯುತ್ತವೆ.

ಇನ್ನು ಸ್ನೇಹಿತರೆ ನಾವು ಅಡುಗೆ ಮಾಡುವಾಗ ಪಾತ್ರೆಗಳು ಕಪ್ಪಗೆ ಆಗುವುದು ಉರಿಯು ಜೋರಾಗಿ ಉರಿಯದೆ ಸಣ್ಣಗೆ ಇರುವುದು ಮತ್ತು ಎಲ್ಲಾ ಪಾತ್ರೆಗಳು ಕೂಡ ಮಸಿ ಆಗಿರುತ್ತದೆ, ಇದನ್ನು ಸ್ವಚ್ಛ ಮಾಡುವುದು ನಮ್ಮ ಕೆಲಸ ಅದರಲ್ಲಿ ಸ್ನೇಹಿತರೆ ಅಡುಗೆಗಳಿಂದ ಅಂದರೆ ಅಡುಗೆಗಳು ಉಕ್ಕುವುದರಿಂದ ಹಾಗೂ ಟೀ ಕಾಫಿಗಳು ಮಾಡಿದಾಗ ಉಕ್ಕಿರುವ ಪದಾರ್ಥಗಳು ಬರ್ನಲ್ ರಂಧ್ರಗಳಲ್ಲಿ ಸಿಲುಕಿಕೊಂಡಿರುತ್ತದೆ ಈ ಕಾರಣದಿಂದ ಸರಿಯಾಗಿ ಉರಿಯುತ್ತಿರುವುದು ಇಲ್ಲ

ಇದರ ಜೊತೆಗೆ ಪಾತ್ರೆಗಳು ಮಸಿ ಕಟ್ಟುತ್ತದೆ ಹಾಗಾದರೆ ಸ್ನೇಹಿತರೆ ಇದನ್ನು ಸ್ವಚ್ಛ ಮಾಡುವುದರಿಂದ ಆಗುವ ಲಾಭವೇನು ಎಂದು ತಿಳಿದರೆ ಮೊದಲನೇದಾಗಿ ನಮ್ಮ ಪಾತ್ರೆಗಳು ಮಸಿ ಕಟ್ಟುವುದಿಲ್ಲ ಇನ್ನು ಎರಡನೇದಾಗಿ ಜಾಸ್ತಿ ಗ್ಯಾಸ್ ಉಳಿತಾಯವನ್ನು ಮಾಡಬಹುದು ಹೇಗೆ ಎಂದರೆ ಈ ಗ್ಯಾಸ್ ಬರ್ನಾಲ್ ನಲ್ಲಿ ಸಿಲುಕಿರುವ ಮಸಿಯಿಂದ0 ಬಹಳ ಒತ್ತಡದಿಂದ ಉರಿಯುತ್ತಿರುತ್ತದೆ.

ಅದಕ್ಕಾಗಿ ಹೆಚ್ಚಿನ ಗ್ಯಾಸ್ ಅವಶ್ಯಕತೆ ಇದೆ ಅದರ ಬದಲಾಗಿ ಇಲ್ಲಿ ರಂದ್ರಗಳು ಸ್ವಚ್ಛವಾಗಿ ಇದ್ದರೆ ಗ್ಯಾಸ್ನ ಚಲನೆ ಕೂಡ ಸ್ವಚ್ಛವಾಗಿ ಇರುತ್ತದೆ ಇದರಿಂದ ಜಾಸ್ತಿ ಉಳಿತಾಯ ಮಾಡಬಹುದು ಹಾಗಾದರೆ ಬನ್ನಿ ಸ್ನೇಹಿತರೆ ತಡ ಯಾಕೆ ಈ ಬರ್ನಲ್ ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಹೇಗೆ, ಸ್ವಚ್ಛ ಮಾಡುವ ವಿಧಾನವೇನು ಎಂದು ತಿಳಿಯೋಣ.

ಸ್ನೇಹಿತರೆ ಇಂದು ನಿಮಗೆಲ್ಲರಿಗಾಗಿ ಸುಲಭವಾದ ವಿಧಾನವನ್ನು ತಂದಿದ್ದೇವೆ ಮೊದಲನೆಯದಾಗಿ ನಾವು ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ನಂತರ ಸ್ವಲ್ಪ ಬಿಸಿ ನೀರನ್ನು ಹಾಕಬೇಕು. ನೀರು ಹೆಚ್ಚು ಬಿಸಿ ಇರುವುದು ಬೇಡ ಈ ಬರ್ನಲ್ ಗಳು ಮುಳುಗುವಷ್ಟು ನೀರನ್ನು ಪಾತ್ರೆ ಒಳಗೆ ಹಾಕಬೇಕು ನಂತರ ಇದಕ್ಕೆ ಈನೋ ಅನ್ನು ಹಾಕಬೇಕು ಒಂದು ವೇಳೆ ಈನೊ ಇಲ್ಲದಿದ್ದರೆ ಅಡುಗೆ ಸೋಡವನ್ನು ಬಳಸಬಹುದು ನಂತರ ಇದಕ್ಕೆ ಒಂದು ದೊಡ್ಡ ಚಮಚದಲ್ಲಿ ಉಪ್ಪನ್ನು ಹಾಕಬೇಕು ಇವೆಲ್ಲವನ್ನು ಹಾಕಿದ ನಂತರ ಮೂರು ದೊಡ್ಡ ಚಮಚದಲ್ಲಿ ವಿನೆಗರ್ ಅನ್ನು ಬಳಸಲಾಗಿದೆ.

ವಿನೆಗರ್ ಇಲ್ಲದಿದ್ದರೆ ನಿಂಬೆ ಹಣ್ಣಿನ ರಸವನ್ನು ಬಳಸಬಹುದು ಆದರೆ ಆದಷ್ಟು ವಿನೆಗರನ್ನು ಬಳಸಲು ಪ್ರಯತ್ನಿಸಿ. ಸದ್ಯ ಈ ನೀರಿನ ಜೊತೆಗೆ ಬರ್ನಲ್ ಗಳು ರಿಯಾಕ್ಟ್ ಆಗುತ್ತವೆ ಜೊತೆಗೆ ಇದು ಅಷ್ಟೇ ಅಲ್ಲ ಇನ್ನು ಮುಂದೆ ಇದನ್ನ ಸ್ವಚ್ಛ ಮಾಡಲು ಸ್ವಲ್ಪ ಕೆಲಸವಿದೆ. ನಂತರ ಈ ಬರ್ನಲ್‌ಗಳನ್ನು ಒಣ ಬಟ್ಟೆಯಿಂದ ಒರಿಸಿಕೊಳ್ಳಬೇಕು. ಈಗ ಆ ಪರ್ಮನೆಗಳಿಗೆ ಹಾರ್ಪಿಕನ್ನು ಬಳಸಿ ಸ್ವಲ್ಪ ಹಚ್ಚಬೇಕು.

ಇದನ್ನು ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಸಮಯ ಬಿಟ್ಟು ನಂತರ ಒಂದು ಬ್ರಷ್ ಅನ್ನು ಅಥವಾ ಒಂದು ಸ್ಟೀಲ್ ನಾರನ್ನು ಬಳಸಿ ಉಜ್ಜಬೇಕು ಆದರೆ ಹಾರ್ಪಿಕನ್ನು ಬಳಸಿರುವ ಕಾರಣ ಕೈಯನ್ನು ಎಚ್ಚರಿಕೆಯಿಂದ ಇಟ್ಟುಕೊಳ್ಳಬೇಕು ಒಂದು ವೇಳೆ ನಿಮ್ಮ ಬಳಿ ಯಾವುದಾದರೂ ಪ್ಲಾಸ್ಟಿಕ್ ಗ್ಲೌಸ್ ಇದ್ದರೆ ಅದನ್ನು ಬಳಸಬಹುದು, ಈ ಆಸಿಡ್ ನಿಂದ ಹಾನಿಯಾಗುವ ಸಂಭವ ಇರುತ್ತದೆ ಇದನ್ನು ಎರಡು ಬದಿಯಲ್ಲಿ ಸ್ವಚ್ಛ ಮಾಡಿದ ನಂತರ ಹೊಸದಾದ ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ ಇಟ್ಟರೆ ಇದು ಸಂಪೂರ್ಣ ಸ್ವಚ್ಛವಾಗಿದೆ ಎಂದು ಅರ್ಥ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now