ವಾತಾವರಣವು ಬದಲಾದಂತೆ ಮಕ್ಕಳಲ್ಲಿ ಆರೋಗ್ಯದ ಮೇಲೆ ಹಲವಾರು ರೀತಿ ಆದಂತಹ ಪರಿಣಾಮವನ್ನು ಬೀರುತ್ತದೆ ಚಳಿಗಾಲ ಮತ್ತು ಮಳೆಗಾಲದಲ್ಲಿ ಹೆಚ್ಚಾಗಿ ಮಕ್ಕಳಿಗೆ ಕೆಮ್ಮು ಮತ್ತು ನೆಗಡಿ, ಕಫಾ ಸಮಸ್ಯೆಗಳು ಅತ್ಯಧಿಕವಾಗಿ ಕಾಣಿಸಿಕೊಳ್ಳುತ್ತದೆ. ಈ ಒಂದು ಶೀತದ ಕಾರಣಕ್ಕಾಗಿ ಆಸ್ಪತ್ರೆಗೆ ಹೋಗಿ ತೋರಿಸಿದರು ಸಹ ಮಕ್ಕಳಿಗೆ ನೀಡುವಂತಹ ಔಷಧಿಯನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಯಾಕೆಂದರೆ ಆಸಪತ್ರೆಯಲ್ಲು ನೀಡುವಂತಹ ಔಷಧಿಗಳು ಕಹಿಯಿಂದ ಕೂಡಿರುತ್ತದೆ ಆದ್ದರಿಂದ ನಾವು ಮಕ್ಕಳಿಗೆ ಕಫ ನಿವಾರಣೆಗೆ ಕೆಲವೊಂದು ಮನೆಮದ್ದುಗಳನ್ನು ಮಾಡುವುದರಿಂದ ಅವರು ಅವರ ಕಫ ಕರಗುತ್ತದೆ. ನಾವಿಲ್ಲಿ ತಿಳಿಸುವಂತಹ ಕೆಲವೊಂದು ಮನೆಮದ್ದುಗಳನ್ನು ನೀವು ಉಪಯೋಗಿಸಿ ನೋಡಿ ಕಂಡಿತವಾಗಿಯೂ ನಿಮಗೆ ರಿಸಲ್ಟ್ ಸಿಗುತ್ತದೆ.
ಮೊದಲನೆಯದಾಗಿ ನಾಲ್ಕರಿಂದ ಐದು ಬೆಳ್ಳುಳ್ಳಿ ಎಸಳನ್ನು ತೆಗೆದುಕೊಂಡು ಅದನ್ನು ಸಿಪ್ಪೆ ತೆಗೆದು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ ನಂತರ ಒಂದು ತೆಳುವಾದ ಬಟ್ಟೆಯನ್ನು ತೆಗೆದುಕೊಂಡು ಅದರ ಒಳಗಡೆ ಹಾಕಿ ಗಂಟನ್ನು ಕಟ್ಟಿ ನಂತರ ಮಕ್ಕಳಿಗೆ ಎಲ್ಲಿ ಕಫ ಕಟ್ಟಿರುತ್ತದೆ ಅಂತಹ ಜಾಗದಲ್ಲಿ ನೀವು ಈ ಒಂದು ಬೆಳ್ಳುಳ್ಳಿಯ ಶಾಕವನ್ನು ನೀಡುವುದರಿಂದ ಅವರಿಗೆ ಕಟ್ಟಿರುವಂತಹ ಕಫ ನಿವಾರಣೆಯಾಗುತ್ತದೆ. ಎರಡನೆಯದಾಗಿ ಮೂರರಿಂದ ನಾಲ್ಕು ಟೇಬಲ್ ಸ್ಪೂನ್ ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ಬೆಳ್ಳುಳ್ಳಿ ಎಸಳನ್ನು ಕಟ್ ಮಾಡಿ ಹಾಕಿ ಎಣ್ಣೆಯಲ್ಲಿ ಬೇಯಿಸಿ ಎರಡು ನಿಮಿಷಗಳ ಕಾಲ ಬೇಯಿಸಿದ ನಂತರ ಆ ಎಣ್ಣೆಯನ್ನು ಶೋಧಿಸಿಕೊಂಡು ಮಕ್ಕಳು ಮಲಗುವಂತಹ ಸಂದರ್ಭದಲ್ಲಿ ಅವರ ಕೈಗಳು, ಕಾಲುಗಳು, ಪೂರ್ತಿ ಮೈ ಈ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿ, ಮಸಾಜ್ ಮಾಡುವುದರಿಂದ ಅವರಿಗೆ ಶೀತ, ನೆಗಡಿ, ಕೆಮ್ಮು ನಂತಹ ಕೆಲವೊಂದು ಸಮಸ್ಯೆಗಳು ನಿವಾರಣೆಯಾಗುತ್ತದೆ.
ಮೂರನೆಯದಾಗಿ ಒಂದು ದಾರವನ್ನು ತೆಗೆದುಕೊಂಡು ಆ ದಾರಕ್ಕೆ ಒಂದು ಬೆಳ್ಳುಳ್ಳಿಯ ಪೂಣಿಸಿ ಕಟ್ಟಿ ಆ ಮಗುವಿನ ಕುತ್ತಿಗೆಗೆ ಕಟ್ಟಿ ಹೀಗೆ ಮಾಡುವುದರಿಂದ ಅವರ ಎದೆಯಲ್ಲಿ ಕಟ್ಟಿರುವ ಕಫ ನಿವಾರಣೆಯಾಗುತ್ತದೆ ಹಾಗೆಯೇ ಬೆಳ್ಳುಳ್ಳಿಯ ವಾಸನೆ ಅವರ ಮೂಗಿನಿಂದ ಹೋಗಿ ಬೆಳ್ಳುಳ್ಳಿಯಲ್ಲಿ ಇರುವಂತಹ ಅಂಶವು ನೆಗಡಿಯನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ಈ ಒಂದು ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದ್ದು ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯಗಳು ಮಕ್ಕಳ ದೇಹದಲ್ಲಿ ಉಳಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಮಕ್ಕಳಿಗೆ ಇರುವಂತಹ ನೆಗಡಿ, ಶೀತ, ಕೆಮ್ಮು, ಕಫ ಇನ್ನು ಹಲವಾರು ಸಮಸ್ಯೆಗಳು ನಿವಾರಣೆಯಾಗುತ್ತದೆ. ವಾತಾವರಣ ಬದಲಾದಂತೆ ಮಕ್ಕಳಿಗೆ ಈ ರೀತಿಯಾದಂತಹ ಸಮಸ್ಯೆಗಳು ಅಂದರೆ ನೆಗಡಿ, ಶೀತ, ಕೆಮ್ಮು, ಕಫ ದಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ.
ಈ ಒಂದು ಸಮಸ್ಯೆಯು ಹೆಚ್ಚಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ ಕಂಡುಬರುತ್ತದೆ ಏಕೆಂದರೆ ಸೂರ್ಯನ ಕಿರಣಗಳು ಈ ಒಂದು ಚಳಿಗಾಲ ಮತ್ತು ಮಳೆಗಾಲದಲ್ಲಿ ಇರುವುದಿಲ್ಲ ಆದ್ದರಿಂದ ಶೀತದ ವಾತಾವರಣ ಉಂಟಾಗಿ ಬ್ಯಾಕ್ಟೀರಿಯಾಗಳನ್ನು ಉಲ್ಬಣಕ್ಕೆ ಕಾರಣವಾಗುತ್ತದೆ.
ಆದ್ದರಿಂದ ಈ ಒಂದು ಸೀಸನ್ ಗಳಲ್ಲಿ ಅಂದರೆ ಚಳಿ ಮತ್ತು ಮಳೆ ಋತುಮಾನಗಳಲ್ಲಿ ಬ್ಯಾಕ್ಟೀರಿಯಗಳು ಹೆಚ್ಚಿಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಕ್ಕಳಿಗೆ ಅಷ್ಟೇ ಅಲ್ಲದೆ ದೊಡ್ಡವರು ಸಹಿತವಾಗಿ ಈ ಒಂದು ಕಫದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತಹವರು ಸಹ ನಾವಿಲ್ಲಿ ತಿಳಿದಿರುವಂತಹ ಮನೆಮದ್ದುಗಳನ್ನು ಉಪಯೋಗ ಮಾಡಿಕೊಳ್ಳುವುದರಿಂದ ಅವರಿಗೆ ಇರುವಂತಹ ಕಫ ಸಮಸ್ಯೆ ನೆಗಡಿ ಸಮಸ್ಯೆ ನಿವಾರಣೆಯಾಗುತ್ತದೆ. ಈ ಒಂದು ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಇರುವುದರಿಂದ ನಮಗೆ ಸಮಸ್ಯೆಯನ್ನು ತಂದೊಡ್ಡುವುದಿಲ್ಲ ಅಷ್ಟೇ ಅಲ್ಲದೆ ಇದು ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ.
ಯಾರೆಲ್ಲ ಮಕ್ಕಳು ಔಷಧಿಗಳನ್ನು ಕುಡಿಯಲು ಇಷ್ಟಪಡುವುದಿಲ್ಲ ಅಂತಹ ಮಕ್ಕಳಿಗೆ ಈ ರೀತಿಯಾದಂತಹ ವಿಧಾನದಿಂದ ನೀವು ಆರೈಕೆಯನ್ನು ಮಾಡಬೇಕು. ಅಷ್ಟೇ ಅಲ್ಲದೆ ಮಕ್ಕಳಿಗೆ ನೆಗಡಿ, ಕಫ ಬಂದರೆ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತಹ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ ಮಕ್ಕಳು ಸ್ಕೂಲಿಗೆ ಹೋಗುವಂತಹ ಸಂದರ್ಭದಲ್ಲಿ ಅಲ್ಲಿನ ಬೇರೆ ಮಕ್ಕಳಿಗೂ ಸಹ ಇದು ಹರಡಬಹುದು ಆದ್ದರಿಂದ ಮುನ್ನೆಚ್ಚರಿಕೆಯಾಗಿ ಪ್ರಾರಂಭದ ದಿನಗಳಲ್ಲಿ ಕೆಮ್ಮು, ನೆಗಡಿ, ಕಫವನ್ನು ನೀವು ತೊಲಗಿಸಬೇಕು. ಅಷ್ಟೇ ಅಲ್ಲದೆ ಈ ಒಂದು ನೆಗಡಿ ಇರುವಂತಹ ಶೀತದ ಸಮಯದಲ್ಲಿ ಮಕ್ಕಳಿಗೆ ಚೆನ್ನಾಗಿ ಕಾಯಿಸಿ ಆರಿಸಿದ ನೀರನ್ನು ಮಾತ್ರ ಕೊಡಬೇಕು ಹಾಗೆಯೇ ಅವರಿಗೆ ಬಿಸಿ ಬಿಸಿ ಆದಂತಹ ಊಟಗಳನ್ನು ನೀವು ನೀಡಬೇಕು. ಅವರ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಶುಂಠಿ, ಒಣ ಮೆಣಸಿನ ಕಾಳು, ಅರಿಶಿಣ ಪುಡಿ ಈ ರೀತಿಯಾದಂತಹ ಒಂದು ಪದಾರ್ಥಗಳನ್ನು ಸೇರಿಸಿ ಅವರಿಗೆ ಅಡಿಗೆಯನ್ನು ಮಾಡಿಕೊಟ್ಟರೆ ಅತಿವೇಗವಾಗಿ ಅವರ ಶೀತವು ನಿವಾರಣೆಯಾಗುತ್ತದೆ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ