ಸ್ನೇಹಿತರೆ ಇಂದಿನ ಸಂಚಿಕೆಯಲ್ಲಿ ನಿಮಗೆ ಉತ್ತಮವಾದ ಟಿಪ್ಸ್ಗಳನ್ನು ಹೇಳಿಕೊಡುತ್ತಿದ್ದೇನೆ ಇದರಿಂದ ದಿನನಿತ್ಯ ಇಸಿಯುವ ತರಕಾರಿಗಳನ್ನು ಮತ್ತೆ ಉಪಯುಕ್ತವನ್ನಾಗಿ ಮಾಡುವುದು ಹೇಗೆ ಎಂದು ತಿಳಿಯೋಣ. ಸಾಮಾನ್ಯವಾಗಿ ನಮ್ಮ ಅಡುಗೆ ಮನೆಯಲ್ಲಿ ಟೊಮೆಟೊ ಇರಲೇಬೇಕು ಟೊಮೊಟೊ ಇಲ್ಲದೆ ಯಾವುದೇ ತರಹದ ಅಡುಗೆಯ ಸಂಪೂರ್ಣವಾಗುವುದಿಲ್ಲ ಅದೇ ರೀತಿ ನೀವು ಯಾವುದೇ ತರಹದ ಸ್ಥಿತಿಯಲ್ಲಿ ಟೊಮೊಟೋ ಇದ್ದರು ಅದು ಕೊಳತೆ ಕೊಳೆಯುತ್ತದೆ.
ಹಾಗಾಗಿ ಕೊಳೆತ ಅಥವಾ ಸ್ವಲ್ಪ ಕೆಟ್ಟಿರುವ ಟೊಮೆಟೊ ಇಂದ ಯಾವತರಾದ ಉಪಯೋಗವನ್ನು ಮಾಡಬಹುದು ಹಾಗೂ ಇದನ್ನು ಹೇಗೆ ಉಪಯೋಗಿಸುವುದು ಎನ್ನುವ ಬಗ್ಗೆ ಕುರಿತು ಇಂದಿನ ಪುಟದಲ್ಲಿ ನೋಡೋಣ. ಸಾಮಾನ್ಯವಾಗಿ ಈ ಪುಟವು ಎಲ್ಲರಿಗೂ ಬಹಳ ಉಪಯುಕ್ತವಾಗಿದೆ ಎಂದು ತಿಳಿದಿದ್ದೇನೆ ಏಕೆಂದರೆ ಯಾರ ಮನೆಯಲ್ಲಿ ಟೊಮ್ಯಾಟೋವನ್ನು ಎಸಿಯದೆ ಇಲ್ಲದಿರುವುದು ಇಲ್ಲ ಎಂದು ಹೇಳಬಹುದು. ಈ ಸುಂದರವಾದ ತರಕಾರಿ ನಿಮ್ಮ ಮನೆಯ ವಸ್ತುಗಳಿಗೆ ಹೊಳಪನ್ನು ನೀಡುತ್ತದೆ ಎಂದು ಹಲವರು ತಿಳಿದಿರುವುದಿಲ್ಲ.
ಟೊಮೆಟೊದಲ್ಲಿರುವ ಆಮ್ಲವು ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ನಿಂಬೆಹಣ್ಣಿನ ನಂತರ ಬಳಸಲು ಇದು ಅತ್ಯುತ್ತಮ ನೈಸರ್ಗಿಕ ಪದಾರ್ಥಗಳಲ್ಲಿ ಒಂದಾಗಿದೆ. ಬೆಲೆಬಾಳುವ ಲೋಹಗಳನ್ನು ಯಾವಾಗಲೂ ಹೊಳಪು ಮಾಡಲು ರಾಸಾಯನಿಕ ದ್ರಾವಣದಲ್ಲಿ ಹಾಕಲಾಗುತ್ತದೆ. ಆದರೆ, ಕೆಲವೊಮ್ಮೆ ಈ ದ್ರಾವಣಗಳು ಲೋಹಗಳ ಮೇಲೆ ತೆಳುವಾದ ಬಿಳಿಯ ಕಳಪೆ ಪದರವನ್ನು ರೂಪಿಸುತ್ತವೆ. ಆದ್ದರಿಂದ, ಟೊಮೆಟೊ ಪೇಸ್ಟ್ನೊಂದಿಗೆ ನಿಮ್ಮ ಮನೆಯ ವಸ್ತುಗಳನ್ನು ಸ್ವಚ್ಛಗೊಳಿಸಲು ಸುರಕ್ಷಿತವಾಗಿದೆ.
ಇದು ಕಡಿಮೆ ಹಾನಿಕಾರಕ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ. ಬೆಳ್ಳಿಯ ಹೊಳಪನ್ನು ಮಾಡಲು ನೀವು ಟೊಮೆಟೊಗಳನ್ನು ಸಹ ಬಳಸಬಹುದು. ಈ ನೈಸರ್ಗಿಕ ಪದಾರ್ಥವು ಬೆಳ್ಳಿಯ ಆಭರಣಗಳ ಮೇಲೆ ಕಾಣಿಸಿಕೊಳ್ಳುವ ತುಕ್ಕು ತೆಗೆದುಹಾಕಲು ಸಹಾಯ ಮಾಡುತ್ತದೆ. ಟೊಮೆಟೊದಲ್ಲಿರುವ ಆಮ್ಲವು ಬೆಳ್ಳಿಯ ಮೇಲೆ ಹೊಳಪನ್ನು ಮಾತ್ರ ಸೇರಿಸುತ್ತದೆ. ಹೌದು ನಾವು ಟೊಮೆಟೊವನ್ನು ಎಸೆದು ಎಷ್ಟೋ ಉಪಯೋಗವಾಗುವಂತಹ ವಸ್ತುವನ್ನು ಎಸೆಸುತ್ತಿದ್ದೇವೆ ಎಂದು ಹೇಳಬಹುದು.
ನಾವು ಕೊಳಿತಿರುವ ಟೊಮೊಟೊವನ್ನು ಹೇಗೆ ಬಳಸಬೇಕು ಎಂದರೆ ಮೊದಲನೆಯದಾಗಿ ಅದನ್ನು ಕತ್ತರಿಸಿ ಒಂದು ಕುಕ್ಕರ್ ಗೆ ಹಾಕಬೇಕು ಎಂದು ನಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿರುವಂತಹ ತಾಳೆ ಪಾತ್ರಗಳು ಅಥವಾ ಚಿಕ್ಕಪುಟ್ಟ ಇತ್ತಾಳೆಯ ವಸ್ತುಗಳು ಇರುತ್ತವೆ, ಇನ್ನು ದೀಪಗಳು ಜಿಡ್ಡಿನಿಂದಲೆ ತುಂಬಿರುತ್ತದೆ, ಅದನ್ನು ತೊಳೆಯುವುದು ಸ್ವಲ್ಪ ಕಷ್ಟವೆ ಸರಿ, ಹೌದು ಇಂತಹ ಕಠಿಣವಾದ ಜಿಡ್ಡಿನ ಪಾತ್ರೆಗಳನ್ನು ನಾವು ಕೊಳೆತ ಟೊಮೆಟೊ ಹಣ್ಣಿನಿಂದ ತೊಳೆಯಬಹುದು ಅದು ಹೇಗೆ ಅಂದರೆ ಕೊಳೆತ ಟೊಮೆಟೊ ಹಣ್ಣನ್ನು ಕತ್ತರಿಸಿ ಕುಕ್ಕರ್ ಒಳಗೆ ಹಾಕಬೇಕು, ನಂತರ ಅದನ್ನು ಸ್ವಲ್ಪ ಬಿಸಿ ಮಾಡಬೇಕು, ನಂತರ ಇತ್ತಾಳೆ ಪಾತ್ರೆ ಅಥವಾ ಯಾವುದಾದರೂ ಪಾತ್ರೆ ಆಗಬಹುದು ಅದನ್ನು ಆ ಕುಕ್ಕರ್ ಒಳಗೆ ಹಾಕಿ ಕುದಿಸಬೇಕು 15 ನಿಮಿಷಗಳ ನಂತರ ಅದನ್ನು ತೆಗೆಯ ಬೇಕು, ಕುಕ್ಕರ್ನಿಂದ ತೆಗೆದ ನಂತರ ನೀವೇ ನೋಡಬಹುದು.
ಪಾತ್ರೆಯಲ್ಲಿ ಜಿಡ್ಡಿನ ಅಂಶವು ಇರುವುದಿಲ್ಲ, ಹೌದು ಅಷ್ಟು ಸ್ವಚ್ಛವಾಗಿ ಆಗಿರುತ್ತದೆ, ನಂತರ ಅದನ್ನು ಸಬಿನ ಇಂದ ಒಮ್ಮೆ ತೊಳಿದರೆ ಸಾಕು ಪಾತ್ಟೆಯು ಸ್ವಚ್ಛ ವಾಗುತ್ತದೆ. ಇನ್ನು ಇತ್ತೀಚಿಗೆ ಹುಣಸೆ ಹಣ್ಣಿನ ಬೆಲೆಯೂ ಕೂಡ ಹೆಚ್ಚಾಗಿದೆ ಹಾಗಾಗಿ ಕೊಳೆತ ಟೊಮೆಟೊ ಹಣ್ಣನ್ನು ಬಳಸುವುದು ಒಳ್ಳೆಯದು, ಹೀಗೆ ಮಾಡುವುದರಿಂದ ನಮ್ಮ ಪಾತ್ರೆಗಳು ಸ್ವಚ್ಛವಾಗಿ ಒಂದು ತಿಂಗಳ ವರೆಗೂ ಉತ್ತಮವಾಗಿ ಹೊಳೆಯುತ್ತಾ ಇರುತ್ತದೆ. ಇದನ್ನು ನೀವು ಮನೆಯಲ್ಲಿ ಇನ್ನು ಮುಂದೆ ಪ್ರಯತ್ನ ಮಾಡಿ ನೋಡಿ ನೀವೇ ಇದನ್ನು ಇಷ್ಟಪಟ್ಟು ಅನುಸರಿಸುತ್ತೀರಿ.