ತುಂಬಾ ಜನರಿಗೆ ಈ ಒಂದು ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಈ ಒಂದು ಡ್ಯಾಂಡ್ರಫ್ ನಮ್ಮ ತಲೆಯಲ್ಲಿ ಬಂದನಂತರ ತಲೆಯ ಕೂದಲು ಉದುರಲು ಪ್ರಾರಂಭವಾಗುತ್ತದೆ. ಡ್ಯಾಂಡ್ರಫ್ ಬರಲು ಹಲವಾರು ಕಾರಣಗಳು ಇರುತ್ತವೆ ನಮ್ಮ ಸುತ್ತಮುತ್ತಲಿನ ವಾತಾವರಣವು ಮಾಲಿನ್ಯದಿಂದ ಕೂಡಿದ್ದರೆ ಅದು ನಮ್ಮ ತಲೆಯ ಮೇಲೆ ಬಿದ್ದು ಡ್ಯಾಂಡ್ರಫ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ತಲೆಗೆ ಎಣ್ಣೆ ಹಚ್ಚಿದ ನಂತರ ಮೂರು ನಾಲ್ಕು ದಿನಗಳವರೆಗೂ ಸ್ನಾನ ಮಾಡದೆ ಇದ್ದರೂ ಸಹ ಅದು ನಮ್ಮ ತಲೆಯಲ್ಲಿ ಡ್ಯಾಂಡ್ರಫ್ ಬರುವಂತೆ ಮಾಡುತ್ತದೆ. ಆದ್ದರಿಂದ ನಾವು ಎಣ್ಣೆ ಹಚ್ಚಿದ ನಂತರ ಒಂದು ದಿನ ಬಿಟ್ಟು ಸ್ನಾನವನ್ನು ಮಾಡಿಕೊಂಡರೆ ತುಂಬಾ ಒಳ್ಳೆಯದು. ಹಾಗೆಯೆ ನಾವು ಕೂದಲಿಗೆ ಎಣ್ಣೆ ಹಾಕದೆ ಎರಡು-ಮೂರು ದಿನಗಳವರೆಗೆ ಇದ್ದರೂ ಸಹ ನಮ್ಮ ಕೂದಲಿನಲ್ಲಿ ಡ್ಯಾಂಡ್ರಫ್ ಸಮಸ್ಯೆಯನ್ನು ಉಂಟುಮಾಡುತ್ತದೆ ಆದ್ದರಿಂದ ನಾವು ಹೆಚ್ಚು ದಿನಗಳ ಕಾಲ ನಮ್ಮ ಕೂದಲನ್ನು ಒಣಗಲು ಬಿಡಬಾರದು ಬದಲಿಗೆ ಎಣ್ಣೆಯನ್ನು ಹಚ್ಚಬೇಕು.
ನಾವು ಎಣ್ಣೆಯನ್ನು ಹಚ್ಚಿದ ನಂತರ ಹೊರಗೆ ಹೋಗುವಾಗ ತಲೆಗೆ ಒಂದು ಸ್ಕಾರ್ಫ್ ಅಥವಾ ವೇಲ್ ಇಂದ ಕವರ್ ಮಾಡಿಕೊಂಡು ಹೋಗಬೇಕು ಏಕೆಂದರೆ ವಾತಾವರಣದಲ್ಲಿ ಇರುವಂತಹ ಕೆಟ್ಟ ದೂಳು ನಾವು ತಲೆಗೆ ಎಣ್ಣೆ ಹಚ್ಚುವುದರಿಂದ ಬೇಗನೆ ಅಟ್ರ್ಯಾಕ್ಟ್ ಮಾಡಿಕೊಂಡು ಅದು ನಮ್ಮ ತಲೆಯಲ್ಲಿ ಕೋರುತ್ತದೆ ಅದರಿಂದಲೂ ಸಹ ನಮಗೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ನೀವು ಯಾವಾಗಲೇ ಹೊರಗೆ ಹೋದರು ಸರಿ ನಿಮ್ಮ ತಲೆಕೂದಲನ್ನು ಕವರ್ ಮಾಡಿಕೊಂಡು ಹೋಗಬೇಕು. ಈ ಒಂದು ಡ್ಯಾಂಡ್ರಫ್ ಅನ್ನು ನಾವು ಸುಲಭವಾಗಿ ನಿವಾರಣೆ ಮಾಡಿಕೊಳ್ಳಬಹುದು ಹೌದು ನಾವು ಇಲ್ಲಿ ತಿಳಿಸುವಂತಹ ಈ ಒಂದು ಮನೆಮದ್ದನ್ನು ಉಪಯೋಗಿಸಿಕೊಂಡು ನೀವು ನಿಮ್ಮ ತಲೆಯಲ್ಲಿ ಇರುವಂತಹ ಡ್ಯಾಂಡ್ರಫ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ಇದಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಪದಾರ್ಥ ಎಂದರೆ ನಿಂಬೆ ಹಣ್ಣು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗವನ್ನಾಗಿ ಮಾಡಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚಬೇಕು. ನಮ್ಮ ತಲೆಯ ಪೂರ್ತಿ ಕೂದಲಿನ ಬುಡಕ್ಕೆ ಒಂದು ನಿಂಬೆಹಣ್ಣನ್ನು ಹಚ್ಚಬೇಕು ನಂತರ ಮಸಾಜ್ ಮಾಡಬೇಕು ನಾವು ನಿಂಬೆಹಣ್ಣನ್ನು ತಲೆಗೆ ಹಚ್ಚುವ ಮೊದಲೇ ಅಂದರೆ 12ಗಂಟೆಯ ಮುಂಚೆಯೇ ನಮ್ಮ ತಲೆಗೆ ಎಣ್ಣೆಯನ್ನು ಹಚ್ಚಿ ಬಿಟ್ಟಿರಬೇಕು ನಾವು ಬರೀ ಕೂದಲಿಗೆ ಅಂದರೆ ಒಣ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೆಲವು ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ನಮ್ಮ ತಲೆಯಲ್ಲಿ ತುರಿಕೆ ಅಥವಾ ಸಣ್ಣ ಸಣ್ಣ ಗುಳ್ಳೆಗಳು ಆಗುತ್ತದೆ ಆದ್ದರಿಂದ ನಾವು ಮೊದಲು ತಲೆಗೆ ಎಣ್ಣೆ ಹಚ್ಚಿ ನಂತರದಲ್ಲಿ ಒಂದು ನಿಂಬೆಹಣ್ಣಿನ ರಸವನ್ನು ನಮ್ಮ ತಲೆಯ ಕೂದಲಿನ ಬುಡಕ್ಕೆ ಹಚ್ಚುವ 6 ಘಂಟೆಯ ಮೊದಲೆ ಎಣ್ಣೆಯನ್ನು ಹಚ್ಚಿರಬೇಕು.
ಮತ್ತೊಂದು ವಿಧಾನವನ್ನು ನೋಡುವುದಾದರೆ ನಿಮ್ಮ ತಲೆಯ ಬುಡಕ್ಕೆ ಎಷ್ಟು ಎಣ್ಣೆ ಬೇಕು ಅಷ್ಟು ಪ್ರಮಾಣದ ಎಣ್ಣೆಯನ್ನು ಒಂದು ಬೌಲ್ ನಲ್ಲಿ ಹಾಕಿ ಅದಕ್ಕೆ ಅರ್ಧ ನಿಂಬೆ ಹಣ್ಣನ್ನು ಸೇರಿಸಿ ನಂತರ ಅದನ್ನು ನಿಮ್ಮ ತಲೆಯ ಕೂದಲಿನ ಬುಡಕ್ಕೆ ಹಚ್ಚಿ ಕೊಳ್ಳಿ ರಾತ್ರಿ ಪೂರ್ತಿ ಹಾಗೆಯೇ ಬಿಟ್ಟು ಬೆಳಿಗ್ಗೆ ಎದ್ದು ಸ್ನಾನ ಮಾಡಿಕೊಳ್ಳುವುದರಿಂದ ನಿಮ್ಮ ತಲೆಕೂದಲಿನಲ್ಲಿ ಇರುವಂತಹ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತದೆ. ರಾತ್ರಿ ಇಡೀ ಬಿಡಲು ಸಾಧ್ಯವಾಗದಿದ್ದರೆ 3 ಗಂಟೆಗಳಾದರೂ ನಿಂಬೆಹಣ್ಣಿನ ರಸವನ್ನು ನಿಮ್ಮ ತಲೆಯಲ್ಲಿ ಇರಿಸಿ ನಂತರ ವಾಷ್ ಮಾಡಿಕೊಳ್ಳಬಹುದು. ಈ ಒಂದು ನಿಂಬೆಹಣ್ಣಿನಲ್ಲಿ ಬ್ಲೀಚಿಂಗ್ ಏಜೆಂಟ್ ಅಂಶ ಇರುವುದರಿಂದ ಇದು ನಮ್ಮ ತಲೆಯಲ್ಲಿ ಇರುವಂತಹ ಡ್ಯಾಂಡ್ರಫ್ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಈ ಒಂದು ನಿಂಬೆಹಣ್ಣನ್ನು ನಾವು ಒಣ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಕೆಲವೊಂದು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಎಣ್ಣೆಯನ್ನು ಹಚ್ಚಿದ ನಂತರ ನಿಂಬೆಹಣ್ಣನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ಡ್ಯಾಂಡ್ರಫ್ ಸಮಸ್ಯೆ ಇರುವಂತಹವರಿಗೆ ಕೂದಲು ಉದುರುವ ಸಮಸ್ಯೆ ಯು ಕಂಡುಬರುತ್ತದೆ ಆದ್ದರಿಂದ ನೀವು ಕೂದಲು ಉದುರುವ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಮೇಲೆ ತಿಳಿಸಿರುವ ವಿಧಾನವನ್ನು ವಾರದಲ್ಲಿ ಎರಡರಿಂದ ಮೂರು ದಿನಗಳ ಕಾಲ ಮಾಡಬೇಕು. ಸೊಲ್ಪ ಕಡಿಮೆ ಡ್ಯಾಂಡ್ರಫ್ ಇರುವಂತಹವರು ವಾರದಲ್ಲಿ ಒಮ್ಮೆ ಅಥವಾ ಹತ್ತು ದಿನಗಳಿಗೆ ಒಮ್ಮೆ ಈ ವಿಧಾನವನ್ನು ಅನುಸರಿಸಿದರೆ ನಿಮ್ಮ ತಲೆಯಲ್ಲಿ ಇರುವಂತಹ ಸಮಸ್ಯೆ ನಿವಾರಣೆ ಆಗುತ್ತದೆ ಅಲ್ಲದೆ ನಿಮ್ಮ ಕೂದಲನ್ನು ಇದು ಸಂರಕ್ಷಣೆ ಯುತವಾಗಿ ಮಾಡುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.