ಬಡವರಿಗೆ ಮಾತ್ರ ಹಣದ ಸಮಸ್ಯೆಯಲ್ಲ ಶ್ರೀಮಂತರಿಗೂ ಕೂಡ ಒಮ್ಮೊಮ್ಮೆ ಅವಶ್ಯಕತೆ ಇದ್ದಾಗಲೇ ಹಣ ಕೈಯಲ್ಲಿ ಇರುವುದಿಲ್ಲ. ಆಗ ಸ್ನೇಹಿತರ ಬಳಿ ಕೇಳಿದರು ಸಾಲ ದೊರೆಯುವುದಿಲ್ಲ ಅಥವಾ ಇನ್ಯಾವ ರೂಪದಲ್ಲಾದರೂ ಹಣ ತರೋಣ ಎಂದರೆ ಅದಕ್ಕೂ ದಾರಿ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಒಂದಲ್ಲ ಒಂದು ಸಮಯದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾನೆ.
ಆಗ ಆ ಕ್ಷಣದ ಆ ಪರಿಸ್ಥಿತಿಯಿಂದ ನೀವು ತಪ್ಪಿಸಿಕೊಳ್ಳಬೇಕು ಅಥವಾ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದರೆ ಅದಕ್ಕೆ ಸುಲಭವಾದ ಒಂದು ತಂತ್ರ ಇದೆ. ಈ ತಂತ್ರವನ್ನು ಮಾಡುವುದರಿಂದ ಚಮತ್ಕಾರಿ ರೀತಿಯಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ. ಮಂತ್ರ, ಯಂತ್ರಗಳ ರೀತಿ ಈ ತಂತ್ರವು ಕೂಡ ಕೆಲಸ ಮಾಡಿ ನಿಮಗೆ ಹಣದ ಹೊಳೆಯನ್ನೇ ಹರಿಸುತ್ತದೆ.
ಇದನ್ನು ಮಾಡುವುದು ಬಹಳ ಸುಲಭ ಹೇಗೆಂದರೆ ಈ ರೀತಿ ನೀವು ತುಂಬಾ ಕಷ್ಟದಲ್ಲಿ ಸಿಕ್ಕಿಕೊಂಡು ತೀರಾ ಹಣದ ಅವಶ್ಯಕತೆ ಇದ್ದು ಕೈಯಲ್ಲಿ ಹಣ ಇಲ್ಲ ಹಣ ಬೇಕೆ ಬೇಕು ಎನಿಸಿದಾಗ ಒಂದು ದಿನ ಶಿವನ ದೇವಾಲಯಕ್ಕೆ ಹೋಗಿ, ನಿಮ್ಮ ಸಮಸ್ಯೆಗಳನ್ನೆಲ್ಲ ಶಿವನ ಬಳಿ ಹೇಳಿಕೊಂಡು ಶಿವನ ಲಿಂಗವನ್ನೇ ನೋಡುತ್ತಿರಿ ಈ ವಿಧಾನವನ್ನು ತ್ರಾಟಕ ಕ್ರಿಯೆ ಎನ್ನುತ್ತಾರೆ.
ನಿರಂತರವಾಗಿ ಈ ತ್ರಾಟಕ ಕ್ರಿಯೆಯನ್ನು ಮಾಡಿ ಆ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಕೆಲವು ಅಂಕೆಗಳನ್ನು ಜಪ ಮಾಡಬೇಕು ನೀವು ಯಾವ ಸಂಖ್ಯೆಯನ್ನು ಜಪ ಮಾಡಿ. ಮೊದಲಿಗೆ 11 ಎನ್ನುವ ಸಂಖ್ಯೆಯನ್ನು ಜಪ ಮಾಡಬೇಕು, 11 ಎನ್ನುವ ಸಂಖ್ಯೆಯು ಶಿವನ ಸಂಖ್ಯೆ ಆಗಿದ್ದು ಶಿವನಿಗೆ ಈ ಸಂಖ್ಯೆ ಬಹಳ ಇಷ್ಟ ಇದರಿಂದ ಶಿವನ ಆಶೀರ್ವಾದ ನಿಮಗೆ ದೊರೆಯುತ್ತದೆ.
ನಂತರ 12 ಸಂಖ್ಯೆಯನ್ನು ಜಪ ಮಾಡಿ ಇದು ಸೂರ್ಯದೇವನ ಸಂಖ್ಯೆ ಆಗಿದ್ದು ಸೂರ್ಯದೇವರ ಆಶೀರ್ವಾದ ಕೂಡ ನಿಮಗೆ ಸಿಕ್ಕಿ, ನಿಮ್ಮ ಸಮಸ್ಯೆ ಪರಿಹಾರ ಆಗಲು ಶುರು ಆಗುತ್ತದೆ. ಈ ಎರಡು ಸಂಖ್ಯೆಗಳು ಆದ ಬಳಿಕ 8 ಎನ್ನುವ ಸಂಖ್ಯೆಯನ್ನು ಜಪ ಮಾಡಿ 8 ಎನ್ನುವ ಸಂಖ್ಯೆಯು ಹಣದ ಆಕರ್ಷಣೆಯ ಶಕ್ತಿಯನ್ನು ಹೊಂದಿದೆ. 8ರ ಸಂಖ್ಯೆಯು ಲಕ್ಷ್ಮಿಯ ಸ್ವರೂಪವೂ ಆಗಿದೆ. ಲಕ್ಷ್ಮಿಗೂ ಕೂಡ ಬಹಳ ಇಷ್ಟವಾದ ಈ ಸಂಖ್ಯೆಯನ್ನು ಜಪ ಮಾಡಿದ ನಂತರ 2 ಎನ್ನುವ ಸಂಖ್ಯೆಯನ್ನು ಜಪ ಮಾಡಿ.
2 ಎನ್ನುವ ಸಂಖ್ಯೆಯು ಅಶ್ವಿನಿ ದೇವತೆಗಳನ್ನು ಹೋಲುತ್ತದೆ. ಅಶ್ವಿನಿ ದೇವತೆಗಳು ಆಶೀರ್ವಾದ ಮಾಡುವುದು ಬಹಳ ಮುಖ್ಯ. ಅಶ್ವಿನಿ ದೇವತೆಗಳ ಆಶೀರ್ವಾದದಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯವೇ ಭಾಗ್ಯ ಎನ್ನುವ ಮಾತು ಇದೆ, ಹಾಗಾಗಿ ಆರೋಗ್ಯವಿದ್ದರೆ ಏನನ್ನು ಬೇಕಾದರೂ ಸಂಪಾದಿಸಬಹುದು. ಇದೆಲ್ಲಾ ಆದ ಬಳಿಕ ಒಂದು ಲೋಟ ನೀರನ್ನು ಶಿವಲಿಂಗದ ಮೇಲೆ ಹಾಕಿ ಕೈಮುಗಿದು ಬನ್ನಿ.
ಈ ರೀತಿ ತಪ್ಪದೇ 11 ದಿನಗಳವರೆಗೆ ನೀವು ಮಾಡಿದರೆ ಖಂಡಿತ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಈ ತಂತ್ರ ವರ್ಕ್ ಆಗುತ್ತಿದೆ ಎನ್ನುವುದು ನೀವು ಮೊದಲ ದಿನ ಆರಂಭಿಸಿದಾಗಲೇ ನಿಮಗೆ ಸುಳಿವುಗಳ ಮೂಲಕ ತಿಳಿಯುತ್ತದೆ. ಯಾವುದೇ ಖರ್ಚಿಲ್ಲದೆ ಮನದಲ್ಲಿ ಭಕ್ತಿಯಿಂದ ಏಕಗ್ರತೆಯಿಂದ ಈ ತಂತ್ರವನ್ನು ಮಾಡಿ ನಿಮ್ಮ ಸಮಸ್ಯೆಯಿಂದ ಹೊರಬಂದು ಇದರ ಚಮತ್ಕಾರದ ಬಗ್ಗೆ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸಿ.