ನಮ್ಮ ಭಾರತದಲ್ಲಿ ಅತಿ ಹೆಚ್ಚಾಗಿ ತೆಂಗಿನಕಾಯಿಯ ಬಳಕೆಯನ್ನು ಮಾಡಲಾಗುತ್ತದೆ ಹೌದು ನಾವು ಮಾಡುವಂತಹ ಸಾಮಾನ್ಯವಾಗಿ ಎಲ್ಲಾ ಅಡಿಗೆಗಳಲ್ಲಿ ಸಹ ತೆಂಗಿನಕಾಯಿಯನ್ನು ಉಪಯೋಗ ಮಾಡೇ ಮಾಡುತ್ತೇವೆ. ತೆಂಗಿನ ಕಾಯಿಯಿಂದ ಅನೇಕ ರೀತಿಯಾದಂತಹ ಸ್ವೀಟ್ ಗಳನ್ನು ಸಹ ತಯಾರು ಮಾಡಲಾಗುತ್ತದೆ. ಇಷ್ಟೆಲ್ಲಾ ಪ್ರಯೋಜನವನ್ನು ಹೊಂದಿರುವಂತಹ ತೆಂಗಿನಕಾಯಿ ತಿರುಳನ್ನು ಬಳಸಿಕೊಂಡು ಉಳಿದಂತಹ ಎಲ್ಲವನ್ನು ನಾವು ಬಿಸಾಡುತ್ತೇವೆ. ಕೆಲವರು ತೆಂಗಿನಕಾಯಿಯ ಚಿಪ್ಪಿನಲ್ಲಿ ಅನೇಕ ರೀತಿಯಾದಂತಹ ಕರಕುಶಲ ವಸ್ತುಗಳನ್ನು ಸಹ ಮಾಡುತ್ತಾರೆ. ಯಾರೆಲ್ಲಾ ತೆಂಗಿನಕಾಯಿಯ ನಾರನ್ನು ಬಿಸಾಡುತ್ತೀರೋ ಅವರೆಲ್ಲ ಈ ವಿಷಯವನ್ನು ಖಂಡಿತವಾಗಿಯೂ ತಿಳಿದುಕೊಳ್ಳಲೇಬೇಕು.
ತೆಂಗಿನ ಕಾಯಿಯನ್ನು ಸುಲಿದ ನಂತರ ಬಂದಂತಹ ನಾರನ್ನು ನಾವು ತೆಗೆದುಕೊಂಡು ಅದನ್ನು ನೀಟಾಗಿ ಬಿಡಿಬಿಡಿಯಾಗಿ ಬಿಡಿಸಿಕೊಳ್ಳಿ, ಸ್ವಲ್ಪ ಗಟ್ಟಿ ಇರುವುದನ್ನು ನೀವು ಕತ್ತರಿಯಿಂದ ಕಟ್ ಮಾಡಿಕೊಂಡು ನಂತರ ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ, ನಂತರ ಅದನ್ನು ಒಂದು ಡಬ್ಬಕ್ಕೆ ಹಾಕಿ ಬೇಕಾಗುವಷ್ಟು ನೀರು ಸೇರಿಸಿ ಅದನ್ನು 25 ರಿಂದ 30 ದಿನಗಳ ಕಾಲ ಹಾಗೆಯೇ ಬಿಟ್ಟು ಅದನ್ನು ನೀವು ನಿಮ್ಮ ಮನೆಯಲ್ಲಿ ಇರುವಂತಹ ಸಸ್ಯಗಳಿಗೆ ಹಾಕುವುದರಿಂದ ಒಂದು ಉತ್ತಮವಾದಂತಹ ಗೊಬ್ಬರ ಆಗುತ್ತದೆ. ಅನೇಕ ಕಂಪನಿಗಳು ಈ ಒಂದು ತೆಂಗಿನಕಾಯಿಯನ್ನು ಬಳಸಿಕೊಂಡು ಕೋಕೋ ಪಿಟ್ ಎನ್ನುವಂತಹ ಗೊಬ್ಬರವನ್ನು ತಯಾರುಮಾಡಿ ಮಾರಾಟವನ್ನು ಸಹ ಮಾಡುತ್ತಿದ್ದಾರೆ. ಅನೇಕರು ಇದನ್ನು ಬಳಸಿಕೊಂಡು ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ, ಇದರಿಂದ ಗಿಡಗಳ ಬೆಳವಣಿಗೆ ಆಗಲು ಸಹಾಯ ಮಾಡುತ್ತದೆ ಹಾಗೆಯೆ ಒಂದು ಉತ್ತಮವಾದಂತಹ ಗೊಬ್ಬರವಾಗಿ ಮಾರ್ಪಡುತ್ತದೆ. ಹೀಗೆ ಮಾಡುವುದರಿಂದ ಸಸ್ಯಗಳಿಗೆ ಮಾಯಿಶ್ಚರೈಸರ್ ರೀತಿಯಲ್ಲಿ ಇದು ಮಾಡುತ್ತದೆ.
ನೀವು ಎಲ್ಲಿಗಾದರೂ ಊರಿಗೆ ಹೋದಂತಹ ಸಂದರ್ಭದಲ್ಲಿ ಒಂದು ತೆಂಗಿನಕಾಯಿಯ ನಾರನ್ನು ಗಿಡಗಳ ಬೇರಿನ ಹತ್ತಿರ ಹಾಕಿ ನೀರನ್ನು ಹಾಕಿ ಹೋಗುವುದರಿಂದ ಇದು ಗಿಡವನ್ನು ಒಣಗದಂತೆ ನೋಡಿಕೊಳ್ಳುತ್ತದೆ. ಅಂದರೆ ಗಿಡಕ್ಕೆ ಬೇಕಾಗಿರುವಂತಹ ಮಾಯಿಶ್ಚರೈಸ್ ಅನ್ನು ಇದು ಒದಗಿಸುತ್ತದೆ. ಇಷ್ಟೆಲ್ಲ ಪ್ರಯೋಜನ ಇರುವಂತಹ ನಾವು ತೆಂಗಿನಕಾಯಿಯ ನಾರನ್ನು ನಾವು ಬಿಸಾಡುತ್ತೇವೆ ಆದರೆ ಇನ್ನು ಮುಂದೆ ಈ ರೀತಿಯಾದಂತಹ ತಪ್ಪನ್ನು ಮಾಡದೆ ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವುದು ಒಳ್ಳೆಯದು. ಮಾರ್ಕೆಟ್ ನಲ್ಲಿ ಸಿಗುವಂತಹ ಕೋಕೋಪಿಟ್ ಅನ್ನು ತೆಗೆದುಕೊಳ್ಳುವ ಬದಲು ನಾವೇ ಮನೆಯಲ್ಲಿ ನಾವು ತಿಳಿಸಿರುವ ವಿಧಾನದಿಂದ ಮಾಡಿಕೊಳ್ಳುವುದರಿಂದ ನಮಗೆ ಹಣದ ಉಳಿತಾಯವಾಗುತ್ತದೆ.
ಹಾಗೆಯೇ ನಮ್ಮ ಸಸ್ಯಗಳು ವೇಗವಾಗಿ ಬೆಳೆಯಲು ಹಾಗೆಯೇ ಗಿಡಕ್ಕೆ ಬೇಕಾಗಿರುವಂತಹ ಕೆಲವೊಂದು ಪೋಷಕಾಂಶಗಳನ್ನು ಒದಗಿಸುವುದು ಅಷ್ಟೇ ಅಲ್ಲದೆ ಗಿಡವನ್ನು ವೇಗವಾಗಿ ಬೆಳೆಸಲು ಸಹಾಯ ಮಾಡುತ್ತದೆ. ಕಸದಿಂದ ರಸ ಎನ್ನುವಂತೆ ಯಾವ ವಸ್ತುವು ಸಹ ನಾವು ಬಿಸಾಡಬಾರದು ಅದರಿಂದ ಯಾವುದೋ ಒಂದು ಪ್ರಯೋಜನ ಇದ್ದೇ ಇರುತ್ತದೆ ಆದರೆ ಅದರ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು ಅದನ್ನು ಉಪಯೋಗ ಮಾಡಿಕೊಂಡಾಗ ಅದಕ್ಕೆ ಒಂದು ಬೆಲೆ ಎನ್ನುವಂತಹದ್ದು ಸಿಗುತ್ತದೆ. ಆದ್ದರಿಂದ ಯಾವ ವಸ್ತುವನ್ನಾದರೂ ಸಹ ಬಿಸಾಡುವ ಬದಲು ಅದರ ಉಪಯೋಗವನ್ನು ತಿಳಿದುಕೊಳ್ಳಿ. ಇಷ್ಟು ದಿನಗಳ ಕಾಲ ತೆಂಗಿನಕಾಯಿಯ ನಾರಿನ ಬಗ್ಗೆ ಅಷ್ಟೊಂದು ಅರಿವು ಇರಲಿಲ್ಲ ಇನ್ನುಮುಂದೆ ಆದರೂ ಈ ಒಂದು ತೆಂಗಿನಕಾಯಿಯನ್ನು ಸುಲಿದು ಅದರಿಂದ ಬರುವಂತಹ ಸಾಕಷ್ಟು ನಾರನ್ನು ಒಮ್ಮೆ ಸಂಗ್ರಹಿಸಿಕೊಂಡು ನಂತರ ಅದನ್ನು ಚಿಕ್ಕ ಚಿಕ್ಕದಾಗಿ ಕಟ್ ಮಾಡಿ ಅಥವಾ ಬಿಡಿಸಿಕೊಂಡು ಮಿಕ್ಸಿಯಲ್ಲಿ ಮಿಕ್ಸ್ ಮಾಡಿ ಅದನ್ನು 25 ರಿಂದ 30 ಉತ್ತಮವಾದಂತಹ ಗೊಬ್ಬರವಾಗಿ ಮಾಡಿಕೊಂಡರೆ ಅದರ ಸದ್ಬಳಕೆ ನಿಮಗೆ ಸಿಗುತ್ತದೆ.
ಅನೇಕ ಕೃಷಿಕರು ತಾವು ಬೆಳೆದಿರುವಂತಹ ಅನೇಕ ಗಿಡಗಳಿಗೆ ಹೊರಗಡೆಯಿಂದ ಮಾರ್ಕೆಟ್ ನಲ್ಲಿ ಸಿಗುವ ಗೊಬ್ಬರಗಳನ್ನು ತಂದು ಉಪಯೋಗಿಸುತ್ತಾರೆ ಆದರೆ ಅದು ರಾಸಾಯನಿಕಗಳಿಂದ ಕೂಡಿರುತ್ತದೆ ನಾವು ಮನೆಯಲ್ಲಿಯೇ ಉತ್ತಮವಾದಂತಹ ನೈಸರ್ಗಿಕ ಗೊಬ್ಬರವನ್ನು ತಯಾರಿ ಮಾಡಿಕೊಳ್ಳಬೇಕು ಅದು ಈ ರೀತಿಯಲ್ಲಿ. ರಾಸಾಯನಿಕಗಳಿಂದ ಬೆಳೆಯನ್ನು ಬೆಳೆದಂತಹ ಆಹಾರ ಪದಾರ್ಥಗಳು ಯಾವುದೇ ಆದರೂ ಸಹ ಅದು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಆದ್ದರಿಂದ ನಾವು ಆದಷ್ಟು ಈ ರಾಸಾಯನಿಕಗಳ ಬಳಕೆಯನ್ನು ಕಡಿಮೆಮಾಡಿ ಮನೆಯಲ್ಲಿ ಸಿಗುವಂತಹ ಕೆಲವೊಂದು ನೈಸರ್ಗಿಕ ವಸ್ತುಗಳನ್ನು ನಮ್ಮ ಕೃಷಿಯಲ್ಲಿ ಬಳಕೆ ಮಾಡಿಕೊಂಡು ಅಧಿಕ ಬೆಳೆಯನ್ನು ಬೆಳೆಯಬಹುದು. ಹಾಗೆಯೇ ಯಾವುದೇ ರೀತಿಯಾದಂತಹ ಕೆಮಿಕಲ್ ಇದರಲ್ಲಿ ಇರುವುದಿಲ್ಲ ಆದ್ದರಿಂದ ಪ್ರತಿಯೊಬ್ಬ ಕೃಷಿಕರು ಸಹ ನಾವು ನೈಸರ್ಗಿಕ ಆದಂತಹ ಒಂದು ರಾಸಾಯನಿಕ ಇಲ್ಲದ ಗೊಬ್ಬರಗಳನ್ನು ಬಳಕೆ ಮಾಡುವುದು ತುಂಬಾ ಒಳ್ಳೆಯದು.