ನಮ್ಮ ದೇಹದಲ್ಲಿ ಇರುವಂತಹ ಮೂಳೆಗಳು ಗಟ್ಟಿ ಇದ್ದರೆ ನಾವು ಯಾವುದೇ ರೀತಿಯಾದಂತಹ ಕೆಲಸಗಳನ್ನು ಮಾಡಬಹುದು. ಮನೆ ಕೆಲಸ ಯೋಗಾಸನ ಮಾಡುವುದು ವ್ಯಾಯಾಮ ಮಾಡುವುದು ಓಡುವುದು ಇನ್ನಿತರ ಯಾವುದೇ ಕೆಲಸವನ್ನು ಮಾಡಬೇಕಾದರೂ ನಮ್ಮ ದೇಹದಲ್ಲಿನ ಮೂಳೆಗಳು ಗಟ್ಟಿಯಾಗಿ ಇರಬೇಕು. ನಮ್ಮ ಮೂಳೆಯನ್ನು ಗಟ್ಟಿಯಾಗಿಸುವಂತಹ ಹಲವಾರು ಪದಾರ್ಥಗಳಲ್ಲಿ ಹುಣಸೆ ಬೀಜವು ಬಹು ಮುಖ್ಯವಾದ ಅಂತಹ ಪಾತ್ರವನ್ನು ವಹಿಸುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಹುಣಸೆ ಹಣ್ಣನ್ನು ಬಳಕೆ ಮಾಡಿಕೊಂಡು ಅದರ ಬೀಜವನ್ನು ಎಸೆಯುತ್ತೇವೆ. ಆದರೆ ಈ ಒಂದು ಹುಣಸೆ ಬೀಜವಯ ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಹುಣಸೆ ಬೀಜದ ಪೌಡರ್ ಗಳನ್ನು ಮಾಡುವಂತಹ ಸಾಕಷ್ಟು ರೀತಿಯಾದಂತಹ ಕಂಪನಿಗಳು ಸಹ ಮಾರ್ಪಾಡಾಗಿದೆ.
ಹಿಂದಿನ ಕಾಲದಲ್ಲಿ ಹುಣಸೆ ಬೀಜವನ್ನು ಚೆನ್ನಾಗಿ ಹುರಿದು ತಿನ್ನುತ್ತಾ ಇದ್ದರು ಹಾಗೆಯೇ ದೋಸೆಗಳಿಗೆ, ಇಡ್ಲಿಗಳಿಗೆ, ಚಟ್ನಿಗಳಿಗೆ ಹಾಗೆಯೇ ಇದರಿಂದ ಪಲ್ಲೆಗಳನ್ನು ತಯಾರು ಮಾಡಿ ಸೇವನೆ ಮಾಡುತ್ತಿದ್ದರು ಇದರಿಂದ ಸಾಕಷ್ಟು ರೀತಿಯಾದಂತಹ ಆರೋಗ್ಯ ಲಾಭಗಳು ಸಹ ನಮಗೆ ಪಡೆದಿರಬಹುದು. ಹುಣಸೆ ಬೀಜ ನಮ್ಮ ಮೂಳೆಗಳನ್ನು ವಜ್ರದ ಹಾಗೆ ಗಟ್ಟಿಯಾಗಿ ಮಾಡುತ್ತದೆ ನಮ್ಮ ಕೈಕಾಲು ನೋವು, ಕೀಲು ನೋವು, ಸೊಂಟ ನೋವು ಇದೆಲ್ಲವನ್ನು ಸಹ ನಿವಾರಣೆ ಮಾಡುತ್ತದೆ ಅಷ್ಟೇ ಅಲ್ಲದೆ ನಮ್ಮ ಮೂಳೆಗಳ ಮಧ್ಯೆ ಇರುವಂತಹ ಕಾರ್ಟಿಲೆಜ್ ಉತ್ಪತ್ತಿ ಮಾಡುವಂತಹ ಪೋಷಕಾಂಶಗಳನ್ನು ಹುಣಸೆ ಬೀಜವು ಒಳಗೊಂಡಿದೆ. ಕೆಲವೊಂದು ಸಂಶೋಧನೆಗಳ ಪ್ರಕಾರ ಹುಣಸೆ ಬೀಜವನ್ನು ಸೇವನೆ ಮಾಡುವುದರಿಂದ ನಮ್ಮ ಮೂಳೆ ಸವೆಯುವುದನ್ನು ತಡೆಗಟ್ಟುತ್ತದೆ ಇದರಲ್ಲಿ ಇರುವಂತಹ ಪೋಷಕಾಂಶಗಳು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ಆದ್ದರಿಂದ ಹುಣಸೆ ಬೀಜದಿಂದ ತಯಾರಿಸಿದಂತಹ ಪುಡಿಯನ್ನು ನೀವು ದಿನಾಲು ಒಂದು ತಿಂಗಳು ಸೇವಿಸುತ್ತಾ ಬಂದರೆ ನಿಮ್ಮ ಮೂಳೆಗಳು ಸವೆಯುವುದಿಲ್ಲ ಹಾಗೆ ನಿಮ್ಮ ಮೂಳೆಗಳು ಶಕ್ತಿಯುತವಾಗುತ್ತದೆ.
ನೀವು ವಯಸ್ಸಾದಂತೆ ಮೂಳೆಗಳ ಸಮಸ್ಯೆಯನ್ನು ಎದುರಿಸುತ್ತೀರಾ ಅಂತಹವರಿಗೆ ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಅಂತಹ ತೊಂದರೆಗಳನ್ನು ನೀವು ನಿವಾರಣೆ ಮಾಡಿಕೊಳ್ಳಬಹುದು. ಮನೆಯಲ್ಲಿಯೇ ಫ್ರೆಶ್ ಆದಂತಹ ಹುಣಸೆ ಬೀಜದ ಪೌಡರನ್ನು ತಯಾರು ಮಾಡಿಕೊಳ್ಳಬೇಕಾದರೆ ಹುಣಸೆ ಬೀಜವನ್ನು ಚೆನ್ನಾಗಿ ಉರಿದು ಸಿಪ್ಪೆ ತೆಗೆದು ಅದನ್ನು ಪೌಡರ್ ಮಾಡಿಕೊಂಡು ಉಪಯೋಗಿಸಬಹುದು ಇಲ್ಲವಾದರೆ ಹುಣಸೆ ಬೀಜವನ್ನು ಒಂದರಿಂದ ಎರಡು ದಿನಗಳ ಕಾಲ ನೀರಿನಲ್ಲಿ ನೆಲೆಸಿ ಅದರ ಸಿಪ್ಪೆಯನ್ನು ತೆಗೆದು ಅದನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಅದನ್ನು ಪೌಡರ್ ಮಾಡಿಕೊಂಡು ಉಪಯೋಗ ಮಾಡಬಹುದು.
ಒಂದು ಗ್ಲಾಸ್ ನಷ್ಟು ನೀರಿಗೆ ಒಂದು ಟೇಬಲ್ ಸ್ಪೂನ್ ನಷ್ಟು ಹುಣಸೆ ಬೀಜದ ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ನೀವು ದಿನದಲ್ಲಿ ಒಮ್ಮೆ ತೆಗೆದುಕೊಳ್ಳಬೇಕು ನೀವು ಯಾವ ಸಮಯದಲ್ಲಾದರೂ ಸಹಿತ ಇದನ್ನು ತೆಗೆದುಕೊಳ್ಳಬಹುದು. ನೀವು ಹಾಲಿನಲ್ಲಿಯೂ ಸಹ ಸೇರಿಸಿ ಇದನ್ನು ಸೇವನೆ ಮಾಡಬಹುದು ಇದಕ್ಕೆ ನೀವು ಕಲ್ಲುಸಕ್ಕರೆ ಅಥವಾ ಜೇನುತುಪ್ಪವನ್ನು ಸಹ ಮಿಕ್ಸ್ ಮಾಡಿ ಸೇವನೆ ಮಾಡಬಹುದು. ನಿಮಗೆ ಸೊಂಟ ನೋವು ಮಂಡಿ ನೋವು ಕೀಲು ನೋವು ಇದ್ದರೆ ಇದು ಅತಿ ವೇಗವಾಗಿ ಕಡಿಮೆ ಮಾಡುತ್ತಿದೆ ಇಷ್ಟೆಲ್ಲಾ ಅದ್ಭುತವಾದಂತಹ ಗುಣಗಳನ್ನು ಈ ಒಂದು ಹುಣಸೆ ಬೀಜ ಒಳಗೊಂಡಿದೆ. ಡಯಾಬಿಟಿಸ್ ಇರುವಂತಹವರಿಗೆ ಹುಣಸೆ ಬೀಜದ ಪೌಡರ್ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ.