ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಋತುವಿನಲ್ಲೂ ಕೂಡ ಶೀತ ನೆಗಡಿ, ಕೆಮ್ಮು ಸಾಮಾನ್ಯವಾಗಿದೆ. ಇನ್ನು ಮಳೆಗಾಲ ಶೀತಕಾಲಗಳಂತೂ ಅಧಿಕವಾದ ಈ ಕಾಯಿಲೆಗಳು ನೆಮ್ಮದಿಯಾಗಿ ನಿದ್ರೆ ಮಾಡಲು ಬಿಡುವುದಿಲ್ಲ ಅಂತಹ ಸಮಸ್ಯೆಗೆ ಇಂದು ನಾವು ಹೇಳುವ ವಿಶೇಷವಾದ ರೆಸಿಪಿ ಆರೋಗ್ಯಕರವಾಗಿರುತ್ತದೆ ಹಾಗೂ ಆರಾಮದಾಯಕವಾಗಿರಲು ಸಹಾಯ ಮಾಡುತ್ತದೆ. ಈ ರೆಸಿಪಿಯನ್ನು ನಮ್ಮ ಹಿಂದಿನ ಕಾಲದವರು ಮಾಡಿ ಕುಡಿಯುತ್ತಿದ್ದರು ಜೊತೆಗೆ ಈ ಕಷಾಯದಿಂದ ಅಥವಾ ಕಾಫಿಯಿಂದ ನಮ್ಮ ಕಾಯಿಲೆಗಳು ಓಡಿ ಹೋಗುತ್ತದೆ.
ಇದನ್ನು ಒಂದು ಕಪ್ ಕುಡಿದರೆ ಸಾಕು ನಮ್ಮ ಮೈಂಡ್ ಫ್ರೆಶ್ ಆಗುತ್ತೆ ಉತ್ಸಾಹವನ್ನು ಹೆಚ್ಚಿಸುತ್ತದೆ. ನೆಗಡಿ ಶೀತ ಕೆಮ್ಮು ಚಳಿ ಜ್ವರ ಇವೆಲ್ಲವನ್ನು ದೂರಮಾಡುತ್ತದೆ. ಇದರೊಂದಿಗೆ ಅಜೀರ್ಣತೆ ಗ್ಯಾಸ್ಟಿಕ್ ಮಲಬದ್ಧತೆ ಇಂತಹ ಸಮಸ್ಯೆಗಳಿಗೂ ಕೂಡ ಇದು ಪರಿಹಾರವಾಗಲಿದೆ. ಇದನ್ನು ಒಂದು ಕಪ್ ಕುಡಿದು ನೋಡಿ ನಿಮಗೆ ನಿಮ್ಮ ಲಾಗುವ ಬದಲಾವಣೆ ಕಾಣುತ್ತದೆ, ಹೆಚ್ಚು ಉತ್ಸೂಕಾರಾಗುತ್ತಿರ ಹಾಗೂ ಮೈಂಡ್ ಫ್ರೆಶ್ ಆಗುತ್ತದೆ. ಹಾಗಾದರೆ ಸುಕ್ಕ ಮಲ್ಲಿ ಕಾಫಿಯನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.
ಮೊದಲಿಗೆ ಒಂದು ಕಪ್ ಧನಿಯಾ ಬೀಜಗಳನ್ನು ಅಥವಾ ಕೊತ್ತಂಬರಿ ಬೀಜಗಳನ್ನು ತೆಗೆದುಕೊಳ್ಳಬೇಕು, ಒಂದು ಟೇಬಲ್ ಸ್ಪೂನ್ ನಷ್ಟು ಕಾಳುಮೆಣಸು, 12 ರಿಂದ 13 ಏಲಕ್ಕಿ ಬೀಜಗಳು ಹಾಗೂ 50 ಗ್ರಾಂ ನಷ್ಟು ಒಣಶುಂಠಿ ಇದರ ಜೊತೆಗೆ ರುಚಿಗೆ ಹಾಗೂ ಆರೋಗ್ಯಕ್ಕೆ ಆರ್ಗಾನಿಕ್ ಬೆಲ್ಲದ ಪುಡಿ. ಇನ್ನು ಇವೆಲ್ಲವೂ ಪದಾರ್ಥಗಳಾದರೆ ಇದನ್ನು ಹೇಗೆ ತಯಾರಿಸಬೇಕು ಎಂದು ನೋಡೋಣ.
ಮೊದಲಿಗೆ ಇವೆಲ್ಲವನ್ನು ಹುರಿದುಕೊಳ್ಳಬೇಕು ಹುರಿದುಕೊಂಡ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ಇನ್ನು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಮಿಶ್ರಣ ಮಾಡಿರುವ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಚೆನ್ನಾಗಿ ಕುದ್ದಿ ಸತ್ವವನ್ನು ಬಿಟ್ಟ ನಂತರ ಅದಕ್ಕೆ ಬೆಲ್ಲದ ಪುಡಿಯನ್ನು ಹಾಕಿಕೊಳ್ಳಬೇಕು ಒಂದು ವೇಳೆ ನೀವೇನಾದರೂ ಡಯಾಬಿಟಿಕ್ ಪೇಷಂಟ್ ಆಗಿದ್ದರೆ ಬೆಲ್ಲವನ್ನು ಸ್ಕಿಪ್ ಮಾಡಬಹುದು.
ಇದರ ಜೊತೆಗೆ ಸ್ವಲ್ಪ ಹಾಲನ್ನು ಬೆರೆಸಿ ದಿನನಿತ್ಯ ಕುಡಿದರೆ ಶೀತ ನೆಗಡಿ ಅಂತಹ ಚಿಕ್ಕ ಖಾಯಿಲೆಗಳು ಇಂದ ದೊಡ್ಡ ಕಾಯಿಲೆವರೆಗೂ ಹೋಗುವುದನ್ನು ತಪ್ಪಿಸಿ ಪರಿಹಾರವಾಗುತ್ತದೆ. ಇನ್ನು ಇದರಲ್ಲಿ ಇರುವಂತಹ ಕೊತ್ತಂಬರಿ ಬೀಜಾ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಏಕೆಂದರೆ ಇದು ಸ್ವತಂತ್ರ ರಾಡಿಕಲ್ ಹಾನಿಯ ವಿರುದ್ಧ ಹೋರಾಡುತ್ತದೆ.
ನೀವು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೆ, ನಿಮ್ಮ ದೇಹವು ಸೋಂಕುಗಳು ಮತ್ತು ರೋಗಗಳ ವಿರುದ್ಧ ಸುಲಭವಾಗಿ ಹೋರಾಡುತ್ತದೆ, ಅದು ನಿಮ್ಮನ್ನು ಅನಾರೋಗ್ಯಕ್ಕೆ ಒಳಪಡಿಸುತ್ತದೆ.
ಶುಂಠಿಯು ಔಷಧೀಯ ಗುಣಗಳನ್ನು ಹೊಂದಿದ್ದು ಅದು ಶೀತ ಅಥವಾ ನೋಯುತ್ತಿರುವ ಗಂಟಲಿನ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ತೋರಿಸುತ್ತದೆ.
ಕೆಮ್ಮು ಮತ್ತು ಶೀತದಂತಹ ಸಮಸ್ಯೆ ಬಾಧಿಸಿದಾಗಲೂ ಕರಿಮೆಣಸು ಸಹಾಯಕ್ಕೆ ಬರುತ್ತದೆ. ಕರಿಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸುವುದರಿಂದ ಶೀತ, ಕೆಮ್ಮಿನಿಂದ ಪರಿಹಾರ ಸಿಗುತ್ತದೆ. ಅಧ್ಯಯನದ ಪ್ರಕಾರ, ಕರಿಮೆಣಸು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಪೈಪರೀನ್ ಎಂಬ ರಾಸಾಯನಿಕವಿದೆ. ಬಾಯಿ ಹುಣ್ಣು, ಜೀರ್ಣಕ್ರಿಯೆ ಸಮಸ್ಯೆ, ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಏಲಕ್ಕಿ ಸಿದ್ಧಹಸ್ತವಾಗಿದೆ.
ನಿಮ್ಮ ದೈನಂದಿನ ಆಹಾರದಲ್ಲಿ ಇದರ ಬಳಕೆಯನ್ನು ಕೇವಲ ಪರಿಮಳಕ್ಕಾಗಿ ಮಾತ್ರವಲ್ಲ ದೈಹಿಕ ಸ್ವಾಸ್ಥ್ಯಕ್ಕೂ ಏಲಕ್ಕಿ ಪರಿಣಾಮಕಾರಿಯಾಗಿದೆ. ಇನ್ನು ಇದರೊಂದಿಗೆ ಬೆಲ್ಲ ಅಧಿಕ ಕಬ್ಬಿಣದ ಅಂಶವನ್ನು ಹೊಂದಿದೆ ಹಾಗಾಗಿ ಇವೆಲ್ಲರ ಮಿಶ್ರಣವು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕೆಮ್ಮು ಶೀತಗಳಂತಹ ಕಾಯಿಲೆಗಳನ್ನು ದೂರವಿಡುತ್ತದೆ.