ನಿಮ್ಮಲ್ಲೂ ಇಂತಹ ಲಕ್ಷಣಗಳು ಇದೆಯಾ ? ಹಾಗಾದರೆ ಇದು ಬ್ರೆಸ್ಟ್ ಕ್ಯಾನ್ಸರ್ ಅಂತನೇ ಅರ್ಥ.

ಸಾಮಾನ್ಯವಾಗಿ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸುತ್ತದೆ ಅದರಲ್ಲಿಯೂ ಕೂಡ 30 ವರ್ಷದಿಂದ ಮೇಲ್ಪಟ್ಟವರಿಗೆ ಹಾಗೂ 40 ವರ್ಷದ ಒಳಗಿರುವ ಅಂತಹ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹತ್ತು ಜನರಲ್ಲಿ ಸುಮಾರು ಆರು ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಬ್ರಸ್ಟ್ ಕ್ಯಾನ್ಸರ್‌ ಬರುವುದಕ್ಕೆ ನಾನಾ ರೀತಿಯಾದಂತಹ ಕಾರಣಗಳು ಇರುತ್ತದೆ ಆದರೆ ನಾವು ಕಾರಣ ತಿಳಿದುಕೊಳ್ಳುವುದಕ್ಕಿಂತ ಮುಂಚೆ ಕ್ಯಾನ್ಸರ್‌ ನಾ ಲಕ್ಷಣಗಳನ್ನು ತಿಳಿದುಕೊಂಡರೆ ಬಹುದೊಡ್ಡ ತೊಂದರೆ ಹೊರ ಬರಬಹುದು ಅಂತನೇ ಹೇಳಬಹುದು. ಹೌದು ನಾವು ಯಾವುದೇ ಕಾಯಿಲೆಯಾದರೂ ಸರಿ ಔಷಧಿಯನ್ನು ನೀಡುವುದಕ್ಕಿಂತ ಮುಂಚೆ ಮೊದಲು ಅದರ ಲಕ್ಷಣಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಅವುಗಳ ಲಕ್ಷಣವನ್ನು ತಿಳಿದುಕೊಂಡರೆ ಮಾತ್ರ ಸೂಕ್ತ ಔಷಧಿಯನ್ನು ಒದಗಿಸಲಾಗುತ್ತದೆ ಅದೇ ರೀತಿಯಾಗಿ ಕ್ಯಾನ್ಸರ್ ಬರುವುದಕ್ಕಿಂತ ಮುಂಚೆ ಒಂದು ಲಕ್ಷಣಗಳು ನಮ್ಮ ದೇಹದಲ್ಲಿ ಕಂಡು ಬರುತ್ತದೆ.
ಈ ಲಕ್ಷಣಗಳನ್ನು ಗುರುತಿಸಿಕೊಂಡರೆ ನಾವು ಮೊದಲ ಹಂತದಲ್ಲಿಯೇ ಈ ಕ್ಯಾನ್ಸರ್‌ ಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ ಒಂದು ವೇಳೆ ಇದನ್ನು ಹಾಗೆ ಬಿಟ್ಟರೆ ಇದರ ಹಂತ ಹೆಚ್ಚಾಗುತ್ತಾ ಹೋಗುತ್ತದೆ. ಹಾಗೂ ಯಾವುದೇ ರೀತಿಯಾದಂತಹ ಟ್ರೀಟ್ಮೆಂಟ್ ತೆಗೆದುಕೊಂಡರೂ ಕೂಡ ಅದಕ್ಕೆ ಫಲಿತಾಂಶ ಎಂಬುವುದು ದೊರೆಯುವುದಿಲ್ಲ. ಹಾಗಾಗಿ ಬ್ರೆಸ್ಟ್ ಕ್ಯಾನ್ಸರ್ ಇರುವಂತಹ ವ್ಯಕ್ತಿಗಳಿಗೆ ಕಂಡುಬರುವಂತಹ ಲಕ್ಷಣಗಳು ಯಾವುದು ಹಾಗೂ ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ಬ್ರೆಸ್ಟ್ ಕ್ಯಾನ್ಸರ್ ಅನುವಂಶಿಯವಾಗಿ ಬರುತ್ತದೆ ಅಂತಾನೇ ಹೇಳಬಹುದು ನಿಮ್ಮ ಕುಟುಂಬದಲ್ಲಿ ನಿಮ್ಮ ತಾಯಿ ಅಥವಾ ಇತರ ಯಾವುದೇ ಸಂಬಂಧಿಕರಾಗಿದ್ದರು ಅವರಿಗೆ ಇತ್ತು ಅಂದರೆ ಅದು ನಿಮಗೂ ಕೂಡ ಬರುವಂತಹ ಚಾನ್ಸಸ್ ಹೆಚ್ಚಾಗಿರುತ್ತದೆ.
ಕೆಲವೊಮ್ಮೆ ನಾವು ಸೇವನೆ ಮಾಡುವಂತಹ ಆಹಾರದಿಂದಲೂ ಕೂಡ ಬ್ರೆಸ್ಟ್ ಕ್ಯಾನ್ಸರ್ ಬರುತ್ತದೆ ಅಷ್ಟೇ ಅಲ್ಲದೆ ನಾವು ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡದೆ ಇದ್ದರೂ ಕೂಡ ಈ ರೀತಿ ಆಗುವಂತಹ ಸಾಧ್ಯತೆಗಳು ಹೆಚ್ಚಾಗಿರುತ್ತದೆ‌. ಬ್ರೆಸ್ಟ್ ಕ್ಯಾನ್ಸರ್ ನಮಗೆ ಬಂದಿದೆ ಎಂಬುದನ್ನು ತಿಳಿಯಬೇಕಾದರೆ ಇದಕ್ಕೆ ನಮ್ಮ ದೇಹದಲ್ಲಿ ಕೆಲವೊಂದಷ್ಟು ಲಕ್ಷಣಗಳು ಬರುತ್ತದೆ. ಅದೇನೆಂದರೆ ನಿಮ್ಮ ಬ್ರೆಸ್ಟ್ ನಲ್ಲಿ ಚಿಕ್ಕ ಚಿಕ್ಕ ಗಂಟುಗಳು ಗಂಟುಗಳು ಸಾಫ್ಟ್ ಆಗಿ ಇರುತ್ತದೆ ಇದನ್ನು ಮುಟ್ಟಿದಾಗ ನೋವಾಗುವುದಿಲ್ಲ ಇದು ಮೊದಲನೆ ಲಕ್ಷಣ. ಬೇರೆ ಲಕ್ಷಣಗಳನ್ನು ನೋಡುವುದಾದರೆ ಎದೆ ನೋವು ಬರುವುದು, ಕಂಕಳಿನ ಕೆಳಗೆ ಗಂಟು ಇರುವುದು ಅಥವಾ ಮಕ್ಕಳಿಗೆ ಹಾಲುಣಿಸಿದೆ ಇದ್ದರೂ ಕೂಡ ಎದೆಯಲ್ಲಿ ದ್ರ ವರೂಪದಲ್ಲಿ ನೀರು ಸ್ರಾವವಾಗುವುದು. ಆದರೆ ಎದೆಯಲ್ಲಿ ಕಂಡುಬರುವಂತಹ ಎಲ್ಲಾ ಗೆಡ್ಡೆಗಳು ಕೂಡ ಕ್ಯಾನ್ಸರ್ ಗೆಡ್ಡೆಗಳು ಅಲ್ಲ.
ಕೆಲವೊಂದಷ್ಟು ನೈಸರ್ಗಿಕವಾಗಿಯೂ ಕೂಡ ಬಂದಿರುತ್ತದೆ ಹಾಗಾಗಿ ನಿಮಗೆ ಏನಾದರೂ ಎದೆಯಲ್ಲಿ ಗೆಡ್ಡೆಗಳು ಕಂಡುಬಂದರೆ ಅದನ್ನು ನಿರ್ಲಕ್ಷ್ಯ ಮಾಡದೆ ವೈದ್ಯರ ಬಳಿ ಹೋಗಿ ತೋರಿಸುವುದು ಉತ್ತಮ. ಏಕೆಂದರೆ ಎಷ್ಟು ಬೇಗ ರೋಗವನ್ನು ಕಂಡು ಹಿಡಿಯುತ್ತೇವೆ ಅಷ್ಟು ಬೇಗ ನಮಗೆ ಚಿಕಿತ್ಸೆ ಎಂಬುದು ದೊರೆಯುತ್ತದೆ. ಈ ಒಂದು ಕಾರಣಕ್ಕಾಗಿಯೇ ನಮ್ಮ ದೇಹದಲ್ಲಿ ಏನೇ ಬದಲಾವಣೆಯಾದರೂ ಕೂಡ ಅದನ್ನು ನಿರ್ಲಕ್ಷ್ಯ ಮಾಡದೆ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. 20 ವರ್ಷ ಮೇಲ್ಪಟ್ಟಂತಹ ಯುವತಿಯರು ಆಗಾಗ ತಮ್ಮ ಸ್ತನಗಳನ್ನು ಗಮನಿಸಬೇಕು ಅದರಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ 20 ವರ್ಷದ ಮೇಲ್ಪಟ್ಟವರು ಹಾಗೂ 40 ವರ್ಷದ ಒಳಗೆ ಇರುವಂತಹ ಮಹಿಳೆಯರು ಪ್ರತಿ ಮೂರು ತಿಂಗಳಿಗೆ ಒಮ್ಮೆ ವೈದ್ಯರನ್ನು ಭೇಟಿಯಾಗಿ ಸ್ತನಗಳನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕು.
ಡಿಜಿಟಲ್ ಮೋಮೋಗ್ರಫ್ ಎಂಬ ಪರೀಕ್ಷೆಯನ್ನು ಮಾಡಿಸಿಕೊಂಡರೆ ತುಂಬಾನೆ ಒಳ್ಳೆಯದು ಈ ಪರೀಕ್ಷೆ ಮಾಡಿಸಿಕೊಂಡರೆ ನಿಮಗೆ ಬ್ರೆಸ್ಟ್ ಕ್ಯಾನ್ಸರ್ ಇದೆಯಾ ಅಥವಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇನ್ನು ನಮ್ಮ ದೇಹದಲ್ಲಿ ಯಾವುದೇ ರೀತಿಯಾದಂತಹ ಲಕ್ಷಣಗಳು ಕಂಡು ಬಂದರೂ ಸ್ವಲ್ಪ ಕೂಡ ನಾಚಿಕೆ ಪಟ್ಟುಕೊಳ್ಳಬೇಕು ಅದನ್ನು ವೈದ್ಯರ ಬಳಿ ಮುಕ್ತವಾಗಿ ಮಾತನಾಡುವುದು ಉತ್ತಮ ಏಕೆಂದರೆ ನಾವು ಇಂತಹ ಲಕ್ಷಣಗಳನ್ನು ಮರೆಮಾಚಿದರು ನಮ್ಮ ಆರೋಗ್ಯದ ಅದಗೆಡುವಂತಹ ಸಂಭವ ಹೆಚ್ಚಾಗಿರುತ್ತದೆ. ಈ ಒಂದು ಕಾರಣಕ್ಕಾಗಿಯೇ ನಾವು ನಿಮಗೆ ಒತ್ತಿ ಒತ್ತಿ ಹೇಳುತ್ತಿದ್ದೇವೆ ಯಾವುದನ್ನು ಕೂಡ ನಿರ್ಲಕ್ಷ್ಯ ಮಾಡಬೇಡಿ ಎಲ್ಲದಕ್ಕೂ ಕೂಡ ಒಂದಲ್ಲ ಒಂದು ಪರಿಹಾರ ಎಂಬುದು ಇದ್ದೇ ಇರುತ್ತದೆ. ಆದರೆ ಆ ಪರಿಹಾರ ಮಾರ್ಗವನ್ನು ಕಂಡುಕೊಳ್ಳುವುದು ಇಲ್ಲದಿದ್ದರೆ ನಮ್ಮ ಜೀವಕ್ಕೆ ಆ’ಪತ್ತು ಸನ್ನಿವೇಶಗಳು ಒದಗಿ ಬರುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now