ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕವಾಗಿ ಖರ್ಚುಗಳು ಹೆಚ್ಚುತ್ತಿವೆ. ಸಧ್ಯ ಇದರಿಂದ ಮಧ್ಯಮ ವರ್ಗದವರು ಹಾಗೂ ಕೆಲ ಕೆಳ ವರ್ಗದವರು ಹೆಚ್ಚು ಬಾದೆ ಪಡುತ್ತಿದ್ದಾರೆ. ಹೌದು ದಿನದಿಂದ ದಿನಕ್ಕೆ ಮಾತ್ರ ದುಡಿಯುತ್ತಾ ದಿನದ ವೆಚ್ಚವನ್ನು ಪೂರ್ತಿ ಮಾಡಿಕೊಂಡು ಹೋಗುತ್ತಿರುವ ನಮ್ಮ ಸಾಮಾನ್ಯ ವರ್ಗದವರು ಹಾಗೂ ಬಡವರು ಅವರಿಗೆ ದಿನದಲ್ಲಿ ಎಷ್ಟು ಆಗುತ್ತೋ ಅಷ್ಟು ಉಳಿಸಿದರೆ ಕೂಡ ಎಷ್ಟೋ ಹಣವನ್ನು ಕೂಡಿ ಇಟ್ಟಂತೆ, ಅದೇ ರೀತಿ ಸರ್ಕಾರಕ್ಕೂ ಕೂಡ ಮೂಲ ಆದಯವಾಗಿರುವ ವಿದ್ಯುತ್ ಕಂಪನಿಗಳಿಂದ ಹೆಚ್ಚು ಆದಾಯವಿದೆ.
ಹಾಗಾಗಿ ಸರ್ಕಾರವು ಕೂಡ ಆಗಾಗ ವಿದ್ಯುತ್ ಬಿಲ್ನ ಖರ್ಚನ್ನೂ ಹೆಚ್ಚು ಮಾಡುತ್ತಾ ಇರುತ್ತಾರೆ. ಹೌದು ಸ್ನೇಹಿತರೆ ಇಂದಿನ ಪುಟದಲ್ಲಿ ವಿಶೇಷವಾದ ವಿಷಯ ಒಂದನ್ನು ತಂದಿದ್ದೇವೆ. ನಾವು ಸಾಮಾನ್ಯರಿಗೆ ವಿದ್ಯುತ್ ಅನ್ನು ಉಳಿಸುವುದು ಅಷ್ಟಾಗಿ ತಿಳಿದಿಲ್ಲ. ನಾವು ಅಂದುಕೊಂಡಿರುವುದಾಕಿಂತ ಹೆಚ್ಚಾಗಿ ವಿದ್ಯುತ್ ಬಿಲ್ ಬಂದರೆ ಮಾನಸಿಕ ಹಾಗೂ ಜೇಬಿಗೂ ಎರಡಕ್ಕು ಬೇಜಾರು. ಹಾಗಾದರೆ ಬನ್ನಿ ಸ್ನೇಹಿತರೆ ವಿದ್ಯುತ್ತನ್ನು ಉಳಿತಾಯ ಮಾಡುವುದು ಹೇಗೆ ಎಂದು ಇಂದು ನೋಡೋಣ.
ಇಂದು ನಾವು ಹೇಳುವ ಕೆಲವು ಟಿಪ್ಸ್ ಅನ್ನು ಅನುಸರಿಸಿದರೇ ಅರ್ಧದಷ್ಟು ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ. ಮೊದಲನೆಯದಾಗಿ ನಮ್ಮ ಮನೆಯಲ್ಲಿ ಸಾಮಾನ್ಯ ಬಲ್ಬ್ ಅನ್ನು ಬಳಸುತ್ತಿದ್ದರೆ ಅದನ್ನು ಬದಲಿಸಿ, ಎಲ್ಇಡಿ ಬಲ್ಬ್ ಬಳಸಬೇಕು. ತಂತಿ ಇರುವಂತಹ ಬಲ್ಬ್ಗಳು ಪ್ರತಿ ದಿವಸ 10 ಗಂಟೆಗೆ ಒಂದು ಯೂನಿಟ್ ಎಷ್ಟು ಕರೆಂಟನ್ನು ಬಳಸಿಕೊಳ್ಳುತ್ತದೆ. ಇದರ ಜೊತೆಗೆ ಈ ಸಿ ಎಫ್ ಎಲ್ ಬಲ್ಬಗಳು 66 ಗಂಟೆಗಳಿಗೆ ಒಂದು ವೊಲ್ಟನ್ನು ಬಳಸುತ್ತದೆ ಹಾಗಾಗಿ ಇದರಿಂದ ವಿದ್ಯುತ್ತನ್ನು ಉಳಿಸಿ ಹಾಗೂ ಬೆಳಕನ್ನು ಹೆಚ್ಚಿಸಬಹುದು.
ಇದರ ಜೊತೆಗೆ ಎಲ್ ಈ ಡಿ ಬಲ್ಬ್ಗಳನ್ನು ಬಳಸಿದರೆ 109 ಗಂಟೆಗಳ ನಂತರ ಒಂದು ಯೂನಿಟ್ ಕರೆಂಟನ್ನು ಬಳಸುತ್ತದೆ. ಇನ್ನು ಯಾವುದೇ ತರಹದ ವಿದ್ಯುತ್ ಬಳಸುವ ಯಂತ್ರಗಳನ್ನು ಉಪಯೋಗಿಸಿದ ನಂತರ ಸ್ವಿಚ್ ಗಳನ್ನು ಆಫ್ ಮಾಡಬೇಕು ಒಂದು ವೇಳೆ ನೀವು ಸ್ವಿಚ್ ಆಫ್ ಮಾಡಿದರು ಪ್ಲಗ್ಗಳನ್ನು ತೆಗೆಯದೆ ಇರುವ ಕಾರಣ ಕೆಲವೊಮ್ಮೆ ಕಡಿಮೆ ಕರೆಂಟ್ ಹರಿಯುವುದರಿಂದ ಕರೆಂಟ್ ಬಿಲ್ಲು ಹೆಚ್ಚಾಗಿರುತ್ತದೆ.
ಹಾಗಾಗಿ ಸ್ವಿಚ್ ಆಫ್ ಮಾಡುವುದರಿಂದ ಕೂಡ ನಾವು ಹೆಚ್ಚಾಗಿ ವಿದ್ಯುತ್ತನ್ನು ಉಳಿಸಬಹುದು ಇನ್ನು ನಿಮ್ಮ ಮನೆಗಳಲ್ಲಿ ಏ ಸಿಯನ್ನು ಬಳಸುತ್ತಿದ್ದಾರೆ ಸ್ವಲ್ಪ ಸಮಯದ ಕಾಲ ಮಾತ್ರ ಎಸಿಯನ್ನು ಬಳಸಿ ನಂತರ ಫ್ಯಾನ್ ಅನ್ನು ಬಳಸುವುದರಿಂದ ನಾವು ವಿದ್ಯುತ್ತನ್ನು ಉಳಿಸಬಹುದು. ಇನ್ನು ಏ ಸಿಯನ್ನು ಖರೀದಿಸುವಾಗ ರೇಟಿಂಗ್ ಇರುವಂತಹ ಏ ಸಿ ಗಳನ್ನು ಖರೀದಿಸಬೇಕು. ಫ್ರಿಜ್ ಗಳಂತೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ ಆಗಾಗ ಸ್ವಚ್ಛತೆಯನ್ನು ಮಾಡಿ ಬೆಲ್ಟ್ ಕಟ್ಟಾಗಿದೆ ಇಲ್ಲವಾ ಎಂದು ಒಮ್ಮೆ ಆಗಾಗ ನೋಡಬೇಕು ಇದರಿಂದಲೂ ಕೂಡ ಹೆಚ್ಚಾಗಿ ವಿದ್ಯುತ್ ಖರ್ಚಾಗುವುದು.
ಇದು ಕೂಡ 5 ಸ್ಟಾರ್ ಇರುವಂತಹದನ್ನು ಖರಿದಿಸಬೇಕು ಇನ್ನು ಮಿಕ್ಸಿಯನ್ನು ಬಳಸುವಾಗ ಪಲ್ಸಲ್ಲಿ ಅಥವಾ ಒಂದರಲ್ಲಿ ಇಟ್ಟು ರುಬ್ಬುವುದರಿಂದ ಕಡಿಮೆ ವಿದ್ಯುತ್ ಅನ್ನು ಬಳಸಬಹುದು ಇನ್ನು ಟಿವಿಯನ್ನು ನೋಡಿದ ನಂತರ ಸ್ವಿಚ್ ಆಫ್ ಮಾಡಿ. ಚಳಿಗಾಲದಲ್ಲಿ ಮಳೆಗಾಲದಲ್ಲಿ ಬಿಸಿನೀರನ್ನು ಕಾಯಿಸಿಕೊಳ್ಳಲು ಗೀಸರ್ ಬಳಸುತ್ತೇವೆ. ಸ್ನಾನಕ್ಕೆ ಹೋಗುವ 10 ನಿಮಿಷಗಳ ಕಾಲ ಹಿಂದೆ ಆನ್ ಮಾಡಬೇಕು ಆದ್ದರಿಂದ ಅವಶ್ಯಕತೆ ಇದ್ದಾಗ ಬಿಸಿನೀರು ಬರುತ್ತದೆ ಹಾಗೂ ಹೆಚ್ಚಾಗಿ ವಿದ್ಯುತ್ ಖರ್ಚಾಗುವುದು ತಪ್ಪುತ್ತದೆ. ಇವೆಲ್ಲವನ್ನು ಅನುಸರಿಸಿದರೆ ನಮಗೆ ತಿಳಿಯುತ್ತದೆ ವಿದ್ಯುತ್ ಬಿಲ್ಲಿನಲ್ಲಿ ಅರ್ಧದಷ್ಟು ವೆಚ್ಚವು ಕಡಿಮೆಯಾಗುತ್ತದೆ.