ಮನುಷ್ಯನ ದೇಹವನ್ನು ಕಾಪಾಡುವಂತಹ ಅತ್ಯಂತ ಮುಖ್ಯವಾದಂತಹ ಭಾಗ ಎಂದರೆ ಅದು ನಮ್ಮ ಚರ್ಮ ಹೌದು ಮನುಷ್ಯನ ಚರ್ಮವು ಅತ್ಯಂತ ಸೂಕ್ಷ್ಮತೆಯಿಂದ ಕೂಡಿರುತ್ತದೆ. ನಮ್ಮ ಚರ್ಮದ ಆರೈಕೆಯನ್ನು ಮಾಡುವುದು ತುಂಬಾ ಮುಖ್ಯವಾಗುತ್ತದೆ. ನಮ್ಮ ಚರ್ಮವು ಹಾನಿಗೆ ಒಳಗಾಗುತ್ತಿದೆ ಎಂದರೆ ನಮ್ಮ ಸುತ್ತಲಿನ ವಾತಾವರಣ ಪರಿಶುದ್ಧವಾಗಿ ಇಲ್ಲ ಹಾಗೆಯೇ ನಾವು ತಿನ್ನುತ್ತಿರುವ ಆಹಾರಪದ್ಧತಿಯಲ್ಲಿ ವ್ಯತ್ಯಾಸಗಳು ಕಂಡು ಬಂದಿರುತ್ತದೆ. ಅಲ್ಲದೆ ನಾವು ಶುದ್ಧತೆಯನ್ನು ಕಾಪಾಡಿಕೊಳ್ಳವಲ್ಲಿ ವಿಫಲವಾಗಿದೆ ಎಂದು ಅರ್ಥ. ನಾವು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿ ಕೊಳ್ಳ ಬೇಕಾದರೆ ನಾವು ಸೇವಿಸುವಂತಹ ಆಹಾರ ನೈಸರ್ಗಿಕವಾಗಿ ಪರಿಶುದ್ಧವಾಗಿ ಇರಬೇಕು ಅಂದರೆ ನಾವು ಹೆಚ್ಚಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವಿಸಬಾರದು.
ಬದಲಿಗೆ ಹಣ್ಣು, ತರಕಾರಿ ಹಾಗೂ ಹಸಿರು ಸೊಪ್ಪು ಈ ರೀತಿಯಾದಂತಹ ನೈಸರ್ಗಿಕ ಪದಾರ್ಥಗಳನ್ನು ನಾವು ದಿನನಿತ್ಯ ವಾಗಿ ಸೇವಿಸುತ್ತಾ ಬರಬೇಕು ಇದು ನಮ್ಮ ಚರ್ಮದ ಮೇಲೆ ಪರಿಣಾಮವನ್ನು ಬೀರಿ ಯಾವುದೇ ರೀತಿಯ ಡ್ಯಾಮೇಜ್ ಆಗದಂತೆ ಅಂದರೆ ಚರ್ಮ ರೋಗಗಳನ್ನು ನಿಯಂತ್ರಿಸುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತವೆ. ಅಷ್ಟೇ ಅಲ್ಲದೆ ನಮ್ಮ ಮನೆಯ ಸುತ್ತಮುತ್ತಲೂ ಹಸಿರುಗೂಡು ಗಿಡಗಳನ್ನು ಹೆಚ್ಚಾಗಿ ಬೆಳೆಸುವುದು ಒಳ್ಳೆಯದು ಹೀಗೆ ಮಾಡಿದಲ್ಲಿ ನಮ್ಮ ಸುತ್ತಮುತ್ತಲಿನ ಗಾಳಿ ಅಂದರೆ ವಾಯು ಪರಿಶುದ್ಧವಾಗುತ್ತದೆ ಇದರಿಂದಲೂ ಸಹ ನಮಗೆ ಕಲುಷಿತವಾದ ಗಾಳಿಯಿಂದ ನಮ್ಮ ಚರ್ಮವು ಹಾಳಾಗವುದನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೆ ನಾವು ದಿನನಿತ್ಯವೂ ಸ್ನಾನವನ್ನು ಮಾಡಬೇಕು ನಾವು ಸ್ನಾನವನ್ನು ಮಾಡಿಕೊಂಡು ಪರಿಶುದ್ಧವೆಗಿ ಇರುವಂತಹ ವಸ್ತ್ರಗಳನ್ನು ಧರಿಸಬೇಕು ಹೀಗೆ ಮಾಡುವುದರಿಂದ ಹಲವಾರು ಚರ್ಮರೋಗಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ನಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳುವ ಕಜ್ಜಿ ಅಥವಾ ತುರಿಕೆ ಇನ್ನಿತರ ಯಾವುದೇ ರೀತಿಯಾದಂತಹ ಚರ್ಮರೋಗಗಳು ನಮ್ಮನ್ನು ಕಾಡುತ್ತಾ ಇರುತ್ತದೆ ಇವುಗಳನ್ನು ನಿಯಂತ್ರಣ ಮಾಡುವಂತಹ ಕೆಲವೊಂದು ಮನೆಮದ್ದುಗಳನ್ನು ನಾವು ಬಳಸಬೇಕು. ನಮ್ಮ ಮನೆಯಲ್ಲಿಯೇ ಇರುವಂತಹ ಕೆಲವೊಂದು ಪದಾರ್ಥಗಳಿಂದ ನಮ್ಮ ಚರ್ಮವನ್ನು ಕಾಪಾಡಿಕೊಳ್ಳಬಹುದು ಅಂದರೆ ಕಜ್ಜಿ, ತುರಿಕೆ ಇನ್ನಿತರ ಯಾವುದೇ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಅರಿಶಿನ ಮತ್ತು ಆಲುವೆರಾ ಅರ್ಧ ಟೇಬಲ್ ಸ್ಪೂನ್ ಆಲುವೆರಾ ಜೆಲ್ ಹಾಗು ಅರ್ಧ ಟೇಬಲ್ ಸ್ಪೂನ್ ಅರಿಶಿನ ಪುಡಿಯನ್ನು ಸೇರಿಸಿ ಅದನ್ನು ಚನ್ನಾಗಿ ಮಿಕ್ಸ್ ಮಾಡಿ ನಮಗೆ ಚರ್ಮದ ಸಮಸ್ಯೆ ಕಜ್ಜಿ ಅಥವಾ ತುರಿಕೆ ಎಲ್ಲಿ ಕಂಡುಬರುತ್ತದೆ ಅಂತಹ ಸ್ಥಳಕ್ಕೆ ಹಚ್ಚುವುದರಿಂದ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ. ಅರಿಶಿನಪುಡಿ ಆಕ್ಸಿಡೆಂಟ್ ಗುಣ ಇರುವುದರಿಂದ ಇದು ನಮ್ಮ ಚರ್ಮಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಎರಡನೆಯದಾಗಿ ಬೆಳ್ಳುಳ್ಳಿ, ಬೆಳ್ಳುಳ್ಳಿಯನ್ನು ನಾವು ಚೆನ್ನಾಗಿ ಜಜ್ಜಿ ಅದನ್ನು ನಮ್ಮ ದೇಹದ ತುರಿಕೆ ಅಥವಾ ಚರ್ಮದ ಸಮಸ್ಯೆ ಇರುವ ಕಡೆ ಹಚ್ಚುವುದರಿಂದ ಅತಿವೇಗವಾಗಿ ಸಹ ಇದು ನಮ್ಮ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಮೂರನೆಯದಾಗಿ ಕೊಬ್ಬರಿ ಎಣ್ಣೆ, ನಾವು ಕೊಬ್ಬರಿ ಎಣ್ಣೆಯನ್ನು ಹಲವಾರು ರೀತಿಯಾಗಿ ಉಪಯೋಗ ಮಾಡಿಕೊಳ್ಳುತ್ತೇವೆ ಇದು ನಮ್ಮ ಚರ್ಮಕ್ಕೆ ತುಂಬಾ ಉಪಯುಕ್ತವಾದ ಒಂದು ವಸ್ತು ಎಂದೇ ಹೇಳಬಹುದು ಈ ಎಣ್ಣೆಯಲ್ಲಿ ಹಲವಾರು ಕೀಟಗಳನ್ನು ಕ್ರಿಮಿನಾಶಕಗಳನ್ನು ನಾಶಮಾಡುವಂತಹ ಗುಣ ಹೊಂದಿದೆ ಇದು ನಮ್ಮ ಚರ್ಮಕ್ಕೆ ಅತಿ ಉತ್ತಮವಾದಂತಹ ಒಂದು ಪದಾರ್ಥ ಇದನ್ನು ಸಹ ನಾವು ಚರ್ಮದ ಸಮಸ್ಯೆ ಇರುವ ಕಡೆ ಹಚ್ಚುವುದರಿಂದ ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ. ನಾಲ್ಕನೆಯದಾಗಿ ಉಪ್ಪುನೀರು ಎಲ್ಲಿ ನಮ್ಮ ದೇಹದಲ್ಲಿ ತುರಿಕೆ ಇರುತ್ತದೆಯೋ ಅಥವಾ ನಮ್ಮ ಚರ್ಮದ ಮೇಲೆ ಗಾಯ ಉಂಟಾಗಿದ್ದರೆ ಅದಕ್ಕೂ ಸಹ ನಾವು ಉಪ್ಪು ಮತ್ತು ನೀರಿನ ಮಿಶ್ರಣವನ್ನು ಹಾಕಿ ತೊಳೆಯುವುದರಿಂದ ಹಾಗೆಯೇ ತುರಿಕೆ ಇರುವ ಕಡೆ ಉಪ್ಪು ನೀರನ್ನು ಹಚ್ಚುವುದರಿಂದ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
ಅಲ್ಲದೆ ನಮ್ಮ ದೇಹದಲ್ಲಿನ ಗಾಯವು ಸಹ ಕಡಿಮೆಯಾಗುತ್ತಾ ಬರುತ್ತದೆ. ಈ ತುರಿಕೆ ಅಥವಾ ಚರ್ಮ ಸಮಸ್ಯೆ ನಮ್ಮ ದೇಹದ ಅಂಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಆಗ ನಾವು ಈ ರೀತಿಯಾದಂತಹ ಮೇಲೆ ತಿಳಿಸಿದ ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ನಮ್ಮ ಚರ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಇದನ್ನು ಬಳಸುವುದು. ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು ನಾವು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ಅದು ನಮ್ಮ ಚರ್ಮವನ್ನು ಡಿಹೈಡ್ರೇಟ್ ಮಾಡಿ ನಮ್ಮ ಚರ್ಮ ಒಣಗದಂತೆ ಕಾಪಾಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ನಮ್ಮ ಚರ್ಮವನ್ನು ಕಾಂತಿಯುತವನ್ನಾಗಿ ಮಾಡುತ್ತದೆ. ಕೇವಲ ನಮ್ಮ ಅಡುಗೆಮನೆಯಲ್ಲಿ ಇರುವಂತಹ ಕೆಲವು ಪದಾರ್ಥಗಳನ್ನು ನಾವು ಇಟ್ಟುಕೊಂಡರೆ ಸಾಕು ನಮ್ಮ ದೇಹದಲ್ಲಿನ ಚರ್ಮದ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು ಅಥವಾ ಬಂದರೂ ಅದನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.