ಮಾಗಶುದ್ಧ ಪಂಚಮಿಯನ್ನು ನಾವು ವಸಂತ ಪಂಚಮಿ ಎಂದು ಆಚರಣೆ ಮಾಡುತ್ತೇವೆ ಆ ದಿನ ವಿಶೇಷವಾದ ಸರಸ್ವತಿ ಮಂಡಲದ ರಂಗೋಲಿಯನ್ನು ಹಾಕುವುದರಿಂದ ಆಗುವಂತಹ ಪ್ರಯೋಜನ ಗಳೇನು? ಅದರಿಂದ ಯಾವ ರೀತಿಯಾದಂತಹ ಸಿದ್ಧಿಯನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ಕೂಲಂಕುಶವಾಗಿ ತಿಳಿಯುತ್ತಾ ಹೋಗೋಣ.
ವಸಂತ ಪಂಚಮಿಯ ದಿನ ಸರಸ್ವತಿ ಮಂಡಲವನ್ನು ಹಾಕಿ ಸರಸ್ವತಿಯನ್ನು ಎಷ್ಟು ಭಕ್ತಿಯಿಂದ ಪೂಜೆಯನ್ನು ಮಾಡುತ್ತೇವೋ ನಮ್ಮ ಮಕ್ಕಳಿಗೆ ಜ್ಞಾನ ಅಭಿವೃದ್ಧಿ ಯಾಗುತ್ತದೆ ಎಂದು ಹೇಳುತ್ತಾರೆ. ಅನಾದಿಕಾಲದಿಂದಲೂ ಕೂಡ ಸರಸ್ವತಿಯನ್ನು ವಿದ್ಯಾದಿ ದೇವತೆಯಾಗಿ ಪೂಜೆ ಮಾಡುತ್ತೇವೆ. ವೇದಗಳು ಸರಸ್ವತಿಯನ್ನು ವಿದ್ಯಾ ದೇವತೆ ಎಂದು ವರ್ಣಿಸುತ್ತದೆ ಯಾಕೆಂದರೆ.
ಸರಸ್ವತಿ ಎಲ್ಲಾ ವಿದ್ಯೆಗಳಿಗೂ ಅಭಿಮಾನಿ ದೇವತೆ ಎಂದು. ನಮಗೆ ಯಾವುದೇ ವಿದ್ಯೆ ಪಡೆಯಬೇಕು ಎಂದರೆ ಸರಸ್ವತಿ ಅನುಗ್ರಹವನ್ನು ಪಡೆಯುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಎಂದೇ ಹೇಳುತ್ತಾರೆ ಅದಕ್ಕಾಗಿ ಜ್ಞಾನ ಇದ್ದಾಗ ಮಾತ್ರ ಮಕ್ಕಳ ಬದುಕಿನಲ್ಲಿ ಅಭಿವೃದ್ಧಿ ಬರುವುದಕ್ಕೆ ಸಾಧ್ಯ! ಅದಕ್ಕಾಗಿ ಮಕ್ಕಳಿಗೆ ಜ್ಞಾನ ಬುದ್ಧಿ ವಿದ್ಯೆ ಬರಬೇಕು ಎಂದರೆ ಜ್ಞಾನಾಧಿ ದೇವತೆಯಾಗಿರುವಂತಹ ಸರಸ್ವತಿಯನ್ನು ಒಲಿಸಿ ಕೊಳ್ಳಬೇಕು ಎಂದು ಹೇಳುತ್ತಾರೆ.
ಆದ್ದರಿಂದ ಈ ದಿನ ವಸಂತ ಪಂಚಮಿಯ ದಿನ ಸರಸ್ವತಿ ಮಂಡಲವನ್ನು ಹಾಕುವುದರ ಮುಖಾಂತರ ಹೇಗೆ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿಯನ್ನು ಪಡೆದುಕೊಳ್ಳ ಬಹುದು ಇದನ್ನು ಯಾವ ವಿಧಾನದಲ್ಲಿ ಮಾಡಬೇಕು ಇದಕ್ಕೆ ಅನುಸರಿಸುವಂತಹ ನಿಯಮಗಳೇನು ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ.
ಈ ಒಂದು ವಸಂತ ಪಂಚಮಿಯಲ್ಲಿ ಸರಸ್ವತಿಯನ್ನು ಶ್ರೀ ಕೃಷ್ಣನು ಕೂಡ ಪೂಜೆ ಮಾಡಿದ್ದ ಅದಕ್ಕಾಗಿ ಅವನು ಇಷ್ಟು ಜ್ಞಾನವನ್ನು ಪಡೆದುಕೊಂಡ ಎಂದು ಹೇಳುತ್ತಾರೆ. ಹಾಗಾದರೆ ವಸಂತ ಪಂಚಮಿಯ ದಿನ ಈ ರಂಗೋಲಿಯನ್ನು ಹಾಕುವುದರ ಮುಖಾಂತರ ಹಾಗೂ ಈ ಶ್ಲೋಕವನ್ನು ಹೇಳುವುದರ ಮುಖಾಂತರ ಸರಸ್ವತಿಯನ್ನು ಹೇಗೆ ಒಲಿಸಿಕೊಳ್ಳ ಬಹುದು ಹಾಗೂ ಇದನ್ನು ಮೊದಲು ಹೇಗೆ ಪ್ರಾರಂಭಿಸಬೇಕು ಎಂದರೆ ನಿಮ್ಮ ಮನೆಯಲ್ಲಿ ಸರಸ್ವತಿಯ ಫೋಟೋ ಇದ್ದರೆ ಫೋಟೋ ಮುಂದೆ ಈ ರಂಗೋಲಿಯನ್ನು ಹಾಕಿ.
ಈ ಶ್ಲೋಕವನ್ನು ಹೇಳಬಹುದು ಫೋಟೋ ಇಲ್ಲ ಎನ್ನುವವರು ಸರಸ್ವತಿಯ ಯಾವುದಾದರೂ ಪುಸ್ತಕವನ್ನು ಇಟ್ಟು ಹೇಳಬಹುದು ಪುಸ್ತಕವು ಇಲ್ಲ ಎಂದರೆ ಒಂದು ಕಳಶವನ್ನು ಇಡುವುದರ ಮುಖಾಂತರ ಸರಸ್ವತಿಯನ್ನು ಪೂಜೆ ಮಾಡುವುದರ ಮುಖಾಂತರ ಆಹ್ವಾನೆ ಮಾಡಿಕೊಂಡು ಈ ಒಂದು ಶ್ಲೋಕವನ್ನು ಹೇಳಬಹುದು ಈ ಒಂದು ಪೂಜೆಯನ್ನು ಗುರುವಾರ 26ನೇ ತಾರೀಖು ಮಾಡಬೇಕು.
ಪ್ರತಿಯೊಬ್ಬರೂ ಕೂಡ ಈ ಒಂದು ವಸಂತ ಪಂಚಮಿಯ ದಿನ ಸರಸ್ವತಿಯನ್ನು ಪೂಜೆ ಮಾಡುವುದರ ಮುಖಾಂತರ ನಿಮ್ಮ ಮನೆಯಲ್ಲಿರುವಂತಹ ಮಕ್ಕಳ ಎಲ್ಲ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ಹೊಂದುತ್ತಾರೆ ಜೊತೆಗೆ ಅವರು ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸ ದಲ್ಲಿ ಬಹಳ ಎತ್ತರದ ಮಟ್ಟಕ್ಕೆ ಹೋಗುತ್ತಾರೆ ಬಹಳ ಹಿಂದಿನ ಕಾಲದಿಂದಲೂ ಕೂಡ ಈ ಒಂದು ಸ್ತೋತ್ರಕ್ಕೆ ಬಹಳ ಅದ್ಭುತವಾದಂತಹ ಶಕ್ತಿ ಇದೆ ಎಂದು ಹೇಳುತ್ತಾರೆ.
ಮೊದಲೇ ಹೇಳಿದಂತೆ ಶ್ರೀ ಕೃಷ್ಣ ಪರಮಾತ್ಮರೂ ಕೂಡ ಈ ಒಂದು ರಂಗೋಲಿಯನ್ನು ಪಂಚಮಿಯ ದಿನ ಹಾಕಿ ಈ ಒಂದು ಸರಸ್ವತಿಯ ಸ್ತೋತ್ರವನ್ನು ಹೇಳುವುದರ ಮುಖಾಂತರ ಅವರು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದುಕೊಂಡರು ಎಂದು ಹೇಳಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದನ್ನು ಅನುಸರಿಸುವುದು ಉತ್ತಮ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.