ರಾಜ್ಯದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯಗಳಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು. ಯಾಕೆಂದರೆ ಗೃಹಲಕ್ಷ್ಮಿ ಯೋಜನೆಯಡಿ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ (head of the family women) ಕೂಡ ಪ್ರತಿ ತಿಂಗಳು 2000ರೂ. ಸಹಾಯಧನ ಸಿಗುತ್ತಿದೆ. ಈಗಾಗಲೇ ಆಗಸ್ಟ್ ತಿಂಗಳಿನಲ್ಲಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಿದ್ದು ಎರಡನೇ ಕಂತಿನ ಹಣ ಪಡೆಯಲು ಮಹಿಳೆಯರು ಕಾಯುತ್ತಿದ್ದಾರೆ.
ಆದರೆ ಯೋಜನೆಯಲ್ಲಿ ಇನ್ನು ಲಕ್ಷಾಂತರ ಮಹಿಳೆಯರು ಮೊದಲನೇ ಕಂತಿನ ಹಣವನ್ನೇ ಪಡೆಯಲಾಗದೆ ಗೊಂದಲದಲ್ಲಿ ಇದ್ದಾರೆ. ಹಾಗಾಗಿ ಈ ಕುರಿತು ಏನಾದರೂ ಮಾಹಿತಿ ಸಿಗುತ್ತದೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಹುಡುಕುತ್ತಿರುತ್ತಾರೆ ಅವರಿಗೆಲ್ಲ ಅನುಕೂಲವಾಗುವಂತೆ ಗೃಹಲಕ್ಷ್ಮಿ ಯೋಜನೆ ಕುರಿತು ಕೆಲ ಪ್ರಮುಖ ಸುದ್ದಿ ಇಲ್ಲದೆ ನೋಡಿ.
ಬಾಯಿ ಹುಣ್ಣು ಸುಲಭವಾಗಿ ವಾಸಿಯಾಗಲು ಪರಿಣಾಮಕಾರಿಯಾದ ಮನೆಮದ್ದುಗಳು ಇವು.!
● ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು (Women and Child welfare department) ತಿಳಿಸಿರುವ ಪ್ರಕಾರ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ 1.10 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದರು. ಆದರೆ 8 ಲಕ್ಷ ಮಹಿಳೆಯರ ಖಾತೆಗೆ ಹಣ ತುಂಬಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಯಾಕೆಂದರೆ ಫಲಾನುಭವಿಯ ಬ್ಯಾಂಕ್ ಖಾತೆ ಆಕ್ಟಿವ್ (account inactive) ಇಲ್ಲದಿರುವುದು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ (Aadhar Seeding NPCI Mapping ) ಆಗದೆ ಇರುವುದು.
ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆಗಳಲ್ಲಿ ಒಂದೇ ರೀತಿ ಹೆಸರು ಇರದೇ ಹೆಸರಿನಲ್ಲಿ ವ್ಯತ್ಯಾಸಗಳು ಕಂಡು ಬಂದಿರುವುದು ಈ ರೀತಿ ಸಮಸ್ಯೆಗಳಿಂದ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ ಕೂಡಲೇ ಅವರು ಇವುಗಳನ್ನು ಸರಿಪಡಿಸಿಕೊಂಡರೆ ಈ ಹಣವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ದಾನಪತ್ರದ ಮೂಲಕ ಬಂದ ಆಸ್ತಿಯನ್ನು ಪಡೆದುಕೊಂಡವರು ತಪ್ಪದೆ ನೋಡಿ.!
● ಹಾಗೆಯೇ ರೇಷನ್ ಕಾರ್ಡ್ ಸಕ್ರಿಯವಾಗಿರಬೇಕು ಮತ್ತು ರೇಷನ್ ಕಾರ್ಡ್ ಗೆ ಇ-ಕೆವೈಸಿ (e-kyc)ಅಪ್ಡೇಟ್ ಆಗಿರಬೇಕು. ಈ ಕಾರ್ಯ ಆಗಿಲ್ಲ ಎಂದರು ಕೂಡ ಅವರಿಗೆ ಹಣ ಬರುವುದಿಲ್ಲ, ಇವರು ಸಹ ಹತ್ತಿರದಲ್ಲಿರುವ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಮಾಹಿತಿ ಕೊಟ್ಟು ಈ ಪ್ರಕ್ರಿಯೆ ಪೂರ್ತಿಗೊಳಿಸಿದರೆ ಮುಂದಿನ ಕಂತಿನಿಂದ ಹಣ ಪಡೆಯಬಹುದು.
● ಈ ಎಲ್ಲಾ ಮಾಹಿತಿಯು ಸರಿ ಇದ್ದು, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಮಂಜೂರಾತಿ ಪತ್ರವು ಕೂಡ ಪಡೆದಿದ್ದೇವೆ ಆದರೂ ಕೂಡ ಹಣ ಬಂದಿಲ್ಲ ಎಂದರೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಛೇರಿಗೆ ಭೇಟಿ ಕೊಡಿ. CDPO ಅಧಿಕಾರಿಗಳ ಬಳಿ ಆಯಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಫಲಾನುಭವಿಗಳ ಪಟ್ಟಿ ಇದೆ.
ಎರಡೇ ಗಂಟೆಯಲ್ಲಿ ಹೊಟ್ಟೆ ಬೊಜ್ಜು ಕರಗಿಸಿರುವ ಸುಲಭ ವಿಧಾನದ ಬಗ್ಗೆ ತಿಳಿಸಿಕೊಟ್ಟ ಪರಿಮಳ ಜಗ್ಗೇಶ್.!
ಸರ್ಕಾರ ಇಂದು ಆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯಾರೆಲ್ಲ ಗೃಹಲಕ್ಷ್ಮಿ ಯೋಜನೆ ಹಣ ಪಡೆದಿದ್ದಾರೆ, ಯಾರು ಹಣ ಪಡೆಯಲು ಸಾಧ್ಯವಾಗಿಲ್ಲ, ಯಾರು ಯೋಜನೆಗೆ ಅರ್ಹವಿಲ್ಲ ಎಲ್ಲ ವಿವರಗಳು ಕೂಡ ಇದರಲ್ಲಿ ಇರುತ್ತದೆ. ನೀವು ನಿಮ್ಮ ಅಂಗನವಾಡಿ ಕಾರ್ಯಕರ್ತೆಯರ ಸಹಾಯದಿಂದ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
● ಈಗಾಗಲೇ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣ ಪಡೆದಿರುವವರು ಎರಡನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದಾರೆ. ಅಕ್ಟೋಬರ್ 15 ರ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಎರಡನೇ ಕಂತಿನ ಹಣ ತಲುಪಲಿದೆ ಮತ್ತು ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡವರಿಗೆ ಮೊದಲನೇ ಕಂತಿನ ಹಣ ಸಿಗಲಿದೆ.