ಲಕ್ಕಿ ಗಿಡದ ಸೊಪ್ಪನ್ನು ಹೀಗೆ ಬಳಸಿ ಸಾಕು ಮಂಡಿ, ಸೊಂಟ, ಕೈ ಕಾಲು ನೋವು ನಿವಾರಣೆ, ಕಾಮೋತ್ತೇಜಕ ಶಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಮನೆಮದ್ದು.

ಲಕ್ಕಿ ಗಿಡ ಇದರ ವೈಜ್ಞಾನಿಕ ಹೆಸರು ವಿಟೆಕ್ಸ್ ನಿಗುಂಡ, ಸಂಸ್ಕ್ರತ ಭಾಷೆಯಲ್ಲಿ ಸಿಂಧಯವಾರಾ, ಶ್ವೇತಾ ಪುಷ್ಪ, ಕನ್ನಡ ಬಾಷೆಯಲ್ಲಿ ಲಕ್ಕಿ, ನಕ್ಕಿ, ಮೊಚೆ, ಬಿಳಿ‌ ನಕ್ಕೆ, ಇಂಗ್ಲೀಷ್ ಭಾಷೆಯಲ್ಲಿ Five leaved chaste Horse Shoe Vitex ಎಂತಲು ಕರೆಯುತ್ತಾರೆ. ಜೀವಂತ ಬೆಳೆಗಳ ಅವನತಿ ಹೊಂದಿಗೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಸಸ್ಯಗಳಲ್ಲಿ ಈ ಲಕ್ಕಿ ಗಿಡವು ಸಹ‌ ಒಂದು. ಲಕ್ಕಿ ಗಿಡದ ಮೂಲ ಏಷ್ಯಾ ಮತ್ತು ದಕ್ಷಿಣ ಆಫ್ರಿಕಾ ಆಗಿದೆ. ಹಿಂದೂ ಸಂಪ್ರದಾಯದಲ್ಲಿ ಈ ಲಕ್ಕಿ ಗಿಡದ ಪತ್ರವನ್ನು ಪೂಜೆ ಮಾಡಲು ಬಳಸುತ್ತಾರೆ. ಅಲ್ಲದೆ ಈ‌ ಲಕ್ಕಿ ಗಿಡದ ಪತ್ರವು‌ ಒಂದು ಔಷದೀಯ ಸಸ್ಯ. ಈ ಸಸ್ಯವನ್ನು ಯಾವ ಯಾವ ಕಾಯಿಲೆಗಳಿಗೆ ಔಷದಿಯಾಗಿ ಬಳಸಲಾಗುತ್ತದೆ ಮತ್ತು ಹೇಗೆ ಬಳಸುವುದು ಎಂಬ ಎಲ್ಲ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಈ ಲಕ್ಕಿ ಗಿಡವು ಸಂದಿ ನೋವು, ಭುಜ ನೋವು, ಉಳುಕು ಮತ್ತು ಊತಗಳಿಗೆ ಬಲಿತ ಲಕ್ಕಿ ಗಿಡದ ಎಲೆಗಳನ್ನು ತಂದು ಅವುಗಳನ್ನು ಚೆನ್ನಾಗಿ ಅರೆದು ನಂತರ ಆ ಪೇಸ್ಟ್ ಅನ್ನು ಸ್ವಲ್ಪ ಬಿಸಿ ಮಾಡಿ ಉಗುರು ಬೆಚ್ಚನೆಯ ಪೇಸ್ಟ್ ಅನ್ನು ನೋವು, ಊತ, ಉಳುಕು ಇರುವ ಜಾಗಗಳಿಗೆ ಹಚ್ಚಬೇಕು ಅಥವಾ ಪೋರ್ಟ್ ಲೀಫ್ ಕಟ್ಟಿದರೆ ಉಳುಕು, ಊತ ಹಾಗೂ ನೋವು ನಿವಾರಣೆ ಆಗುತ್ತದೆ. ಅಸ್ತಮ ಮತ್ತು ಕೆಮ್ಮು ಇರುವಂತಹವರು ಒಣಗಿದ ಲಕ್ಕಿ ಎಲೆಗಳನ್ನು ಚೆನ್ನಾಗಿ ಪುಡಿ ಮಾಡಿ ಒಂದು ಟೇಬಲ್ ಸ್ಪೂನ್ ಅಷ್ಟು ಪುಡಿಯನ್ನು ಎರಡು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದು ಕಾಲು ಭಾಗ ಆಗುವ ತನಕ ಕುದಿಸುತ್ತಿರಬೇಕು. ಈ ಕಷಾಯವನ್ನು ಶೋದಿಸಿ ದಿನ ಬೆಳಿಗ್ಗೆ ಮತ್ತು ಸಂಜೆ ಸುಮಾರು 15 ರಿಂದ 20 ml ಕುಡಿಯುತ್ತಾ ಬಂದರೆ ಅಸ್ತಮ ಮತ್ತು ಕೆಮ್ಮು ಗುಣವಾಗುತ್ತದೆ.
ಅತಿಯಾದ ಮೂಗು ಸೋರುವಿಕೆ ಹಾಗೂ ದುರ್ ಮಾಂಸ ಬೆಳೆದಿದ್ದರೆ 2 ರಿಂದ 4 ಲಕ್ಕಿ ಗಿಡದ ಕಾಯಿಗಳನ್ನು ಪುಡಿ ಮಾಡಿ ಬಿಸಿ ಮಾಡಿ‌ ಸ್ವಲ್ಪ ಬೆಚ್ಚಗಿನ‌ ದ್ರಾವಣವನ್ನು ದಿನಕ್ಕೆ 2 ಅಥವಾ 3 ಬಾರಿ ಮೂಗಿಗೆ ಹಾಕುತ್ತಿದ್ದರೆ ಮೂಗು ಸೋರುವಿಕೆ ಮತ್ತು ದುರ್ ಮಾಂಸದ ಸಮಸ್ಯೆ ಗುಣವಾಗುತ್ತದೆ. ಗಾಯ ಮತ್ತು ಮೈಮೇಲಿನ ಹುಣ್ಣುಗಳಿಗೆ ತಾಜಾ ಲಕ್ಕಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಗಾಯ ಮತ್ತು ಹುಣ್ಣುಗಳನ್ನು ತೊಳೆದರೆ ಅವುಗಳು ಬೇಗ ಗುಣ ಆಗುವುದರ ಜೊತೆಗೆ ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದೆ. 50 ಗ್ರಾಂ ಲಕ್ಕಿ ಗಿಡದ ಎಲೆಗಳು 200ml ಎಳ್ಳೆಣ್ಣೆ 800ml ನೀರು ಅಥವಾ ಎಲೆಯ ಕಷಾಯ ಸೇರಿಸಿ ಚೆನ್ನಾಗಿ ಕಾಯಿಸಬೇಕು. ಮಂಡಿ ನೋವು, ಸೊಂಟದ ನೋವು ಜೊತೆಗೆ ಪೋಲಿಯೊ ಮತ್ತು ಅಂಗವೈಕಲ್ಯ ಸಮಸ್ಯೆಗಳಿಗೆ ಈ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
ಗಂಟಲು ನೋವು, ವಸಡಿನ ನೋವು, ಬಾಯಿಯ ದುರ್ಗಂಧಗಳಿಗೆ ಲಕ್ಕಿ ಗಿಡದ ತಾಜಾ ಎಲೆಗಳನ್ನು ಹಾಕಿ ಕುದಿಸಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ಒಳ್ಳೆಯ ಪರಿಣಾಮಕಾರಿ ಫಲಿತಾಂಶ ಸಿಗುತ್ತದೆ. ಗಂಟು ಮಾಲೆ ಅಂದರೆ ಟೆಲ್ಸಿಯಸ್ ಗಳು ಆಗಿದ್ದರೆ ಲಕ್ಕಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಉಗುರು ಬೆಚ್ಚಗಿನ ಕಷಾಯದಿಂದ ಬೆಳಿಗ್ಗೆ ಮತ್ತು ಸಂಜೆ ಗಾರ್ಗ್ಲಿಂಗ್ ಮಾಡುವುದರಿಂದ ಅಥವಾ ಲಕ್ಕಿ ಗಿಡದ ಕಾಂಡದ ಸಿಪ್ಪೆಯ ಪದರವನ್ನು ನೀರಿನಲ್ಲಿ ತೇಯ್ದು ಗಂಟು ಮಾಲೆಗಳ ಮೇಲೆ ಲೇಪಿಸಿದರೆ ಗಂಟುಗಳು / ಟೆನ್ಸಸ್ ಗಳು ಗುಣವಾಗುತ್ತವೆ. ಲಕ್ಕಿ ಎಲೆಗಳಿಂದ ತಯಾರಿಸಿದ ಎಣ್ಣೆಯು ಬಾಲಗ್ರಹಕ್ಕೆ ತುಂಬಾ ಒಳ್ಳೆಯದು.
ಲಕ್ಕಿ ಗಿಡದ ಒಣಗಿದ ಎಲೆಗಳನ್ನು ಪುಡಿಮಾಡಿ ಸೇವಿಸಿದರೆ ಕಾಮೋತ್ತೇಜಕ ಆಗುತ್ತದೆ ಬೇರನ್ನು ತೆಗೆದು ಅದರ ರಸವನ್ನು ಹಿಂದಿ ಜೇನುತುಪ್ಪದೊಡನೆ ಸೇವಿಸಿದರೆ ನರದೌರ್ಬಲ್ಯ ಗಳು ನಿವಾರಣೆಯಾಗುತ್ತದೆ. ಲಕ್ಕಿ ಗಿಡದ ಸೊಪ್ಪಿನ ಹೊಗೆ ಹಾಕುವುದರಿಂದ ಮನೆಯಲ್ಲಿ ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ. ಮೂರ್ಛೆ ತಪ್ಪಿ ಬಿದ್ದಾಗ ಲಕ್ಕಿ ಗಿಡದ ಎಲೆಯ ರಸವನ್ನು 7 ರಿಂದ 8 ಹನಿಗಳಷ್ಟು ಮೂಗಿನಲ್ಲಿ ಹಾಕಿದರೆ ಬೇಗನೆ ಎಚ್ಚರ‌ ಆಗುತ್ತಾರೆ. ಲಕ್ಕಿ ಗಿಡದ ಎಲೆಗಳ ಕಷಾಯದಿಂದ ಅಡ್ಡ ಪರಿಣಾಮಗಳು ಇಲ್ಲದಿದ್ದರು ಇದನ್ನು 10 ರಿಂದ 15 ml ನಷ್ಟು, ಲಕ್ಕಿ ಗಿಡದ ಬೇರಿನ ಜ್ಯೂಸ್ ಅಥವಾ ಬೀಜಗಳ ಪುಡಿಯನ್ನು 4 ರಿಂದ 5 ಗ್ರಾಂ ನಷ್ಟು ಮಾತ್ರ ಸೇವಿಸಬೇಕು. ಗರ್ಭಿಣಿಯರು ಲಕ್ಕಿ ಗಿಡದ ಎಲೆಗಳನ್ನು ‌ಉಪಯೋಗಿಸಬಾರದು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now