ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಚರ್ಮದ ಆರೋಗ್ಯ, ಕೂದಲಿನ ಆರೋಗ್ಯದ ಜೊತೆ ಮುಖದ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರೆ. ಮುಖದಲ್ಲಿ ಸಣ್ಣ ಗುಳ್ಳೆ ಬಂದರು ಅಥವಾ ಮುಖದ ಕಲರ್ ಸ್ವಲ್ಪ ಡಲ್ ಆದರೂ ಹೆಣ್ಣು ಮಕ್ಕಳು ಸಾಕಷ್ಟು ತಳಮಳಕ್ಕೆ ಒಳಗಾಗುತ್ತದೆ. ತಾವು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಎನ್ನುವುದೇ ಹೆಣ್ಣುಮಕ್ಕಳ ಮೊದಲ ಆಸೆ. ಇದಕ್ಕಾಗಿ ಅವರು ಕಾಸ್ಮೆಟಿಕ್ಸ್ ಗಳ ಮೊರೆ ಹೋಗುತ್ತಾರೆ ಅಥವಾ ವಾರಕ್ಕೊಮ್ಮೆ ಪಾರ್ಲರ್ ಗಳಿಗೆ ಅಲೆಯುತ್ತಾರೆ. ಇಷ್ಟೆಲ್ಲಾ ಮಾಡಿದರೂ ಕೆಲವೊಮ್ಮೆ ಅವರ ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂದು ಕೊರಗುತ್ತಾರೆ. ಈಗಿನ ಕಾಲದಲ್ಲಿ ಕೆಮಿಕಲ್ ಪದಾರ್ಥಗಳ ಬಳಕೆ ಜಾಸ್ತಿ ಆಗಿರುವುದರಿಂದ ಎಲ್ಲಾ ಸಮಯದಲ್ಲಿ ಎಲ್ಲಾ ಚರ್ಮದವರಿಗೂ ಇದು ಹೊಂದುತ್ತದೆ ಎಂದು ಹೇಳಲಾಗುವುದಿಲ್ಲ ಆದರೆ ನೈಸರ್ಗಿಕವಾಗಿ ಮಾಡಿಕೊಳ್ಳುವ ಬ್ಯೂಟಿ ಟಿಪ್ಸ್ ಗಳಿಂದ ಯಾವುದೇ ಸೈಡ್ ಇಫೆಕ್ಟ್ ಇಲ್ಲದಂತೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಹೆಣ್ಣುಮಕ್ಕಳು ಮೊಡವೆ ಸಮಸ್ಯೆಗೆ ತುಂಬಾ ಭಯ ಬೀಳುತ್ತಾರೆ. ಮುಖದಲ್ಲಿ ಸ್ವಲ್ಪ ಗುಳ್ಳೆ ಆದರೆ ಅದು ಮುಖದ ಮೇಲೆ ಚೆನ್ನಾಗಿ ಕಾಣುವುದಿಲ್ಲ ಎನ್ನುವುದೇ ಅವರ ಆತಂಕ. ವಾತಾವರಣದ ಧೂಳು ನಾವು ಸೇವಿಸುವ ಆಹಾರದಲ್ಲಿನ ವ್ಯತ್ಯಾಸ, ಉಪಯೋಗಿಸುವ ಬ್ಯೂಟಿ ಪ್ರಾಡಕ್ಟ್ ಗಳ ಬದಲಾವಣೆಯಿಂದ ಉಂಟಾಗುವ ವ್ಯತ್ಯಾಸ ಅಥವಾ ಹೆಣ್ಣು ಮಕ್ಕಳ ತಿಂಗಳಿನ ಸಮಸ್ಯೆ ಈ ಎಲ್ಲ ಸಮಸ್ಯೆಗಳಿಂದ ಮುಖದಲ್ಲಿ ಮೊಡವೆಗಳು ಏಳುವುದು ಸಾಮಾನ್ಯ. ಕೆಲವರಿಗೆ ಇದು ಬೇಗನೆ ವಾಸಿಯಾಗಿ ಬಿಡುತ್ತದೆ ಆದರೆ ಕೆಲವರಿಗೆ ಇದು ಹೋಗುವುದಿಲ್ಲ ಮತ್ತು ಒಂದರಿಂದೆ ಒಂದು ಹೆಚ್ಚಾಗುತ್ತಾ ಹೋಗುತ್ತದೆ. ನಾವೇನಾದರೂ ಇದನ್ನು ಹಿಚಕಿ ತೆಗೆಯುವ ಪ್ರಯತ್ನ ಮಾಡಿದರೆ ನಮ್ಮ ಮುಖದ ಮೇಲೆ ಮೊಡವೆಗಳು ಇದ್ದ ಗುರುತು ಹಾಗೇ ಉಳಿದುಕೊಂಡು ಬಿಡುತ್ತದೆ. ಹಾಗಾಗಿ ಈ ಮೊಡವೆಗಳನ್ನು ಮುಖದಿಂದ ಕ್ಲಿಯರ್ ಮಾಡುವುದೇ ದೊಡ್ಡ ಸವಾಲು.
ಹೆಚ್ಚಾಗಿ ಜನ ಇದಕ್ಕೆ ಡಾಕ್ಟರ್ ಬಳಿ ಸಲಹೆ ಕೇಳಿ ಕ್ರೀಮ್ ಗಳನ್ನು ಮತ್ತು ಇದನ್ನು ವಾಸಿ ಮಾಡುವ ಸೋಪುಗಳನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಮೊಡವೆ ಹಾಗೂ ಮೊಡವೆಯ ಕಲೆಯೂ ಹೋಗಬಹುದು ಆದರೆ ಎಲ್ಲರಿಗೂ ಈ ರೀತಿ ಹಣ ಕೊಟ್ಟು ಖರೀದಿಸುವ ಅನುಕೂಲತೆಗಳು ಇರುವುದಿಲ್ಲ. ಹೀಗಾಗಿ ನಮ್ಮ ಹಿರಿಯರು ಅವರ ಕಾಲದಲ್ಲಿ ಮಾಡಿಕೊಳ್ಳುತ್ತಿದ್ದ ಕೆಲವು ಮನೆಮದ್ದುಗಳನ್ನು ಹೇಳಿಕೊಟ್ಟಿದ್ದಾರೆ. ಅವುಗಳನ್ನು ತಿಳಿದುಕೊಂಡು ಅದೇ ರೀತಿಯಾಗಿ ನಾವು ಮಾಡುವುದರಿಂದ ಆದಷ್ಟು ಬೇಗ ಈ ಮಡವೆ ಹಾಗೂ ಅದರ ಕಲೆಯ ಸಮಸ್ಯೆ ಇಂದ ನಾವು ಆಚೆ ಬರಬಹುದು. ಈ ರೀತಿ ಮಡವೆ ಸಮಸ್ಯೆ ನಿವಾರಣೆಯಾಗಲು ಹಲವಾರು ರೀತಿಯ ಮನೆಮದ್ದುಗಳನ್ನು ಆಯುರ್ವೇದದಲ್ಲಿ ತಿಳಿಸಿಕೊಟ್ಟಿದ್ದಾರೆ. ಅದರಲ್ಲಿ ಕೆಲವು ಕೂಡ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿಕೊಂಡು ಯಾವುದೇ ಖರ್ಚಿಲ್ಲದೆ ನಮ್ಮ ಮನೆಯಲ್ಲಿರುವ ಪದಾರ್ಥಗಳಿಂದ ಮಾಡಿಕೊಳ್ಳಬಹುದು.
ಮುಖದ ಮೇಲೆ ಉಂಟಾಗಿರುವ ಮೊಡವೆ ಹಾಗೂ ಅದರ ಕಲೆಯನ್ನು ಅತಿಬೇಗನೆ ಕ್ಲಿಯರ್ ಮಾಡುವ ಮನೆಮದ್ದು ಇದೆ. ಇದನ್ನು ಮಾಡಿಕೊಳ್ಳಲು ಬೇಕಾಗುವ ಪದಾರ್ಥಗಳು ಕೂಡ ನಮ್ಮ ಮನೆಯಲ್ಲಿಯೇ ಸಿಗುತ್ತದೆ ಹಾಗೂ ಇದನ್ನು ಮಾಡುವ ವಿಧಾನ ಕೂಡ ತುಂಬಾ ಸರಳ. ಕೇವಲ ನಾಲ್ಕು ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಬೇಕಾಗಿರುವುದು ಬೇವಿನಸೊಪ್ಪು, ಅರಿಶಿಣ, ಗಸೆಗಸೆ ಹಾಗೂ ರೋಸ್ ವಾಟರ್ ಅಷ್ಟೇ. ಮೊದಲಿಗೆ ಬೇವಿನ ಸೊಪ್ಪನ್ನು ತಂದು ಅದರ ಎಲೆಗಳನ್ನು ಬಿಡಿಸಿಕೊಂಡು ಕುಟ್ಟಣಿಗೆಯಲ್ಲಿ ಹಾಕಿ ಸ್ವಲ್ಪ ನೀರಿನ ಸಹಾಯದಿಂದ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರೀತಿ ಚೆನ್ನಾಗಿ ಅದು ಪೇಸ್ಟ್ ಆದ ನಂತರ ಅದನ್ನು ಒಂದು ಬೌಲ್ ಗೆ ತೆಗೆದುಕೊಂಡು ಅರ್ಧ ಚಮಚ ಅರಿಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಮತ್ತು ಅದಕ್ಕೆ ಅರ್ಧ ಚಮಚ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಬೇಕು.
ಮತ್ತು ಕೊನೆಯಲ್ಲಿ ಈ ಮಿಶ್ರಣಕ್ಕೆ ಒಂದು ಚಮಚ ಗಸಗಸೆ ಹಾಕಿ ಎಲ್ಲವನ್ನು ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಹಾಗೇ ಇಟ್ಟು ನಂತರ ಮುಖಕ್ಕೆ ಹಚ್ಚಬೇಕು. ಈ ರೀತಿ ಮಾಡುವುದರಿಂದ ಬೇವು ಮತ್ತು ಅರಿಶಿಣದಲ್ಲಿರುವ ಸೌಂದರ್ಯವರ್ಧಕ ಗುಣಗಳು ನಮ್ಮ ಮುಖದಲ್ಲಿರುವ ಮೊಡವೆಯನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೆ ಯಾವುದೇ ಬಗೆಯ ಚರ್ಮರೋಗ ಇದ್ದರೂ ಸಹ ಬೇವಿನ ಸೊಪ್ಪು ಮತ್ತು ಅರಿಶಿನವನ್ನು ಹಚ್ಚಿಕೊಳ್ಳುವುದರಿಂದ ಅತೀ ಶೀಘ್ರವಾಗಿ ನಿವಾರಣೆಯಾಗುತ್ತದೆ. ಮತ್ತು ರೋಸ್ ವಾಟರ್ ಹಾಗೂ ಗಸಗಸೆ ನಮ್ಮ ಮುಖ ನಿರಂತರವಾಗಿ ಹೊಳೆಯುವಂತೆ ಮಾಡುತ್ತದೆ. ಮುಖದಲ್ಲಿರುವ ಕಲೆಯನ್ನು ತೆಗೆದು ಮುಖವು ಬ್ರೈಟ್ ಆಗಿ ಕಾಣುವಂತೆ ಮಾಡುತ್ತದೆ. ಈ ಪದಾರ್ಥಗಳನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ.