ಸಿಂಹ ರಾಶಿಯವರ 2022 ಅಕ್ಟೋಬರ್ ಮಾಸಿಕ ಭವಿಷ್ಯ ನೋಡುವುದಾದರೆ 7, 5, 4, 12, 17, 22, 24, 26 ಈ ತಿಂಗಳ ಶುಭ ದಿನಗಳಾಗಿವೆ. ಈ ತಿಂಗಳಲ್ಲಿ ನೀವು ಕೆಲವೊಂದು ನೇರವಾಗಿ ಹಾಗೂ ಕಠೋರವಾಗಿ ಮಾತನಾಡುತ್ತೀರಾ ಹಾಗೂ ಎಲ್ಲಾ ಮಾತಿನಲ್ಲಿ ಬಹಳ ನಿಷ್ಠುರಗಳನ್ನು ಹೊತ್ತುಕೊಳ್ಳುತ್ತೀರಿ. ನೀವು ಹೇಳುವ ಮಾತಿನಲ್ಲಿ ಇನ್ನೊಬ್ಬರಿಗೆ ಗಾಸಿ ಮಾಡುವ ರೀತಿಯಲ್ಲಿ ಮಾತನಾಡುತ್ತಿರಿ. ಯಾವುದೇ ಒಂದು ಪರಸ್ಥಿತಿ ಎದರು ಬಂದರೂ ಸರಿಯಾದ ನಿರ್ಧಾರ ತೊಗೊಳುವುದು ಎಲ್ಲರಿಗು ಬಹಳ ಮುಖ್ಯ
ಅದೇ ರೀತಿ ಸಿಂಹ ರಾಶಿಯವರು ದುಡುಕಿ ನಿರ್ಧಾರವನ್ನು ತೆಗೆದುಕೊಂಡರೆ ಈ ತಿಂಗಳು ನೀವು ಮುಂದೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಸಿಂಹ ರಾಶಿಯವರು ಕೋಪವನ್ನು ನಿಯಂತ್ರಿಸಿಕೊಳ್ಳುವುದು ಬಹಳ ಉತ್ತಮ ಇದರಿಂದ ಉತ್ತಮ ಫಲವನ್ನು ಮುಂದೆ ಕಾಣಬಹುದು. ಇನ್ನು ಈ ತಿಂಗಳಲ್ಲಿ ಆರ್ಥಿಕವಾಗಿ ಬಹಳ ಆದಾಯವಿದೆ ನೀವು ಕುಟುಂಬದಲ್ಲಿ ಕುಟುಂಬದ ಜೊತೆ ಹೊಂದಾಣಿಕೆಯಿಂದ ಇರುತ್ತೀರಿ.
ಪತಿ ಅಥವಾ ಪತ್ನಿಯಿಂದ ಅನಿರೀಕ್ಷಿತವಾಗಿ ಬಹಳ ಆದಾಯವನ್ನು ನೀವು ನೋಡಬಹುದು ಹಾಗೂ ನೀವು ದುಡಿದ ಹಣವು ನಿಮಗೆ ಹೆಚ್ಚು ಪ್ರಗತಿಯನ್ನು ನೀಡಲಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಲ್ಲಿ ಅಧಿಕ ಲಾಭವನ್ನು ಪಡೆಯಬಹುದು ಇನ್ನೂ ಬಹಳಷ್ಟು ಜನ ಮನೆಯನ್ನು ಖರೀದಿಸಲು ಬಹಳ ದಿನದಿಂದ ಯೋಚನೆಯಲ್ಲಿ ಇರುತ್ತಾರೆ ಅಂತವರಿಗೆ ಈ ತಿಂಗಳು ಖಂಡಿತವಾಗಿಯೂ ಬಹಳ ಉತ್ತಮವಾದ ಸಮಯ.ಇನ್ನು ವಾಣಿಜ್ಯ ಕ್ಷೇತ್ರದಲ್ಲಿರುವವರಿಗೆ, ಶಿಕ್ಷಕರಿಗೆ ಹಾಗೂ ಸರ್ಕಾರಿ ನೌಕರರಿಗೆ ಕೆಲಸದಲ್ಲಿ ಬಡ್ತಿ ಸಿಗುವ ಸಂಭವವು ಹೆಚ್ಚಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ನೋಡುವುದಾದರೆ ಸ್ವಲ್ಪ ನೆನಪಿನ ಶಕ್ತಿ ಕಡಿಮೆಯಾಗುವುದು ಈ ತಿಂಗಳಲ್ಲಿ ಕಾಣಿಸುತ್ತದೆ ಅದಕ್ಕಾಗಿ ವಿದ್ಯಾರ್ಥಿಗಳು ಧ್ಯಾನ ಮಾಡುವುದು ಅವಶ್ಯಕವಾಗಿದೆ. ಇನ್ನು ಹೋಟೆಲ್ ಉದ್ಯಮ ಅಥವಾ ಯಾವುದಾದರೂ ವ್ಯಾಪಾರಸ್ಥರಿಗೆ ಆಗಲಿ ಅಧಿಕ ಆದಾಯವಾಗುವ ಸಂಭವವು ಹೆಚ್ಚು ಇದೆ. ಚಿತ್ರ ಉದ್ಯಮ, ಕಲಾ ಕ್ಷೇತ್ರಗಳಲ್ಲಿ ಅಥವಾ ಕಲೆಗೆ ಸಂಭಂದಿಸಿ ಇರುವವರಿಗೆ ಒಳ್ಳೆಯ ಅವಕಾಶಗಳು ಹುಡುಕಿ ಬರುತ್ತದೆ. ಸ್ತ್ರೀಯರಿಗೆ ಸ್ವಲ್ಪ ಅನಾರೋಗ್ಯವು ಕಾಡುತ್ತದೆ ಆದರೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ಇನ್ನು ಅಕ್ಟೋಬರ್ ಮಾಸದ 1ರಿಂದ 15ನೇ ತಾರೀಖಿನವರೆಗೂ ಸ್ನೇಹಿತರಲ್ಲಿ ಬಹಳ ಸಾಮರಸ್ಯ ಉಂಟಾಗಿ ಸಂತಸದ ವಾತಾವರಣ ತುಂಬಿರುತ್ತದೆ ಹಾಗೆ ನೀವು ಹಠದಿಂದ ಮಾಡಿರುವ ಕೆಲಸದಿಂದಾಗಿ ಸಿಂಹ ರಾಶಿಯವರಿಗೆ ಬಹಳ ಗೌರವವನ್ನು ಗಳಿಸುತ್ತೀರಿ. ಇನ್ನು ಅನಾವಶ್ಯಕ ವಾಗ್ವಾದದಿಂದ ನಷ್ಟವನ್ನು ನೋಡಬೇಕಾಗುತ್ತದೆ. ಪ್ರಯಾಣದಿಂದ ಬಹಳ ಶುಭವನ್ನೇ ನೋಡಬಹುದು ಹಾಗೂ ವ್ಯಾಪಾರದಲ್ಲಿ ನಿಧಾನವಾದರೂ ಪ್ರಗತಿಯನ್ನು ಸಾಧಿಸಲಿದ್ದೀರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳು ಹುಡುಕಿ ಬರುತ್ತದೆ. ಪರರ ಮಾತುಗಳನ್ನು ಕೇಳಿ ಕೆಲಸ ಮಾಡಿದರೆ ಬಹಳ ಅವಮಾನವನ್ನು ಮುಂದೆ ಎದುರಿಸಬೇಕಾಗುತ್ತದೆ.
ತಂದೆ ತಾಯಿ ಅಥವಾ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ. ದ್ವಿತೀಯ ಅರ್ಧವನ್ನು ನೋಡುವುದಾದರೆ ಅಂದರೆ 16 ರಿಂದ 30ನೇ ತಾರೀಖಿನವರೆಗೂ ನೀವು ಬಿಸಿಲಿನಲ್ಲಿ ಓಡಾಡುವುದರಿಂದ ಚಿಕ್ಕಪುಟ್ಟ ಆರೋಗ್ಯ ಸಮಸ್ಯೆಯು ಎದುರಿಸಬೇಕಾಗುತ್ತದೆ. ನಿಮ್ಮ ಒಳ್ಳೆಯತನದಿಂದ ದುರುಪಯೋಗವನ್ನು ಮಾಡಿಕೊಳ್ಳುವವರು ಹೆಚ್ಚು ಇದ್ದಾರೆ ಹಾಗೆ ಎಚ್ಚರದಿಂದ ವಾಹನವನ್ನು ಚಾಲನೆ ಮಾಡುವುದು ಅವಶ್ಯಕವಾಗಿದೆ. ಇನ್ನು ಕೆಲವು ಕಡೆಯಿಂದ ಶುಭವಾರ್ತೆಯನ್ನು ಕೇಳುವ ಸಂಭವ ಉಂಟಾಗುತ್ತದೆ. ಹಾಗೆ ಅನಾವಶ್ಯಕ ವಾದಗಳನ್ನು ನೀವು ಮಾಡಬಾರದು. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಅಧಿಕ ಲಾಭ ಉಂಟಾಗುತ್ತದೆ.