ಹೂಡಿಕೆ ಮಾಡಿದಾಗ ಲಾಭ ಬಂದೇ ಬರುತ್ತದೆ ಎಂಬ ಖಾತರಿ ಇದ್ದರೆ, ಜನರು ಕಷ್ಟಪಟ್ಟು ಪಟ್ಟು ಗಳಿಸಿದ ಹಣವನ್ನು ಬಂಡವಾಳ ಹೂಡಲು ಮುಂದಾಗುತ್ತಾರೆ. ಇದೇ ರೀತಿ ಸ್ಥಿರ ಠೇವಣಿಗಳು (Fixed Deposit-ಎಫ್ಡಿ) ಕೂಡ ನಿಗದಿತ ಬಡ್ಡಿಯ ರೂಪದಲ್ಲಿ ಆದಾಯ ತಂದುಕೊಡುತ್ತವೆ. ಹೀಗಾಗಿಯೇ ಜನರು ತಮ್ಮ ಹಣವನ್ನು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.
ಕಾರಣ, ಸ್ಥಿರ ಠೇವಣಿ ಕಡಿಮೆ ಅಪಾಯದ ಹೂಡಿಕೆಯ ಸಾಧನವಾಗಿದೆ. ಆದರೆ, ನೀವು ಎಫ್ಡಿ ತೆರೆಯಲು ನಿರ್ಧರಿಸುವ ಮೊದಲು ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ನೀಡುತ್ತಾರೆ ಎಂಬುದನ್ನು ತಿಳಿಯುವುದು ಒಳ್ಳೆಯದು. ವಿವಿಧ ಅವಧಿಯ ಎಫ್ಡಿ ಮೇಲೆ ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ನಿಗದಿ ಮಾಡಲಾಗಿದೆ ಎಂಬುದನ್ನು ಹೋಲಿಕೆ ಮಾಡಬೇಕು. ನಂತರ ಹೆಚ್ಚು ಬಡ್ಡಿ ನೀಡುವ ಬ್ಯಾಂಕಿನಲ್ಲಿ ಎಫ್ಡಿ ಮಾಡಬಹುದು.
ತಮ್ಮ ಮುಂದಿನ ಜೀವನಕ್ಕಾಗಿ ಉಳಿತಾಯ ಮಾಡಲು ಜನ ಬಯಸುತ್ತಾರೆ. ಇತ್ತೀಚೆಗಷ್ಟೇ ಭಾರತೀಯ ರಿಸರ್ವ ಬ್ಯಾಂಕ್(ಆರ್ಬಿಐ) ಇತ್ತೀಚೆಗೆ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ (ಬಿಪಿಎಸ್) ಏರಿಕೆ ಮಾಡಿದೆ. ಹೀಗಾಗಿ, ರೆಪೋ ದರ ಶೇಕಡ 6.50ಕ್ಕೆ ತಲುಪಿದೆ. ಹೀಗಾಗಿ, ಬ್ಯಾಂಕ್ಗಳು ಫಿಕ್ಸಿಡ್ ಡೆಪಾಸಿಟ್ (Fixed Deposit) ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ತಮ್ಮ ರಿಟರ್ನ್ ನೀಡುವಲ್ಲಿ ಯಶಸ್ವಿಯಾಗಿದೆ. ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಬ್ಯಾಂಕ್ಗಳ ಯಾವುವು ಎನ್ನುವುದನ್ನು ನೀವಿಲ್ಲಿ ನೋಡಬಹುದು.
* HDFC ಬ್ಯಾಂಕ್
ಹಿರಿಯ ನಾಗರಿಕರು 5 ವರ್ಷ 1 ದಿನ – 10 ವರ್ಷಗಳ ಅವಧಿಯ FD ಗಳಿಗೆ ಶೇಕಡಾ 7.75 ರ ಬಡ್ಡಿ ದರವನ್ನು ಪಡೆಯಬಹುದು. ಆದರೆ, ಸಾಮಾನ್ಯರಿಗೆ ಅದೇ ಅವಧಿಗೆ ಬಡ್ಡಿ ದರವನ್ನು ಶೇಕಡಾ 7 ಕ್ಕೆ ನಿಗದಿಪಡಿಸಲಾಗಿದೆ.
* ಫೈನ್ ಕೇರ್ ಸಣ್ಣ ಹಣಕಾಸು ಬ್ಯಾಂಕ್ (Fincare Small Finance Bank)
ಹಿರಿಯ ನಾಗರಿಕರು 1000 ದಿನಗಳಲ್ಲಿ ಹೂಡುವ FD ಗಳಿಗೆ ಶೇಕಡಾ 9.01 ರ ಬಡ್ಡಿದರವನ್ನು ಪಡೆಯಬಹುದು. ಈ ಬ್ಯಾಂಕ್ ನಲ್ಲಿ ಉಳಿದವರಿಗೆ ಈ ಅವಧಿಗೆ ಶೇ.8.41ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ.
* ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Unity Small Finance Bank)
ಹಿರಿಯ ನಾಗರಿಕರು 1001 ದಿನಗಳಲ್ಲಿ FD ಗಳಿಗೆ 9.50 ಶೇಕಡಾ ಬಡ್ಡಿದರವನ್ನು ಪಡೆಯಬಹುದು. ಸಾಮಾನ್ಯರಿಗೆ ಅದೇ ಅವಧಿಗೆ ಶೇ.9ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ.
* ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್ (Utkarsh Small Finance Bank)
ಹಿರಿಯ ನಾಗರಿಕರು 700 ದಿನಗಳಲ್ಲಿ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ಶೇಕಡಾ 9 ರ ಬಡ್ಡಿದರವನ್ನು ಪಡೆಯಬಹುದು. ಇನ್ನುಳಿದವರಿಗೆ ಇದೇ ಅವಧಿಗೆ ಶೇ.8.25ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ.
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
SBI ಅಮೃತ್ ಕಲಶ್ ವಿಶೇಷ ಸ್ಥಿರ ಠೇವಣಿ (FD) ಯೋಜನೆಯನ್ನು 30 ಜೂನ್ 2023 ರವರೆಗೆ ವಿಸ್ತರಿಸಿದೆ. 400 ದಿನಗಳ ನಿರ್ದಿಷ್ಟ ಅವಧಿಯ ಫಿಕ್ಸೆಡ್ ಡೆಪಾಸಿಟ್ ಗೆ ಶೇಕಡಾ 7.10 ರ ಬಡ್ಡಿ ದರವನ್ನು ಪಡೆಯಬಹುದು. ಆದರೆ ಹಿರಿಯ ನಾಗರಿಕರು 7.60% ಬಡ್ಡಿದರವನ್ನು ಪಡೆಯಲು ಅರ್ಹರಾಗಿರುತ್ತಾರೆ.
* ಸುಕನ್ಯಾ ಸಮೃದ್ಧಿ ಯೋಜನೆ ( Sukanya Samriddhi Yojana- SSY) ಯ ಬಡ್ಡಿ ದರವನ್ನು ಇತ್ತೀಚೆಗೆ ಏಪ್ರಿಲ್ನಿಂದ ಜೂನ್ 2023 ರ ತ್ರೈಮಾಸಿಕಕ್ಕೆ 40 ಬೇಸಿಸ್ ಪಾಯಿಂಟ್ಗಳಿಂದ (bps) ಹೆಚ್ಚಿಸಲಾಗಿದೆ. ಹೆಣ್ಣು ಮಗುವಿಗೆ ಜನಪ್ರಿಯ ಹೂಡಿಕೆ ಯೋಜನೆಯು 8 ಶೇಕಡಾ ಬಡ್ಡಿದರವನ್ನು ನೀಡುತ್ತದೆ.
* ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund – PPF) ಖಾತೆದಾರರು ತಮ್ಮ ಹೂಡಿಕೆಯ ಮೇಲೆ 7.1 ಬಡ್ಡಿಯನ್ನು ಪಡೆಯಬಹುದು. ಆದರೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಗಾಗಿ ಬಡ್ಡಿ ದರವು FY 2023-24 (ಏಪ್ರಿಲ್-ಜೂನ್) ಮೊದಲ ತ್ರೈಮಾಸಿಕಕ್ಕೆ ವಾರ್ಷಿಕವಾಗಿ ಶೇಕಡಾ 8.2 ಹೆಚ್ಚಿಸಲಾಗಿದೆ