ಪ್ರತಿ ವರ್ಷ ಕೂಡ ಸಾ.ವನ್ನಪ್ಪಿದವರ ಪಟ್ಟಿಯಲ್ಲಿ ಹಾವಿನಿಂದ ಕಚ್ಚಿಸಿಕೊಂಡು ಸಾವನಪ್ಪಿದವರ ಸಂಖ್ಯೆಯೂ ಕೂಡ ಇರುತ್ತದೆ. ಅಲ್ಲದೇ ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ನಮ್ಮ ಮನೆಗಳಲ್ಲಿ ವಿಷ ಸರ್ಪಗಳು ಸೇರಿಕೊಂಡು ತೊಂದರೆ ಮಾಡಬಹುದು ಅಥವಾ ಹೊಲ, ಜಮೀನುಗಳಲ್ಲಿ ಕೆಲಸ ಮಾಡುವ ರೈತರುಗಳಿಗೆ ಈ ರೀತಿ ಹಾವುಗಳು ಕಚ್ಚಿ ಪ್ರಾಣ ಕಂಠಕ ತಂದೊಡ್ಡಬಹುದು.
ಆದರೆ ಎಲ್ಲಾ ಹಾವುಗಳು ಕೂಡ ವಿಷಕಾರಿ ಹಾವುಗಳಲ್ಲ ಮತ್ತು ಹಾವು ಕಚ್ಚಿದ ರೀತಿ ಹಾಗೂ ಅದರಲ್ಲಿ ಮೂಡಿರುವ ಗುರುತು ಮತ್ತು ಯಾವ ರೀತಿಯ ಹಾವು ಎನ್ನುವ ಆಧಾರದ ಮೇಲೆ ಅದರ ವಿಷದ ಪ್ರಮಾಣವನ್ನು ಲೆಕ್ಕ ಹಾಕಬಹುದು. ಅಲ್ಲದೆ ಹಾವು ಕಚ್ಚಿದ ತಕ್ಷಣವೇ ಕೆಲವೊಂದು ಪ್ರಥಮ ಚಿಕಿತ್ಸೆಯನ್ನು ಮಾಡಿಸಿದರೆ ಪ್ರಾಣಹಾನಿ ಆಗುವುದನ್ನು ಕೂಡ ತಪ್ಪಿಸಬಹುದು.
ಮೊದಲಿಗೆ ಹಾವು ಕಚ್ಚಿದೆ ಎಂದು ಗೊತ್ತಾದ ತಕ್ಷಣ ಆ ವ್ಯಕ್ತಿ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ, ಅವರಿಗೆ ಧೈರ್ಯ ತುಂಬಾ ಬೇಕು ಏನು ಆಗುವುದಿಲ್ಲ ಎಂದು ಹೇಳುತ್ತಿರಬೇಕು. ಹಾವು ಕಚ್ಚಿರುವ ಗುರುತನ್ನು ನೋಡಬೇಕು, ಒಂದು ಅಥವಾ ಎರಡು ಗುರುತು ಮೂಡಿದ್ದರೆ ವಿಷ ಸರ್ಪ ಎಂದರ್ಥ ಅಥವಾ ಮೂರಕ್ಕಿಂತ ಹೆಚ್ಚು ಗುರುತುಗಳಿದ್ದರೆ ಅದರಿಂದ ಅಷ್ಟೇನು ಅಪಾಯ ಇರುವುದಿಲ್ಲ ಆದರೂ ಅದನ್ನು ನಿರ್ಲಕ್ಷಿಸುವಂತಿಲ್ಲ.
ತಕ್ಷಣವೇ ಪ್ರಥಮ ಚಿಕಿತ್ಸೆಯಾಗಿ ಹಾವು ಕಚ್ಚಿರುವ ಜಾಗದ ಒಂದು ಗೇಣು ಬಿಟ್ಟು ಮೇಲೆ ಯಾವುದಾದರೂ ಟೇಪ್ ಇಂದ ಅಥವಾ ಬಟ್ಟೆಯಿಂದ ಕಟ್ಟಬೇಕು. ಇದರಿಂದ ವಿಷವು ದೇಹದಲ್ಲೆಲ್ಲಾ ಸ್ಪ್ರೆಡ್ ಆಗುವುದು ತಪ್ಪುತ್ತದೆ. ಇದಾದ ನಂತರ ಆಯುರ್ವೇದ ಪದ್ಧತಿಯಲ್ಲಿ ಕೆಲ ಮನೆ ಮದ್ದುಗಳನ್ನು ಹಾವು ಕಚ್ಚಿದ ವಿಷ ತೆಗೆಯಲು ಮಾಡಬೇಕು.
ಕಚ್ಚಿರುವ ಗಾಯದ ಮೇಲೆ ವೀಳ್ಯದೆಲೆ ಮತ್ತು ಸುಣ್ಣವನ್ನು ನುಣ್ಣಗೆ ರುಬ್ಬಿ ಅದರ ಲೇಪನವನ್ನು ಹಾಕುವುದರಿಂದ ವಿಷಯ ಪ್ರಮಾಣ ಹೊರ ಬೀಳುತ್ತದೆ, ವಿಷವು ಸುರಿದು ಹೋಗುತ್ತದೆ ಮತ್ತು ದೇಹದ ಇತರ ಭಾಗಕ್ಕೆ ವಿಷಸ್ ಸ್ಪ್ರೆಡ್ ಆಗುವುದು ನಿಲ್ಲುತ್ತದೆ. ಮನೆಗಳ ಬದಿಯಲ್ಲಿ ಅಥವಾ ಹೊಲಗದ್ದೆಗಳ ಕಟ್ಟೆ ಮೇಲೆ ನಂಜಿನ ಕೊಡ್ಲು ಎನ್ನುವ ಗಿಡ ಇರುತ್ತದೆ ಈ ಗಿಡದ ಬೇರನ್ನು ಅರೆದು ನಿಂಬೆರಸದ ಜೊತೆ ಮಿಕ್ಸ್ ಮಾಡಿ ಹಾವು ಕಚ್ಚಿದ ಜಾಗದ ಮೇಲೆ ಹಾಕುವುದರಿಂದ ವಿಷದ ಪ್ರಮಾಣವೆಲ್ಲಾ ಹೊರ ಸೂಸುತ್ತದೆ.
ಇಷ್ಟು ಮಾಡಿದ ಬಳಿಕ ತಡ ಮಾಡುವಂತಿಲ್ಲ ಪ್ರಥಮ ಚಿಕಿತ್ಸೆಯಾಗಿ ಇದನ್ನು ಮಾಡಿ ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕು. ಈ ಮನೆ ಮದ್ದನ್ನು ಹಾವು ಕಚ್ಚಿದ ಸಂದರ್ಭದಲ್ಲಿ ಮಾತ್ರವಲ್ಲದೆ ದೇಹಕ್ಕೆ ನಂಜಾದ ಯಾವುದೇ ಸಮಯದಲ್ಲಿ ಕೂಡ ಬಳಸಬಹುದು. ಮನೆಯಲ್ಲಿ ನಾವು ಸಾಕು ಪ್ರಾಣಿಗಳಾದ ಬೆಕ್ಕು ನಾಯಿ ಇವುಗಳು ಕಚ್ಚಿದಾಗಲೂ ಕೂಡ ದೇಹಕ್ಕೆ ವಿಷದ ಪ್ರಮಾಣ ಏರುತ್ತದೆ. ಅಲ್ಲದೆ ಮನುಷ್ಯನ ಉಗುರು, ಹಲ್ಲು ಇವುಗಳು ಸಹ ವಿಷವೇ ಆಗಿರುತ್ತದೆ.
ಜರಿ ಚೇಳು ಇಂತಹ ಸರೀಸೃಪಗಳು ಕಚ್ಚಿದಾಗ ಕೂಡ ದೇಹಕ್ಕೆ ನಂಜು ಉಂಟಾಗುತ್ತದೆ. ಆ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯಾಗಿ ಈ ಮನೆಮದ್ದನ್ನೇ ಮಾಡಿ ನಂತರ ವೈದ್ಯರ ಬಳಿ ತೆರಳಬೇಕು. ಈ ಉಪಯುಕ್ತ ಮಾಹಿತಿಯು ಅನೇಕರಿಗೆ ಉಪಯೋಗ ಆಗುತ್ತದೆ. ಆ ಕಾರಣಕ್ಕಾಗಿ ಇದನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.