ಸೌಂದರ್ಯ ಕೇವಲ ಮುಖಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ ನಮ್ಮ ತಲೆಯಿಂದ ಪಾದದವರೆಗೂ ಸಹ ಅಚ್ಚುಕಟ್ಟಾಗಿ ಇಗಿದ್ದರೆ ನಮ್ಮ ಸೌಂದರ್ಯವನ್ನು ಅದು ಇಮ್ಮಡಿಗೊಳಿಸುತ್ತದೆ. ಎಲ್ಲರಿಗೂ ತಮ್ಮ ದೇಹ ಸೌಂದರ್ಯದ ಮೇಲೆ ಅತ್ಯಂತ ಒಂದು ಕಾಳಜಿ ಎನ್ನುವಂತಹದ್ದು ಇದ್ದೇ ಇರುತ್ತದೆ ಹೌದು ನಾವು ಚೆನ್ನಾಗಿ ಕಾಣಬೇಕು ಎಂದು ಇಷ್ಟಪಡುತ್ತೇವೆ ಆದರೆ ಕೆಲವರು ತಮ್ಮ ಪಾದಗಳ ಬಗ್ಗೆ ನಿರ್ಲಕ್ಷಿಸುವುದು ಉಂಟು ಹೌದು ಅವರ ಪಾದವು ಒಡೆದು ಅವರ ಪಾದದ ಅಂದವು ಹೊರಟು ಹೋಗಿರುತ್ತದೆ ಆದರೂ ಸಹ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನು ಕೆಲವರು ಈ ಒಂದು ಪಾದ ಒಡೆದಿರುವುದಕ್ಕೆ ತುಂಬ ತಲೆಕೆಡಿಸಿಕೊಂಡು ನಾನಾ ರೀತಿಯಾದಂತಹ ಒಂದು ಕ್ರೀಮ್ಗಳನ್ನು ಹಚ್ಚುತ್ತಾ ಇರುತ್ತಾರೆ. ಹೀಗೆ ಪಾದಗಳು ಒಡೆದು ಹೋಗಿ ಪಾದಗಳ ಹಿಮ್ಮಡಿ ಹಾಳಾಗುವುದಕ್ಕೆ ನಾನಾ ರೀತಿಯ ಕಾರಣಗಳನ್ನು ನಾವು ನೋಡುತ್ತೇವೆ. ನಮ್ಮ ಹಿಮ್ಮಡಿಯ ಭಾಗದಲ್ಲಿ ರಕ್ತ ಸಂಚಾರವು ಸರಿಯಾಗಿ ಆಗದೆ ಇದ್ದಲ್ಲಿ ನಮ್ಮ ಹಿಮ್ಮಡಿ ಒಡೆಯುವಂತಹ ಸಾಧ್ಯತೆಯ ಇರುತ್ತದೆ.
ನಾವು ಎತ್ತರದ ಚಪ್ಪಲಿಯನ್ನು ಹಾಕಿಕೊಂಡರೆ ನಮ್ಮ ಹಿಮ್ಮಡಿಯ ಭಾಗಕ್ಕೆ ರಕ್ತ ಸಂಚಾರ ಸರಿಯಾಗಿ ಆಗದೆ ಪಾದ ಒಡೆಯುವ ಸಾಧ್ಯತೆ ಇರುತ್ತದೆ ಆದ್ದರಿಂದ ನಾವು ಎತ್ತರದ ಚಪ್ಪಲಿ ಹಾಕುವುದನ್ನು ಆದಷ್ಟು ಕಡಿಮೆ ಮಾಡಬೇಕು. ಹಾಗೆಯೇ ನಮ್ಮ ಪಾದವನ್ನು ಸಂರಕ್ಷಣೆ ಮಾಡುವಂತಹ ಶೂ, ಚಪ್ಪಡಿಗಳನ್ನು ಆದಷ್ಟು ಹಾಕಿಕೊಳ್ಳುವುದು ಉತ್ತಮ. ಯಾರಿಗೆಲ್ಲ ಬಾಡಿ ಹೀಟ್ ಆಗಿರುತ್ತದೆಯೋ ಅಂತಹವರ ಪಾದವು ಸಹ ಒಡೆದಿರುತ್ತದೆ ಇಂತಹವರು ಸಹ ಆದಷ್ಟು ಹೊರಗೆ ಹೋದಾಗ ಪಾದ ಮುಚ್ಚುವಂತ ಚಪ್ಪಡಿಗಳನ್ನು ಬಳಸಿ. ಎತ್ತರದ ಚಪ್ಪಲಿಗಳನ್ನು ಹಾಕಿಕೊಳ್ಳುವುದರಿಂದ ರಕ್ತ ಸಂಚಾರ ಸರಿಯಾಗಿ ಆಗದೇ ಇರುವುದು ಅಲ್ಲದೆ ನಮ್ಮ ಬೆನ್ನು ಮತ್ತು ಸೊಂಟಾ ನೋವು ಸಹ ಕಾಣಿಸಿಕೊಳ್ಳುತ್ತದೆ. ಒಡೆದ ಹಿಮ್ಮಡಿಯಲ್ಲಿ ದೂಳು ಅಥವಾ ಕಸ ಸೇರಿ ಅದು ರಕ್ತ ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ನಾವು ಹಿಮ್ಮಡಿಯನ್ನು ಮುಚ್ಚುವಂತಹ ಶೂ ಅಥವಾ ಚಪ್ಪಲಿಯನ್ನು ಹಾಕುವುದು ತುಂಬಾ ಉತ್ತಮ.
ನಾವು ರಾತ್ರಿ ಮಲಗುವ ಮುನ್ನ ನಮ್ಮ ಒಡೆದ ಹಿಮ್ಮಡಿ ಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ನಂತರ ನಮ್ಮ ಹಿಮ್ಮಡಿ ಗಳಿಗೆ ಯಾವುದಾದರೂ ಒಂದು ಕ್ರೀಮ್ ಅಥವಾ ಮಾಸ್ಟರ್ ರೈಸಿಂಗ್ ಲೋಷನ್ ಹಚ್ಚಿ ಬೆಳಿಗ್ಗೆ ಎದ್ದು ತೊಳೆದುಕೊಳ್ಳುವುದು ತುಂಬಾ ಉತ್ತಮ. ಅಷ್ಟೇ ಅಲ್ಲದೆ ವಾರದಲ್ಲಿ ಒಂದು ದಿನ ಉಪ್ಪು ಬೆರೆಸಿದ ಬಿಸಿ ನೀರಿಗೆ ನಿಮ್ಮ ಒಡೆದ ಪಾದಗಳನ್ನು ಹಾಕಿ 15 ನಿಮಿಷಗಳ ಕಾಲ ಹಾಗೆ ಬಿಟ್ಟು ಅದನ್ನು ನಂತರ ಚೆನ್ನಾಗಿ ಉಜ್ಜಿ ತೊಳೆಯುವುದರಿಂದ ಡೆಡ್ ಸ್ಕಿನ್ ದೂರಾಗಿ ನಿಮ್ಮ ಕಾಲಿನ ಕೋಮಲತೆ ಹೆಚ್ಚುತ್ತದೆ ನಿಮ್ಮ ಹಿಮ್ಮಡಿಗಳು ನಯವಾಗಿ ಆಗುತ್ತದೆ. ಅರ್ಧ ಹೋಳು ನಿಂಬೆ ಹಣ್ಣಿಗೆ ಸ್ವಲ್ಪ ಸಕ್ಕರೆ ಹಾಗೂ ಸ್ವಲ್ಪ ಉಪ್ಪನ್ನು ಸೇರಿಸಿ ನಿಮ್ಮ ಪಾದಗಳನ್ನು ಚೆನ್ನಾಗಿ ಉಜ್ಜಿ ತೊಳೆದು ನಂತರ ಬಿಸಿ ನೀರಿನಿಂದ ತೊಳೆದುಕೊಂಡರೆ ನಿಮ್ಮ ಕಪ್ಪಗಿರುವವರು ಪಾದ ಬೆಳ್ಳಗೆ ಆಗಲು ಸಹಾಯ ಮಾಡುತ್ತದೆ.
ಹಾಗೆಯೇ ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ಶುಚಿ ಮಾಡಿಕೊಂಡು ತೆಂಗಿನ ಎಣ್ಣೆ, ಆಲಿವ್ ಆಯಿಲ್ ಅಥವಾ ಬಾದಾಮಿ ಎಣ್ಣೆ ಯಾವುದಾದರೂ ಒಂದು ಎಣ್ಣೆಯನ್ನು ನೀವು ನಿಮ್ಮ ಪಾದಗಳಿಗೆ ಹಚ್ಚಿಕೊಂಡು ಐದು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ. ನಂತರ ಸಾಕ್ಸ್ ಧರಿಸಿ ಹಾಗೆಯೇ ಮಲಗುವುದರಿಂದ ನಿಮ್ಮ ಒಡೆದ ಹಿಮ್ಮಡಿಗೆ ಗುಣಮುಖವಾಗುತ್ತದೆ. ಹೀಗೆ ನಾನಾ ಕಾರಣಗಳಿಗೆ ನಮ್ಮ ಪಾದದ ಹಿಮ್ಮಡಿ ಒಡೆದು ಕೆಲವರಿಗೆ ರಕ್ತ ಬರುವುದು ಸಹ ಉಂಟು ಇಷ್ಟೊಂದು ತೀರ ಗಂಭೀರ ಸ್ಥಿತಿಗೆ ತೆಗೆದುಕೊಂಡು ಹೋಗದೆ ನಾವು ಇಲ್ಲಿ ತಿಳಿಸಿರುವ ಕೆಲವೊಂದು ಮನೆಮದ್ದುಗಳನ್ನು ನೀವು ಮಾಡಿಕೊಂಡು ಬಂದಿದ್ದೇ ಆದಲ್ಲಿ ನಿಮ್ಮ ಪಾದ ಸುಂದರವಾಗಿ ಕೋಮಲವಾಗಿರುತ್ತದೆ ಹಾಗೆಯೇ ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.
ನಮ್ಮ ಪಾದಗಳಿಗೆ ರಕ್ತ ಸಂಚಾರ ಉಂಟಾಗಬೇಕು ಹಾಗಿದ್ದಲ್ಲಿ ನಮ್ಮ ಒಡೆದ ಹಿಮ್ಮಡಿ ಸರಿ ಹೋಗಲು ಸಾಧ್ಯ ಆದ್ದರಿಂದ ನಾವು ಯಾವುದಾದರೂ ಒಂದು ಎಣ್ಣೆಯನ್ನು ಪಾದಕ್ಕೆ ಹಚ್ಚಿಕೊಂಡು ದಿನದಲ್ಲಿ ಒಂದು ಬಾರಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ದಿನಪೂರ್ತಿ ಕೆಲಸವನ್ನು ನಾವು ನಿಂತುಕೊಂಡು ಓಡಾಡಿಕೊಂಡು ಮಾಡಿರುತ್ತೇವೆ ನಮ್ಮ ದೇಹದ ಎಲ್ಲ ಭಾರವು ಕೂಡ ನಮ್ಮ ಪಾದದ ಮೇಲೆ ನಿಂತಿರುತ್ತದೆ ಆದ್ದರಿಂದ ನಾವು ಮಲಗುವ ಮುಂಚೆ ನಮ್ಮ ಪಾದಗಳನ್ನು ಮಸಾಜ್ ಮಾಡಿಕೊಂಡು ಮಲಗುವುದರಿಂದ ತುಂಬಾ ಒಳ್ಳೆಯದು. ಆಸ್ಪತ್ರೆಗೆ ಹೋಗಿ ನಾನಾ ರೀತಿಯ ಕ್ರೀಮ್ ತೆಗೆದುಕೊಳ್ಳುವ ಬದಲು ಈ ರೀತಿಯಾದಂತಹ ನೈಸರ್ಗಿಕವಾದ ಮನೆಮದ್ದನ್ನು ಉಪಯೋಗಿಸಿಕೊಂಡು ನೀವು ನಿಮ್ಮ ಒಡೆದ ಹಿಮ್ಮಡಿಯನ್ನು ಸರಿಮಾಡಿಕೊಳ್ಳಿ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.