ನಾನ ಕಾರಣಗಳಿಂದ ನಮಗೆ ಹಲ್ಲು ನೋವಿನ ಸಮಸ್ಯೆ ಎದುರಾಗುತ್ತಾ ಇರುತ್ತದೆ ಈ ಒಂದು ಹಲ್ಲು ನೋವು ಮತ್ತು ಹಲ್ಲು ಹುಳುಕಿಗೆ ನಾವು ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು. ನಾವಿಲ್ಲಿ ತಿಳಿಸುವಂತಹ ಮನೆ ಮದ್ದನ್ನು ನೀವು ತಯಾರಿಸಿ ಉಪಯೋಗ ಮಾಡಿದ್ದೆ ಆದಲ್ಲಿ ನಿಮ್ಮ ಹುಳುಕು ಹಲ್ಲು ಮತ್ತು ಹಲ್ಲು ನೋವಿಗೆ ಸೂಕ್ತವಾದಂತಹ ಪರಿಹಾರ ಸಿಗುತ್ತದೆ. ಹುಳುಕು ಹಲ್ಲು ಯಾರಿಗೆಲ್ಲ ಹೆಚ್ಚಾಗುತ್ತಾ ಇರುತ್ತದೆ ಅದನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ನಾವು ಈ ಮನೆ ಮದ್ದನ್ನು ತಯಾರು ಮಾಡಿಕೊಳ್ಳಲು ಬೇಕಾಗಿರುವಂತಹ ಮುಖ್ಯ ಪದಾರ್ಥಗಳು ಮೂರು ಟೇಬಲ್ ಸ್ಪೂನ್ ಹಿಪ್ಪಲಿ, ಒಂದು ಟೇಬಲ್ ಸ್ಪೂನ್ ಜೀರಿಗೆ, ಒಂದು ಟೇಬಲ್ ಸ್ಪೂನ್ ಲವಂಗ, ಮೂರು ಟೇಬಲ್ ಸ್ಪೂನ್ ಉಪ್ಪು ಎಲ್ಲಾ ಪದಾರ್ಥಗಳನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ನೈಸ್ ಪೌಡರ್ ಮಾಡಿಕೊಳ್ಳಬೇಕು.
ತಯಾರು ಮಾಡಿಕೊಂಡಿರುವಂತಹ ಪೌಡರ್ ಅನ್ನು ನೀವು ಬೆರಳಿನಿಂದ ತೆಗೆದುಕೊಂಡು ನಿಮ್ಮ ಹಲ್ಲುಗಳನ್ನು ಉಜ್ಜಬೇಕು ಯಾವ ಹಲ್ಲು ಹುಳುಕಾಗಿದೆಯೋ ಹಾಗೆ ನಿಮಗೆ ಯಾವ ಹಲ್ಲು ನೋವು ಬರುತ್ತಿದೆ ಅಂತಹ ಹಲ್ಲಿಗೂ ಸಹ ನೀವು ಈ ಪೌಡರ್ ನಿಂದ ಉಜ್ಜುವುದರಿಂದ ನಿಮಗೆ ಬೇಗ ಹಲ್ಲು ನೋವು ಕಡಿಮೆಯಾಗುತ್ತದೆ ಹಾಗೆಯೇ ಹಲ್ಲು ಹುಳುಕಾಗುವುದನ್ನು ಸಹ ತಪ್ಪಿಸುತ್ತದೆ. ಇದರಲ್ಲಿ ಯಾವುದೇ ರೀತಿಯಾದಂತಹ ಕೆಮಿಕಲ್ ಗಳನ್ನು ಯೂಸ್ ಮಾಡದೆ ಇರುವುದರಿಂದ ನಿಮ್ಮ ಹಲ್ಲುಗಳಿಗೆ ತುಂಬಾ ಸಂರಕ್ಷಣೆಯನ್ನು ನೀಡುತ್ತದೆ ಹಾಗೆ ನಮ್ಮ ಹಲ್ಲುಗಳು ಗಟ್ಟಿಮುಟ್ಟಾಗಿ ಸ್ಟ್ರಾಂಗ್ ಆಗಲು ಸಹಾಯ ಇದು ಸಹಾಯ ಮಾಡುತ್ತದೆ. ಈ ಒಂದು ಪೌಡರ್ ನಿಂದ ನೀವು ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜುವುದರಿಂದ ನಿಮ್ಮ ಹಲ್ಲುಗಳ ನೋವು ಅತಿ ವೇಗವಾಗಿ ಕಡಿಮೆಯಾಗುತ್ತದೆ.
ಪೌಡರ್ ಅನ್ನು ತಯಾರು ಮಾಡಿಸಿಕೊಳ್ಳಲು ನಾವು ಹಿಪ್ಪಲಿ, ಜೀರಿಗೆ, ಲವಂಗ ಹಾಗೂ ಉಪನ್ನು ಉಪಯೋಗಿಸಿದ್ದೇವೆ. ಈ ಎಲ್ಲಾ ಪದಾರ್ಥಗಳು ಸಹ ನಮ್ಮ ಹಲ್ಲನ್ನು ಗಟ್ಟಿ ಮುಟ್ಟನಾಗಿ ಮಾಡಲು ಸಹಾಯಕ ಎಲ್ಲವೂ ಸಹ ನೈಸರ್ಗಿಕವಾದಂತಹ ಪದಾರ್ಥಗಳು ಆದ್ದರಿಂದ ಯಾವುದೇ ರೀತಿಯಾದಂತಹ ಅಡ್ಡ ಪರಿಣಾಮಗಳು ನಮ್ಮ ಒಸಡಿನ ಮೇಲೆ ಹಲ್ಲುಗಳ ಮೇಲೆ ಬೀಳುವುದಿಲ್ಲ. ಎಲ್ಲರ ಮನೆಗಳಲ್ಲೂ ಸಾಮಾನ್ಯವಾಗಿ ಉಪ್ಪು, ಜೀರಿಗೆ ಹಾಗೆಯೇ ಲವಂಗವನ್ನು ಉಪಯೋಗ ಮಾಡುತ್ತೇವೆ ಆದರೆ ಹಿಪ್ಪಲಿ ಎಲ್ಲರ ಮನೆಯಲ್ಲೂ ಸಹ ಇರುವುದಿಲ್ಲ ಅಂತಹವರು ನೀವು ಅಂಗಡಿಗಳಲ್ಲಿ ಹೋಗಿ ಖರೀದಿ ಮಾಡಬಹುದು ಇಲ್ಲ ಎಂದರೆ ನಿಮಗೆ ಆನ್ಲೈನ್ ನಲ್ಲಿಯೂ ಸಹ ಈ ಒಂದು ಹಿಪ್ಪಲಿ ದೊರೆಯುತ್ತದೆ.
ಕೇವಲ ಹಲ್ಲು ನೋವು ಮತ್ತೆ ಹುಳುಕಾಗಿರುವಂತಹ ಹಲ್ಲುಗಳನ್ನು ಸಂರಕ್ಷಿಸುವುದು ಅಷ್ಟೇ ಅಲ್ಲದೆ ನಮ್ಮ ಬಾಯಲ್ಲಿನ ಅನೇಕ ಸಮಸ್ಯೆಗಳು ದಂತ ಸಮಸ್ಯೆ, ಒಸಡಿನ ಸಮಸ್ಯೆ, ಬಾಯಲ್ಲಿ ವಾಸನೆ ಬರುವುದು ಈ ರೀತಿಯಾದಂತಹ ಇನ್ನೂ ಅನೇಕ ಸಮಸ್ಯೆಗಳನ್ನು ಈ ಒಂದು ಪೌಡರ್ ನಿವಾರಣೆ ಮಾಡುತ್ತದೆ. ಇದೊಂದು ಸರಳ ವಾದಂತಹ ವಿಧಾನ ಆಗಿದ್ದರಿಂದ ನಾವು ಮನೆಯಲ್ಲಿಯೇ ತಯಾರು ಮಾಡಿಕೊಂಡು ಇದನ್ನು ಉಪಯೋಗ ಮಾಡಬಹುದು. ನಮ್ಮ ಹಲ್ಲುಗಳು ನೋವಾಗುವುದು ಮತ್ತೆ ಹುಳುಕಾಗುವುದಕ್ಕೆ ಕಾರಣ ಏನೆಂದರೆ ನಾವು ನಮ್ಮ ಹಲ್ಲುಗಳನ್ನು ಸರಿಯಾಗಿ ಸಂರಕ್ಷಣೆ ಮಾಡಿಕೊಳ್ಳದೆ ಇರುವುದು. ಸಮಸ್ಯೆ ಬಂದ ನಂತರ ಅದಕ್ಕೆ ಪರಿಹಾರ ಹುಡುಕುವ ಬದಲು ಸಮಸ್ಯೆಗಳು ಬಾರದೆ ಇರುವ ಹಾಗೆ ನಾವು ನೋಡಿಕೊಳ್ಳುವುದು ತುಂಬಾ ಉಪಯುಕ್ತ.