ಹೆರಿಗೆಯ ನಂತರ ಹೆಣ್ಣುಮಕ್ಕಳಿಗೆ ಮೂಡಿಬರುವ ಸಮಸ್ಯೆಗಳಲ್ಲಿ ಈ ಸ್ಟ್ರೆಚ್ ಮಾರ್ಕ್ ಇದೂ ಕೂಡ ಒಂದು. ಇದು ಎಲ್ಲಾ ಮಹಿಳೆಯರಿಗೂ ಕೂಡ ಹೆರಿಗೆಯ ನಂತರ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ಹೆಣ್ಣು ಗರ್ಭ ಧರಿಸಿದ ಸಮಯದಲ್ಲಿ ಆಕೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಇದರಲ್ಲಿ ದೇಹದ ಮೇಲೆ ಉಂಟಾಗುವ ಬದಲಾವಣೆಗಳು ಹೆರಿಗೆಯ ನಂತರವೂ ಕೂಡ ಹಾಗೆ ಉಳಿದುಕೊಳ್ಳುವುದು ನಂತರದ ದಿನಗಳಲ್ಲಿ ಮಹಿಳೆಯರಿಗೆ ಸಮಸ್ಯೆ ಎನಿಸಬಹುದು.ಅದರಲ್ಲಿ ಗರ್ಭಿಣಿ ಆದ ಸಮಯದಲ್ಲಿ ಹೊಟ್ಟೆ ದಪ್ಪವಾಗುವುದು ತುಂಬಾ ಸಾಮಾನ್ಯವಾದ ಸಂಗತಿ. ಈ ರೀತಿ ದಪ್ಪ ಇರುವ ಹೊಟ್ಟೆಯು ಹೆರಿಗೆಯ ನಂತರ ಕರಗುವುದರಿಂದ ನಂತರದ ದಿನಗಳಲ್ಲಿ ಎಕ್ಸ್ಪಾಂಡ್ ಆಗಿದ್ದ ಸ್ಕಿನ್ ರಿಲಾಕ್ಸ್ ಆದಾಗ ಅದು ಲೂಸ್ ಆಗುತ್ತದೆ. ಹಾಗಾಗಿ ಈ ರೀತಿ ಸ್ಟ್ರೆಚ್ ಮಾರ್ಕ್ ಗಳು ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ.
ಈ ರೀತಿ ಸಮಸ್ಯೆ ಹೆಣ್ಣುಮಕ್ಕಳಿಗೆ ಕೆಲವೊಮ್ಮೆ ತುಂಬಾ ಮುಜುಗರ ಎನಿಸುತ್ತದೆ ಹಾಗೂ ಕೆಲವರು ಈ ರೀತಿ ಮಾರ್ಕ್ ಇರುವುದನ್ನು ಇಷ್ಟ ಪಡುವುದಿಲ್ಲ. ಹಾಗಾಗಿ ಇದನ್ನು ಸರಿಮಾಡಿಕೊಳ್ಳಲು ತುಂಬಾ ಒದ್ದಾಡುತ್ತಾರೆ. ಕೆಲವೊಂದು ಸ್ಟ್ರೆಚ್ ಮಾರ್ಕುಗಳು ಸರಿಹೋಗಬಹುದು ಆದರೆ ಹೆರಿಗೆಯ ನಂತರ ಮೂಡಿಬರುವ ಸ್ಟ್ರೆಚ್ ಮಾರ್ಕ್ ಗಳು ಹೋಗುವುದಕ್ಕೆ ತುಂಬಾ ಸಮಯ ಬೇಕು ಹಾಗೂ ಕೆಲವೊಮ್ಮೆ ಸಂಪೂರ್ಣವಾಗಿ ಹೋಗುವ ಸಾಧ್ಯತೆಗಳು ಕೂಡ ಕಡಿಮೆ. ಸಾಮಾನ್ಯವಾಗಿ ಗ್ರೇ ಬಣ್ಣವಾಗಿ ಈ ಸ್ಟ್ರೆಚ್ ಮಾರ್ಕ್ ಇರುತ್ತದೆ ಆದರೆ ಆ ಜಾಗದಲ್ಲಿ ಕಡಿತ ಉಂಟಾಗಿ ಏನಾದರೂ ಮಹಿಳೆಯರು ಉಜ್ಜಿಕೊಂಡಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದು ಕೆಲವರಿಗೆ ತುಂಬಾ ತುರಿಕೆಯಿಂದ ಕೂಡಿರುತ್ತದೆ ಹಾಗಾಗಿ ಮಹಿಳೆಯರು ಇದರ ಬಗ್ಗೆ ಬಹಳ ಭಯ ಬೀಳುತ್ತಾರೆ. ಗಾಬರಿಯಾಗಿ ಇದರ ಬಗ್ಗೆ ತಲೆ ಕೆಡಿಸಿಕೊಂಡು ಬೇಸರಗೊಳ್ಳುತ್ತಾರೆ.
ಆದರೆ ಇದು ಎಲ್ಲ ಮಹಿಳೆಯರಿಗೂ ಸರ್ವೇಸಾಮಾನ್ಯ ಆಗಿರುವುದರಿಂದ ಇದರ ಬಗ್ಗೆ ಭಯ ಬೀಳುವ ಅಗತ್ಯವೇ ಇರುವುದಿಲ್ಲ. ಆದರೆ ಕಡಿತ ಇದ್ದ ಸಂದರ್ಭದಲ್ಲಿ ಆ ರೀತಿ ನಮಗೆ ನವೆ ಉಂಟು ಮಾಡುವ ಪದಾರ್ಥಗಳಿಂದ ದೂರ ಇರಬೇಕು, ನವೆ ತರುವ ಪದಾರ್ಥಗಳನ್ನು ಸೇವಿಸಬಾರದು. ಇದರಿಂದ ಸ್ವಲ್ಪ ಮಟ್ಟಿಗೆ ನವೆ ಉಂಟಾಗುವುದು ಕಡಿಮೆಯಾಗಬಹುದು. ಅಥವಾ ನವೆ ಉಂಟಾಗುತ್ತಿರುವ ಸಮಸ್ಯೆಗೆ ಆಸ್ಪತ್ರೆಗೆ ಹೋಗಿ ವೈದ್ಯರ ಬಳಿ ಔಷಧಿ ತೆಗೆದುಕೊಳ್ಳಬಹುದು. ಆದರೆ ಸ್ಟ್ರೆಚ್ ಮಾರ್ಕ್ಸ್ ಕಾಣುವ ಸಮಸ್ಯೆಗೆ ಸಂಪೂರ್ಣವಾಗಿ ಗುಣವಾಗುವ ಔಷಧ ಸಿಗುವುದಿಲ್ಲ. ಇದು ಹೆಣ್ಣುಮಕ್ಕಳಿಗೆ ಒಂದು ರೀತಿಯ ಒಳ್ಳೆಯ ನೆನಪು ಆಗಿರುವುದರಿಂದ ಇದನ್ನು ಗಾಡ್ ಗಿಫ್ಟ್ ಎಂದುಕೊಂಡು ಸುಮ್ಮನಾಗಬೇಕು. ಯಾಕೆಂದರೆ ಹೆರಿಗೆಯ ವಿಚಾರದಿಂದ ಈ ರೀತಿ ಸ್ಟ್ರೆಚ್ ಮಾರ್ಕ್ ಉಂಟಾಗಿರುವುದರಿಂದ ಅದು ಮಗುವಿನ ಬಗ್ಗೆ ತಾಯಿಗಿರುವ ಪ್ರೀತಿಯ ಸಂಕೇತವಾಗಿ ಉಳಿದುಕೊಂಡಿರುತ್ತದೆ ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಹೆಮ್ಮೆಪಡಬೇಕು.
ಆದರೆ ಇದರ ಬಗ್ಗೆ ತೀರಾ ಸಮಸ್ಯೆ ಆಗುತ್ತಿದೆ ಎಂದರೆ ಅಂತಹ ಸಂದರ್ಭಗಳಲ್ಲಿ ಒಳ್ಳೆಯ ಡರ್ಮೋಕಾಲಜಿಸ್ಟ್ ಅಥವಾ ಕಾಸ್ಮೆಟಿಕಾಲಿಜಿಸ್ಟ್ ಬಳಿ ಹೋದರೆ ಅವರು ಇದಕ್ಕೆ ಸಂಬಂಧಪಟ್ಟ ಹಾಗೆ ಪರೀಕ್ಷೆ ಮಾಡಿ ಈ ಸಮಸ್ಯೆ ಸರಿಹೋಗುವ ಔಷಧಿಗಳನ್ನು ಕೊಡುತ್ತಾರೆ. ಆಗಲೂ ಕೂಡ ಸಮಸ್ಯೆ ಸಂಪೂರ್ಣವಾಗಿ ಗುಣವಾಗಿ ಬಿಡುತ್ತದೆ ಎಂದು ಹೇಳುವುದು ತುಂಬಾ ಕಷ್ಟ. ಸ್ವಲ್ಪಮಟ್ಟಿಗೆ ಈ ಮಾರ್ಕ್ ಕಡಿಮೆ ಆಗಬಹುದು ಅಷ್ಟೇ. ಇದನ್ನು ಇದರ ಪಾಡಿಗೆ ಬಿಟ್ಟರೆ ಕೆಲವೇ ವರ್ಷಗಳ ಬಳಿಕ ಇದು ಪೂರ್ತಿಯಾಗಿ ನೈಸರ್ಗಿಕವಾಗಿ ಅದೇ ಮಾಯವಾಗುತ್ತದೆ. ಅಲ್ಲಿಯವರೆಗೆ ಈ ಮಾರ್ಕ್ ಕಾಣಿಸುತ್ತಿರುತ್ತದೆ. ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಬೇಸರಗೊಳ್ಳುವ ಅವಶ್ಯಕತೆಯೂ ಇಲ್ಲ. ಇದರ ಬಗ್ಗೆ ಬೇಸರ ಪಟ್ಟುಕೊಳ್ಳದೆ ಇದನ್ನು ತುಂಬಾ ನಾರ್ಮಲ್ ಆಗಿ ತೆಗೆದುಕೊಳ್ಳುವುದು ಒಳ್ಳೆಯದು.
ಕೆಲವೊಮ್ಮೆ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಮನೆಯಲ್ಲಿಯೇ ವಾಸಿ ಮಾಡಿಕೊಳ್ಳಲು ಈ ಸಮಸ್ಯೆಗೆ ಮನೆಮದ್ದು ಇದೆಯಾ ಎನ್ನುವ ಪ್ರಶ್ನೆಗಳನ್ನು ಸಹ ಕೇಳುತ್ತಾರೆ. ಇದಕ್ಕೂ ಸಹಾ ಉತ್ತರ ಇದೆ. ವಿಟಮಿನ್ ಇ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಈ ಸ್ಟ್ರೆಚ್ ಮಾರ್ಕ್ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಮತ್ತು ಅಲೋವೆರಾ ವನ್ನು ಹಚ್ಚಿಕೊಳ್ಳುವುದರಿಂದಲೂ ಸಹ ಈ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಜೊತೆಗೆ ಒಳ್ಳೆಯ ಮಾಯ್ಚರೈಸರ್ ಗಳನ್ನು ಕೂಡ ಬಳಸಬಹುದು. ಇದರ ಜೊತೆಗೆ ಡರ್ಮೋಕಾಲಜಿಸ್ಟ್ ಗಳು ಕೊಡುವ ಕ್ರೀಮ್ ಗಳು ಮತ್ತು ಬಾಡಿ ಲೋಶನ್ ಗಳನ್ನು ಕೂಡ ಹಚ್ಚಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಇದು ಸಂಪೂರ್ಣವಾಗಿ ಸರಿ ಹೋಗಿಬಿಡುವ ಭರವಸೆಗಳು ಮಾತ್ರ ಇರುವುದಿಲ್ಲ. ತೀರ ಅವಶ್ಯಕತೆ ಇದ್ದಾಗ ಈ ರೀತಿ ಮಾಡಿಕೊಂಡು ಕಡಿಮೆ ಮಾಡಿಕೊಳ್ಳಬಹುದು ಅಷ್ಟೇ.