ದೇಹದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವಂತಹ ಅದ್ಭುತವಾದ ಮನೆಮದ್ದು ನಾವು ತಿಳಿಸುವಂತಹ ಈ ಮನೆಮದ್ದನ್ನು ನೀವು ಸೇವನೆ ಮಾಡುವುದರಿಂದ ನೈಸರ್ಗಿಕವಾಗಿ ನಿಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನೀವು ಯಾವುದೇ ಕಾರಣಕ್ಕೂ ಕೂಡ ಚಿಂತೆ ಮಾಡುವಂತಹ ಅಗತ್ಯವಿಲ್ಲ ಏಕೆಂದರೆ ಕೆಲವೊಂದಷ್ಟು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹಕ್ಕೆ ಅಡ್ಡಪರಿಣಾಮಗಳು ಬೀರುತ್ತದೆ ಎಂಬ ಕಾರಣಕ್ಕಾಗಿ ತುಂಬ ಜನ ಎದರುತ್ತಾರೆ. ಆದರೆ ಇದು ನೈಸರ್ಗಿಕ ವಿಧಾನ ಯಾವುದೇ ರೀತಿಯಾದಂತಹ ಡಯೆಟ್ ಇಲ್ಲದೆ ಎಕ್ಸಸೈಜ್ ಇಲ್ಲದೆ ನಾವು ನಮ್ಮ ದೇಹದ ತೂಕವನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ವಿವರವನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ನೋಡಿ. ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥ ಏನು ಹಾಗೂ ಮನೆಮದ್ದನ್ನು ಮಾಡುವಂತಹ ವಿಧಾನ ಏನು ಎಂಬುದನ್ನು ನೋಡುವುದಾದರೆ.
ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥ ಎರಡು ಗ್ರೀನ್ ಆಪಲ್ ಒಂದು ನಿಂಬೆಹಣ್ಣು 2 ಚಕ್ಕೆ 1 ಲೀಟರ್ ನೀರು ಇದಿಷ್ಟು ಪದಾರ್ಥಗಳು ಕೂಡ ಬೇಕಾಗುತ್ತದೆ. ಮೊದಲಿಗೆ ಎರಡು ಗ್ರೀನ್ ಆಪಲ್ ಅನ್ನು ತೆಗೆದುಕೊಂಡು ನೀರಿನಲ್ಲಿ ಶುದ್ಧವಾಗಿ ತೊಳೆದುಕೊಳ್ಳಿ ತದನಂತರ ಅದನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಅದೇ ರೀತಿ ಒಂದು ದೊಡ್ಡ ಗಾತ್ರದ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಕೂಡ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಈಗ ಒಂದು ಪಾತ್ರೆಗೆ ಮೂರು ಗ್ಲಾಸ್ ನಷ್ಟು ನೀರನ್ನು ಹಾಕಿ ಅಂದರೆ ಇದು ಸುಮಾರು ಒಂದು ಲೀಟರಿನಷ್ಟು ನೀರಿನ ಪ್ರಮಾಣವನ್ನು ಒಳಗೊಂಡಿರಬೇಕು. ತದನಂತರ ಕತ್ತರಿಸಿದಂತಹ ಆಪಲ್ ಮತ್ತು ನಿಂಬೆ ಹಣ್ಣು ಹಾಗೂ 2 ಚಕ್ಕೆ ಪೀಸ್ ಗಳನ್ನು ಹಾಕಿ ಇದನ್ನು ನಿಧಾನ ಉರಿಯಲ್ಲಿ ಚೆನ್ನಾಗಿ ಕುದಿಸಬೇಕು ಐದರಿಂದ ಹತ್ತು ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.
ಮೂರು ಗ್ಲಾಸ್ ಇರುವಂತಹ ನೀರು ಎರಡು ಗ್ಲಾಸ್ ಹಾಗಬೇಕು ಅಲ್ಲಿಯವರೆಗೂ ಕೂಡ ಇದನ್ನು ಕುದಿಸಬೇಕು ಅಷ್ಟೇ ಅಲ್ಲದೆ ನಾವು ಹಾಕಿರುವಂತಹ ನಿಂಬೆಹಣ್ಣು ಮತ್ತು ಆಪಲ್ ಚಕ್ಕೆ ಇವೆಲ್ಲವೂ ಕೂಡ ನೀರಿನಲ್ಲಿ ಚೆನ್ನಾಗಿ ಬೆಂದು ಅದರಲ್ಲಿ ಇರುವಂತಹ ಸಂಪೂರ್ಣ ಸಾರಾಂಶವನ್ನು ನೀರಿನಲ್ಲಿ ಬಿಡಬೇಕು ಅಲ್ಲಿಯವರೆಗೂ ಕೂಡ ಇದನ್ನು ಕುದಿಸಿಕೊಳ್ಳಬೇಕು ನಂತರ ಗ್ಯಾಸ್ ಆಫ್ ಮಾಡಿ. ಈ ನೀರು ತಣ್ಣಗಾದ ನಂತರ ಯಾವುದಾದರೂ ಒಂದು ಬಾಟಲ್ ನಲ್ಲಿ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ. ಈ ಮಿಶ್ರಣವನ್ನು ನೀವು ಮೂರು ದಿನದವರೆಗೂ ಕೂಡ ಬಳಕೆ ಮಾಡಬಹುದಾಗಿದೆ ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೆ ಅಥವಾ ತಿಂಡಿ ಮಾಡುವುದಕ್ಕಿಂತ ಮುಂಚೆ ತಯಾರಿಸಿದಂತಹ ನೀರನ್ನು ಉಗುರು ಬೆಚ್ಚಗೆ ಮಾಡಿಕೊಂಡು ಸೇವನೆ ಮಾಡಿ. ಒಂದು ವೇಳೆ ನಿಮಗೆ ಇದನ್ನು ಹಾಗೆಯೇ ಸೇವನೆ ಮಾಡಲು ಸಾಧ್ಯವಾಗದಿದ್ದರೆ ಒಂದು ಟೇಬಲ್ ಸ್ಪೂನ್ ಶುದ್ಧವಾದ ಜೇನುತುಪ್ಪವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಸೇವನೆ ಮಾಡಿ.
ನಾವು ಹೇಳಿದಂತಹ ಈ ವಿಧಾನವನ್ನು ಕೇವಲ ನೀವು ಎಷ್ಟು ದಿನ ಬಳಕೆ ಮಾಡಿದರೆ ಸಾಕು ಹೊಟ್ಟೆಯಲ್ಲಿ ಇರುವಂತಹ ಬೊಜ್ಜು ಸಂಪೂರ್ಣ ಮಂಜಿನಂತೆ ಕರಗಿ ಹೋಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಯಾಗುತ್ತದೆ ತೂಕ ಕಳೆದುಕೊಳ್ಳುವುದಕ್ಕೆ ಇದು ಒಂದು ಅದ್ಭುತವಾದಂತಹ ಮಾರ್ಗ ಅಂತನೇ ಹೇಳಬಹುದು. ದೇಹದ ತೂಕ ಕಳೆದುಕೊಳ್ಳುವುದು ಸುಲಭವಾದ ಮಾತಲ್ಲ ತೂಕವನ್ನು ಕಳೆದುಕೊಳ್ಳಬೇಕು ಅಂದರೆ ಊಟ ಬಿಡಬೇಕು ಅಥವಾ ನಿರಂತರವಾಗಿ ದೇಹವನ್ನು ದಂಡಿಸುವಂತಹ ಕೆಲಸ ಮಾಡಬೇಕು ಅಥವಾ ವ್ಯಾಯಾಮ ಯೋಗ ಮಾಡಬೇಕು ಅಂತ ಹೇಳುತ್ತಾರೆ. ಆದರೆ ಇದ್ಯಾವುದನ್ನೂ ಮಾಡದೆಯು ಕೂಡ ದೇಹದ ತೂಕವನ್ನು ಕಡಿಮೆ ಮಾಡಬೇಕು ಅಂತ ನೀವೇನಾದರೂ ಅಂದುಕೊಂಡಿದ್ದಾರೆ ಖಂಡಿತವಾಗಿಯೂ ಕೂಡ ನಾವು ತಿಳಿಸಿದಂತಹ ಈ ಸರಳ ವಿಧಾನವನ್ನು ಅನುಸರಿಸಿ.
ಏಳು ದಿನ ಈ ಒಂದು ಮಿಶ್ರಣವನ್ನು ಸೇವಿಸಿದರೆ ಖಂಡಿತವಾಗಿಯೂ ಕೂಡ ಒಂದು ತಿಂಗಳ ಒಳಗೆ ಎಂಟರಿಂದ 10 ಕೆಜಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಈ ಪ್ರಯೋಗವನ್ನು ಸಾಕಷ್ಟು ಜನ ಮಾಡಿದ ಫಲಿತಾಂಶವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ನೀವು ಕೂಡ ಒಂದು ಬರಿ ನಾವು ಹೇಳಿದಂತಹ ಮಾದರಿಯಲ್ಲಿ ಮನೆಮದ್ದನ್ನು ಮಾಡಿ ಸೇವನೆ ಮಾಡಿ ಖಂಡಿತವಾಗಿಯೂ ಕೂಡ ಅದ್ಭುತವಾದಂತಹ ಫಲಿತಾಂಶ ನಿಮಗೆ ದೊರೆಯುತ್ತದೆ. ಇದು ನೈಸರ್ಗಿಕ ವಿಧಾನವಾಗಿರುತ್ತದೆ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ಇರುವುದಿಲ್ಲ ಕೆಲವೊಂದಷ್ಟು ಜನ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಮಾತ್ರ ಇಂಜೆಕ್ಷನ್ ಅಥವಾ ಸೇವನೆ ಮಾಡುವುದನ್ನು ನೀವು ನೋಡಬಹುದು ಆದರೆ ಇವೆಲ್ಲವೂ ಕೂಡ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಹಾಗಾಗಿ ಅವುಗಳನ್ನು ಹೊರತುಪಡಿಸಿ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಯಾವ ರೀತಿಯಾಗಿ ಮನೆಮದ್ದನ್ನು ತಯಾರಿ ಮಾಡಬಹುದು ಎಂಬುದನ್ನು ನಾವು ಈಗಾಗಲೇ ತಿಳಿಸಿದ್ದೇವೆ ನಾವು ತಿಳಿಸಿದಂತಹ ನಿಯಮವನ್ನೂ ಚಾಚೂ ತಪ್ಪದೇ ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.ಬಇದರ ಜೊತೆಗೆ ನೀವು ನಿಯಮಿತ ಪ್ರಮಾಣದಲ್ಲಿ ನೀರನ್ನು ಸೇವನೆ ಮಾಡಬೇಕು ಅಂದರೆ ದಿನಕ್ಕೆ ಕಡಿಮೆಯೆಂದರೂ ನಾಲ್ಕರಿಂದ ಐದು ಲೀಟರ್ ನೀರನ್ನು ಕುಡಿಯಬೇಕು. ನಾವು ಹೆಚ್ಚು ನೀರು ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇದರ ಜೊತೆ ವ್ಯಾಯಾಮ ಅಥವಾ ವಾಕಿಂಗ್ ಮಾಡಿ ಮೇಲೆ ತಿಳಿಸಿದಂತಹ ಎಲ್ಲಾ ಸಲಹೆಗಳನ್ನು ನೀವು ಪಾಲನೆ ಮಾಡಿದರೆ ಖಂಡಿತವಾಗಿಯೂ ಕೂಡ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಈ ಮಾಹಿತಿ ನಿಮಗೆ ಇಷ್ಟ ಆದರೆ ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.