ಮಳೆಯಾಶ್ರಿತ ಕೃಷಿಗಿಂತ ಬಾವಿ ನೀರಾವರಿ ಪದ್ಧತಿ ಅಥವಾ ಕೊಳವೆ ಬಾವಿ ತೆರೆಸಿ ಕೃಷಿ ಮಾಡುವುದರಿಂದ ರೈತನು ಹೆಚ್ಚಿನ ಆದಾಯ ಗಳಿಸುವುದರ ಜೊತೆಗೆ ಆಹಾರ ಉತ್ಪಾದನೆ ಕೂಡ ಹೆಚ್ಚಿಗೆ ಮಾಡಬಹುದು. ಕೊಳವೆಬಾವಿ ಇರುವ ಭೂಮಿಯ ಬೆಲೆ ಕೂಡ ಬೆಳೆಯುತ್ತದೆ ಈ ಉದ್ದೇಶದಿಂದ ರೈತರು ತಮ್ಮ ಜಮೀನುಗಳಿಗೆ ಸಾಲ ಮಾಡಿ ಆದರೂ ಕೊಳವೆ ಬಾವಿ ಕೊರೆಸಲು ಇಷ್ಟಪಡುತ್ತಾರೆ.
ಈ ರೀತಿ ಕೊಳವೆ ಬಾವಿ ಕೊರೆಸುವಾಗ ನೀರು 1 ಇಂಚು ಬಂತು, 2 ಇಂಚು ಬಂತು ಎಂದು ಮಾತನಾಡಿರುವುದನ್ನು ಕೇಳಿರುತ್ತೇವೆ. ಹೀಗೆಂದರೆ ಏನು ಅರ್ಥ ರೈತನಿಗೆ ನೀರು ಚೆನ್ನಾಗಿ ಸಿಕ್ಕಿದೆ ಎನ್ನುವುದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳಬೇಕು ಎನ್ನುವ ವಿಚಾರದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಬೋರ್ವೆಲ್ ನಲ್ಲಿ 1 ಇಂಚು ನೀರು ಸಿಕ್ಕಿದೆ ಎಂದು ಹೇಳುವುದರ ಅರ್ಥವೇನೆಂದರೆ, ಕಾಲುವೆಯಲ್ಲಿ ನೀರು ಹೋಗುವುದನ್ನು ಅಳತೆ ಮಾಡಲು ನೋಚ್ ಪ್ಲೇಟ್ ಎಂಬ ನೀರಿನ ಅಳತೆ ಮಾಡುವ ಮಾಪನವನ್ನು ಬಳಸುತ್ತಾರೆ. ಇದು ಬೇರೆ ಬೇರೆ ಶೇಪ್ ನಲ್ಲೂ ಕೂಡ ಸಿಗುತ್ತದೆ.
ಈ ಸುದ್ದಿ ಓದಿ:- BMTC ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷಾ ಪ್ರಾಧಿಕಾರದಿಂದ ಡೈರೆಕ್ಟ್ ಅರ್ಜಿ ಲಿಂಕ್ ಬಿಡುಗಡೆ, ಮೊಬೈಲ್ ನಲ್ಲೇ ಹೀಗೆ ಅರ್ಜಿ ಸಲ್ಲಿಸಿ.!
ವಿ ನೋಚ್ ಪ್ಲೇಟ್, ರೆಕ್ಟ್ಯಾಂಗಲ್ ನೋಚ್ ಪ್ಲೇಟ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಆಕಾರಗಳಲ್ಲಿ ಇದು ಇರುತ್ತದೆ. ಇದರಲ್ಲಿ ವಿ ನೋಚ್ ಪ್ಲೇಟ್ ಎನ್ನುವುದನ್ನು ಬಳಸಿಕೊಂಡು ನಿಮ್ಮ ಬೋರ್ವೆಲ್ ನಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
ವಿ ನೋಚ್ ಪ್ಲೇಟ್ ನ ಒಳಗೆ ನೀರು ಹಾಕಿದಾಗ ಒಳಗಿನಿಂದ ನೀರು ಹೊರಗೆ ಬರುತ್ತದೆ. ಹೀಗೆ ಹೊರ ಬರುತ್ತಿರುವ ನೀರನ್ನು ಅದರ ಫೋರ್ಸ್ ಹಾಗೂ ಪ್ರಮಾಣ ಅಳೆಯಲು ಫಾರ್ಮುಲಾ ಇರುತ್ತದೆ. ಅದನ್ನು ಉಪಯೋಗಿಸಿಕೊಂಡು ಅಳತೆ ಮಾಡುತ್ತಾರೆ. ಈ ಫಾರ್ಮುಲಾದಲ್ಲಿ H ಕಂಡು ಹಿಡಿಯಲಾಗುತ್ತದೆ H ಅಂದರೆ ವಿ ನೋಚ್ ನಲ್ಲಿ ಹರಿಯುತ್ತಿರುವ ನೀರಿನ ಎತ್ತರವಾಗಿದೆ.
ಎಷ್ಟು ಎತ್ತರವಾಗಿ ನೀರು ಹರಿಯುತ್ತಿದೆ ಎಂದರೆ ಅಷ್ಟು ಹೆಚ್ಚು ನೀರು ಹರಿಯುತ್ತಿದೆ ಎಂಬರ್ಥ. ಹೊಸದಾಗಿ ಬೋರ್ವೆಲ್ ಹಾಕಿದಾಗ ಬೋರ್ವೆಲ್ ನಿಂದ ಬರುತ್ತಿರುವ ನೀರನ್ನು ಒಂದು ಕಾಲುವೆಯಲ್ಲಿ ಹೋಗುವ ಹಾಗೆ ಮಾಡಿ ಆ ಕಾಲುವೆಯಲ್ಲಿ ವಿ ನೋಚ್ ಪ್ಲೇಟ್ ಫಿಟ್ ಮಾಡಿ ಅಳೆಯುತ್ತಾರೆ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.! 50 ಸಾವಿರದವರೆಗೆ ಸಹಾಯಧನ ಪಡೆಯಿರಿ.!
ಹೀಗೆ ಅಳೆದಾಗ ವಿ ನೋಚ್ ಮೂಲಕ ಬರುತ್ತಿರುವ ನೀರಿನ ಎತ್ತರವು ಒಂದು ಇಂಚು ಎಂದು ತೋರುತ್ತಿದ್ದರೆ ಬೋರ್ವೆಲ್ ನಲ್ಲಿ ಒಂದು ಇಂಚು ನೀರು ಬರುತ್ತಿದೆ ಎಂಬ ಅರ್ಥ. ಹಾಗೆಯೇ ವಿ ನೋಚ್ ನಲ್ಲಿ 2 ಇಂಚು ಎತ್ತರದಲ್ಲಿ ನೀರು ಬರುತ್ತಿದ್ದರೆ ಬೋರ್ವೆಲ್ ನಲ್ಲಿ 2 ಇಂಚು ನೀರು ಬರುತ್ತಿದೆ ಎಂಬರ್ಥ.
ಈ ಅಳತೆ ಪ್ರಕಾರ ಪ್ರಮಾಣವನ್ನು ಹೇಳುವುದಾದರೆ ಬೋರ್ವೆಲ್ ನಲ್ಲಿ 1 ಇಂಚು ನೀರು ಬರುತ್ತಿದೆ ಎಂದರೆ ಬೋರ್ವೆಲ್ ನಲ್ಲಿ 597 ಲೀಟರ್ ನೀರು ಒಂದು ಗಂಟೆಗೆ ಬರುತ್ತದೆ ಎಂದರ್ಥವಾಗಿದೆ. ಬೋರ್ವೆಲ್ ನಲ್ಲಿ 2 ಇಂಚು ನೀರು ಬರುತ್ತದೆ ಎಂದರೆ ಬೋರ್ವೆಲ್ ನಲ್ಲಿ 3382 ಲೀಟರ್ ನೀರು ಒಂದು ಗಂಟೆಗೆ ಬರುತ್ತದೆ ಎಂದರ್ಥವಾಗಿದೆ.
ಒಂದು ವೇಳೆ ಬೋರ್ವೆಲ್ ನಲ್ಲಿ 3 ಇಂಚು ನೀರು ಬರುತ್ತಿದೆ ಎಂದರೆ 9329 ಲೀಟರ್ ಒಂದು ಗಂಟೆಗೆ ಬರುತ್ತದೆ ಎಂದರ್ಥವಾಗಿದೆ. ಹೀಗೆ ಬೋರ್ವೆಲ್ ನಲ್ಲಿ ಬರುವ ನೀರು ಎಷ್ಟು ಎಂಬುದನ್ನು ಸಾಧನದ ಮೂಲಕ ಅಳೆದು ತಿಳಿದುಕೊಳ್ಳಬಹುದು. ಹೆಚ್ಚು ಇಂಚು ನೀರು ಬಂದಷ್ಟು ಬೋರ್ವೆಲ್ ನಲ್ಲಿ ಹೆಚ್ಚು ನೀರು ಬರುತ್ತಿದೆ ಎಂದು ರೈತ ಖುಷಿ ಪಡಬಹುದು.