ಕೆಮ್ಮು ಹಾಗೂ ನೆಗಡಿಗೆ ಶಾಶ್ವತವಾದ ಪರಿಹಾರ!!
ಸ್ನೇಹಿತರೆ ಇಂದಿನ ಲೇಖನದಲ್ಲಿ 10 ತಿಂಗಳಿನ ಮಗುವಿನಿಂದ ಹಿಡಿದು 70 ವರ್ಷದ ವಯಸ್ಸಾಗಿರುವವರೆಗೂ ಔಷಧಿಯನ್ನು ಒಂದು ಚಮಚ ತೆಗೆದುಕೊಂಡರೆ ಸಾಕು ಯಾವುದೇ ತರಹದ ಶೀತ ನೆಗಡಿ ಕೆಮ್ಮು ಶಾಶ್ವತವಾಗಿ ಒಂದೇ ದಿನದಲ್ಲಿ ದೂರವಿಡಬಹುದು. ಈ ಕಾಲದಲ್ಲಿ ಕೆಮ್ಮು ನೆಗಡಿ ಸರ್ವೇಸಾಮಾನ್ಯವಾಗಿದೆ ಇದು ಎಲ್ಲರಿಗೂ ಕಾಡುವಂತಹ ಸಾಮಾನ್ಯವಾಗಿ ಸಮಸ್ಯೆಯಾಗಿದೆ.
ಇನ್ನು ನೆಗಡಿ ಕೆಮ್ಮು ಬಂದರೆ ರಾತ್ರಿ ಹೊತ್ತು ನಿದ್ದೆ ಸರಿಯಾಗಿ ಬರುವುದಿಲ್ಲ ಹೌದು ನಾವು ಇಂದು ಹೇಳುವ ಮನೆಮದ್ದನ್ನು ಒಮ್ಮೆ ಮಾಡಿ ನೋಡಿದರೆ ಭಯಂಕರವಾದ ಕೆಮ್ಮು ನೆಗಡಿ ಕೂಡ ವೇಗವಾಗಿ ಶಮನವಾಗುತ್ತದೆ. ಸಾಮಾನ್ಯವಾಗಿ ಚಳಿಗಾಲದ ಕಾಯಿಲೆಯಾಗಿದ್ದು, ಇದು ಮುಖ್ಯವಾಗಿ ಸೋಂಕಿನಿಂದ ಅಥವಾ ಹವಾಮಾನದಲ್ಲಿನ ಬದಲಾವಣೆಯಿಂದ ಉಂಟಾಗುತ್ತದೆ. ಈ ಋತುವಿನಲ್ಲಿ ಹೆಚ್ಚಿನ ಜನರು ಉಸಿರಾಟದ ಸಮಸ್ಯೆಗಳಿಗೆ ಒಳಗಾಗುತ್ತಾರೆ, ಅದಕ್ಕಾಗಿ ಚಿಕಿತ್ಸೆ ಪಡೆಯುವುದಕ್ಕಿಂತ ಮುಂಚಿತವಾಗಿ ರಕ್ಷಿಸಿಕೊಳ್ಳುವುದು ಬುದ್ಧಿವಂತವಾಗಿದೆ.
ನೀವು ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತಕ್ಕೆ ಒಳಗಾಗುವವರಲ್ಲಿ ಒಬ್ಬರಾಗಿದ್ದರೆ, ನೈಸರ್ಗಿಕವಾಗಿ ಕರಿಮೆಣಸು ಮತ್ತು ಜೇನುತುಪ್ಪವನ್ನು ಬಳಸಬೇಕು.ಜೇನು ತುಪ್ಪ ಚಿಕಿತ್ಸೆ ನೀಡಲು ಅತ್ಯುತ್ತಮ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ. ಅದರ ಚಿಕಿತ್ಸಕ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಜೇನುತುಪ್ಪವು ಬ್ಯಾಕ್ಟೀರಿಯಾ ವಿರೋಧಿ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕೆಮ್ಮನ್ನು ತಡೆಯುತ್ತದೆ.
ಕರಿಮೆಣಸು ಕೆಮ್ಮು ಮತ್ತು ಶೀತವನ್ನು ತಡೆಗಟ್ಟಲು ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ. ಈ ಮಸಾಲೆಯು ವಿಟಮಿನ್ ಸಿ, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಂತಹ ಅನೇಕ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಜೇನುತುಪ್ಪದೊಂದಿಗೆ ಕರಿಮೆಣಸನ್ನು ಬಳಸಿದಾಗ ಕಫವನ್ನು ಸಡಿಲಗೊಳಿಸುತ್ತದೆ ಮತ್ತು ಉಸಿರಾಡಲು ಸಹಾಯ ಮಾಡುತ್ತದೆ.
ಮೊದಲನೆಯದಾಗಿ ಒಂದು ಲವಂಗವನ್ನು ತೆಗೆದುಕೊಳ್ಳಬೇಕು ಹಾಗೆ ಏಳರಿಂದ ಎಂಟು ಕಾಳಿನಷ್ಟು ಕರಿ ಮೆಣಸನ್ನು ತೆಗೆದುಕೊಳ್ಳಬೇಕು. ಒಂದರಿಂದ ಒಂದೂವರೆ ಇಂಚಿನಷ್ಟು ಹಸಿ ಶುಂಠಿಯನ್ನು ತೆಗೆದುಕೊಳ್ಳಬೇಕು ನಂತರ ಒಂದು ಪ್ಯಾನ್ ನಲ್ಲಿ ಮೆಣಸು ಹಾಗೂ ಲವಂಗವನ್ನು ಉರಿದುಕೊಳ್ಳಬೇಕು ನಂತರ ಹಸಿ ಶುಂಠಿಯನ್ನು ಸ್ವಲ್ಪ ಬೆಚ್ಚಗೆ ಮಾಡಿ ಇಟ್ಟುಕೊಳ್ಳಬೇಕು ನಂತರ ಲವಂಗ ಹಾಗೂ ಮೆಣಸನ್ನು ಚೆನ್ನಾಗಿ ಜಜ್ಜಿ ಪುಡಿ ಮಾಡಿ ಒಂದು ಕಡೆ ಇಟ್ಟುಕೊಳ್ಳಬೇಕು ನಂತರ ಬಿಸಿ ಮಾಡಿದ ಹಸಿ ಶುಂಠಿಯನ್ನು ಚೆನ್ನಾಗಿ ಜಜ್ಜಬೇಕು ನಂತರ ಇನ್ನೊಂದು ಬಟ್ಟಲಿಗೆ ಶುಂಠಿಯ ರಸವನ್ನು ಹಿಂಡಿ ಶೇಖರಣೆ ಮಾಡಬೇಕು.
ಇನ್ನು ಈ ಔಷಧಿಯನ್ನು 10 ತಿಂಗಳ ಒಳಗಿನ ಮಕ್ಕಳಿಗೆ ಅನುಸರಿಸಲು ಇಲ್ಲಿ ತಿಳಿಸುವುದಿಲ್ಲ ಈ ಔಷಧಿಯನ್ನು 10 ವರ್ಷದಿಂದ 70 ವರ್ಷದ ವಯಸ್ಸಗರಿಗೆ ಮಾತ್ರ ಅನುಸರಿಸಲು ಹೇಳಲಾಗಿದೆ. ಮೊದಲಿಗೆ ಒಂದು ಚಮಚಕ್ಕೆ ಎರಡ ಚಿಟಕಿಯಷ್ಟು ಲವಂಗ ಹಾಗೂ ಮೆಣಸಿನ ಪುಡಿಯನ್ನು ಹಾಕಿಕೊಳ್ಳಬೇಕು ಅದಕ್ಕೆ ಕಾಲು ಚಮಚ ಜೇನುತುಪ್ಪವನ್ನು ಬೆರೆಸಿ ಬೆಳಗ್ಗೆ ಹೊತ್ತು 10 ತಿಂಗಳಿಂದ ಎರಡು ವರ್ಷದ ಮಕ್ಕಳಿಗೆ ಇದನ್ನು ನೀಡಬೇಕು ನಂತರ ಕುಡಿಯಲು ಸ್ವಲ್ಪ ನೀರು ಕೊಡಬೇಕು.
ಇನ್ನು ಇದೇ ಮಿಶ್ರಣಕ್ಕೆ ಮೂರು ಹನಿ ಎಷ್ಟು ಹಸಿ ಶುಂಠಿಯ ರಸವನ್ನು ಮಿಶ್ರಣ ಮಾಡಿ ಎರಡರಿಂದ ಐದು ವರ್ಷದ ಒಳಗಿನ ಮಕ್ಕಳಿಗೆ ನೀಡಬೇಕು. ಇನ್ನು ಐದು ವರ್ಷ ಮೇಲ್ಪಟ್ಟವರಿಗೆ ಒಂದು ಚಮಚಕ್ಕೆ ಕಾಲು ಚಮಚ ಮೆಣಸು ಹಾಗೂ ಲವಂಗದ ಪುಡಿಯನ್ನು ಹಾಕಿಕೊಂಡು ಅದಕ್ಕೆ ಅರ್ಧ ಚಮಚದಷ್ಟು ಜೇನುತುಪ್ಪ ಹಾಗೂ ಕಾಲು ಚಮಚ ಹಸಿ ಶುಂಠಿ ರಸವನ್ನು ಬೆರೆಸಿ ಕುಡಿದರೆ ಒಂದೇ ದಿನದಲ್ಲಿ ನೆಗಡಿ ಹಾಗೂ ಕೆಮ್ಮು ಕಡಿಮೆಯಾಗುತ್ತದೆ ಇದನ್ನು ಒಂದು ವಾರದವರೆಗೂ ಅನುಸರಿಸಿದರೆ ನಿಮಗೆ ತಿಳಿಯುತ್ತದೆ ಈ ಔಷದಿಯ ಪರಿಣಾಮ.