ಈ ಮನೆ ಮದ್ದು ನೂರಕ್ಕೂ ಹೆಚ್ಚು ರೋಗಗಳನ್ನು ಕಡಿಮೆ ಮಾಡುತ್ತದೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಾಗಿರಬಹುದು, ಕ್ಯಾಲ್ಸಿಯಂ ಕೊರತೆ ಇರಬಹುದು, ಸಕ್ಕರೆ ಕಾಯಿಲೆ, ಬಿಪಿ, ಅಸಿಡಿಟಿ, ಗ್ಯಾಸ್ಟಿಕ್, ಕೊಲೆಸ್ಟ್ರಾಲನ್ನು ಕರಗಿಸಲು, ಮಲಬದ್ಧತೆ, ಅಜೀರ್ಣ ಇನ್ನೂ ಹೆಚ್ಚು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು. ಈ ಮನೆ ಮದ್ದನ್ನು ತಯಾರಿಸಲು ಸೋಂಪು ಕಾಳು, ಜೀರಿಗೆ ಹಾಗೂ ಧನಿಯಾ ಕಾಳುಗಳನ್ನು ನಾವು ಬಳಸುತ್ತೇವೆ. ಸಾಮಾನ್ಯವಾಗಿ ಸೋಂಪು ದೇಹದಲ್ಲಿ ಬೊಜ್ಜು ಸಂಗ್ರಹವಾಗಲು ಬಿಡುವುದಿಲ್ಲ ಸೋಂಪು ದೇಹದ ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ. ಹಾಗಾಗಿ, ದೇಹದ ತೂಕ ಕಡಿಮೆ ಆಗುತ್ತದೆ. ಸೋಂಪು ಕಾಳಿನ ತಂಪುಕಾರಕ ಗುಣ ಕಣ್ಣುಗಳ ಕೆಳಗಿನ ಭಾಗದಲ್ಲಿ ಊದಿಕೊಳ್ಳಲು ಕಾರಣವಾಗಿರುವ ಅಂಶವನ್ನು ಶಮನಗೊಳಿಸಿ ಊದಿಕೊಂಡಿರುವುದನ್ನು ಮೊದಲಿನಂತಾಗಿಸಲು ನೆರವಾಗುತ್ತದೆ. ಬಾಯಿ ದುರ್ವಾಸನೆ ಹೋಗಲಾಡಿಸುತ್ತದೆ, ಕೂದಲ ಬುಡಗಳನ್ನು ದೃಢಗೊಳಿಸುತ್ತದೆ, ಮುಟ್ಟಿನ ನೋವು ನಿವಾರಿಸುತ್ತೆ. ಮಕ್ಕಳ ಹೊಟ್ಟೆ ಸಮಸ್ಯೆ ನಿವಾರಿಸುತ್ತೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಸೋಂಫು ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಆಹಾರಗಳಲ್ಲಿ ಒಂದಾಗಿದೆ.
ಇನ್ನು ಜೀರಿಗೆಯ ಬಗ್ಗೆ ನೋಡಿದರೆ ಸರಿಯಾಗಿ ಜೀರ್ಣಕ್ರಿಯೆಯಾಗಲು ಜೀರಿಗೆ ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಹೆಚ್ಚಿನ ನಾರಿನಂಶವಿರುತ್ತದೆ, ಇದು ಜಠರಗರುಳಿನ ಚಟುವಟಿಕೆ ಹೆಚ್ಚಿಸಿ, ಕಿಣ್ವ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ. ಆದ್ದರಿಂದ ಇದು ಶೀತ ಮತ್ತು ಕೆಮ್ಮುಗೆ ಅದ್ಭುತವಾದ ಮನೆಮದ್ದು. ವಾಕರಿಕೆಯಂತಹ ಗರ್ಭಧಾರಣೆಯ ರೋಗಲಕ್ಷಣಗಳನ್ನು ಎದುರಿಸಲು ಜೀರಿಗೆ ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಮತ್ತು ಸಿ ಇವೆ. ಇವು ಪ್ರಬಲ ಆಂಟಿ ಆಕ್ಸಿಡೆಂಟು ಗಳಾಗಿದ್ದು ದೇಹಕ್ಕೆ ಮಾರಕವಾಗಿರುವ ವಿಷಕಾರಿ ವಸ್ತುಗಳು ಮತ್ತು ಕ್ಯಾನ್ಸರ್ ಕಾರಕ ಫ್ರೀ ರ್ಯಾಡಿಕಲ್ ಕಣಗಳಿಂದ ರಕ್ಷಣೆ ಒದಗಿಸುತ್ತವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ದೇಹದ ಫ್ರೀ ರಾಡಿಕಲ್ಸ್ ಗಳನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಕೊತ್ತಂಬರಿ ಬೀಜವು ವಿಟಮಿನ್ ಕೆ, ಸಿ ಮತ್ತು ಎ ಯಿಂದ ಸಮೃದ್ಧವಾಗಿದೆ. ಇದು ಕೂದಲನ್ನು ಬಲಪಡಿಸಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ. ಕೊತ್ತಂಬರಿ ನೀರನ್ನು ಪ್ರತಿದಿನ ಸೇವಿಸಿದರೆ, ಅದು ಕೀಲು ನೋವನ್ನು ಕಡಿಮೆ ಮಾಡಬಹುದು.
ಇನ್ನು ಈ ಮನೆ ಮದ್ದನ್ನು ಮಾಡುವುದು ಹೇಗೆ ಎಂದು ತಿಳಿಯೋಣ. ಮೊದಲಿಗೆ ಒಂದು ಬಟ್ಟಲಲ್ಲಿ ಒಂದು ಟೀ ಚಮಚದಷ್ಟು ಸೋಂಪು ಕಾಳನ್ನು ಹಾಕಬೇಕು ಹಾಗೆ ಒಂದು ಟೀ ಚಮಚದಷ್ಟು ಧನ್ಯ ಬೀಜವನ್ನು ಹಾಗೂ ಒಂದು ಸ್ಪೂನ್ ಅಷ್ಟು ಟೀ ಚಮಚದಷ್ಟು ಜೀರಿಗೆಯನ್ನು ಹಾಕಬೇಕು ನಂತರ ಒಂದು ಲೋಟದಷ್ಟು ನೀರನ್ನು ಅದಕ್ಕೆ ಬೆರೆಸಬೇಕು ಹೀಗೆ ರಾತ್ರಿ ಇದನ್ನು ನೆನಸಬೇಕು. ಹೀಗೆ ರಾತ್ರಿ ನೆನೆಸಿಟ್ಟ ಜೀರಿಗೆ ಸೋಂಪು, ಧನಿಯಾ ಕಾಳನ್ನು ಜೊತೆಗೆ ನೆನೆಸಿದ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಯಲು ಬಿಡಬೇಕು, ನಾವು ಹಾಕಿದ ನೀರು ಅರ್ಧದಷ್ಟು ಕಡಿಮೆಯಾಗುವವರೆಗೂ ಕುದಿಸಿ ಒಂದು ಲೋಟಕ್ಕೆ ಸೋಸಿಕೊಳ್ಳಬೇಕು ಹೀಗೆ ಈ ಕಷಾಯವು ತಯಾರಾದ ನಂತರ ಬಿಸಿ ಇದ್ದಾಗಲೇ ಖಾಲಿ ಹೊಟ್ಟೆಯಲ್ಲಿ ದಿನನಿತ್ಯ ಸೇವಿಸುತ್ತಾ ಬಂದಲ್ಲಿ ಅಜೀರ್ಣ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹಾಗೆ ಇನ್ನು ಇತರ ಹಲವು ರೀತಿಯ ರೋಗಗಳು ಕಡಿಮೆಯಾಗುತ್ತದೆ.