ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವಂತಹ ಆಸೆ ಎಲ್ಲರಿಗೂ ಇರುತ್ತದೆ ಅದಕ್ಕಾಗಿ ಹಲವಾರು ರೀತಿಯಾದಂತಹ ಪ್ರಯತ್ನಗಳನ್ನು ಮಾಡೇ ಮಾಡುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಸಹ ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುತ್ತಾರೆ ಆದರೆ ನೀವು ಇದರಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡರೆ ನಿಮ್ಮ ತೂಕವನ್ನು ಇನ್ನು ವೇಗದಲ್ಲಿ ಕಡಿಮೆ ಮಾಡಿಕೊಳ್ಳಬಹುದು. ಮೊದಲಿಗೆ ಒಂದು ಪಾತ್ರೆಯನ್ನು ಬಿಸಿಗೆ ಇಟ್ಟು ಒಂದು ಲೋಟ ನೀರನ್ನು ಹಾಕಿ ಇದಕ್ಕೆ ಒಂದು ಇಂಚಿನಸ್ಟು ಶುಂಠಿಯನ್ನು ಸಿಪ್ಪೆ ತೆಗೆದು ಜಜ್ಜಿ ಆ ನೀರಿಗೆ ಸೇರಿಸಿ, ಶುಂಠಿಯಲ್ಲಿ ಉತ್ತಮವಾದ ಪೋಷಕಾಂಶಗಳು ಇದೆ ವಿಟಮಿನ್ ಸಿ ಇದ್ದು, ಇದು ನಮ್ಮ ದೇಹದ ಕೊಬ್ಬನ್ನು ಕರಗಿಸುತ್ತದೆ. ಎಷ್ಟೇ ಹಳೆಯ ಕೊಬ್ಬು ನಮ್ಮ ದೇಹದಲ್ಲಿ ಅಡಗಿದ್ದರು ಅದನ್ನು ಇದು ತುಂಬಾ ಬೇಗ ಕರಗಿಸುತ್ತದೆ ನಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಸಹ ಇದು ನಿಯಂತ್ರಣದಲ್ಲಿ ಇಡುತ್ತದೆ.
ನಮ್ಮ ಆರೋಗ್ಯಕ್ಕೆ ಶುಂಠಿ ತುಂಬಾನೇ ಒಳ್ಳೆಯದು ಸಣ್ಣ ಆಗಬೇಕು ಎಂದುಕೊಂಡಿರುವವರು ಪ್ರತಿನಿತ್ಯ ಶುಂಠಿಯನ್ನು ಬಳಸಲೇಬೇಕು ಅಷ್ಟೊಂದು ಅದ್ಭುತವಾದಂತಹ ಗುಣಗಳನ್ನು ಈ ಒಂದು ಶುಂಠಿ ಹೊಂದಿದೆ. ದೇಹದ ತೂಕ ಜಾಸ್ತಿಯಾದರೆ ಅದನ್ನು ಕರಗಿಸುವುದು ತುಂಬಾ ಕಷ್ಟ ಆದರೆ ಕೆಲವೊಂದು ಮನೆಮದ್ದುಗಳನ್ನು ಬಳಸಿದ್ದೆ ಆದಲ್ಲಿ ಆರೋಗ್ಯವಾಗಿ ನಾವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನಂತರ ಶುಂಠಿ ನೀರಿನ ಒಳಗಡೆ ಅರ್ಧ ನಿಂಬೆ ಹಣ್ಣನ್ನು ತೆಗೆದುಕೊಂಡು ಸಣ್ಣ ಸಣ್ಣ ಪೀಸ್ ಗಳಾಗಿ ಕಟ್ ಮಾಡಿ ಹಾಕಿ ನಂತರ ಆ ಪಾತ್ರೆಯನ್ನು ಮುಚ್ಚಿ ಐದು ನಿಮಿಷಗಳ ಕಾಲ ಹಾಗೆ ಬಿಡಬೇಕು. ನಿಂಬೆಹಣ್ಣು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅದರಲ್ಲಿಯೂ ಇದು ದೇಹದ ತೂಕದನ್ನು ಕಡಿಮೆ ಮಾಡುವಲ್ಲಿ ಎತ್ತಿದ ಕೈ ಎಂದೆ ಹೇಳಬಹುದು.
ಶುಂಠಿ ಮತ್ತು ನಿಂಬೆಹಣ್ಣಿನ ನೀರನ್ನು ಕುಡಿಯುವುದರಿಂದ ಇಡೀ ದಿನ ನಾವು ಆಕ್ಟಿವ್ ಆಗಿ ಇರಬಹುದು ಜೊತೆಗೆ ನಮ್ಮ ದೇಹದ ತೂಕ ಕಡಿಮೆಯಾಗುತ್ತದೆ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶ ಹೊರಗಡೆ ಹೋಗುತ್ತದೆ. ಐದು ನಿಮಿಷದ ನಂತರ ಆ ಒಂದು ನೀರನ್ನು ನೀವು ಶೋಧಿಸಿಕೊಂಡು ಕುಡಿಯಬೇಕು ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರನ್ನು ಕುಡಿಯುತ್ತಲೇ ಇರುತ್ತೀರ ಆದರೆ ನೀವು ಈ ಒಂದು ಚೇಂಜಸ್ ಅನ್ನು ಮಾಡಿಕೊಂಡರೆ ಅಂದರೆ ಬಿಸಿನೀರಿಗೆ ಬದಲಾಗಿ ನೀವು ಶುಂಠಿ ಮತ್ತೆ ನಿಂಬೆ ಹಣ್ಣನ್ನು ಸೇರಿಸಿ ಕುಡಿಯುವುದರಿಂದ ಅವರು ತುಂಬಾ ಬೇಗನೆ ತೂಕವನ್ನು ಇಳಿಸಿಕೊಳ್ಳಬಹುದು.
ತುಂಬಾ ಜನರಿಗೆ ಹೊಟ್ಟೆಯ ಬೊಜ್ಜು ತುಂಬಾ ಜಾಸ್ತಿ ಇರುತ್ತದೆ ಏನೇ ಪ್ರಯತ್ನ ಮಾಡಿದ್ದರು ಸಹ ಅವರಿಗೆ ಕರಗುತ್ತಾ ಇರುವುದಿಲ್ಲ ಈ ಒಂದು ಪಾನೀಯವನ್ನು ನೀವು ಕುಡಿದರೆ ತುಂಬಾ ವೇಗವಾಗಿ ಕರಗುತ್ತದೆ. ಇದರ ಜೊತೆಗೆ ನೀವು ವ್ಯಾಯಾಮ, ಯೋಗ, ವಾಕಿಂಗ್ ಮಾಡುವುದು ಈ ರೀತಿಯಾದಂತಹ ಒಂದು ಉತ್ತಮ ಅಭ್ಯಾಸಗಳನ್ನು ನಿಮ್ಮ ಜೀವನ ಶೈಲಿಯಲ್ಲಿ ರೂಢಿಸಿಕೊಂಡಿದ್ದೆ ಆದಲ್ಲಿ ನಿಮ್ಮ ದೇಹದ ಸಮತೋಲನವನ್ನು ನೀವು ನಿಮ್ಮ ಕೈ ನಲ್ಲಿ ಇಟ್ಟುಕೊಳ್ಳಬಹುದು. ಈ ಒಂದು ಡ್ರಿಂಕ್ ಅನ್ನು ನೀವು ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇದರ ಪರಿಣಾಮಕಾರಿಯಾಗಿ ನಿಮಗೆ ಕೆಲಸ ಮಾಡುತ್ತದೆ.