ರೈತರಿಗೆ ಸರ್ಕಾರದಿಂದ 10000 ಉಚಿತ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು.? ಈ ಹಣ ಪಡೆಯಲು ಯಾರು ಅರ್ಹರು ಸಂಪೂರ್ಣ ಮಾಹಿತಿ.!

 

WhatsApp Group Join Now
Telegram Group Join Now

ರೈತರಿಗೆ ಸರ್ಕಾರದ ಕಡೆಯಿಂದ ಸಾಕಷ್ಟು ಯೋಜನೆಗಳ ಪ್ರಯೋಜನ ಸಿಗುತ್ತಿದೆ. ಬಿತ್ತನೆ ಬೀಜ, ರಸ ಗೊಬ್ಬರವನ್ನು ಸಬ್ಸಿಡಿ ದರದಲ್ಲಿ ನೀಡುವುದರಿಂದ ಹಿಡಿದು ಬೆಳೆ ವಿಮೆ, ಬೆಳೆ ಪರಿಹಾರ, ಪ್ರೋತ್ಸಾಹ ಧನ, ಕೃಷಿ ಅವಲಂಬಿತ ಚಟುವಟಿಕೆಗಳಿಗೆ ಸಬ್ಸಿಡಿ ರೂಪದ ಸಾಲ ಯಂತ್ರೋಪಕರಣಗಳ ಖರೀದಿಗೆ ಸಾಲ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನ ಸಿಗುತ್ತಿದೆ.

ಈ ಪಟ್ಟಿಗೆ ಸೇರುವ ರೈತ ಸಿರಿ ಯೋಜನೆ ಎನ್ನುವ ಹೆಸರಿನ ರಾಜ್ಯದ ರೈತರಿಗೆ ಪ್ರತಿ ಹೆಕ್ಟರಿಗೆ ರೂ.10,000 ಸಹಾಯಧನ ನೀಡುವ ಹೊಸ ಯೋಜನೆ ಬಗ್ಗೆ ಈ ಲೇಖನದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ. ಸಿರಿಧಾನ್ಯದ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗಿದೆ ಕೇಂದ್ರ ಸರ್ಕಾರದ ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.

ಈ ಸುದ್ದಿ ಓದಿ:- ಜನನ & ಮ.ರಣ ಪ್ರಮಾಣ ಪತ್ರ ಇನ್ಮುಂದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಪಡೆಯಬಹುದು ಹೇಗೆ ನೋಡಿ.!

ಇಷ್ಟು ಪ್ರಾಮುಖ್ಯತೆ ಕೊಡಲು ಕಾರಣ ಸಿರಿಧಾನ್ಯವು ಪೌಷ್ಟಿಕತೆ ಮತ್ತು ರೈತನ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವಂತಹ ಬೆಳೆಯಾಗಿದೆ. ಭಾರತದ ಸಾಂಪ್ರದಾಯಿಕ ಬೆಳೆಯಾದ ಸಿರಿಧಾನ್ಯವನ್ನು ರೈತ ಬೆಳೆಯಲ್ಲಿ ಎನ್ನುವ ಉದ್ದೇಶದಿಂದ ಈ ಕೃಷಿಗೆ ಪ್ರೋತ್ಸಾಹ ನೀಡಲು ಸಿರಿಧಾನ್ಯ ಬೆಳೆಯುವ ರೈತರಿಗೆ ಸರ್ಕಾರದ ಕಡೆಯಿಂದ ಸಹಾಯ ನೀಡಲಾಗುತ್ತಿದೆ. ಈ ಯೋಜನೆ ಹೆಸರೇನು? ಅರ್ಜಿ ಸಲ್ಲಿಸಲು ಅರ್ಹತೆಗಳು? ಬೇಕಾಗುವ ದಾಖಲೆಗಳು? ಅರ್ಜಿ ಸಲ್ಲಿಸುವ ವಿಧಾನ ಇತ್ಯಾದಿ ವಿವರ ಹೀಗಿದೆ.

ಯೋಜನೆಗೆ ಹೆಸರು:- ರೈತ ಸಿರಿ ಯೋಜನೆ

ಯೋಜನೆಯ ಕುರಿತ ಪ್ರಮುಖ ಅಂಶಗಳು:-

* ಈ ರೈತ ಸಿರಿ ಯೋಜನೆಯನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ಇನ್ನಿತರೆ ಸಮಾನ ಯೋಜನೆಗಳೊಂದಿಗೆ ಸಂಯೋಜಿಸಿ ಅನುಷ್ಠಾನ ಮಾಡಲಾಗುತ್ತಿದೆ
* ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ಹೆಕ್ಟೇರ್ ಗೆ ರೂ.10000 ನಂತೆ ಸಹಾಯಧನವನ್ನುಎರಡು ಕಂತುಗಳಲ್ಲಿ ನೇರವಾಗಿ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ
* ಊದಲು, ನವಣೆ, ಹಾರಕ, ಸಾಮೆ ಮತ್ತು ಬರಗು ಬೆಳೆಯುವ ರೈತರಿಗೆ ಮಾತ್ರ ಈ ಯೋಜನೆ ನೆರವು ಸಿಗುತ್ತದೆ.

* ಇದರಲ್ಲಿ ಮೊದಲನೇ ಕಂತಿನ ಪ್ರೋತ್ಸಾಹ ಧನವಾಗಿ ರೂ.6,000 ಗಳನ್ನು ಸಿರಿಧಾನ್ಯ ಬಿತ್ತನೆ ಮಾಡಿದ 30 ದಿನಗಳ ನಂತರ ಬೆಳೆಯನ್ನು GPS ಆಧಾರಿತ ಫೋಟೋ ಪರಿಶೀಲಿಸಿದ ನಂತರ ರೈತನ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತದೆ
* ಎರಡನೇ ಕಂತಿನ ಹಣವಾಗಿರುವ ರೂ. 4000 ಹಣವನ್ನು ಕೆಲ ದಿನಗಳ ನಂತರ ಜಮೆ ಮಾಡಲಾಗುತ್ತದೆ.

ಈ ಸುದ್ದಿ ಓದಿ:- ರೈತರ ಬೆಳೆ ವಿಮೆ ಹಣ ಬಿಡುಗಡೆ.! ನಿಮ್ಮ ಖಾತೆಗೂ ಇನ್ಸೂರೆನ್ಸ್ ಹಣ ಬಂದಿದೆಯೇ ಇಲ್ಲವೋ ತಿಳಿಯಲು ಈ ರೀತಿ ಚೆಕ್ ಮಾಡಿ.!
ಅರ್ಜಿ ಸಲ್ಲಿಸಲು ಅರ್ಹತೆಗಳು:-

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ರೈತನಾಗಿದ್ದು, ತನ್ನ ಜಮೀನಿನಲ್ಲಿ ಸಿರಿಧಾನ್ಯ ಬೆಳೆದಿರಬೇಕು
* ರೈತನ ಹೆಸರಿನಲ್ಲಿ ಜಮೀನು ಇರಬೇಕು ಒಂದು ವೇಳೆ ಜಂಟಿ ಖಾತೆ ಹೊಂದಿದ್ದಲ್ಲಿ ಇತರೆ ಖಾತೆದಾರರಿಂದ ಒಪ್ಪಿಗೆ ಪತ್ರ ಪಡೆದಿರಬೇಕು
* ಒಂದು ವೇಳೆ ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನು ಇದ್ದು ಅವರು ಸಿರಿಧಾನ್ಯ ಬೆಳೆಯಲು ಆರಂಭಿಸಿದ ಮೇಲೆ ಒಂದು ವೇಳೆ ಮೃ’ತ ಪಟ್ಟಿದ್ದರೆ ಮಕ್ಕಳು ಅರ್ಜಿ ಸಲ್ಲಿಸುವುದಾದರೆ ಕುಟುಂಬದಿಂದ ಒಪ್ಪಿಗೆ ಪತ್ರ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಂದ ಧೃಡೀಕರಣ ಪತ್ರ ನೀಡಬೇಕು.

* ಮಹಿಳೆಯ ಹೆಸರಿನಲ್ಲಿ ಖಾತೆ ಇದ್ದರೆ ಆಕೆಯೇ ಅರ್ಜಿ ಸಲ್ಲಿಸಬೇಕು ಕುಟುಂಬದ ಇತರ ಪುರುಷರ ಹೆಸರಿನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ
* ಸಿರಿಧಾನ್ಯವನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು
* ಗರಿಷ್ಠ ಎರಡು ಹೆಕ್ಟರ್ವರೆಗೆ ಮಾತ್ರ ಈ ಯೋಜನೆ ಪ್ರಯೋಜನ ಪಡೆಯಬಹುದು.

ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಕೇವಲ 36 ರೂಪಾಯಿ ಹೂಡಿಕೆ ಮಾಡಿದರೆ ಸಾಕು, 6 ಲಕ್ಷ ಸಿಗಲಿದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

* ಆಧಾರ್ ಕಾರ್ಡ್
* ಭೂ ದಾಖಲೆಗಳು
* ಬ್ಯಾಂಕ್ ಪಾಸ್ ಬುಕ್ ವಿವರ
* ವಿಳಾಸ ಪುರಾವೆ
* ವಸತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಇನ್ನಿತರ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:-
ನಿಮ್ಮ ವ್ಯಾಪ್ತಿಗೆ ಬರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now