ಹಿರಿಯ ನಾಗರಿಕರಿಗೆ (Senior citizen) ಜೀವನ ನಿರ್ವಹಣೆಗಾಗಿ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಜೀವನಪೂರ್ತಿ ದುಡಿದು ಮನೆ ಮಕ್ಕಳು ಎಂದು ಅವರಿಗೆ ಅನುಕೂಲ ಮಾಡಿಕೊಟ್ಟ ಮೇಲೆ ಎಲ್ಲಾ ಮಕ್ಕಳು ಕೂಡ ತಮ್ಮ ಪೋಷಕರನ್ನು ಜವಾಬ್ದಾರಿ ಎಂದು ನೋಡಿಕೊಳ್ಳುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ. ಒಂದು ವೇಳೆ ನೋಡಿಕೊಂಡರು ಕೂಡ ಪ್ರತಿಯೊಂದಕ್ಕೂ ಮಕ್ಕಳ ಮೇಲೆ ಡಿಪೆಂಡ್ ಆಗುವುದು ಅವರಿಗೂ ಹೊರೆ ಎನಿಸಬಹುದು.
ಹಾಗಾಗಿ ದುಡಿಯುವ ವಯಸ್ಸಿನಿಂದಲೇ ಜೀವನದ ನಿವೃತ್ತಿಯ ಬದುಕಿಗಾಗಿ ಸ್ವಲ್ಪ ಮೊತ್ತದ ಹಣವನ್ನು ಕೂಡಿಡುತ್ತಾ ಬರಬೇಕು, ಆಗ ವಯಸ್ಸಾದ ಮೇಲೆ ನೆಮ್ಮದಿಯಾಗಿ ಜೀವನವನ್ನು ಯಾರ ಹಂಗು ಇಲ್ಲದೆ ಕಳೆಯಬಹುದು. ಈ ರೀತಿ ಹಣವನ್ನು ನಿಮ್ಮಲ್ಲೇ ಉಳಿಸುವ ಬದಲು ಸರ್ಕಾರದ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿಮಗೆ ಖಚಿತ ಮೊತ್ತದ ಆದಾಯ ಸಿಗುತ್ತದೆ. ಅಂತಹ ಕೆಲವು ಯೋಜನೆಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ (Natendra Modi) ಅವರು ದೇಶದ ಎಲ್ಲಾ ವರ್ಗದ ಜನರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಣವನ್ನು ಉಳಿತಾಯ ಮಾಡಬೇಕು ಎನ್ನುವವರು ಹೂಡಿಕೆ ಮಾಡಬೇಕು ಎನ್ನುವವರಿಗೆ ಆಯಾ ವರ್ಗಕ್ಕೆ ಅನುಗುಣವಾಗಿ ಪ್ರತ್ಯೇಕವಾದ ಯೋಜನೆಗಳ ಅನುಕೂಲ ಕಲ್ಪಿಸಲಾಗಿದೆ ಇದರಲ್ಲಿ ಹಿರಿಯ ನಾಗರಿಕರಿಗೆ ಅವರದ್ದೇ ಆದ ವ್ಯವಸ್ಥೆ ಇದೆ.
ಆ ಯೋಜನೆಗಲ್ಲಿ ಹೂಡಿಕೆ ಮಾಡಿದರೆ ಅವರಿಗೆ 60 ವರ್ಷ ತುಂಬಿದ ಬಳಿಕ ಹಣ ಬರುತ್ತದೆ. ಇವುಗಳಲ್ಲಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಪೋಸ್ಟ್ ಆಫೀಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಲಭ್ಯವಿರುವ ಪ್ರಧಾನಮಂತ್ರಿ ಅಟಲ್ ಪೆನ್ಷನ್ ಯೋಜನೆ ಹಾಗೂ ಹಿರಿಯ ನಾಗರಿಕರ ಪಿಂಚಣಿ ಯೋಜನೆ ಆರಿಸುವುದು ಉತ್ತಮ.
ಬೋರ್ವೆಲ್ ಹಾಕಿಸಬೇಕು ಅಂದುಕೊಂಡವರಿಗೆ ಉಪಯುಕ್ತ ಮಾಹಿತಿ.!
ಪ್ರಧಾನ ಮಂತ್ರಿ ಅಟಲ್ ಪೆನ್ಷನ್ ಯೋಜನೆ (Pradana Mantri Atal pension Scheme):-
ಈ ಯೋಜನೆಯನ್ನು ಭಾರತದಲ್ಲಿರುವ ಬಡವರು, ಆರ್ಥಿಕವಾಗಿ ಹಿಂದುಳಿದವರು, ಅಸಂಘಟಿತ ವಲಯದಲ್ಲಿ ದುಡಿಯುವವರು ಆರಿಸಬಹುದಾಗಿದೆ. 18 ವರ್ಷದಿಂದ 40 ವರ್ಷದವರೆಗೆ ನೀವು ಪ್ರತಿ ತಿಂಗಳು ಈ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ 5000 ವರೆಗೂ ಕೂಡ ಹೂಡಿಕೆ ಮಾಡಬಹುದು. ನೀವು ಮಾಡಿದ ಹೂಡಿಕೆ ಮೊತ್ತದ ಆಧಾರದ ಮೇಲೆ ನಿಮಗೆ 60 ವರ್ಷ ತುಂಬಿದ ಬಳಿಕ ಪೆನ್ಷನ್ ಬರುತ್ತದೆ. ನಿಮ್ಮ ಮರಣದ ನಂತರ ನಿಮ್ಮ ಸಂಗಾತಿಗೂ ಪೆನ್ಷನ್ ಬರುತ್ತದೆ ಅವರ ಮರಣದ ನಂತರ ನೀವು ನಾಮಿನೇ ಮಾಡಿರುವವರಿಗೆ ನೀವು ಹೂಡಿಕೆ ಮಾಡಿದ್ದ ಹಣ ಹೋಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizen Saving Scheme) :-
ಈ ಯೋಜನೆಯಡಿ ನೀವು ಒಂದೇ ಬಾರಿಗೆ ನಿಮ್ಮ ಉಳಿತಾಯದ ಹಣವನ್ನು 5 ವರ್ಷಗಳಿಗೆ ಠೇವಣಿ ಮಾಡಬೇಕಾಗುತ್ತದೆ, ಈ ಅವಧಿ ಮುಗಿದ ಬಳಿಕ 3 ವರ್ಷಗಳಿಗೆ ವಿಸ್ತರಿಸುವ ಅವಕಾಶವೂ ಇದೆ. ನೀವು ಕನಿಷ್ಠ 1000 ರೂಪಾಯಿಯಿಂದ ಗರಿಷ್ಠ 15 ಲಕ್ಷದವರೆಗೂ ಹೂಡಿಕೆ ಮಾಡಬಹುದು. ಆ ಹಣಕ್ಕೆ 7.40% ಬಡ್ಡಿದರ ಸಿಗುತ್ತದೆ. ಇದನ್ನು ನೀವು ಪ್ರತಿ ತಿಂಗಳು ಕೂಡ ಪಡೆದುಕೊಳ್ಳಬಹುದು ನಿಮ್ಮ ಹೂಡಿಕೆ ಆಧಾರದ ಮೇಲೆ ನಿಮಗೆ ಪೆನ್ಷನ್ ಬರುತ್ತದೆ.
ಬೋರ್ವೆಲ್ ಹಾಕಿಸಬೇಕು ಅಂದುಕೊಂಡವರಿಗೆ ಉಪಯುಕ್ತ ಮಾಹಿತಿ.!
ನೀವು ನಿಮ್ಮ ಜೀವಮಾನ ಪೂರ್ತಿ ಪೆನ್ಷನ್ ಪಡೆಯಬಹುದು. ನಿಮ್ಮ ನಂತರ ನೀವು ನಾಮಿನಿ ಮಾಡಿದ ವ್ಯಕ್ತಿಗೆ ನಿಮ್ಮ ಹೂಡಿಕೆ ಮೊತ್ತ ಸೇರುತ್ತದೆ. ಕನಿಷ್ಠ ದಾಖಲೆ ಪತ್ರಗಳು ಹಾಗೂ ಸರಳ ಪ್ರಕ್ರಿಯೊಂದಿಗೆ ನೀವು ಈ ಯೋಜನೆಯನ್ನು ಖರೀದಿಸಬಹುದು ಇವುಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಛೇರಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಿಗೆ ಭೇಟಿ ಕೊಡಿ.