ಪ್ಯಾನ್ ಕಾರ್ಡ್ (Pan Card) ಎಂದು ಕರೆಯಲಾಗುವ ಈ ಶಾಶ್ವತ ಸಂಖ್ಯೆಯನ್ನು ಬಯೋಮೆಟ್ರಿಕ್ ಆಧಾರಿತ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ (Aadhar link) ಮಾಡುವುದಕ್ಕೆ ಕಳೆದ ವರ್ಷವೇ ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು. ಇಲ್ಲಿಯವರೆಗೂ ಸಾಕಷ್ಟು ಬಾರಿ ಉಚಿತವಾಗಿ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಿಕೊಳ್ಳಲು ಅವಕಾಶ ನೀಡಿದ್ದ ಇಲಾಖೆಯು ಕಳೆದ ವರ್ಷ ರೂ.1000 ದಂಡ ಕಟ್ಟಿ ಆಧಾರ್-ಪಾನ್ ಲಿಂಕ್ ಮಾಡಿಕೊಳ್ಳಲು ಮತ್ತೊಂದು ವರ್ಷಗಳವರೆಗೆ ಕಾಲಾವಕಾಶ ನೀಡಿತು.
ಈಗ ಆ ಗಡುವೂ ಕೂಡ ಮುಗಿಯುತ್ತಾ ಬರುತ್ತಿದೆ, ಆದಾಯ ತೆರಿಗೆ ಇಲಾಖೆ ನೀಡಿದ್ದ ಸಮಯವಕಾಶದ ಪ್ರಕಾರವಾಗಿ ಮೇ 31, 2024 ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡಲು ಕೊನೆಯ ದಿನವಾಗಿದೆ. ಈ ಬಗ್ಗೆ ಆದಾಯ ಇಲಾಖೆ ಕಡೆಯಿಂದಲೇ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹೊರ ಬಿದ್ದಿದ್ದು ಮತ್ತೊಮ್ಮೆ ಜನಸಾಮಾನ್ಯರಿಗೆ ಖಡಕ್ ಸೂಚನೆ ರವಾನಿಸಿದೆ.
ಈ ಸುದ್ದಿ ಓದಿ:- ರೈತರಿಗೆ ಇನ್ಮುಂದೆ ಪ್ರತಿ ತಿಂಗಳು 3000 ಪಿಂಚಣಿ.! ಕೇಂದ್ರ ಸರ್ಕಾರದ ಹೊಸ ಯೋಜನೆ.!
ಈಗ ನೀಡಿರುವ ನೋಟಿಫಿಕೇಶನ್ ನಲ್ಲಿರುವ ಅಂಶ ಏನೆಂದರೆ ಹೆಚ್ಚಿನ ದರಗಳಲ್ಲಿ ತೆರಿಗೆ ಕಡಿತವಾಗುವುದನ್ನು (TDS) ತಪ್ಪಿಸಲು ಮೇ 30ರ ಒಳಗಾಗಿ ಇನ್ನು ಯಾರೆಲ್ಲ ಪ್ಯಾನ್ ಕಾರ್ಡ್ ನ್ನು ತಮ್ಮ ಆಧಾರ್ ನೊಂದಿಗೆ ಲಿಂಕ್ ಮಾಡಿಲ್ಲ ಅವರು ಕೂಡಲೇ ಈ ಪ್ರಕ್ರಿಯೆ ಪೂರ್ತಿಗೊಳಿಸಬೇಕು.
ಇದಕ್ಕೆ ಇನ್ನು ಎರಡು ದಿನಗಳು ಅಷ್ಟೇ ಬಾಕಿ ಇದೆ ಮೇ 31ರ ನಂತರ ಇನ್ನು ಹೆಚ್ಚಿನ ದಂಡ ಪಾವತಿಯೊಂದಿಗೆ ನೀವು ಈ ಪ್ರಕ್ರಿಯೆ ಪೂರ್ತಿಗೊಳಿಸಲಬೇಕಾಗುತ್ತದೆ ಅಲ್ಲಿಯವರೆಗೂ ಸುಮಾರು 11 ಕೋಟಿ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳಲಿದೆ ಹಾಗಾಗಿ ಈ ಬಗ್ಗೆ ಎಚ್ಚರ ಇರಲಿ ಎಂದು ಸಂದೇಶ ಹೊರಡಿಸಿದೆ.
ಪ್ಯಾನ್ ಕಾರ್ಡ್ ಈಗ ಬ್ಯಾಂಕಿಂಗ್ ವಹಿವಾಟುಗಳಿಗೆ ಒಂದು ಪ್ರಮುಖ ದಾಖಲೆಯಾಗಿದೆ. ನಾವು ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ನಮ್ಮ ಹಣಕಾಸಿನ ವರ್ಗಾವಣೆ ತನಕ ಅನೇಕ ವಿಚಾರಗಳಲ್ಲಿ ಪಾನ್ ಕಾರ್ಡ್ ದಾಖಲೆಯಾಗಿ ಕೇಳುತ್ತಾರೆ ಒಂದು ವೇಳೆ ನಮ್ಮ ಪಾನ್ ಕಾರ್ಡ್ ಸ್ಥಗಿತಗೊಂಡರೆ ಅಥವಾ ನಿಷ್ಕ್ರಿಯಗೊಂಡರೆ ನಾವು ಹೆಚ್ಚಿನ ಮೊತ್ತದ ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಈ ಸುದ್ದಿ ಓದಿ:- ಗಂಗಾಕಲ್ಯಾಣ ಯೋಜನೆ ಬೋರ್ವೆಲ್ ಹಾಕಿಸಲು 3.5 ಲಕ್ಷ ಉಚಿತ.!
ಉದಾಹರಣೆಗೆ ನೀವೇನಾದರೂ ರೂ. 1ಲಕ್ಷ ಹಣವನ್ನು ವರ್ಗಾವಣೆ ಮಾಡಿದರೆ ರೂ.20,000 ಹಣ ಟ್ಯಾಕ್ಸ್ ಕಡಿತಗೊಳ್ಳುತ್ತದೆ. ಹಾಗಾಗಿ ಇಂತಹ ಆರ್ಥಿಕ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಸೂಚಿಸುತ್ತಿರುವ ಈ ನಿಯಮವನ್ನು ಶೀಘ್ರವೇ ಪೂರ್ತಿಗೊಳಿಸಿ.
ನಿಮ್ಮ ಪಾನ್ ಕಾರ್ಡ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದಿಯೋ ಇಲ್ಲವೇ ಎನ್ನುವ ಅನುಮಾನ ಇದ್ದರೆ ಈ ಕೆಳಗಿನ ಹಂತಗಳನ್ನು ಪೂರೈಸುವ ಮೂಲಕ ಚೆಕ್ ಮಾಡಿಕೊಳ್ಳಿ.
* www.incometax.gov.in ಲಿಂಕ್ ಕ್ಲಿಕ್ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವಿಭಾಗಕ್ಕೆ ಭೇಟಿ ಕೊಡಿ
* ಸ್ಕ್ರೀನ್ ಮೇಲೆ ಕ್ವಿಕ್ ಲಿಂಕ್ಸ್ ಎಂಬ ಆಪ್ಷನ್ ಇರುತ್ತದೆ ಸೆಲೆಕ್ಟ್ ಮಾಡಿ ಲಿಂಕ್ ಆಧಾರ್ ಸ್ಥಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ ಮುಖಪುಟದಲ್ಲಿ ನಿಮ್ಮ ಆಧಾರ್ ಹಾಗೂ ಪ್ಯಾನ್ ಸಂಖ್ಯೆಯನ್ನು ನಮೂದಿಸಿ.
ಈ ಸುದ್ದಿ ಓದಿ:- ಸರ್ಕಾರದಿಂದ ಒಂದು ವರ್ಷ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.
* ನಿಮ್ಮ ಪ್ಯಾನ್-ಆಧಾರ್ ಲಿಂಕ್ ಆಗಿದ್ದರೆ ಇದರ ಬಗ್ಗೆ ಪಾಪಾ-ಆಪ್ ಮೆಸೇಜ್ ಬರುತ್ತದೆ. ಲಿಂಕ್ ಆಗಿದ್ದರೆ ನಿಮ್ಮ ಪ್ಯಾನ್ ಈಗಾಗಲೇ ನೀಡಿರುವ ಆಧಾರ್ ಲಿಂಕ್ ಆಗಿದೆ, ಪ್ಯಾನ್ ನ್ನು ಆಧಾರ್ ನೊಂದಿಗೆ ಲಿಂಕ್ ಮಾಡಿಲ್ಲ, ಪ್ಯಾನ್ ನೊಂದಿಗೆ ಆಧಾರ್ ಲಿಂಕ್ ಮಾಡಲು ಲಿಂಕ್ ಆಧಾರ್ ಕ್ಲಿಕ್ ಮಾಡಿ ಎನ್ನುವ ಮೆಸೇಜ್ ಬರುತ್ತದೆ.