ಕೃಷಿ ಇಲಾಖೆ ವತಿಯಿಂದ ರೈತರಿಗಾಗಿ ಸಾಕಷ್ಟು ಕಲ್ಯಾಣ ಯೋಜನೆಗಳಡಿಯಲ್ಲಿ ನೆರವು ನೀಡಲಾಗುತ್ತಿದೆ. ಮುಖ್ಯವಾಗಿ ಅತಿವೃಷ್ಟಿ, ಅನಾವೃಷ್ಠಿ ಮತ್ತಿತರ ಕಾರಣಗಳಿಂದ ಬೆಳೆ ಹಾನಿಯಾದರೆ ಇನ್ಪುಟ್ ಸಬ್ಸಿಡಿ ಯೋಜನೆಯ(Input subsidy yojana) ಮೂಲಕ ಪರಿಹಾರ ಒದಗಿಸಲಾಗುತ್ತದೆ.
ಈ ಯೋಜನೆಗಳ ಪರಿಹಾರ ಪಡೆಯುವುದಕ್ಕಾಗಿ ಪರಿಹಾರ ಯೋಜನೆಗೆ ಅರ್ಜಿ ಸಲ್ಲಿಸಲು, ಅರ್ಜಿ ಸ್ಥಿತಿ ತಿಳಿದುಕೊಳ್ಳಲು ರೈತರಿಗೆ ಅನುಕೂಲತೆಯಾಗಲಿ ಎಂದು ಪರಿಹಾರ ಪೋರ್ಟಲ್ ಪರಿಚಯಿಸಲಾಗಿದೆ. ಈಗ ಬೆಳೆ ಪರಿಹಾರ ಪಾವತಿ(Bele parihara payment status) ಸ್ಥಿತಿಯ ಕುರಿತು ಕೂಡ ರೈತರು ಎಲ್ಲಾ ವರದಿಯಲ್ಲಿ ಪರಿಶೀಲಿಸಬಹುದು.
ಈ ಸುದ್ದಿ ಓದಿ:- ಚಿಟ್ ಫಂಡ್ ಬದಲು ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಡಬಲ್ ಲಾಭ, ಕೋಟ್ಯಾಧಿಪತಿಗಳಾಗಲು ಇದು ಬೆಸ್ಟ್.! 100% ನಿಮ್ಮ ಹಣ ಸೇಫ್.!
ಇದು ಮಾತ್ರವಲ್ಲದೇ ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಮತ್ತು ರಾಜ್ಯದ ಇತರೆ ಜನರಿಗೆ ಅನುಕೂಲವಾಗಲಿ ಎಂದು ಅನೇಕ ಆನ್ಲೈನ್ ಪೋರ್ಟಲ್ಗಳನ್ನು ಕೂಡ (Online portals) ಪರಿಚಯಿಸಿದೆ. ಸರ್ಕಾರವು ರೈತರಿಗೆ ಸಹಾಯಧನ ನೀಡುವ ಅನೇಕ ಯೋಜನೆಗಳನ್ನು ಕೂಡ ಪ್ರಾರಂಭಿಸಿದೆ.
ಇದರಿಂದ ನೇರವಾಗಿ ರೈತನ ಹೆಸರು ಅಥವಾ ಗ್ರಾಮವಾರು ಪರಿಹಾರ ಪಾವತಿ ಕುರಿತು ಮಾಹಿತಿಯನ್ನು ಕೂಡ ಪಡೆಯಬಹುದು. ಈ ಎಲ್ಲಾ ಮಾಹಿತಿಯನ್ನು ಆನ್ಲೈನ್ನಲ್ಲಿ ಭೂಮಿ ಕರ್ನಾಟಕ ಪೋರ್ಟಲ್ನಲ್ಲಿ (Bhoomi portal) ಕೂಡ ಪಡೆಯಬಹುದು.
ಈ ಸುದ್ದಿ ಓದಿ:- ಆಸ್ತಿಗೆ ಸಂಬಂಧಪಟ್ಟ ವಿಲ್ ಎಂದರೇನು.? ಯಾರು ಬರೆಯಬಹುದು.? ಇದರಿಂದ ಎಷ್ಟು ಲಾಭಗಳಿವೆ ನೋಡಿ.!
ಈ ವರ್ಷ ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಧ್ಯವಾದಷ್ಟು ಮಟ್ಟಿಗೆ ಬೆಳೆ ನಷ್ಟ ಪರಿಹಾರ ನೀಡುವ ಭರವಸೆ ನೀಡಿವೆ. ಕೇಂದ್ರ ಸರ್ಕಾರದ ಅನುದಾನಕ್ಕೂ ಮೊದಲು ರಾಜ್ಯ ಸರ್ಕಾರವು ಎಲ್ಲಾ ರೈತರಿಗೂ ಮೊದಲ ಹಂತದಲ್ಲಿ ರೂ.2000 ಬೆಳೆ ಪರಿಹಾರ ಪಾವತಿಯನ್ನು ನೀಡುತ್ತಿದೆ.
ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ವರ್ಗಾಯಿಸುತ್ತಿದೆ. ಈ ಬೆಳೆ ಪರಿಹಾರ ಪಾವತಿಯನ್ನು ಅಧಿಕೃತ ವೆಬ್ಸೈಟ್ನಿಂದ (Official website) ನೀವು ಆನ್ಲೈನ್ನಲ್ಲಿ ಪರಿಶೀಲಿಸಬಹುದು. ಇದಕ್ಕೆ ನೀವು ಪರಿಹಾರ ಐಡಿ(Parihara id) ಮತ್ತು ಆಧಾರ್ ಸಂಖ್ಯೆಯಂತಹ(Adhar number) ಕೆಲವು ಮಾಹಿತಿಯನ್ನು ಒದಗಿಸಬೇಕು.
ಈ ಸುದ್ದಿ ಓದಿ:- ನಿಮ್ಮ ಮೊಬೈಲ್ ನಲ್ಲೇ ಸರ್ಚ್ ನಲ್ಲಿ ಕೇವಲ ಹೆಸರು ಹಾಕಿ ಸಾಕು.! ಮತದಾರರ ಸಂಪೂರ್ಣ ಮಾಹಿತಿ ಪಡೆಯಬಹುದು.!
ಈ ಮಾಹಿತಿ ನೀಡುವ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ಕರ್ನಾಟಕ ರಾಜ್ಯದ ರೈತರು https://pariharar.karnataka.gov.in ವೆಬ್ ಸೈಟ್ ಮೂಲಕ ಭೂ ದಾಖಲೆಗಳು, ಮಾರ್ಗದರ್ಶಿ, ವರದಿಗಳು, ಬದಲಾವಣೆಯ ಸ್ಥಿತಿ ಮತ್ತು ಹೆಚ್ಚಿನವುಗಳ ಬಗ್ಗೆ ಡೇಟಾವನ್ನು ಪಡೆಯಬಹುದು.
ಬೆಳೆ ಪರಿಹಾರ ಪಾವತಿ ಸ್ಟೇಟಸ್ ಚೆಕ್ ಮಾಡುವ ವಿಧಾನ:-
* ಮೊದಲಿಗೆ, ಈ ಮೇಲೆ ತಿಳಿಸಿದ ವಿವರಗಳ ಅನುಸಾರ ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://parihara.karnataka.gov.in/service87/ ಭೇಟಿ ನೀಡಿ
* ನಂತರ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಗ್ರಾಮವನ್ನು ಸೆಲೆಕ್ಟ್ ಮಾಡಿ.
* ನಂತರ ವರ್ಷ ಹಾಗೂ ಸೀಸನ್, ಕಾರಣವನ್ನು ಸೆಲೆಕ್ಟ್ ಮಾಡಿ. ಗೆಟ್ ರಿಪೋರ್ಟ್ ಆಪ್ಷನ್ ಕ್ಲಿಕ್ ಮಾಡಿ.
* ಕೂಡಲೇ ನಿಮಗೆ ಬೆಳೆಹಾನಿಯ ಪರಿಹಾರದ ಜಮಾ ಆಗಿರುವ ಮಾಹಿತಿ ದೊರೆಯುತ್ತದೆ.
ಈ ಸುದ್ದಿ ಓದಿ:- ಈ ಮಹಿಳೆಯರಿಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ.! ಸರ್ಕಾರದಿಂದ ಅಧಿಕೃತ ಘೋಷಣೆ ಮಹಿಳೆಯರಿಗೆ ಬಿಗ್ ಶಾ’ಕ್.!
ಈಗಾಗಲೇ ರಾಜ್ಯದ ಹಲವಾರು ಜಿಲ್ಲೆಗಳ ರೈತರಿಗೆ ಬೆಳೆ ಪರಿಹಾರ ಹಣ ವರ್ಗಾವಣೆ ಆಗಿದೆ. ನೀವು ಈಗ ಹಣ ಪಡೆಯಲು ಅರ್ಹರಾಗಿದ್ದರೆ ಈ ಮೇಲೆ ತಿಳಿಸದ ವಿಧಾನದ ಮೂಲಕ ಚೆಕ್ ಮಾಡಬಹುದು ಮತ್ತು ಈ ಹಿಂದಿನ ವರ್ಷಗಳಲ್ಲಿ ಹಣವನ್ನು ಪಡೆದ ಮಾಹಿತಿಯನ್ನು ಕೂಡ ನೀವು ಇದೆ ವಿಧಾನದಲ್ಲಿ ವರ್ಷವನ್ನು ಬದಲಾಯಿಸುವ ಮೂಲಕ ತಿಳಿದುಕೊಳ್ಳಬಹುದು.
ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗುವಂತ ಮಾಹಿತಿ ಇದಾಗಿತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.