ಕಣ್ಣು ಮಾನವನ ದೇಹದ ಅತಿ ಪ್ರಮುಖ ಅಂಗ. ಕಣ್ಣಿಲ್ಲದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ನಾವು ಈ ಪ್ರಪಂಚವನ್ನು ನೋಡುವುದಕ್ಕೆ ಅರ್ಥ ಮಾಡಿಕೊಳ್ಳುವುದಕ್ಕೆ ಅನುಭವಿಸುವುದಕ್ಕೆ ಕಣ್ಣುಗಳು ಬೇಕೇ ಬೇಕು ದೇವರು ಮನುಷ್ಯನಿಗೆ ಕೊಟ್ಟಿರುವ ಬಹಳ ದೊಡ್ಡ ವರ ಎಂದರೆ ಈ ದೃಷ್ಟಿ.
ಹಾಗಾಗಿ ಇದನ್ನು ನಾವು ಇರುವವರೆಗೂ ಕೂಡ ಸುರಕ್ಷಿತವಾಗಿ ನೋಡಿಕೊಂಡು ಆರೈಕೆ ಮಾಡಿ ಕಾಪಾಡಿಕೊಳ್ಳಬೇಕು. ವಿಟಮಿನ್ ಕೊರತೆಯಿಂದ ಅಥವಾ ನಮ್ಮ ತಪ್ಪುಗಳಿಂದ ಕಣ್ಣಿಗೆ ಹಲವಾರು ಸಮಸ್ಯೆಗಳು ಬರುತ್ತಿವೆ. ಕಣ್ಣಿನ ಪೊರೆ, ಸಮೀಪ ದೃಷ್ಟಿ ದೋಷ, ದೂರ ದೃಷ್ಟಿ ದೋಷ, ಇರುಳುಕುರುಡು, ಕಲರ್ ಬ್ಲೆಂಡ್ ನೈಸ್ ಕಣ್ಣಿನ ಉರಿ, ಕಣ್ಣಿನಲ್ಲಿ ಯಾವಾಗಲೂ ನೀರು ಹರಿಯುವುದು, ಇರಿಟೇಶನ್ ಇನ್ನಿತರ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಈ ರೀತಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಲು ದೇಹದಲ್ಲಿ ಉಂಟಾಗಲು ಪಿತ್ತ ವಿಕಾರಗಳೇ ಪ್ರಮುಖ ಕಾರಣ ಎಂದು ಆಯುರ್ವೇದದಲ್ಲಿ ಹೇಳಲಾಗುತ್ತಿದೆ. ವಾತ ದೋಷ, ಕಫ ದೋಷದಿಂದಲೂ ಕೂಡ ಕಣ್ಣಿನ ದೃಷ್ಟಿ ದೋಷಗಳು ಕಾಣಿಸಿಕೊಳ್ಳಬಹುದು.
ಈ ದೃಷ್ಟಿ ದೋಷಗಳು ಬರಬಾರದು ಅಥವಾ ಈ ಎಲ್ಲಾ ದೋಷಗಳು ವಿಕಾರಗಳು ಪರಿಹಾರವಾಗಬೇಕು ಎಂದರೆ ದೇಹವನ್ನು ಶೋಧನೆ ಮಾಡಿ ನಿರ್ವಲವಾಗಿಟ್ಟುಕೊಳ್ಳಬೇಕು. ಬಿಸಿ ನೀರಿಗೆ ಹರಳೆಣ್ಣೆಹಾಕಿ ಖಾಲಿ ಹೊಟ್ಟೆಗೆ ಕುಡಿಯುವುದು ಅಥವಾ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡುವುದು ಈ ರೀತಿ ಮಾಡುವುದರಿಂದ ದೇಹದ ಕಲ್ಮಶಗಳೆಲ್ಲ ಹೊರ ಹೋಗಿ ವಿಕಾರಗಳು ಕಡಿಮೆ ಆಗುತ್ತವೆ.
ಇದರ ಜೊತೆಗೆ ಅತಿಯಾದ ಮೊಬೈಲ್ ಬಳಕೆ ಕೂಡ ಹೊರಗಣ್ಣನ್ನು ಮಾತ್ರವಲ್ಲ ಅಂತರಂಗದ ಕಣ್ಣಿಗೂ ಹಾನಿ ಮಾಡುತ್ತಿದೆ, ಈಗಿನ ಕಾಲದಲ್ಲಿ ಯುವ ಜನತೆಗೆ ಹೆಚ್ಚಾಗುತ್ತಿರುವ ಕಣ್ಣಿನ ಸಮಸ್ಯೆಗಳಿಗೆ ಮೊಬೈಲ್ ಮುಖ್ಯ ಕಾರಣ ಹಾಗಾಗಿ ಆದಷ್ಟು ಇದರ ಬಳಕೆ ಕಡಿಮೆ ಬಳಕೆ ಮಾಡಬೇಕು ಮತ್ತು ರಾತ್ರಿ ಮಲಗುವ ಎರಡು ತಾಸು ಮನ್ನ ಮೊಬೈಲ್ ಅಥವಾ ಇನ್ಯಾವುದೇ ಬ್ಲೂ ಲೈಟ್ ಎಮಿಷನ್ ಇಂದ ಹೊರಬರಬೇಕು.
ತಪ್ಪಾದ ಆಹಾರ ಪದ್ಧತಿ, ವಿರುದ್ಧ ಆಹಾರ ಸೇವನೆ, ನಿದ್ರಾಹೀನತೆ ಹೀಗೆ ಶಿಸ್ತಿರದ ಜೀವನದಿಂದ ಕೂಡ ದೃಷ್ಟಿ ದೋಷಗಳು ಕಾಣಿಸಿಕೊಳ್ಳುತ್ತವೆ. ಆದಷ್ಟು ಇವುಗಳನ್ನು ಕಡಿಮೆ ಮಾಡಿ ಇದನ್ನು ಹೊರತುಪಡಿಸಿ ಆಯುರ್ವೇದದಲ್ಲಿ ದೃಷ್ಟಿ ದೋಷ ನಿವಾರಣೆಗೆ ಸೂಚಿಸಲಾಗುವ ಸರಳ ಪರಿಹಾರಗಳೆಂದರೆ ಇಷ್ಟಲಿಂಗ ಪೂಜೆ ಮಾಡುವುದು.
ಇಷ್ಟ ಲಿಂಗವನ್ನು ಅಂಗೈನಲ್ಲಿರಿಸಿ ದೃಷ್ಟಿಸಿ ನೋಡುವುದರಿಂದ ಕಣ್ಣಿನಲ್ಲಿರುವ ಎಲ್ಲಾ ಕಲ್ಮಶಗಳು ನೀರಿನ ರೂಪದಲ್ಲಿ ಹೊರ ಹೋಗುತ್ತವೆ. ಇದರಿಂದ ಕಣ್ಣಿನ ಸೂಕ್ಷ್ಮಾತಿ ಸೂಕ್ಷ್ಮ ನರಗಳ ಸಮಸ್ಯೆಗಳು ನಿವಾರಣೆಯಾಗುತ್ತದೆ.
ದೂರದ ವಸ್ತುವನ್ನು ನೋಡುವುದು ನಂತರ ಹತ್ತಿರ ವಸ್ತುವನ್ನು ನೋಡುವುದು ಈ ರೀತಿ ಎಕ್ಸರ್ಸೈಜ್ ಮಾಡುವುದರಿಂದ ಕೂಡ ಜೊತೆಗೆ ಕಣ್ಣನ್ನು ಬಲಕ್ಕೆ, ಎಡಕ್ಕೆ, ಮೇಲೆ, ಕೆಳಗೆ ಮತ್ತು ಕ್ಲಾಕ್ ವೈಸ್ ಹಾಗೂ ಆಂಟಿ ಕ್ಲಾಕ್ ವೈಸ್ ನಲ್ಲಿ ದಿನಕ್ಕೆ 20 ನಿಮಿಷಗಳ ಕಾಲ ಎಕ್ಸಸೈಜ್ ಮಾಡುವುದರಿಂದ ಕೂಡ ಈ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.
ಹಸಿರು ತರಕಾರಿಗಳು ಸೊಪ್ಪುಗಳು ಮತ್ತು ಹಾಲು ಹಾಗೂ ಹಾಲಿನ ಉತ್ಪನ್ನಗಳ ಸೇವನೆಯಿಂದ ವಿಟಮಿನ್ ಎ ದೇಹಕ್ಕೆ ಹೇರಳವಾಗಿ ಸಿಗುತ್ತದೆ. ವಿಟಮಿನ್ ಎ ದೃಷ್ಟಿ ವೃದ್ಧಿಯಾಗಲು ಸಹಕರಿಸುತ್ತದೆ. ಇನ್ನೂ ಕೂಡ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡಾಗ ಈ ಒಂದು ಮನೆ ಮದ್ದನ್ನು ಮಾಡಿಕೊಳ್ಳಿ.
ಎರಡು ಹನಿ ನಿಂಬೆರಸ, ಎರಡು ಹನಿ ಈರುಳ್ಳಿ ರಸದೊಂದಿಗೆ ಎರಡು ಹನಿ ಜೇನುತುಪ್ಪವನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಹಾಗೂ ರಾತ್ರಿ ಎರಡೆರಡು ಹನಿ ಕಣ್ಣುಗಳಿಗೆ ಹಾಕುವುದರಿಂದ ಸಮಸ್ಯೆ ಶೀಘ್ರವಾಗಿ ಗುಣವಾಗುತ್ತದೆ. ಆದರೆ ಈ ಮನೆ ಮದ್ದನ್ನು ಪ್ರತಿದಿನವೂ ತಯಾರಿಸಿಕೊಂಡು ಫ್ರೆಶ್ ಆಗಿ ಬಳಸಬೇಕು ಮರುದಿನ ಮತ್ತೊಮ್ಮೆ ಹೊಸದಾಗಿ ತಯಾರಿಸಿ ಕಣ್ಣುಗಳಿಗೆ ಬಳಸಬೇಕು.