ರಾಜ್ಯದಲ್ಲಿ ಈ ವರ್ಷ ಕಂಡು ಕೇಳರಿಯದ ಬರಗಾಲ (drought) ಒಕ್ಕಲಿಸಿದೆ, ರಾಜ್ಯದಲ್ಲಿ ರೈತನ (farmers) ಪರಿಸ್ಥಿತಿ ಕಂಗಾಲಾಗಿದೆ. ಮುಂಗಾರಿನ ಮಳೆ ನಿರೀಕ್ಷೆಯಲ್ಲಿ ಹೊಲ ಉಳಿಮೆ ಮಾಡಿ ಹದ ಮಾಡಿಕೊಂಡಿದ್ದ ರೈತನಿಗೆ ವರುಣ ಮುನಿಸಿಕೊಂಡಿದ್ದು ಶಾಪವಾಗಿ ಪರಿಣಮಿಸಿ ರೈತ ಸಂಕುಲ ಅಪಾರ ನ’ಷ್ಟವನ್ನು ಅನುಭವಿಸಿದೆ.
ಈ ಸಂಬಂಧ ಕೇಂದ್ರ ಸರ್ಕಾರ (Central Government) ಬರ ಪರಿಹಾರ ನೀಡಲು ಸಮೀಕ್ಷೆ ನಡೆದಿದೆ ವರದಿ ಸಲ್ಲಿಕೆ ಆಗಿದೆ, ಆ ಪ್ರಕಾರವಾಗಿ ಹಂತ ಹಂತವಾಗಿ ರಾಜ್ಯದ ಬಹುತೇಕ ತಾಲೂಕುಗಳು ಬರ ತಾಲೂಕಗಳೆಂದು ಘೋಷಣೆಯಾಗಿವೆ.
ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣದ ಈಗ ಬಿಡುಗಡೆ ಬಗ್ಗೆ ಇನ್ನೂ ಪ್ರಸ್ತಾಪವಾಗದೆ ಕಾರಣ ರಾಜ್ಯ ಸರ್ಕಾರವೇ (State Government) ಎಚ್ಚೆತ್ತುಕೊಂಡು ಮೊದಲನೇ ಹಂತದಲ್ಲಿ ಬೆಳೆ ಪರಿಹಾರದ (Crop compensation) ಹಣ ಪಡೆಯಲು ಅರ್ಹರಾಗಿರುವ ಎಲ್ಲ ರೈತರ ಖಾತೆಗೆ ರೂ.2000 ಹಣ ವರ್ಗಾವಣೆ ಮಾಡಲು ಮುಂದಾಗಿದೆ.
ಬೆಳೆ ಪರಿಹಾರದ ಹಣ ಪಡೆಯಲು ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮತ್ತು ರೈತರು ಹೊಂದಿರಬೇಕಾದ ದಾಖಲೆಗಳ ಬಗ್ಗೆ ಪ್ರಕಟಣೆ ಕೂಡ ಹೊರಬಿದ್ದಿದ್ದು ಶೀಘ್ರದಲ್ಲೇ ರೈತರ ಖಾತೆಗೆ ಹಣ ತಲುಪುವುದು ಸ್ಪಷ್ಟವಾಗಿದೆ. ಇದರ ನಡುವೆ ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರ ರೈತನಿಗೆ ತಕ್ಕನಾದ ಪರಿಹಾರ ನೀಡಲು ತಮ್ಮ ಪಾಲನ್ನು ಕೊಡುತ್ತಿಲ್ಲ ಎಂದು ಆರೋಪ ಮಾಡಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ (CM Siddaramaih) ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದಾರೆ. ಇನ್ನು ರಾಜ್ಯ ಸರ್ಕಾರವು ಬರ ಪರಿಹಾರದ ಹಣ ನೀಡಲು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದ್ದಲ್ಲದೆ ರೈತರಿಗೆ ಚಿಕ್ಕ ಮೊತ್ತದ ಹಣ ಕೊಡುತ್ತಿರುವುದರ ಬಗ್ಗೆ ರಾಜ್ಯದ BJP ನಾಯಕರುಗಳು ಕೂಡ ಟೀಕಿಸಿದ್ದಾರೆ.
ಆದರೆ ರೈತನಿಗೆ ನೀಡಬೇಕಾದ ಪರಿಹಾರ ಹಣ ಕೊಡಲು ಕೂಡ ರಾಜಕೀಯ ಲೆಕ್ಕಾಚಾರ ಹಾಕಬಾರದು ಎನ್ನುವುದು ಜನಸಾಮಾನ್ಯರ ಅಹವಾಲು. ಇದರೊಂದಿಗೆ ರೈತನು ಕೂಡ ಈ ವರ್ಷ ಅಪಾರ ನ’ಷ್ಟ ಅನುಭವಿಸುವುದರಿಂದ ಅಲ್ಪ ಮಟ್ಟದಲ್ಲಿ ಆದರೂ ಪರಿಹಾರ ಸಿಗುತ್ತದೆ ಎಂದು ಆಸೆ ಇಟ್ಟುಕೊಂಡಿದ್ದಾನೆ. ಹಿಂದೆ ಈ ರೀತಿ ಬರದ ಪರಿಸ್ಥಿತಿ ಬಂದಾಗ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಮಾಡಿದ್ದ ಕೃಷಿ ಸಾಲಗಳು ಮನ್ನ (loan waiver) ಮಾಡಲಾಗುತ್ತಿತ್ತು.
ರೈತರು ಕೃಷಿ ಸಾಲ ಮಾಡುವುದೇ ಕೃಷಿ ಚಟುವಟಿಕೆಯ ಕೆಲಸ ಕಾರ್ಯಗಳಿಗಾಗಿ, ಸಾಲ ಮಾಡಿದ ಹಾಕಿದ ಬಿತ್ತನೆಯು ಮಳೆ ಇಲ್ಲದೆ ಬೆಳೆ ಬಂದಿಲ್ಲ ಎಂದಾಗ ಇಳುವರಿ ಇಲ್ಲದೆ ಸಾಲ ತೀರಿಸಲು ರೈತನಿಗೆ ಬೇರೆ ಮೂಲ ಇಲ್ಲ ಹೀಗಾಗಿ ಆತನಿಗೆ ನೆರವಾಗಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ (ex CM Kumaraswamy) ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಿ ಎಂದು ಮನವಿ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರು ಸಹಕಾರಿ ಬ್ಯಾಂಕುಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಮಾಡಿರುವ ರೂ.2000 ವರೆಗಿನ ಸಾಲವನ್ನು ಮನ್ನಾ ಮಾಡಿದರೆ ರೈತ ಸಂಕುಲಕ್ಕೆ ಅಪಾರ ಅನುಕೂಲ ಆಗಲಿದೆ.
ಈ ವರ್ಷ ಕೃಷಿ ಚಟುವಟಿಕೆ ಸಂಪೂರ್ಣ ನೆಲಕಚ್ಚಿದೆ ಇದರಿಂದ ರೈತರು ಬಹಳ ಕ’ಷ್ಟ ಪಡುತ್ತಿದ್ದಾರೆ. ಸರಕಾರ ಶೀಘ್ರವೇ ಇದರ ಬಗ್ಗೆ ಕ್ರಮ ಕೈಗೊಂಡರೆ ಅನುಕೂಲವಾಗಿದೆ ಎಂದು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎನ್ನುವುದರ ಬಗ್ಗೆ ರೈತರು ನಿರೀಕ್ಷಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರವು ಈ ಬಗ್ಗೆ ಯಾವ ತೀರ್ಮಾನಕ್ಕೆ ಬರಲಿದೆ ಎಂದು ಕಾದು ನೋಡೋಣ.