ಇಂದಿನಿಂದ ರೈತರಿಗೆ ಪ್ರತಿ ಎಕರೆಗೆ 25,000 ರೂಪಾಯಂತೆ ಹಣ ಜಮೆ, ನಿಮ್ಮ ಖಾತೆಗೂ ಬಂದಿದೆಯೇ ಈ ರೀತಿ ಎಂದು ಚೆಕ್ ಮಾಡಿ…

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕೇಳಿರದ ಭೀ’ಕ’ರ ಬ’ರ’ಗಾ’ಲ ಎದುರಾಗಿದೆ. ಪರಿಣಾಮವಾಗಿ ರಾಜ್ಯದ ವಿವಿಧ ಜಿಲ್ಲೆಗಳ 195 ತಾಲೂಕುಗಳು ಬರಪೀಡಿತ ತಾಲೂಕುಗಳು ಎಂದು ಘೋಷಣೆಯಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ ಪ್ರಕಾರವಾಗಿ ಈ ಸರ್ವೇ ನಡೆದಿದ್ದು ಕೇಂದ್ರ ಸರ್ಕಾರಕ್ಕೆ ವರದಿ ಕೂಡ ಸಲ್ಲಿಕೆ ಆಗಿದೆ ಮತ್ತು ಬರ ಪರಿಹಾರದ ಹಣಕ್ಕಾಗಿ ನಿರೀಕ್ಷೆ ಮಾಡಲಾಗುತ್ತಿದೆ.

ಇತ್ತ ರಾಜ್ಯ ಸರ್ಕಾರವು ಕೂಡ ರೈತರಿಗೆ ಮಳೆ ಕೊರತೆ ಕಾರಣದಿಂದಾಗಿ ಉಂಟಾಗಿರುವ ನ’ಷ್ಟವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ. ಬರ ಘೋಷಣೆಯಾಗಿರುವ ತಾಲೂಕುಗಳ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಮತ್ತು ಮೇವು ಬೆಳೆಯಲು ಇಚ್ಚಿಸುವ ನೀರಾವರಿ ಹೊಂದಿರುವ ರೈತರಿಗೆ ಉಚಿತವಾಗಿ ಮೇವಿನ ಕಿಟ್ ಕೂಡ ನೀಡುತ್ತಿದೆ.

ಕೇಂದ್ರ ಸರ್ಕಾರದಿಂದ ಫಸಲ್ ಭೀಮಾ ಯೋಜನೆಯಡಿ ನೋಂದಾಯಿಸಿಕೊಂಡು ಬೆಳೆ ಹಾನಿ ಹೊಂದಿದವರಿಗೆ ಬೆಳೆವಿಮೆ ಕೂಡ ಸಿಗುತ್ತದೆ ಆದರೆ ಈ ಬಗ್ಗೆ ಅನೇಕರಿಗೆ ಗೊಂದಲವಿತ್ತು. ಯಾಕೆಂದರೆ ಅನೇಕ ಕಡೆ ಬಿತ್ತನೆ ಬೀಜ ಖರೀದಿ ಮಾಡಿದ್ದರಾದರೂ ಬಿತ್ತನೆಯನ್ನೇ ಮಾಡಲಾಗಿರಲಿಲ್ಲ. ಯಾಕೆಂದರೆ ಬಿತ್ತನೆ ಸಮಯದಲ್ಲಿ ಬೇಕಾದ ಪ್ರಮಾಣದಲ್ಲಿ ಮಳೆ ಬೀಳದ ಕಾರಣ ಜಮೀನು ಉತ್ತಿ ಹದ ಮಾಡಿಕೊಂಡಿದ್ದ ರೈತ ಬಿತ್ತನೆ ಮಾಡಲಾಗ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ.

ಈಗ ಅವರಿಗೂ ಕೂಡ ಫಸಲ್ ಭೀಮ ಯೋಜನೆಯ ಹಣ ಸಿಗುವ ಸಾಧ್ಯತೆ ಇದೆ ಎನ್ನುವ ಸಮಾಧಾನಕರ ಉತ್ತರ ಸಿಕ್ಕಿದೆ. ಬಿತ್ತನೆ ಬೀಜ ಖರೀದಿಸಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಪ್ರೀಮಿಯಂ ಕಟ್ಟಿ ನೋಂದಾಯಿಸಿಕೊಂಡಿದ್ದರೆ ಅಂತಹ ರೈತರು ಕೂಡ ರಿಯಾಯಿತಿ ದರದಲ್ಲಿ ಅಲ್ಪ ಪ್ರಮಾಣದಲ್ಲಾದರೂ ಪರಿಹಾರವನ್ನು ಪಡೆಯಲಿದ್ದಾರೆ.

ಇದರ ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಕೂಡ
ಅತಿವೃಷ್ಟಿ, ಪ್ರವಾಹ ಮತ್ತು ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳಿಂದ ಕೃಷಿ ಬೆಳೆಗಳಿಗೆ ಹಾನಿಯಾದ ಸಂದರ್ಭದಲ್ಲಿ, ರೈತರಿಗೆ ರಾಜ್ಯ ವಿಪತ್ತು ಸ್ಪಂದನಾ ನಿಧಿಯಿಂದ ನಿಗದಿತ ದರದಲ್ಲಿ ಹಂಗಾಮಿಗೆ ಒಮ್ಮೆ ಸಬ್ಸಿಡಿ ಹಣದ ನೆರವು ನೀಡಲಾಗುತ್ತದೆ.

ಜುಲೈ, 2023 ರಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಿಂದ ವಿವಿಧ ಜಿಲ್ಲೆಗಳಲ್ಲಿ ಬೆಳೆ ಹಾನಿಗೊಳಗಾದ ಸಂತ್ರಸ್ತ ರೈತರಿಗೆ ಹೂಡಿಕೆ ಅನುದಾನದ ರೂಪದಲ್ಲಿ ನೆರವು ನೀಡುವ ಕುರಿತು ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಲಾಗಿದೆ. ಜೂನ್‌ನಿಂದ ಅಕ್ಟೋಬರ್ 2023 ರವರೆಗಿನ ಅವಧಿಯಲ್ಲಿ ಪ್ರವಾಹ, ಇಂತಹ ನೈಸರ್ಗಿಕ ವಿಕೋಪಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃಷಿ ಬೆಳೆಗಳಿಗೆ ಹಾನಿಗೊಳಗಾದ ರೈತರಿಗೆ ಹೂಡಿಕೆ ಅನುದಾನದ ರೂಪದಲ್ಲಿ ಸಹಾಯವನ್ನು ನೀಡಲು ಸರ್ಕಾರವು ಅನುಮೋದಿಸಿದೆ.

ನವೆಂಬರ್ 22, 2023ರಿಂದ ಅನೇಕರ ರೈತರ ಬ್ಯಾಂಕ್ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗಿರುವ ಮಾಹಿತಿ ಕೂಡ ಇದೆ. ಅತಿ ಶೀಘ್ರವಾಗಿ ಎಲ್ಲಾ ರೈತರ ಖಾತೆಯೂ ಕೂಡ ಹಣ ವರ್ಗಾವಣೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ ಎಂದು ಕೂಡ ತಿಳಿದು ಬಂದಿದೆ. ಸರಕಾರದಿಂದ ಪರಿಹಾರ ಅನುದಾನದ ಫಲಾನುಭವಿಗಳ ಪಟ್ಟಿ ಕೂಡ ಬಿಡುಗಡೆಯಾಗಿದ್ದು, ಇದರಲ್ಲಿ ನಿಮ್ಮ ಹೆಸರಿದ್ದರೆ ನಿಮಗೂ ಕೂಡ ಪರಿಹಾರದ ಹಣ ಬರಲಿದೆ. ಆನ್ಲೈನ್ ನಲ್ಲಿ ಈ ಪಟ್ಟಿಯ ವಿವರ ಇದ್ದು ಕೂಡಲೇ ಚೆಕ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now