ಸರ್ಕಾರಗಳಿಂದ ದೇಶದ ಎಲ್ಲ ವರ್ಗದ ಜನರಿಗೂ ಕೂಡ ಒಂದಲ್ಲಾ ಒಂದು ಸಹಾಯಧನ ಮತ್ತು ಪ್ರೋತ್ಸಾಹ ಧನ ಮುಂತಾದ ಅನುಕೂಲತೆಗಳು ಸಿಗುತ್ತಿವೆ. ಈಗ ದೇಶದಾದ್ಯಂತ ವಿದ್ಯಾರ್ಥಿಗಳಿಗೆ, ರೈತರಿಗೆ, ಗೃಹಿಣೀಯರಿಗೆ, ಕಾರ್ಮಿಕರಿಗೆ ಹೀಗೆ ಎಲ್ಲಾ ವರ್ಗದವರಿಗೂ ಕೂಡ ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಯೋಜನೆಗಳ ಸಹಾಯಧನ ಸಿಗುತ್ತಿದೆ.
ಇದರ ಜೊತೆಗೆ ವಿಶೇಷವಾದ ಪ್ರೋತ್ಸಾಹ ಧನವು ಕೂಡ ಕೆಲವೊಮ್ಮೆ ಸರ್ಕಾರದಿಂದ ಘೋಷಣೆ ಆಗುತ್ತದೆ. ಕೆಲವೊಂದು ವಿಶೇಷತೆಗಳಿಗಾಗಿ ಇದನ್ನು ಸರ್ಕಾರ ನೀಡುತ್ತದೆ. ಉದಾಹರಣೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಇಡಿ ಇದುವರೆಗೆ ಸ್ವಂತ ಸೂರು ಹೊಂದಿಲ್ಲದ ಜನತೆಗೆ ಮನೆ ಕಟ್ಟಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ. ಅದೇ ರೀತಿ ಹೊಸ ಬದುಕು ಆರಂಭಿಸುವ ನವದಂಪತಿಗಳಿಗೂ ಕೂಡ ಈಗ ಅಂತಹದೊಂದು ಅನುಕೂಲತೆ ಸಿಗುತ್ತಿದೆ.
ಎಲ್ಲ ಸಂದರ್ಭಗಳಲ್ಲೂ ಕೂಡ ಸರ್ಕಾರವೇ ನೀಡುತ್ತದೆ ಎಂದು ಹೇಳಲು ಬರುವುದಿಲ್ಲ. ಸರ್ಕಾರದ ಸಹಯೋಗದೊಂದಿಗೆ ಕೆಲವು ಖಾಸಗಿ ಸಂಸ್ಥೆಗಳು NGO ಗಳು ಮತ್ತು ಫೌಂಡೇಶನ್ ಗಳು ಒಂದು ಸದುದ್ದೇಶದಿಂದ ಈ ರೀತಿ ವಿದ್ಯಾರ್ಥಿಗಳಿಗೆ ಅಥವಾ ಬಡವರಿಗೆ ಸಹಾಯಧನ ಕೊಡುವ ನಿರ್ಧಾರಕ್ಕೆ ಬರುತ್ತವೆ. ಸರ್ಕಾರವು ಅದನ್ನು ತಲುಪಿಸುವ ಹೊಣೆಗಾರಿಕೆ ಹೊತ್ತುಕೊಂಡು ಅದಕ್ಕೆ ಬೇಕಾದ ಪೂರಕವಾದ ಅನುಕೂಲತೆ ಸೃಷ್ಟಿಸಿಕೊಡುತ್ತದೆ.
ಅದೇ ರೀತಿ ಈಗ ಡಾ. ಬಿಆರ್ ಅಂಬೇಡ್ಕರ್ ಫೌಂಡೇಶನ್ ವತಿಯಿಂದ ನವದಂಪತಿಗಳಿಗೆ 2,50,000 ಲಕ್ಷ ವಿವಾಹ ಪ್ರೋತ್ಸಾಹಧನ ಸಿಗುತ್ತಿದೆ. ದಂಪತಿಗಳು ಈ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು, ಯಾರಿಗೆ ಸಲ್ಲಿಸಬೇಕು ಈ ಸಹಾಯಧನ ಪಡೆಯಲು ಯಾವ ಅರ್ಹತೆಯನ್ನು ಹೊಂದಿರಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ವಿವಾಹ ಪ್ರೋತ್ಸಾಹ ಧನವನ್ನು ಪಡೆಯಲು ಇರುವ ಕಂಡೀಷನ್ ಗಳು:-
● ದಲಿತ ಯುವತಿಯನ್ನು ಮದುವೆಯಾಗಿರಬೇಕು.
● 1950ರ ಹಿಂದು ಮ್ಯಾರೇಜ್ ಆ ಪ್ರಕಾರ ಆ ಮದುವೆ ನೋಂದಣಿ ಆಗಿರಬೇಕು.
● ವಿವಾಹವಾಗುವ ವಧು-ವರ ಇಬ್ಬರಿಗೂ ಸಹ ಇದು ಮೊದಲನೇ ಮದುವೆ ಆಗಿರಬೇಕು. ಇಬ್ಬರಲ್ಲಿ ಯಾರಿಗೇ ಇದು ಎರಡನೇ ವಿವಾಹ ಆಗಿದ್ದರೂ ಕೂಡ ಆ ದಂಪತಿಗಳು ಅರ್ಜಿ ಸಲ್ಲಿಸಲು ಅರ್ಹರಾಗುವುದಿಲ್ಲ.
● ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಈ ಮೊದಲೇ ಯಾವುದೇ ಯೋಜನೆಗಳ ಮೂಲಕ ವಿವಾಹ ಪ್ರೋತ್ಸಾಹ ಧನವನ್ನು ಪಡೆದಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ನಿಮ್ಮ ವ್ಯಾಪ್ತಿಗೆ ಸೇರುವ ಶಾಸಕ ಅಥವಾ ಸಂಸದರನ್ನು ಭೇಟಿಯಾಗಿ ಅವರಿಗೆ ಮನವಿ ಮಾಡಿ.
● ಅರ್ಜಿಯನ್ನು ರಾಜ್ಯ ಸರ್ಕಾರದ ಜಿಲ್ಲಾಡಳಿತ ಕಚೇರಿಗಳಲ್ಲಿ ಸಲ್ಲಿಸಬಹುದು.
● ದಂಪತಿಗಳು ಈ ವಿವಾಹ ಪ್ರೋತ್ಸಾಹ ಧನಕ್ಕಾಗಿ ಇರುವ ಅರ್ಜಿಯನ್ನು ಪಡೆದು ಸರಿಯಾದ ವಿವರಗಳ ಜೊತೆ ಅದನ್ನು ಫಿಲ್ ಮಾಡಿ ಪೂರಕ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
● ಬಳಿಕ ಜಿಲ್ಲಾಡಳಿತವು ಆ ಅರ್ಜಿಗಳನ್ನು ಅಂಬೇಡ್ಕರ್ ಫೌಂಡೇಶನ್ ಗೆ ಕಳುಹಿಸುತ್ತದೆ. ಅಲ್ಲಿ ಅರ್ಜಿ ಪರಿಶೀಲನೆ ನಡೆದು ಅನುಮೋದನೆ ಆದರೆ ದಂಪತಿಗಳ ಖಾತೆಗೆ ಈ ವಿವಾಹ ಪ್ರೋತ್ಸಾಹ ಧನವು DBT ಮೂಲಕ ನೇರ ವರ್ಗಾವಣೆ ಆಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
● ವಿವಾಹ ಪ್ರೋತ್ಸಾಹಧನಕ್ಕಾಗಿ ತುಂಬಿಸಿದ ಅರ್ಜಿ
● ವಿವಾಹ ನೋಂದಣಿ ಧೃಡೀಕೃತ ಪತ್ರ
● ಜಾತಿ ಪ್ರಮಾಣ ಪತ್ರ
● ಬ್ಯಾಂಕ್ ಪಾಸ್ ಬುಕ್ ವಿವರ
● ನವ ವಿವಾಹಿತರ ಫೋಟೋ
● ದಂಪತಿಗಳಿಬ್ಬರ ಆಧಾರ್ ಕಾರ್ಡ್
● ಇನಿತ್ಯಾದಿ ಕಚೇರಿಯಲ್ಲಿ ಕೇಳುವ ಪ್ರಮುಖ ದಾಖಲೆಗಳು.