ಕೇವಲ 17 ಲಕ್ಷ ಹಣದಲ್ಲಿ ಶಾಪ್ ಜೊತೆಗೆ 2BHK, ಇದು ಸಾಧ್ಯವೇ ಎಂದು ಆಶ್ಚರ್ಯ ಪಡುವ ರೀತಿಯಲ್ಲಿ ಮನೆ ಕಟ್ಟಿದ್ದಾರೆ ಇಲ್ಲಿದೆ ನೋಡಿ ಡೀಟೇಲ್ಸ್.!

 

WhatsApp Group Join Now
Telegram Group Join Now

ಹಣ ಒಂದಿದ್ದರೆ ಈಗ ಮನೆ ಕಟ್ಟಿಕೊಳ್ಳುವುದು ಬಹಳ ಸುಲಭ ಆದರೆ ನಮ್ಮ ಬಜೆಟ್ ಗೆ ತಕ್ಕ ಹಾಗೆ ನಮ್ಮ ಐಡಿಯಾ ಪ್ರಕಾರ ಮನೆ ಕಟ್ಟಿಕೊಡುವ ಕಾಂಟ್ರಾಕ್ಟರ್ ಸಿಗುವುದು ಬಹಳ ಕಷ್ಟ. ಯಾಕೆಂದರೆ ಕಡಿಮೆ ಬಜೆಟ್ ನ ಮನೆಗಳಾದರೆ ಅಥವಾ ನಾವು ಹೇಳುವ ಡಿಸೈನ್ ಗೆ ಕಾಂಪ್ರಮೈಸ್ ಆಗಬೇಕು ಎಂದರೆ ಎಲ್ಲರಿಗೂ ಅಂತಹ ಮನಸ್ಸು ಇರುವುದಿಲ್ಲ.

ಎಲ್ಲರೂ ಈ ರೀತಿ ಹೇಳುವುದಾದರೆ ಮನೆ ಕಟ್ಟಿಕೊಡುವವರು ಯಾರು? ಹಾಗಾಗಿ ಇಂತಹ ಒಂದು ಧ್ಯೇಯವನ್ನು ಇಟ್ಟುಕೊಂಡು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿ ಎಂದು RCC ಕನ್ಸ್ಟ್ರಕ್ಷನ್ ಕಂಪನಿ ಪ್ರತಿಯೊಬ್ಬರ ಕನಸಿಗೆ ರೂಪ ಕೊಡುತ್ತಿದೆ. ಹೀಗೆ ಬೆಂಗಳೂರಿನ ಸಮೀಪದಲ್ಲಿ ಕುಟುಂಬವೊಂದರ ಬೇಡಿಕೆ ಮೇರೆಗೆ ಕೇವಲ ರೂ.17 ಲಕ್ಷದಲ್ಲಿ ಗ್ರೌಂಡ್ ಫ್ಲೋರ್ ನಲ್ಲಿ ಬಂದು ಶಾಪ್ ಹಾಗೂ ಡಬಲ್ ಬೆಡ್ರೂಮ್ ಮನೆ ಕೂಡ ಮಾಡಿಕೊಟ್ಟಿದ್ದಾರೆ.

ಈ ಸುದ್ದಿ ಓದಿ:- 2.99 ಲಕ್ಷಕ್ಕೆ ನಿಮ್ಮ ಮನೆಗೆ ಈ ರೀತಿ ಅದ್ದೂರಿಯಾಗಿ ವರ್ಕ್ ಮಾಡಿಕೊಡುತ್ತಾರೆ.! ಕಡಿಮೆ ಹಣಕ್ಕೆ ಬೆಸ್ಟ್ ಇಂಟೀರಿಯರ್ ಡಿಸೈನ್.!

ಗ್ರೌಂಡ್ ಫ್ಲೋರ್ ನಲ್ಲಿ 9*7.5 ಅಳತೆಯಲ್ಲಿ ಶಾಪ್ ಮಾಡಿಕೊಡಲಾಗಿದೆ. ಈ ಮನೆ ಲುಕ್ ಎಷ್ಟು ಅದ್ಭುತವಾಗಿದೆ ಎಂದರೆ ಇಷ್ಟು ಕಡಿಮೆ ಬಜೆಟ್ ನಲ್ಲಿ ಈ ರೇಂಜ್ ಗೆ ಮನೆ ಕಟ್ಟಿದ್ದಾರೆಯೇ ? ಎಂದು ನೋಡಿದವರು ಒಮ್ಮೆಲೆ ಆಶ್ಚರ್ಯ ಚಕಿತರಾಗುತ್ತಾರೆ. ಹೊರಗಿನಿಂದಲೇ ಮನೆಯ ಲುಕ್ಕು ಅಷ್ಟು ಅಟ್ಟ್ರಾಕ್ಟಿವ್ ಆಗಿದೆ ಅಂಗಡಿಗೆ ನ್ಯಾಚುರಲ್ ಸ್ಟೋನ್ ಇಂದ ಗ್ರ್ಯಾಂಡಿಂಗ್ ಮಾಡಲಾಗಿದೆ.

ಇನ್ನು ಫ್ರಂಟ್ ಎವಲೇಶನ್ ಬಗ್ಗೆ ಹೇಳುತ್ತಾ ಬಂದರೆ ಮೇಲಿನ ಟ್ಯಾಂಕ್ ರೂಮ್ ಗೆ ಹೊರಗಿನಿಂದ ರೋಡ್ ಕಡೆಯಿಂದ ನೋಡುವವರಿಗೆ ಕಾಣುವಂತೆ ಗಣೇಶನ ಡಿಸೈನ್ ಹಾಕಿ ಕೊಡಲಾಗಿದೆ. ಇದು ಮನೆಗೆ ಲುಕ್ ಹೆಚ್ಚಿಸಿದೆ ಹಾಗೂ ವಿಘ್ನ ವಿನಾಶಕ ವಿನಾಯಕ ಜೊತೆಗಿದ್ದಾನೆ ಎನ್ನುವ ಸಮಾಧಾನ ಕೂಡ ತರುತ್ತದೆ ಮನೆಯ ಮೇಲಿನ ದೃಷ್ಟಿ ಕೂಡ ಕಡಿಮೆ ಆಗುತ್ತದೆ.

ಈ ಸುದ್ದಿ ಓದಿ:- ಸವರನ್ ಗೋಲ್ಡ್ ಬಾಂಡ್ ಖರೀದಿ ಎಷ್ಟು ಲಾಭದಾಯಕ ಗೊತ್ತಾ.? ಚಿನ್ನಕ್ಕೆ ಭದ್ರತೆ ಜೊತೆಗೆ ಖಚಿತ ಲಾಭ ಕೂಡ.!

ಟೆಕ್ಸ್ಚರ್ ಪೇಂಟ್ ನಿಂದಲೇ ಈ ಡಿಸೈನ್ ಮಾಡಿ ಲೈಟಿಂಗ್ ಕೂಡ ಕೊಡಲಾಗಿದೆ, ಇದು ಮನೆಗೆ ಬಹಳ ಗ್ರ್ಯಾಂಡ್ ಲುಕ್ ಕೊಟ್ಟಿದೆ, ಇನ್ನೂ ಇದರ ಕೆಳಗೆ ಮುಖ್ಯವಾಗಿ ಮನೆಯ ಬೆಡ್ರೂಮ್ ಬರುತ್ತದೆ ಇದು ಫಸ್ಟ್ ಫ್ಲೋರ್ ಆಗುತ್ತದೆ. ಇದಕ್ಕೆ ಬಾಲ್ಕನಿ ನೀಡಲಾಗಿದೆ ಬೆಡ್ ರೂಮ್ ನಿಂದ ಹೊರಗೆ ನಿಂತು ಬಾಲ್ಕನಿಯಲ್ಲಿ ವಿವ್ಯೂ ಎಂಜಾಯ್ ಮಾಡಬೇಕು ಎಂದು ಬಹುತೇಕ ಎಲ್ಲರೂ ಬಯಸುತ್ತಾರೆ.

ಹಾಗಾಗಿ ಇರುವ ಜಾಗವನ್ನು ತುಂಬಾ ಸಮರ್ಪಕವಾಗಿ ಬಳಸಿಕೊಂಡು ಹೀಗೆ ಮಾಡಿಕೊಡಲಾಗಿದೆ. ಗ್ಲಾಸ್ ಫಿನಿಶಿಂಗ್ ಗೆ hetch railling ಕೂಡ ಮಾಡಲಾಗಿದೆ, MS ರ್ಯಾಪ್ಟರ್ಸ್ ಹಾಕಿಕೊಡಲಾಗಿದೆ, ಸಿವಿಲ್ ನಲ್ಲಿ ಆರೆಂಜ್ ಮತ್ತು ಕ್ರೀಮ್ ಬಣ್ಣ ಬಳಸಿ ಪಟ್ಟಿ ಮಾಡಿಕೊಡಲಾಗಿದೆ ವಾಸ್ತು ಪ್ರಕಾರ ಕೂಡ ಬಣ್ಣ ಸರಿ ಹೊಂದಲಿ ಎಂದು ಇದೇ ಕಲರ್ ಸೆಲೆಕ್ಟ್ ಮಾಡಲಾಗಿದೆ.

ಈ ಸುದ್ದಿ ಓದಿ:- ಮನೆಗೆ ಕ್ಯೂರಿಂಗ್ ಯಾಕೆ ಮಾಡಬೇಕು.? ಎಷ್ಟು ಮಾಡಬೇಕು.? ಕ್ಯೂರಿಂಗ್ ಕುರಿತ ಸಂಪೂರ್ಣ ಮಾಹಿತಿ.!

ಇನ್ನು ಬೇಸ್ಮೆಂಟ್ ನಲ್ಲಿ ಶಾಪ್ ಜೊತೆ ಇರುವ ಸ್ಪೇಸ್ ಹೇಗೆ ಬಳಕೆ ಮಾಡಲಾಗಿದೆ ಎಂದರೆ ಚಿಕ್ಕದಾಗಿ ಟೂ ವೀಲರ್ ಗೆ ಪಾರ್ಕಿಂಗ್ ಒಳಗೆ ಮಾಡಿಕೊಡಲಾಗಿದೆ. ಐದು ಅಡಿ ಎತ್ತರದ ಆರು ಅಡಿ ಅಗಲದ ಎಂಎಸ್ ಡೋರ್ ಮಾಡಿಕೊಡಲಾಗಿದೆ ಹೊರಗೆ ಎಂಟ್ರಿ ಆಗುತ್ತಿದ್ದಂತೇ ಒಂದು ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ತುಂಬಾ ಕ್ರಾಸ್ ಇರುವ ಸೈಟ್ ನ್ನು 17*34 ಅಳತೆಯಲ್ಲಿ ತೆಗೆದುಕೊಂಡು ಅಚ್ಚುಕಟ್ಟಾಗಿ ಈ ಬಿಲ್ಡಿಂಗ್ ಕಟ್ಟಿಕೊಡಲಾಗಿದೆ. ಈ ಬಗ್ಗೆ ಇನ್ನಷ್ಟು ಡೀಟೇಲ್ಸ್ ಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು RCC ಗೆ ಕಾಂಟ್ರಾಕ್ಟ್ ಕೊಡಲು ಬಯಸಿದರೆ ಈ ಕೆಳಕಂಡ ಸಂಖ್ಯೆಗಳಿಗೆ ಸಂಪರ್ಕಿಸಿ.
RCC
7022876667 / 7022956667

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now