ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದಾದ್ಯಂತ ಅತಿ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಸರ್ಕಾರಿ ವಲಯದ ಪ್ರಮುಖ ಬ್ಯಾಂಕ್. ಈ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಹತ್ತಾರು ರೀತಿಯ ಅನುಕೂಲತೆಗಳು ಇರುವುದರಿಂದ ಪ್ರತಿ ವರ್ಷವೂ ಕೂಡ SBI ನಲ್ಲಿ ಖಾತೆ ತೆರೆಯಲು ಇಚ್ಛಿಸುವ ಗ್ರಾಹಕರ ಅನುಕೂಲತೆಗಳು ಹೆಚ್ಚುತ್ತಿವೆ ಮತ್ತು ಕಾಲಕಾಲಕ್ಕೆ SBI ಬ್ಯಾಂಕ್ ಕೂಡ ತನ್ನ ಗ್ರಾಹಕರ ಅವಶ್ಯಕತೆ ಮತ್ತು ಆಸಕ್ತಿ ಅನುಸರಿಸಿ ವಿಭಿನ್ನ ಬಗೆಯ ಸ್ಕೀಮ್ ಗಳನ್ನು ಪರಿಚಯಿಸುತ್ತದೆ.
ದಿನದಿಂದ ದಿನಕ್ಕೆ ಬ್ಯಾಂಕಿಂಗ್ ಕ್ಷೇತ್ರ ಕೂಡ ಬಹಳ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದು ದೇಶದ ಎಲ್ಲಾ ನಾಗರಿಕರು ಇದನ್ನು ಪ್ರಯೋಜನ ಪಡೆಯಲಿ ಎಂದು ಬಯಸುತ್ತದೆ. ಅಂತೆಯೇ ಆರ್ಥಿಕ ವರ್ಷವು ಅಂತ್ಯವಾಗಿ ಹೊಸ ಆರ್ಥಿಕ ವರ್ಷ ಆರಂಭವಾದ ಸಮಯದಲ್ಲಿ ಇಂತಹ ಯೋಜನೆಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿರುತ್ತದೆ.
ಅಂತೆಯೇ ಈಗ SBI ಬ್ಯಾಂಕ್ ನಲ್ಲಿ ಕೂಡ ಮಾರ್ಚ್ 31ರ ಒಳಗೆ ಮುಕ್ತಾಯವಾಗುತ್ತಿರುವ ವಿಶೇಷ ಯೋಜನೆಗಳ ಕೊಡುಗೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ SBI ಗ್ರಾಹಕರಿಗೆ ಮಾತ್ರ ಬ್ಯಾಂಕ್ ಕಡೆಯಿಂದ ಸಿಗುತ್ತಿರುವ ಅನುಕೂಲತೆಗಳು ಇದಾಗಿದೆ.
ಈ ಸುದ್ದಿ ಓದಿ:- ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್, ಸರ್ಕಾರದಿಂದ ಸಿಗಲಿದೆ ಉಚಿತ ರಿಚಾರ್ಜ್ ಆಫರ್.!
ಉಳಿತಾಯ ಹಾಗೂ ಸಾಲದ ಬಗ್ಗೆ ನಿರೀಕ್ಷೆಯಲ್ಲಿರುವವರಿಗೆ SBI ವತಿಯಿಂದ ಅಪಾರವಾದ ಅನುಕೂಲವಾಗಲಿದೆ. ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಖಾತೆ ಹೊಂದಿರುವ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
1. SBIನಲ್ಲಿ ಅಮೃತ್ ಕಲಷ್ (SBI Amruth Kalash) ಎನ್ನುವ ಯೋಜನೆಯನ್ನು ಪರಿಚಯಿಸಲಾಗಿದ್ದು, ಈಗಾಗಲೇ ಅದಕ್ಕೆ ನೀಡಿದ ಕಾಲಾವಕಾಶ ಮುಗಿದಿತ್ತು ಆದರೂ SBI ಮತ್ತೊಮ್ಮೆ ತನ್ನ ಗ್ರಾಹಕರಿಗಾಗಿ ಈ ಯೋಜನೆಯ ಅವಕಾಶವನ್ನು ಮಾರ್ಚ್ 31 2024 ರವರೆಗು ಕೂಡ ವಿಸ್ತರಿಸಿದೆ. ಈ ಯೋಜನೆಯಲ್ಲಿ 400 ದಿನಗಳ FD ಯೋಜನೆಗೆ ಕನಿಷ್ಠ 7.1% ಬಡ್ಡಿದರ ಸಿಗುತ್ತಿದೆ ಒಂದು ವೇಳೆ ಮುಂಗಡವಾಗಿ ವಿತ್ ಡ್ರಾ ಮಾಡುವವರಿಗೆ 0.50 – 1% ವರೆಗೆ ದಂಡ ಬೀಳುತ್ತದೆ
* ಇದೇ ರೀತಿ ಹಿರಿಯ ನಾಗರಿಕರಿಗಾಗಿ SBI V-Care ಎನ್ನುವ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಇರುವ ಠೇವಣಿಗಳಿಗೆ 7.50% ಬಡ್ಡಿದರ ನಿಗದಿ ಆಗಿತ್ತು. ಈ ಯೋಜನೆಗೂ ಕೂಡ ಇದ್ದ ಕಾಲಾವಕಾಶವು ಮುಕ್ತಾಯವಾಗಿತ್ತಾದರೂ ಮತ್ತೊಮ್ಮೆ ಇದನ್ನು ವಿಸ್ತರಿಸಿ ಮಾರ್ಚ್ 31, 2024 ರ ವರೆಗೂ ಮತ್ತೊಮ್ಮೆ ಅವಕಾಶ ನೀಡಿದೆ.
ಈ ಸುದ್ದಿ ಓದಿ:- ರೈತರಿಗೆ ಸರ್ಕಾರದಿಂದ ಮೊದಲನೇ ಕಂತಿನ ಬರ ಪರಿಹಾರ ಹಣ 2000 ಜಮೆ, ಹಣ ಬರದೆ ಇದ್ದವರು ಈ ರೀತಿ ಮಾಡಿ.!
* ಹೌಸ್ ಲೋನ್ (House loan) ಪಡೆದುಕೊಳ್ಳುವರೆಗೂ ಕೂಡ SBI ಬ್ಯಾಂಕ್ ಕಡೆಯಿಂದ ಒಂದು ಸಮಾಧಾನಕರ ಸುದ್ದಿ ಇದೆ. ಅದೇನೆಂದರೆ, ಗೃಹ ಸಾಲಗಳ ಕುರಿತಾಗಿ ಹೊಸ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಇದರಡಿಯಲ್ಲಿ ಗೃಹ ಸಾಲಕ್ಕೆ ಕಡಿಮೆ ಬಡ್ಡಿ ದರವನ್ನು SBI ವಿಧಿಸುತ್ತಿದೆ.
ಸೀಮಿತ ಅವಧಿಗಳಿಗೆ ಇರುವ ಈ ಯೋಜನೆಯು ಕೂಡ ಮಾರ್ಚ್ 31, 2024ಕ್ಕೆ ಕೊನೆಯಾಗುತ್ತಿದೆ. 750 – 800 ಸಿಬಿಲ್ ಸ್ಕೋರ್ ಇರುವ ವ್ಯಕ್ತಿ SBI ನಲ್ಲಿ ಗೃಹ ಸಾಲ ತೆಗೆದುಕೊಂಡರೆ 8.6% ಬಡ್ಡಿ ದರದಲ್ಲಿ ಲೋನ್ ಸಿಗುತ್ತಿದೆ, ಇದಕ್ಕಿಂತ ಕಡಿಮೆ ಇರುವವರಿಗೆ 9.15% ಬಡ್ಡಿ ವಿಧಿಸಲಾಗುತ್ತಿದೆ.