ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದಾದ್ಯಂತ ಇರುವ ಕರಕುಶಲ ಕರ್ಮಿಗಳಿಗೆ ಕಳೆದ ವರ್ಷ ವಿಶ್ವ ಕರ್ಮ ಜಯಂತಿಯಂದು ವಿಶೇಷ ಯೋಜನೆಯೊಂದನ್ನು ಘೋಷಿಸಿದ್ದರು ಈಗ ಅದು ಕಾರ್ಯರೂಪಕ್ಕೆ ಬಂದಿದ್ದು ಟೈಲರಿಂಗ್ (Tailors) ಮಾಡುವವರು ಸೇರಿದಂತೆ 18 ಬಗೆಯ ಕರಕುಶಲ ವೃತ್ತಿಗಳನ್ನು ತೊಡಗಿಕೊಂಡಿರುವವರು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ರ (Pradana Mantri VishwaKarma Yojane ) ಮೂಲಕ ತಮ್ಮ ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಧನ ಸಮೇತ ತರಬೇತಿ, ಟೂಲ್ ಕಿಟ್ ಮತ್ತು ಗರಿಷ್ಠ 3 ಲಕ್ಷದವರೆಗೆ ಯಾವುದೇ ದಾಖಲೆ ಇಲ್ಲದೆ ಸ್ವ-ಉದ್ಯೋಗಕ್ಕಾಗಿ ಸಾಲ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರದಿಂದ ಅರ್ಜಿ ಕೂಡ ಆಹ್ವಾನ ಮಾಡಲಾಗುತ್ತಿದ್ದು ಇದರ ಕುರಿತ ಪ್ರಮುಖ ವಿವರ ಹೀಗಿದೆ ನೋಡಿ…
ಯೋಜನೆ ಹೆಸರು:- ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ 2023.
ಪ್ರಯೋಜನ ಪಡೆಯಬಹುದಾದ ವೃತ್ತಿಗಳು:-
* ಬಡಗಿ
* ದೋಣಿ ತಯಾರಕ
* ಆರ್ಮರ್
* ಕಮ್ಮಾರ
* ಬೀಗ ಹಾಕುವವನು
* ಹ್ಯಾಮರ್ ಮತ್ತು ಟೂಲ್ಕಿಟ್ ಮೇಕರ್
* ಶಿಲ್ಪಿ
* ಸ್ಟೋನ್ ಬ್ರೇಕರ್
* ಗೋಲ್ಡ್ ಸ್ಮಿತ್
* ಪಾಟರ್
* ಚಮ್ಮಾರ
* ಮೇಸನ್ಸ್
* ಬಾಸ್ಕೆಟ್ ಮತ್ತು ಬ್ರೂಮ್ ಮೇಕರ್
* ಗೊಂಬೆ ಮತ್ತು ಆಟಿಕೆ ತಯಾರಕ
* ಕ್ಷೌರಿಕ
* ಗಾರ್ಲ್ಯಾಂಡ್ ಮೇಕರ್
* ವಾಷರ್ ಮ್ಯಾನ್
* ಟೈಲರ್
* ಮೀನುಗಾರಿಕೆ
* ನೆಟ್ ಮೇಕರ್
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಪ್ರಯೋಜನಗಳು:-
* ಯೋಜನೆಗೆ ನೋಂದಾಯಿಸಿಕೊಳ್ಳುವವರಿಗೆ ಸಚಿವಾಲಯದಿಂದ 5 ದಿನಗಳ ಕೌಶಲ್ಯ ಉನ್ನತೀಕರಣ ತರಬೇತಿ ಕೂಡ ನೀಡಲಾಗುತ್ತದೆ, ದಿನಕ್ಕೆ 500 ರೂ. ಸ್ಟೈಫಂಡ್ ಇರುತ್ತದೆ. ಕೊನೆಯಲ್ಲಿ ತರಬೇತಿಗೆ ಸರ್ಟಿಫಿಕೇಟ್ ಕೂಡ ಕೊಡಲಾಗುತ್ತದೆ
* ತರಬೇತಿ ನಂತರ ಸರ್ಟಿಫಿಕೇಟ್ ಪಡೆದವರಿಗೆ ರೂ. 15,000 ಟೂಲ್ ಕಿಟ್ ಖರೀದಿಗಾಗಿ ಕೊಡಲಾಗುತ್ತದೆ. ಅದನ್ನು ಬಳಸಿಕೊಂಡು ನಿಮ್ಮ ಉಪಕರಣಗಳು ಮತ್ತು ಪರಿಕರಗಳನ್ನು ಖರೀದಿ ಮಾಡಬಹುದು.
* ಜೊತೆಗೆ ಸ್ವ-ಉದ್ಯಮಕ್ಕಾಗಿ ಸಾಲ ಸೌಲಭ್ಯವು ಸಿಗುತ್ತದೆ. ಮೊದಲ ಬಾರಿಗೆ 1 ಲಕ್ಷದವರೆಗೆ 5% ದರದಲ್ಲಿ ಯಾವುದೇ ಆಧಾರವಿಲ್ಲದಿದ್ದರೂ ಸಾಲ ಸಿಗುತ್ತದೆ. ಇದನ್ನು 18 ತಿಂಗಳ ಅವಕಾಶದಲ್ಲಿ ತೀರಿಸಿದರೆ ನಂತರ 2 ಲಕ್ಷದ ವರೆಗೂ 5% ಬಡ್ಡಿದರದಲ್ಲಿ ಸಾಲ ಸಿಗುತ್ತದೆ, ಅದು ತೀರಿದ ಬಳಿಕ ಯಾವುದೇ ದಾಖಲೆ ಇಲ್ಲದೆ ಇದ್ದರೂ ಗರಿಷ್ಠ 3 ಲಕ್ಷದವರೆಗೆ 5% ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ನಿವಾಸ ದೃಢೀಕರಣ ಪತ್ರ
* ಕೌಶಲ್ಯ ಪ್ರಮಾಣಪತ್ರ
* ಮೊಬೈಲ್ ನಂಬರ್
* ಪಡಿತರ ಚೀಟಿ
* ಆಧಾರ್ ಕಾರ್ಡ್
* ಬ್ಯಾಂಕ್ ಖಾತೆಯ ಪಾಸ್‌ಬುಕ್ ವಿವರ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಇತ್ತೀಚಿನ ಭಾವಚಿತ್ರ.
ಅರ್ಜಿ ಸಲ್ಲಿಸಲು ಕೇಳಲಾಗುವ ಅರ್ಹತೆಗಳು:-
* 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
* ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಸೇವೆಯಲ್ಲಿ ಇರಬಾರದು
* ಕುಟುಂಬದ ಒಬ್ಬ ಸದಸ್ಯರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
* ಈ ಹಿಂದೆ ಮುದ್ರಾ ಯೋಜನೆ, ಉದ್ಯೋಗಿನಿ ಯೋಜನೆ ಅಥವಾ ಇನ್ಯಾವುದೇ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆದಿದ್ದರೆ ಅವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:-
* ಈ ಮೇಲೆ ತಿಳಿಸಿದ ದಾಖಲೆಗಳನ್ನು ತೆಗೆದುಕೊಂಡು CSC ಕೇಂದ್ರಗಳಲ್ಲಿ ಅಥವಾ ಗ್ರಾಮ ಓನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
* PM ವಿಶ್ವಕರ್ಮ ಯೋಜನೆ @ https://pmvishwakarma.gov.in ವೆಬ್ ಸೈಟ್ ಗೆ ಭೇಟಿ ಕೊಟ್ಟು ನೀವೇ ನೇರವಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ:-
ಸಹಾಯವಾಣಿ: 8904754707