ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) 2023ರಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PMVY) ಎನ್ನುವ ಹೆಸರಿನ ಹೊಸ ಯೋಜನೆಯನ್ನು ಜಾರಿಗೆ ತಂದರು. ವಿಶ್ವಕರ್ಮ ಜಯಂತಿಯನ್ನು ಆಚರಿಸಿದ ಪ್ರಧಾನಿಗಳು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಅನುಕೂಲವಾಗುವಂತಹ ಈ ಯೋಜನೆ ಜಾರಿಗೆ ತಂದರು.
ಇದರ ಮೂಲಕ ವಿವಿಧ ಬಗೆಯ ಸಾಂಪ್ರದಾಯಿಕ ಕೌಶಲ್ಯಗಳಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿಗಳು ತಮ್ಮ ಕೌಶಲ್ಯ ಅಭಿವೃದ್ಧಿಗಾಗಿ ಉಚಿತ ತರಬೇತಿ ಮತ್ತು ಸರ್ಕಾರದಿಂದ ಉಚಿತ ಟುಲ್ ಕಿಟ್ ಅಥವಾ ಟೂಲ್ ಕಿಟ್ ಖರೀದಿಗೆ ಸಹಾಯಧನ, ಸ್ವ ಉದ್ಯೋಗ ಸ್ಥಾಪನೆಗೆ ವಿಶ್ವಕರ್ಮ ಯೋಜನೆಯಡಿ ಗರಿಷ್ಠ 3 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ.
ಈ ಸುದ್ದಿ ಓದಿ:- ರೈತರಿಗೆ ಸಿಹಿಸುದ್ದಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ
ಕಳೆದ ಒಂದು ವರ್ಷದಿಂದ ದೇಶದಲ್ಲಿ ಈ ಯೋಜನೆ ಜಾರಿಯಲ್ಲಿ ಇದ್ದು, ಲಕ್ಷಾಂತರ ಫಲಾನುಭವಿಗಳು ಈಗಾಗಲೇ ಈ ಯೋಜನೆ ಪ್ರಯೋಜನವನ್ನು ಪಡೆದಿದ್ದಾರೆ. ಈಗ ಮತ್ತೊಂದು ಸುತ್ತಿನಲ್ಲಿ ವಿಶ್ವಕರ್ಮ ಯೋಜನೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆ ಆದವರು ಮೊದಲಿಗೆ ಐದು ದಿನಗಳ ತರಬೇತಿಯನ್ನು ಸಂಬಂಧಿತ ಕ್ಷೇತ್ರದಲ್ಲಿ ತರಬೇತಿ ಪಡೆದುಕೊಳ್ಳಬಹುದು, ಇದಕ್ಕೆ ದಿನಕ್ಕೆ 500 ಗಳ ತರಬೇತಿ ಭತ್ಯೆ ನೀಡಲಾಗುತ್ತದೆ.
ಈ ತರಬೇತಿಯಲ್ಲಿ ಸರ್ಟಿಫಿಕೇಟ್ ಪಡೆದಂತ ಫಲಾನುಭವಿಗಳಿಗೆ ರೂ.15,000 ಸಹಾಯಧನವನ್ನು ಟೂಲ್ ಕಿಟ್ ಖರೀದಿಗೆ ಅವರ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತದೆ ಮತ್ತು ನಂತರ ಸ್ವ ಉದ್ಯೋಗ ಸ್ಥಾಪನೆ ಮಾಡುವುದಾದರೆ ಅರ್ಜಿ ಸಲ್ಲಿಸಿ ರೂ. 3ಲಕ್ಷ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು ಇದಕ್ಕಿರುವ ಕಂಡೀಷನ್ ಗಳೇನು ಅರ್ಜಿ ಸಲ್ಲಿಸುವುದು ಎಲ್ಲಿ? ಇತ್ಯಾದಿ ವಿವರ ಹೀಗಿದೆ.
ಅರ್ಜಿ ಸಲ್ಲಿಸಲು ಇರುವ ಕಂಡೀಷನ್ ಗಳು:-
* 18 ವರ್ಷ ಮೇಲ್ಪಟ್ಟ ಭಾರತದ ಯಾವುದೇ ನಾಗರಿಕ ವಿಶ್ವಕರ್ಮ ಯೋಜನೆಯಡಿ ಸೂಚಿಸಿರುವ 18 ಬಗೆಯ ಕೌಶಲ್ಯಗಳಲ್ಲಿ ಯಾವುದಾದರೂ ಒಂದರಲ್ಲಿ ತೊಡಗಿಕೊಂಡಿದ್ದರೆ ಕೌಶಲ್ಯ ಅಭಿವೃದ್ಧಿಗಾಗಿ ಅರ್ಜಿ ಸಲ್ಲಿಸಬಹುದು
* ಕುಟುಂಬದಲ್ಲಿ ಯಾರು ಸರ್ಕಾರಿ ಉದ್ಯೋಗಿಗಳಾಗಿರಬಾರದು
ಅರ್ಜಿ ಸಲ್ಲಿಸಲು ಸೂಚಿಸಿರುವ ಎಲ್ಲ ದಾಖಲೆಗಳನ್ನು ಲಗತ್ತಿಸಬೇಕು
* ಒಂದು ಕುಟುಂಬದಿಂದ ಒಬ್ಬರು ಮಾತ್ರ ಈ ಯೋಜನೆಯ ನೆರವು ಪಡೆಯಬಹುದು.
* ಈ ಯೋಜನೆಯಲ್ಲಿ ಸಾಲ ಸೌಲಭ್ಯ ಪಡೆಯಲು ಇರುವ ಮುಖ್ಯ ಕಂಡಿಷನ್ ಏನೆಂದರೆ ಕಳೆದ 5 ವರ್ಷಗಳಲ್ಲಿ ಸರ್ಕಾರದಿಂದ ಯಾವುದೇ ಸ್ವ-ಉದ್ಯೋಗ ಯೋಜನೆಯಲ್ಲಿ ಸಾಲ ಪಡೆದಿರಬಾರದು.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಭಾವಚಿತ್ರ
* ಇತ್ಯಾದಿ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಡಿಜಿಟಲ್ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು
* https://pmvishwakarma.gov.in ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.
ಈ ಯೋಜನೆ ವ್ಯಾಪ್ತಿಗೆ ಒಳಪಡುವ ಕುಶಲಕರ್ಮಿಗಳು:-
* ಬಡಗಿ (ಸುತಾರ್/ಬಧಾಯಿ)
* ದೋಣಿ ತಯಾರಕ
* ಆರ್ಮರ್
*ಕಮ್ಮಾರ
* ಬೀಗ ಮಾಡುವವರು
* ಶಿಲ್ಪಿ (ಮೂರ್ತಿಕರ್, ಸ್ಟೋನ್ ಕಾರ್ವರ್)
* ಸ್ಟೋನ್ ಬ್ರೇಕರ್
* ಗೋಲ್ಡ್ ಸ್ಮಿತ್ (ಸೋನಾರ್)
* ಪಾಟರ್
* ಚಮ್ಮಾರ
* ಆರ್ಕಿಟೆಕ್ಚರ್
* ಮೇಸನ್ಸ್
* ಬುಟ್ಟಿ / ಚಾಪೆ / ಬ್ರೂಮ್ ಮೇಕರ್ / ಕಾಯಿರ್
* ನೇಕಾರಗೊಂಬೆ ಮತ್ತು ಆಟಿಕೆ ತಯಾರಕ
* ಕ್ಷೌರಿಕ
* ಧೋಬಿ
* ಟೈಲರ್
* ಮೀನುಗಾರಿಕೆ ನೆಟ್ ಮೇಕರ್